AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡವರು ತಿನ್ನುವ ಮಾತ್ರೆಯನ್ನು ಮಕ್ಕಳಿಗೆ ಅರ್ಧ ಮಾಡಿ ಕೊಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಮಕ್ಕಳಿಗೆ ವಯಸ್ಕರ ಔಷಧಿ ನೀಡುವುದು ಹಾನಿಕಾರಕ. ಅನೇಕ ಪೋಷಕರು ಇದು ತಿಳಿದಿದ್ದರೂ ಸಹ ಅದನ್ನು ಅರ್ಧ ಮಾಡಿ ಕೊಡುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ ಎಂಬುದು ತಿಳಿದಿದೆಯೇ? ಆರೋಗ್ಯ ತಜ್ಞರು ಮಕ್ಕಳಿಗೆ ಈ ವಿಧಾನ ಸುರಕ್ಷಿತವಲ್ಲ ಎಂದು ಹೇಳುತ್ತಾರೆ. ಆದರೆ ಈ ವಿಧಾನ ಏಕೆ ಅಪಾಯಕಾರಿ, ಅದರಿಂದಾಗುವ ಅಡ್ಡಪರಿಣಾಮಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೊಡ್ಡವರು ತಿನ್ನುವ ಮಾತ್ರೆಯನ್ನು ಮಕ್ಕಳಿಗೆ ಅರ್ಧ ಮಾಡಿ ಕೊಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 02, 2026 | 9:43 PM

Share

ಮುಖ್ಯಾಂಶಗಳು

  • ಮಕ್ಕಳಿಗೆ ದೊಡ್ಡವರ ಔಷಧ ನೀಡುವುದರಿಂದ ಏನಾಗುತ್ತದೆ?
  • ಮಕ್ಕಳಿಗೆ ಔಷಧ ನೀಡುವಾಗ ಪೋಷಕರು ತಪ್ಪದೇ ತಿಳಿಯಬೇಕಾದ ಸಂಗತಿಗಳು
  • ವೈದ್ಯರ ಸಲಹೆ ಇಲ್ಲದೆ ಮಕ್ಕಳಿಗೆ ಮಾತ್ರೆ ನೀಡುವುದು ಎಷ್ಟು ಅಪಾಯಕಾರಿ?

ಜ್ವರ, ಶೀತ ಅಥವಾ ನೋವಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆ ಬಂದಾಗ ಕೆಲವು ಪೋಷಕರು ದೊಡ್ಡವರ ಮಾತ್ರೆಯನ್ನು ಅರ್ಧ ಅಥವಾ ಕಾಲು ಭಾಗ ಮಾಡಿ ಮಕ್ಕಳಿಗೆ ನೀಡುತ್ತಾರೆ. ಇದರಿಂದ ಸರಿಯಾದ ಪ್ರಮಾಣ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಪೋಷಕರು ಈ ತಪ್ಪನ್ನು ಆಗಾಗ ಮಾಡುತ್ತಿರುತ್ತಾರೆ. ಆದರೆ ಮಕ್ಕಳಿಗೆ ಈ ವಿಧಾನ ಸುರಕ್ಷಿತವಲ್ಲ ಎಂದು ಮಕ್ಕಳ ತಜ್ಞರು ಎಚ್ಚರಿಸುತ್ತಾರೆ. ಆದರೆ ಈ ರೀತಿ ಮಾಡುವುದು ಏಕೆ ಅಪಾಯಕಾರಿ, ಅದರಿಂದಾಗುವ ಅಡ್ಡಪರಿಣಾಮಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಏಕೆ ಅಪಾಯಕಾರಿ?

ತಜ್ಞರ ಪ್ರಕಾರ, ಮಕ್ಕಳ ಔಷಧದ ಪ್ರಮಾಣವನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಅಲ್ಲ, ಅವರ ತೂಕ, ಆರೋಗ್ಯದ ಸ್ಥಿತಿ, ಕಾಯಿಲೆಯ ತೀವ್ರತೆ ಹಾಗೂ ಔಷಧದ ಸ್ವಭಾವವನ್ನು ಗಮನಿಸಿ ನಿರ್ಧರಿಸಲಾಗುತ್ತದೆ. ಮಾತ್ರೆಯನ್ನು ಅರ್ಧ ಮಾಡಿದರೆ ಔಷಧದ ಪ್ರಮಾಣ ಸಮಾನವಾಗಿ ಹಂಚಿಕೆಯಾಗದೇ ಕಡಿಮೆ ಅಥವಾ ಹೆಚ್ಚು ಪ್ರಮಾಣ ದೇಹಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಅದರಲ್ಲಿಯೂ CR (Controlled Release), SR (Sustained Release), MR (Modified Release) ಮತ್ತು ವಿಶೇಷ ಲೇಪನ (Coated) ಹೊಂದಿರುವ ಮಾತ್ರೆಗಳನ್ನು ಮುರಿದು ಕೊಡಬಾರದು. ಇದರಿಂದ ಔಷಧದ ಪರಿಣಾಮ ಬದಲಾಗಬಹುದು ಅಥವಾ ಅಡ್ಡಪರಿಣಾಮಗಳ ಅಪಾಯ ಹೆಚ್ಚಬಹುದು.

ಅಡ್ಡಪರಿಣಾಮಗಳ ಸಾಧ್ಯತೆ

ವಯಸ್ಕರ ಔಷಧವನ್ನು ಮಕ್ಕಳಿಗೆ ನೀಡುವುದರಿಂದ ದೇಹದಲ್ಲಿ ಟಾಕ್ಸಿಸಿಟಿ, ಅಲರ್ಜಿ, ಔಷಧದ ಅತಿಯಾದ ಪರಿಣಾಮ ಅಥವಾ ಬೇಕಾದಷ್ಟು ಪರಿಣಾಮ ಕಾಣದ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಆಂಟಿಬಯೋಟಿಕ್‌, ಹಾರ್ಮೋನ್ ಮತ್ತು ಹೃದಯ ಸಂಬಂಧಿತ ಔಷಧಗಳಲ್ಲಿ ಈ ಅಪಾಯ ಹೆಚ್ಚು.

ಇದನ್ನೂ ಓದಿ: ಕ್ಯಾಲ್ಸಿಯಂ ಕೊರತೆ ಮಾತ್ರವಲ್ಲ, ಈ ಅಭ್ಯಾಸಗಳೂ ಕೂಡ ಮೂಳೆಗಳನ್ನು ದುರ್ಬಲಗೊಳಿಸಬಹುದು!

ಏನು ಮಾಡಬೇಕು?

ಮಕ್ಕಳಿಗೆ ಯಾವಾಗಲೂ ವೈದ್ಯರು ಸೂಚಿಸಿದ ಸಿರಪ್, ಡ್ರಾಪ್ಸ್ ಅಥವಾ ಮಕ್ಕಳಿಗಾಗಿ ನೀಡಿರುವ ಮಾತ್ರೆಗಳನ್ನು ಮಾತ್ರ ನೀಡಿ. ಮನೆಯಲ್ಲಿರುವ ದೊಡ್ಡವರ ಔಷಧವನ್ನು ಸ್ವಂತ ನಿರ್ಧಾರದಿಂದ ಅರ್ಧ ಮಾಡಿ ಕೊಡುವುದನ್ನು ತಪ್ಪಿಸಿ. ಯಾವುದೇ ಔಷಧವನ್ನು ಆರಂಭಿಸುವ ಮೊದಲು ಮಕ್ಕಳ ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ. ಸರಿಯಾದ ಡೋಸ್‌ ಮಾತ್ರ ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್