AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Doctors Day 2026: ಬದಲಾಗುತ್ತಿರುವ ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ವದ್ದು ಗೊತ್ತಾ?

ರಾಷ್ಟ್ರೀಯ ವೈದ್ಯರ ದಿನವು ದೇಶದ ವೈದ್ಯರು ಮತ್ತು ಆರೋಗ್ಯ ಸೇವೆಗೆ ಸಂಬಂಧಿಸಿದ ಪ್ರತಿಯೊಬ್ಬರ ಕೊಡುಗೆಗಳನ್ನು ಗೌರವಿಸುವ ದಿನ ಮಾತ್ರವಲ್ಲ, ಕಳೆದ ಕೆಲವು ವರ್ಷಗಳಲ್ಲಿ ವೈದ್ಯರ ಪಾತ್ರ ಎಷ್ಟು ಬದಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೂಡ ಆಗಿದೆ. ಜನರು ಕಾಯಿಲೆಗಳಿಗೆ ಕೇವಲ ಔಷಧ ಮಾತ್ರವಲ್ಲದೆ ಸಮಯಕ್ಕೆ ಸರಿಯಾದ ರೋಗನಿರ್ಣಯ, ವೈಯಕ್ತಿಕ ಆರೈಕೆ ಮತ್ತು ವೈದ್ಯರ ನಿರಂತರ ಮಾರ್ಗದರ್ಶನವನ್ನೂ ನಿರೀಕ್ಷಿಸುತ್ತಿದ್ದಾರೆ. 

National Doctors Day 2026: ಬದಲಾಗುತ್ತಿರುವ ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ವದ್ದು ಗೊತ್ತಾ?
National Doctors Day 2026Image Credit source: Getty Images
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 01, 2026 | 2:19 PM

Share

ಮುಖ್ಯಾಂಶಗಳು

  • ಆರೋಗ್ಯ ಸೇವೆಯಲ್ಲಿ ತಂತ್ರಜ್ಞಾನ ಮತ್ತು ವೈದ್ಯರ ಮಹತ್ವ
  • ಬದಲಾಗುತ್ತಿರುವ ಹೆಲ್ತ್‌ಕೇರ್ ವ್ಯವಸ್ಥೆ: ತಿಳಿಯಬೇಕಾದ ಸಂಗತಿಗಳು
  • ಆಧುನಿಕ ತಂತ್ರಜ್ಞಾನದಿಂದ ಬದಲಾಗುತ್ತಿರುವ ಆರೋಗ್ಯ ಸೇವೆಗಳು

ಭಾರತದ ಆರೋಗ್ಯ ಕ್ಷೇತ್ರವು ವೇಗವಾಗಿ ಬದಲಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಅನಾರೋಗ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ಕಾಯಿಲೆಗಳಿಗೆ ಕೇವಲ ಔಷಧ ಮಾತ್ರವಲ್ಲದೆ ಸಮಯಕ್ಕೆ ಸರಿಯಾದ ರೋಗನಿರ್ಣಯ, ವೈಯಕ್ತಿಕ ಆರೈಕೆ ಮತ್ತು ವೈದ್ಯರ ನಿರಂತರ ಮಾರ್ಗದರ್ಶನವನ್ನೂ ನಿರೀಕ್ಷಿಸುತ್ತಿದ್ದಾರೆ. ಉತ್ತಮ ಆರೋಗ್ಯ ಸೇವೆ ತಂತ್ರಜ್ಞಾನದಿಂದ ಮಾತ್ರ ಬರುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ರಾಷ್ಟ್ರೀಯ ವೈದ್ಯರ ದಿನ (National Doctors Day) ಪ್ರಯುಕ್ತ ಈ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಒಳ್ಳೆಯದು.

ಬಹು ತಜ್ಞರ ಸಹಕಾರ ಅಗತ್ಯ

ತಜ್ಞರ ಪ್ರಕಾರ, ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ವಿವಿಧ ವಿಭಾಗಗಳ ವೈದ್ಯರು ಒಟ್ಟಾಗಿ ಕೆಲಸ ಮಾಡಿದರೆ ರೋಗವನ್ನು ನಿಖರವಾಗಿ ಗುರುತಿಸಿ, ರೋಗಿಗೆ ಸೂಕ್ತ ಮಾಹಿತಿ ನೀಡಿ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮತ್ತು ಪ್ರಿವೆಂಟಿವ್ ಸ್ಕ್ರೀನಿಂಗ್‌ಗೆ ಜನರಲ್ಲಿ ಅರಿವು ಮೂಡಿಸುವುದು ರೋಗದ ಭಾರವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ: ಕೆಲಸದ ಒತ್ತಡದಿಂದ ಫರ್ಟಿಲಿಟಿ ಕುಗ್ಗುತ್ತಿದೆಯೇ? ತಜ್ಞರು ಹೇಳಿರುವ ಮಹತ್ವದ ಮಾಹಿತಿ ಇಲ್ಲಿದೆ

ಆಧುನಿಕ ತಂತ್ರಜ್ಞಾನದಿಂದ ಉತ್ತಮ ಚಿಕಿತ್ಸೆ

ಮಿನಿಮಲಿ ಇನ್ವೇಸಿವ್ ಶಸ್ತ್ರಚಿಕಿತ್ಸೆಯಂತಹ ಆಧುನಿಕ ತಂತ್ರಜ್ಞಾನಗಳು ಕಡಿಮೆ ನೋವು, ವೇಗವಾದ ಚೇತರಿಕೆ ಹಾಗೂ ಆಸ್ಪತ್ರೆಯಲ್ಲಿ ಕಡಿಮೆ ದಿನ ಉಳಿಯುವಂತಹ ಪ್ರಯೋಜನಗಳನ್ನು ನೀಡುತ್ತಿವೆ. ಆದರೆ ಉತ್ತಮ ಆರೋಗ್ಯ ಸೇವೆ ತಂತ್ರಜ್ಞಾನದಿಂದ ಮಾತ್ರ ಸಾಧ್ಯವಿಲ್ಲ.

ವೈದ್ಯ–ರೋಗಿ ನಂಬಿಕೆಯೇ ಯಶಸ್ಸಿನ ಗುಟ್ಟು

ರೋಗಿಯೊಂದಿಗೆ ವೈದ್ಯರ ಸ್ಪಷ್ಟ ಸಂವಹನ, ಸರಿಯಾದ ಮಾಹಿತಿ ನೀಡುವುದು ಮತ್ತು ಮಾನವೀಯತೆ ತುಂಬಿದ ಆರೈಕೆ ಚಿಕಿತ್ಸೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಗಂಭೀರ ಕಾಯಿಲೆಗಳಲ್ಲಿ ಸಮಯಕ್ಕೆ ಸರಿಯಾದ ರೋಗನಿರ್ಣಯ, ಸೂಕ್ತ ಚಿಕಿತ್ಸೆ ಹಾಗೂ ಭಾವನಾತ್ಮಕ ಬೆಂಬಲ ಉತ್ತಮ ಫಲಿತಾಂಶಕ್ಕೆ ನೆರವಾಗುತ್ತದೆ. ಆಧುನಿಕ ತಂತ್ರಜ್ಞಾನ, ತಜ್ಞ ವೈದ್ಯರ ಸಹಕಾರ ಮತ್ತು ರೋಗಿಯ ಮೇಲಿನ ಕಾಳಜಿ ಈ ಮೂರರ ಸಮನ್ವಯವೇ ಭವಿಷ್ಯದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ. ವೈದ್ಯರ ಸೇವೆ ಕೇವಲ ಚಿಕಿತ್ಸೆ ನೀಡುವುದಲ್ಲ, ರೋಗಿಗೆ ಆರೋಗ್ಯಕರ ಮತ್ತು ಭರವಸೆಯ ಜೀವನವನ್ನು ನೀಡುವುದಾಗಿದೆ.

Published On - 11:39 am, Wed, 1 July 26

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ