AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೋಟೀನ್ ಹೆಚ್ಚು ತಿಂದ್ರೆ ಕಿಡ್ನಿ ಹಾಳಾಗುತ್ತದೆಯೇ? ಈ ಕುರಿತು ವೈದ್ಯರ ಅಭಿಪ್ರಾಯವೇನು?

ನಮ್ಮ ದೇಹಕ್ಕೆ ಪ್ರೋಟೀನ್ ಅತ್ಯಂತ ಪ್ರಮುಖ ಅಂಶ ಎಂಬುದು ತಿಳಿದ ವಿಚಾರ. ಆದರೆ ಜನರು ನಾನಾ ರೀತಿಯ ತಪ್ಪು ಕಲ್ಪನೆಗಳನ್ನು ನಿಜ ಎಂದು ಭಾವಿಸಿರುತ್ತಾರೆ. ಅದರಲ್ಲಿಯೂ ಕೆಲವರು ಇದರ ಸೇವನೆಯು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ ಎಂದು ನಂಬಿರುತ್ತಾರೆ. ಹಾಗಾದರೆ ಇದು ನಿಜವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ತಪ್ಪು ಹೇಳಿಕೆಗಳನ್ನು ನಿಜ ಎಂದು ಭಾವಿಸಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ.

ಪ್ರೋಟೀನ್ ಹೆಚ್ಚು ತಿಂದ್ರೆ ಕಿಡ್ನಿ ಹಾಳಾಗುತ್ತದೆಯೇ? ಈ ಕುರಿತು ವೈದ್ಯರ ಅಭಿಪ್ರಾಯವೇನು?
ಕಿಡ್ನಿ ಆರೋಗ್ಯ ಕಾಪಾಡಲು ತಿಳಿದಿರಬೇಕಾದ ಸಂಗತಿಗಳುImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 03, 2026 | 6:28 PM

Share

ಮುಖ್ಯಾಂಶಗಳು

  • ಪ್ರೋಟೀನ್ ಸೇವನೆ ಬಗ್ಗೆ ಇರುವ ತಪ್ಪು ಕಲ್ಪನೆಗಳು
  • ಕಿಡ್ನಿ ಆರೋಗ್ಯದ ಬಗ್ಗೆ ವೈದ್ಯರ ಮಹತ್ವದ ಮಾಹಿತಿ
  • ಕಿಡ್ನಿ ಆರೋಗ್ಯ ಕಾಪಾಡಲು ತಿಳಿದಿರಬೇಕಾದ ಸಂಗತಿಗಳು

ಪ್ರೋಟೀನ್ (Protein) ದೇಹದ ಸ್ನಾಯುಗಳು, ರೋಗನಿರೋಧಕ ಶಕ್ತಿ ಮತ್ತು ಅಂಗಾಂಗಗಳ ದುರಸ್ತಿ ಕಾರ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಆದರೆ ಹೆಚ್ಚು ಪ್ರೋಟೀನ್ ಸೇವಿಸಿದರೆ ಕಿಡ್ನಿ (Kidneys) ಹಾಳಾಗುತ್ತದೆ ಎಂಬ ನಂಬಿಕೆ ಇನ್ನೂ ಹಲವರಲ್ಲಿದೆ. ನಿಜವಾಗಿಯೂ ಪ್ರೋಟೀನ್ ಕಿಡ್ನಿಗೆ ಹಾನಿಕಾರಕವೇ ಎಂಬ ಅನುಮಾನ ನಿಮಗೂ ಇದ್ದರೆ ಈ ಸ್ಟೋರಿ ಮೂಲಕ ಆ ಗೊಂದಲಕ್ಕೆ ತೆರೆ ಎಳೆಯಬಹುದು. ಆರೋಗ್ಯ ತಜ್ಞರು ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಪ್ರೋಟೀನ್ ಬಗ್ಗೆ ಇರುವ ತಪ್ಪು ಕಲ್ಪನೆಗಳು ಯಾವವು ಮತ್ತು ನಿಜವಾಗಿಯೂ ಪ್ರೋಟೀನ್ ಯೂರಿಕ್ ಆಸಿಡ್ ಹೆಚ್ಚಿಸುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರೋಟೀನ್ ಕಿಡ್ನಿಗೆ ಹಾನಿಕಾರಕವೇ?

ನೆಫ್ರಾಲಜಿಸ್ಟ್‌ಗಳ ಪ್ರಕಾರ, ಆರೋಗ್ಯಕರ ಕಿಡ್ನಿ ಹೊಂದಿರುವವರು ಸಮತೋಲನ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಿದರೆ ಸಾಮಾನ್ಯವಾಗಿ ಯಾವುದೇ ಹಾನಿಯಾಗುವುದಿಲ್ಲ. ಆದರೆ ಈಗಾಗಲೇ ದೀರ್ಘಕಾಲದ ಕಿಡ್ನಿ ಕಾಯಿಲೆ (CKD) ಇರುವವರು ವೈದ್ಯರು ಅಥವಾ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್‌ ಸಲಹೆಯಂತೆ ಮಾತ್ರ ಪ್ರೋಟೀನ್ ಸೇವಿಸಬೇಕು.

ಪ್ರೋಟೀನ್ ಕಡಿಮೆ ಮಾಡಿದರೆ ಏನಾಗುತ್ತದೆ?

ಕೆಲವರು ಭಯದಿಂದ ಪ್ರೋಟೀನ್ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಇದರಿಂದ ಸ್ನಾಯುಗಳು ದುರ್ಬಲವಾಗುವುದು, ರೋಗನಿರೋಧಕ ಶಕ್ತಿ ಕುಸಿಯುವುದು ಹಾಗೂ ಅಪೌಷ್ಟಿಕತೆ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ವಯೋವೃದ್ಧರು ಮತ್ತು ಡಯಾಲಿಸಿಸ್‌ ರೋಗಿಗಳಿಗೆ ಸಾಕಷ್ಟು ಪ್ರೋಟೀನ್ ಅಗತ್ಯವಾಗಿರುತ್ತದೆ.

ಇದನ್ನೂ ಓದಿ: ದೊಡ್ಡವರು ತಿನ್ನುವ ಮಾತ್ರೆಯನ್ನು ಮಕ್ಕಳಿಗೆ ಅರ್ಧ ಮಾಡಿ ಕೊಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಪ್ರೋಟೀನ್ ಬಾಡಿಬಿಲ್ಡರ್‌ಗಳಿಗೆ ಮಾತ್ರವೇ?

ಇದು ಕೂಡ ತಪ್ಪು ಕಲ್ಪನೆ. ಪ್ರೋಟೀನ್ ಪ್ರತಿಯೊಬ್ಬರ ದೇಹಕ್ಕೂ ಅಗತ್ಯ. ಸ್ನಾಯು, ಮೂಳೆ, ಹಾರ್ಮೋನ್ ಹಾಗೂ ರೋಗನಿರೋಧಕ ವ್ಯವಸ್ಥೆಯ ಆರೋಗ್ಯಕ್ಕೆ ಇದು ಮುಖ್ಯ. ಬಾಡಿಬಿಲ್ಡರ್‌ಗಳಿಗೆ ಮಾತ್ರ ಇದರ ಪ್ರಮಾಣ ಹೆಚ್ಚು ಬೇಕಾಗಬಹುದು.

ಪ್ರೋಟೀನ್ ಯೂರಿಕ್ ಆಸಿಡ್ ಹೆಚ್ಚಿಸುತ್ತದೆಯೇ?

ಎಲ್ಲಾ ರೀತಿಯ ಪ್ರೋಟೀನ್ ಯೂರಿಕ್ ಆಸಿಡ್ ಹೆಚ್ಚಿಸುವುದಿಲ್ಲ. ಸಸ್ಯಾಹಾರ ಮೂಲದ ಪ್ರೋಟೀನ್ ಸಾಮಾನ್ಯವಾಗಿ ಈ ಸಮಸ್ಯೆ ಉಂಟುಮಾಡುವುದಿಲ್ಲ. ಆದರೆ ಕೆಲವು ಪ್ರಾಣಿಜನ್ಯ ಆಹಾರಗಳು ಹಾಗೂ ಮದ್ಯಪಾನ ಯೂರಿಕ್ ಆಸಿಡ್ ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಕಿಡ್ನಿ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ, ಪ್ರೋಟೀನ್ ಪ್ರಮಾಣವನ್ನು ವೈದ್ಯರ ಸಲಹೆಯಂತೆ ನಿಗದಿಪಡಿಸಿಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಮಾಹಿತಿಯನ್ನು ಮಾತ್ರ ನಂಬದೆ, ಸಮತೋಲಿತ ಆಹಾರ ಮತ್ತು ತಜ್ಞರ ಮಾರ್ಗದರ್ಶನವನ್ನು ಅನುಸರಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಾನು ಕೆಪಿಸಿಸಿ ಅಧ್ಯಕ್ಷನಾಗುವವನು, ಸಿಎಂ ಆಗುವ ಕ್ಯಾಂಡಿಡೇಟ್: ಮಹದೇವಪ್ಪ
ನಾನು ಕೆಪಿಸಿಸಿ ಅಧ್ಯಕ್ಷನಾಗುವವನು, ಸಿಎಂ ಆಗುವ ಕ್ಯಾಂಡಿಡೇಟ್: ಮಹದೇವಪ್ಪ
ದೇವರ ಹಳೆಯ ಫೋಟೋಗಳನ್ನು ಕಸಕ್ಕೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
ದೇವರ ಹಳೆಯ ಫೋಟೋಗಳನ್ನು ಕಸಕ್ಕೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
2 ಹಸು ವಿತರಣೆ ಭರವಸೆಯ ಹಿಂದಿನ ಅಸಲಿ ಗೇಮ್‌ಪ್ಲಾನ್ ಏನು ಗೊತ್ತಾ?
2 ಹಸು ವಿತರಣೆ ಭರವಸೆಯ ಹಿಂದಿನ ಅಸಲಿ ಗೇಮ್‌ಪ್ಲಾನ್ ಏನು ಗೊತ್ತಾ?
ಗರ್ಭಿಣಿ ಮಹಿಳೆಯರಂತೆಯೇ ಎರಡು ಹಸುಗಳಿಗೆ ಸೀಮಂತ ಸಂಭ್ರಮ
ಗರ್ಭಿಣಿ ಮಹಿಳೆಯರಂತೆಯೇ ಎರಡು ಹಸುಗಳಿಗೆ ಸೀಮಂತ ಸಂಭ್ರಮ
ಬೆಂಗಳೂರಲ್ಲಿ 191 ಮಸಾಜ್, ಸ್ಪಾಗಳ ಮೇಲೆ ಪೊಲೀಸರ ದಿಢೀರ್​ ದಾಳಿ
ಬೆಂಗಳೂರಲ್ಲಿ 191 ಮಸಾಜ್, ಸ್ಪಾಗಳ ಮೇಲೆ ಪೊಲೀಸರ ದಿಢೀರ್​ ದಾಳಿ
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್
13ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
13ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ