International Yoga Day 2023: ಕಪಾಲಭಾತಿ ಎಂದರೇನು? ಮಾಡುವ ವಿಧಾನ, ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

ಹಠ ಯೋಗದಲ್ಲಿ ದೇಹ ಶುದ್ಧಿಗೆ ಬೇಕಾದ 6 ಕ್ರಿಯೆಗಳನ್ನು ಪ್ರಸ್ತಾಪ ಮಾಡಲಾಗಿದೆ. ಪ್ರಾಣಯಾಮವನ್ನು ಪರಿಣಾಮಕಾರಿಯಾಗಿ ಅಭ್ಯಸಿಸಲು ಶುದ್ಧಿಕ್ರಮಗಳು ಅತಿ ಅವಶ್ಯಕ. ಅವುಗಳಲ್ಲಿ ಒಂದು ಮುಖ್ಯವಾದ ಕ್ರಿಯೆಯೇ ಕಪಾಲಭಾತಿ.

International Yoga Day 2023: ಕಪಾಲಭಾತಿ ಎಂದರೇನು? ಮಾಡುವ ವಿಧಾನ, ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
ನಯನಾ ಎಸ್​ಪಿ
|

Updated on:Jun 21, 2023 | 10:53 AM

ಶ್ಲೇಷ್ಮನಾಶ ಮತ್ತು ಮಾನಸಿಕ ಚೈತನ್ಯಕ್ಕೊಂದು ಯೌಗಿಕ ಕ್ರಿಯೆ: ಕಪಾಲಭಾತಿ

ಯೋಗ ಸಾಧನೆ (Yoga) ಮಾಡಲು ಆರೋಗ್ಯ (Health) ಪೂರ್ಣ ದೇಹ ಮತ್ತು ಮನಸ್ಸು ಅತೀ ಅವಶ್ಯಕ. ದೇಹದಲ್ಲಿ ಅತೀ ಹೆಚ್ಚು ಬೊಜ್ಜು ಮತ್ತು ಶ್ಲೇಷ್ಮಗಳು ಶೇಖರಣೆಯಾದಾಗ ಯೋಗ ಸಾಧನೆಗೆ ಅಡ್ಡಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ಯೋಗಿಕ ಕ್ರಿಯೆಗಳನ್ನು ಮಾಡಿ ಅವುಗಳ ಪ್ರಭಾವವನ್ನು ತಗ್ಗಿಸಬಹುದು ಮತ್ತು ಗುಣಪಡಿಸಕೊಳ್ಳಬಹುದು. ಹಠ ಯೋಗದಲ್ಲಿ ದೇಹ ಶುದ್ಧಿಗೆ ಬೇಕಾದ 6 ಕ್ರಿಯೆಗಳನ್ನು ಪ್ರಸ್ತಾಪ ಮಾಡಲಾಗಿದೆ. ಪ್ರಾಣಯಾಮವನ್ನು ಪರಿಣಾಮಕಾರಿಯಾಗಿ ಅಭ್ಯಸಿಸಲು ಶುದ್ಧಿಕ್ರಮಗಳು ಅತಿ ಅವಶ್ಯಕ. ಅವುಗಳಲ್ಲಿ ಒಂದು ಮುಖ್ಯವಾದ ಕ್ರಿಯೆಯೇ ಕಪಾಲಭಾತಿ.

ಕಪಾಲಭಾತಿ ಎಂದರೇನು?

ಕಪಾಲ ಅಂದರೆ ತಲೆ ಬುರುಡೆ ಮತ್ತು ಭಾತಿ ಅಂದರೆ ಹೊಳೆಯುವುದು ಎಂದು ಶಬ್ದಾರ್ಥ. ಇದೊಂದು ಶುದ್ಧಿ ಕ್ರಿಯೆಯಾಗಿ ಯೋಗ ಶಾಸ್ತ್ರಕಾರರು ವಿವರಿಸಿದ್ದಾರೆ ಮತ್ತು ಇದು ಪ್ರಾಣಾಯಾಮವಲ್ಲ. ಈ ಕ್ರಿಯೆಯ ಅಭ್ಯಾಸದಿಂದ ತಲೆಯ ಭಾಗದಲ್ಲಿರುವ ಸೂಕ್ಷ್ಮ ನಾಡಿಗಳು ಶುದ್ಧವಾಗಿ, ರಕ್ತ ಸಂಚಾರ ಉತ್ತಮವಾಗುತ್ತದೆ. ಇದು ಸ್ವಾಭಾವಿಕ ಹೊಳಪನ್ನು ಕೊಟ್ಟು ತಲೆಯ ಆರೋಗ್ಯ ಕಾಪಾಡುತ್ತದೆ. ನಮ್ಮ ಶ್ವಾಸೇಂದ್ರಿಯವಾದ ಮೂಗಿಗೆ ಉಳಿದ ಎಲ್ಲಾ ಜ್ಞಾನೇಂದ್ರಿಯಗಳ ನರ ತಂತು ಜಾಲದ ಸಂಪರ್ಕ ಇರುವುದರಿಂದ ತಲೆಯ ಭಾಗದ ಎಲ್ಲಾ ನಾಡಿಗಳನ್ನು ಶುದ್ಧೀಕರಿಸುವುದರ ಜೊತೆಗೆ ತಲೆಯ ನರ ಮಂಡಲವನ್ನು ಉತ್ತೇಜಿಸುವ ಕಾರ್ಯವನ್ನು ಕಪಾಲಭಾತಿ ಮಾಡುತ್ತದೆ.

ಅಭ್ಯಾಸ ಕ್ರಮ:

ಪದ್ಮಾಸನ, ಸ್ವಸ್ತಿಕಾಸನ ಅಥವಾ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಎರಡು ಹಸ್ತಗಳನ್ನು ಒಳ ಮುಖವಾಗಿ ಇಟ್ಟು ಮಂಡಿಯನ್ನು ಒತ್ತಿ ಬೆನ್ನು ಹುರಿಯನ್ನು ನೆಟ್ಟಗೆ ಇಟ್ಟುಕ್ಕೊಳ್ಳಬೇಕು. ನಂತರ ವೇಗವಾಗಿ ಉಚ್ವಾಸ ಮತ್ತು ನಿಶ್ವಾಸವನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭ್ಯಾಸ ಮಾಡಬೇಕು. ಪ್ರಾರಂಭದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಅಭ್ಯಾಸ ಮಾಡಿ ನಂತರ ಸಂಖ್ಯೆಯನ್ನು ಹೆಚ್ಚು ಮಾಡುತ್ತ ಹೋಗಬೇಕು.

ಪ್ರಯೋಜನಗಳು:

ಕಪಾಲಭಾತಿಯ ಅಭ್ಯಾಸದಿಂದ ಕಫ ದೋಷದ ವೈಷಮ್ಯದಿಂದ ಬರುವಂತಹ ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಮೂಗಿನ ಅಲರ್ಜಿ, ಶೀತ, ಸೈನುಸೈಟಿಸ್, ತಲೆ ಶೂಲೆ(ಮೈಗ್ರೇನ್), ಬೊಜ್ಜಿನ ಸಮಸ್ಯೆಗಳಿಗೆ ಪರಿಣಾಮಕಾರಿ ಅಭ್ಯಾಸವಾಗಿದೆ. ಅಲ್ಲದೆ ಆಲಸ್ಯ, ಜಡತ್ವವನ್ನು ತೊಲಗಿಸಿ ಶರೀರ ಮತ್ತು ಮನಸ್ಸನ್ನು ಸಚೇತಗೊಳಿಸುತ್ತದೆ. ಶ್ವಾಸಕೋಶದ ಮಾಂಸ ಖಂಡಗಳನ್ನು ಶಕ್ತಿಯುತಗೊಳಿಸುವುದರ ಜೊತೆಗೆ ಶ್ವಾಸ ನಾಳವನ್ನು ಶುದ್ಧೀಕರಿಸಿ ಸರಾಗ ಉಸಿರಾಟಕ್ಕೆ ಸಹಾಯ ಮಾಡುತ್ತದೆ.

ಆರೋಗ್ಯ ಮಿತಿಗಳು:

ಸ್ವ ಚಿಕಿತ್ಸೆ ಯಾವಾಗಲೂ ಅಪಾಯಕಾರಿ. ಕಪಾಲಭಾತಿ ಅಭ್ಯಾಸಕ್ಕೆ ಆರೋಗ್ಯ ಮಿತಿಗಳಿರುವುದರಿಂದ ರೋಗಿಗಳು ಈ ಅಭ್ಯಾಸವನ್ನು ವೈದ್ಯರು ಮತ್ತು ಯೋಗ ಚಿಕಿತ್ಸಾ ತಜ್ಞರ ಸಲಹೆಯಂತೆ ಅಭ್ಯಾಸ ಮಾಡತಕ್ಕದ್ದು. ಅಪಸ್ಮಾರ, ಅತಿ ರಕ್ತದೊತ್ತಡ, ಹರ್ನಿಯಾ, ಬೆನ್ನು ನೋವು ಹಾಗೂ ಶಸ್ತ್ರ ಚಿಕಿತ್ಸೆಯಾದ ರೋಗಿಗಳು ಅಭ್ಯಾಸ ಮಾಡಬಾರದು. ಸ್ತೀಯರು ತಮ್ಮ ಮುಟ್ಟಿನ ಸಂದರ್ಭದಲ್ಲಿ ಈ ಅಭ್ಯಾಸವನ್ನು ಮಾಡದಿರುವುದು ಒಳಿತು.

ಇದನ್ನೂ ಓದಿ: ಯೋಗ ಎಂದರೇನು? ಯೋಗಾಭ್ಯಾಸದ ಶ್ರೀಮಂತ ಪರಂಪರೆ, ಮಹತ್ವ ಮತ್ತು ವಿಶೇಷ ಮಾಹಿತಿ ಇಲ್ಲಿದೆ

ಲೇಖನ: ಡಾ. ಹೃಷಿಕೇಶ ಪಿ

ಡಾ. ಹೃಷಿಕೇಶ ಪಿ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಜೆಪಿ ನಗರದಲ್ಲಿ ತ್ರಿಪುರಾ ಯೋಗ ಥೆರಪಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಯೋಗ ಚಿಕಿತ್ಸಾ ಕ್ಷೇತ್ರದಲ್ಲಿ 12+ ವರ್ಷಗಳ ಅನುಭವವನ್ನು ಹೊಂದಿರುವ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, 2018 ರಲ್ಲಿ, ಡಾಕ್ಟರೇಟ್ ಪದವಿಯನ್ನು ಪಡೆದರು.

ಈ ಹಿಂದೆ ಡಾ. ಹೃಷಿಕೇಶ ಯೋಗ ವಿಜ್ಞಾನ ಅಧ್ಯಾಪಕರಾಗಿ, ಬೆಂಗಳೂರಿನ ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್‌ನಲ್ಲಿ ಯೋಗ ಚಿಕಿತ್ಸಕರಾಗಿ ಹಾಗು ಸಿಂಗಾಪುರದಲ್ಲೂ ಯೋಗ ಶಿಕ್ಷಕರಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9113893928 ಕರೆ ಮಾಡಿ ಅಥವಾ ತ್ರಿಪುರಾ ಯೋಗ ಥೆರಪಿ, 894, 10ನೇ ಎ ಈಸ್ಟ್ ಕ್ರಾಸ್ ರೋಡ್, ಆರ್‌ಬಿಐ ಲೇಔಟ್, ಜೆಪಿ ನಗರ 7ನೇ ಹಂತ, ಬೆಂಗಳೂರು-78 ಕ್ಕೆ ಭೇಟಿ ನೀಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:49 am, Mon, 19 June 23

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ