AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಮಲಗುವ 1 ಗಂಟೆ ಮೊದಲು ಫೋನ್ ಆಫ್ ಮಾಡಿದರೆ ಏನಾಗುತ್ತದೆ? ದೇಹದಲ್ಲಿ ಆಗುವ ಬದಲಾವಣೆಗಳಿವು

ಮೊಬೈಲ್‌ನ ಸಮಸ್ಯೆ ಕೇವಲ ನೀಲಿ ಬೆಳಕಿಗೆ ಸೀಮಿತವಾಗಿಲ್ಲ. ರಾತ್ರಿ ಸೋಶಿಯಲ್ ಮೀಡಿಯಾ, ರೀಲ್ಸ್, ವಿಡಿಯೋಗಳು, ಸುದ್ದಿ, ಮೆಸೇಜ್‌ಗಳು ಮತ್ತು ಕೆಲಸದ ನೋಟಿಫಿಕೇಶನ್‌ಗಳು ಮೆದುಳನ್ನು ಸಕ್ರಿಯವಾಗಿರಿಸಬಹುದು. ಕೆಲವೇ ನಿಮಿಷ ಎಂದು ಫೋನ್ ತೆಗೆದುಕೊಂಡವರು ಗೊತ್ತಿಲ್ಲದೆ ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಸ್ಕ್ರೀನ್ ನೋಡುವ ಸಾಧ್ಯತೆಯೂ ಇದೆ. ಇದರಿಂದ ಮಲಗುವ ಸಮಯ ಮೀರಿ ಹೋಗಿ, ಒಟ್ಟಾರೆ ನಿದ್ರೆಯ ಅವಧಿಯೇ ಕಡಿಮೆಯಾಗಬಹುದು.

ರಾತ್ರಿ ಮಲಗುವ 1 ಗಂಟೆ ಮೊದಲು ಫೋನ್ ಆಫ್ ಮಾಡಿದರೆ ಏನಾಗುತ್ತದೆ? ದೇಹದಲ್ಲಿ ಆಗುವ ಬದಲಾವಣೆಗಳಿವು
No Phone 1 Hour Before BedImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Aug 26, 2026 | 6:48 PM

Share

ಮುಖ್ಯಾಂಶಗಳು

  • ಮಲಗುವ ಮುನ್ನ ಫೋನ್ ಬಳಸಿದರೆ ಏನಾಗುತ್ತದೆ?
  • ರಾತ್ರಿ ಫೋನ್ ಆಫ್ ಮಾಡುವುದರಿಂದ ನಿದ್ರೆ ಮಾತ್ರವಲ್ಲ, ಮೆದುಳಿಗೂ ಒಳ್ಳೆಯದು
  • ಫೋನ್ ಬಳಸುವ ಬದಲು ಏನು ಮಾಡಬಹುದು?

ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುವುದು ಇಂದು ಬಹುತೇಕ ಎಲ್ಲರ ಸಾಮಾನ್ಯ ಅಭ್ಯಾಸವಾಗಿದೆ. ರೀಲ್ಸ್, ಸಾಮಾಜಿಕ ಜಾಲತಾಣ, ಮೆಸೇಜ್‌, ಸುದ್ದಿ ಅಥವಾ ಕೆಲಸದ ವಿಚಾರಗಳನ್ನು ನೋಡುತ್ತಾ ಮಲಗುತ್ತಾರೆ. ಆಗ ಸಮಯ ಹೋಗಿದ್ದೆ ತಿಳಿಯುವುದಿಲ್ಲ. ಇದರ ಪರಿಣಾಮವಾಗಿ ನಿದ್ರೆ ಕಡಿಮೆಯಾಗುವುದು, ಬೆಳಗ್ಗೆ ಎದ್ದಾಗ ದಣಿವು, ಕಣ್ಣುಗಳಲ್ಲಿ ಒಣತನ ಅಥವಾ ಅಸ್ವಸ್ಥತೆ ಹಾಗೂ ದಿನವಿಡೀ ಸುಸ್ತು ಕಾಣಿಸಿಕೊಳ್ಳಬಹುದು. ಹೀಗಾಗಿ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಫೋನ್ ದೂರ ಇಡುವ ಅಭ್ಯಾಸ ಮಾಡಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಈ ಒಂದು ಗಂಟೆಯ ಅಂತರದಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ಎಂಬುದರ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಮಲಗುವ ಮುನ್ನ ಫೋನ್ ಬಳಸಿದರೆ ಏನಾಗುತ್ತದೆ?

ಪಲ್ಮನಾಲಜಿ ತಜ್ಞ ಡಾ. ಅಮಿತ್ ಕುಮಾರ್ ಮಂಡಲ್ ಅವರ ಪ್ರಕಾರ, ಮಲಗುವ ಮುನ್ನ ಮೊಬೈಲ್‌ನಿಂದ ದೂರವಿರುವುದರಿಂದ ದೇಹ ಮತ್ತು ಮೆದುಳಿಗೆ ನೈಸರ್ಗಿಕವಾಗಿ ನಿದ್ರೆಗೆ ಸಿದ್ಧವಾಗಲು ಸಮಯ ಸಿಗುತ್ತದೆ. ನಮ್ಮ ನಿದ್ರೆ ಮತ್ತು ಎಚ್ಚರದ ಚಕ್ರವನ್ನು ಸರ್ಕೇಡಿಯನ್ ರಿದಮ್ ನಿಯಂತ್ರಿಸುತ್ತದೆ. ರಾತ್ರಿ ಮೊಬೈಲ್ ಸೇರಿದಂತೆ ಸ್ಕ್ರೀನ್‌ಗಳಿಂದ ಬರುವ ಬೆಳಕು, ವಿಶೇಷವಾಗಿ ನೀಲಿ ಬೆಳಕು, ದೇಹದಲ್ಲಿ ನಿದ್ರೆಗೆ ಸಂಬಂಧಿಸಿದ ಮೆಲಟೋನಿನ್ ಹಾರ್ಮೋನ್‌ನ ಸ್ರಾವಕ್ಕೆ ಅಡ್ಡಿಯಾಗಬಹುದು. ಇದರಿಂದ ನಿದ್ರೆ ಬರಲು ಹೆಚ್ಚು ಸಮಯ ಬೇಕಾಗಬಹುದು.

ರಾತ್ರಿ ಒಂದು ಗಂಟೆ ಫೋನ್ ಬಳಸದೆ ಇದ್ದರೆ ಏನಾಗುತ್ತೆ?

ಮಲಗುವ ಒಂದು ಗಂಟೆ ಮೊದಲು ಫೋನ್ ದೂರ ಇಡುವುದರಿಂದ ಸ್ಕ್ರೀನ್ ನಿಂದ ಬರುವ ಬೆಳಕಿನ ಪ್ರಭಾವ ಕಡಿಮೆಯಾಗುವುದರ ಜೊತೆಗೆ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಇದರಿಂದ,

  • ನಿದ್ರೆಗೆ ಮಾನಸಿಕವಾಗಿ ಸಿದ್ಧವಾಗಲು ಸಹಾಯವಾಗಬಹುದು
  • ನಿದ್ರೆ ಬರುವ ಪ್ರಕ್ರಿಯೆ ಸುಲಭವಾಗಬಹುದು.
  • ರಾತ್ರಿ ತಡವಾಗಿ ಮಲಗುವ ಅಭ್ಯಾಸ ಕಡಿಮೆಯಾಗಬಹುದು.
  • ಒಟ್ಟು ನಿದ್ರೆಯ ಅವಧಿಯನ್ನು ಕಾಪಾಡಿಕೊಳ್ಳಲು ಸಹಾಯವಾಗಬಹುದು.
  • ಬೆಳಗ್ಗೆ ಎದ್ದಾಗ ದಣಿವು ಕಡಿಮೆಯಾಗಲು ನೆರವಾಗಬಹುದು.

ಆದರೆ ಕೇವಲ ಫೋನ್ ಆಫ್ ಮಾಡುವುದರಿಂದಲೇ ಎಲ್ಲ ನಿದ್ರೆಯ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರ್ಥವಲ್ಲ.

ಇದನ್ನೂ ಓದಿ: ನಿದ್ರೆ ಕೊರತೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ಇಮ್ಯೂನಿಟಿ ಮತ್ತು ನಿದ್ರೆಗಿರುವ ಸಂಬಂಧವೇನು?

ಫೋನ್ ಬದಲು ಏನು ಮಾಡಬಹುದು?

ಮಲಗುವ ಒಂದು ಗಂಟೆ ಮೊದಲು ಫೋನ್ ದೂರವಿಟ್ಟು ಈ ಅಭ್ಯಾಸಗಳನ್ನು ಪ್ರಯತ್ನಿಸಬಹುದು:

  • ಪುಸ್ತಕ ಓದುವುದು
  • ಲಘು ಸ್ಟ್ರೆಚಿಂಗ್ ಮಾಡುವುದು
  • ಧ್ಯಾನ ಅಥವಾ ಉಸಿರಾಟದ ವ್ಯಾಯಾಮ ಮಾಡುವುದು
  • ಕುಟುಂಬದವರೊಂದಿಗೆ ಶಾಂತವಾಗಿ ಮಾತನಾಡುವುದು
  • ಮಲಗುವ ಕೋಣೆಯ ಬೆಳಕನ್ನು ಕಡಿಮೆ ಮಾಡುವುದು
  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳಲು ಪ್ರಯತ್ನಿಸುವುದು

ಕೇವಲ ಫೋನ್ ಆಫ್ ಮಾಡಿದರೆ ಸಾಕೇ?

ಇಲ್ಲ. ಒಳ್ಳೆಯ ನಿದ್ರೆ ಬರಲು ಫೋನ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ನಿಯಮಿತ ನಿದ್ರೆ ಸಮಯ, ಸಾಕಷ್ಟು ನಿದ್ರೆ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ದಿನಚರಿ ಕೂಡ ಮುಖ್ಯ. ದೀರ್ಘಕಾಲದಿಂದ ನಿದ್ರೆ ಬರದಿರುವುದು, ಪದೇಪದೇ ನಿದ್ರೆ ಮಧ್ಯದಲ್ಲಿ ಎಚ್ಚರವಾಗುವುದು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us