ಕ್ಯಾಲ್ಸಿಯಂ ಕೊರತೆ ಮಾತ್ರವಲ್ಲ, ಈ ಅಭ್ಯಾಸಗಳೂ ಕೂಡ ಮೂಳೆಗಳನ್ನು ದುರ್ಬಲಗೊಳಿಸಬಹುದು!
ಇತ್ತೀಚಿನ ದಿನಗಳಲ್ಲಿ ಯುವಜನರು ಸಹ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಒಂದು ಕಾರಣ ಕ್ಯಾಲ್ಸಿಯಂ ಕೊರತೆಯಾಗಿರಬಹುದು, ಆದರೆ ಅದೊಂದೇ ಕಾರಣವಲ್ಲ. ಕೆಲವು ದಿನನಿತ್ಯದ ಕೆಟ್ಟ ಅಭ್ಯಾಸಗಳು ಮೂಳೆಗಳನ್ನು ನಿಧಾನವಾಗಿ ದುರ್ಬಲಗೊಳಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದನ್ನು ಕ್ಯಾಲ್ಸಿಯಂ ಕೊರತೆ ಎಂದು ನಿರ್ಲಕ್ಷ್ಯ ಮಾಡುವ ಬದಲು ಈ ರೀತಿ ಆಗುವುದಕ್ಕೆ ಕಾರಣಗಳೇನು, ಮೂಳೆಗಳು ಗಟ್ಟಿಯಾಗಿ ಆರೋಗ್ಯವಾಗಿರಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮುಖ್ಯಾಂಶಗಳು
- ಮೂಳೆಗಳ ಆರೋಗ್ಯ ಕಾಪಾಡಲು ತಪ್ಪಿಸಬೇಕಾದ ಕೆಟ್ಟ ಅಭ್ಯಾಸಗಳು
- ಮೂಳೆಗಳ ಬಲಕ್ಕೆ ಆಹಾರ ಮಾತ್ರವಲ್ಲ, ಈ ಅಭ್ಯಾಸಗಳೂ ಮುಖ್ಯ
- ಮೂಳೆಗಳ ಆರೋಗ್ಯಕ್ಕೆ ಯಾವ ಆಹಾರ ಉತ್ತಮ?
ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಲ್ಲಿ ಮಾತ್ರವಲ್ಲ, ಯುವಕರಲ್ಲಿಯೂ ಮೂಳೆಗಳ ದುರ್ಬಲತೆ, ಮೂಳೆ ನೋವು ಮತ್ತು ಸುಲಭವಾಗಿ ದಣಿವು ಅಥವಾ ಸುಸ್ತಾಗುವಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಹಲವರು ಇದಕ್ಕೆ ಕ್ಯಾಲ್ಸಿಯಂ ಕೊರತೆಯೇ (Calcium Deficiency) ಕಾರಣ ಎಂದು ಭಾವಿಸುತ್ತಾರೆ. ಆದರೆ ಮೂಳೆಗಳ ಆರೋಗ್ಯವು ಕೇವಲ ಕ್ಯಾಲ್ಸಿಯಂ ಮೇಲಷ್ಟೇ ಅವಲಂಬಿತವಾಗಿಲ್ಲ. ಜೀವನಶೈಲಿ, ಆಹಾರ ಪದ್ಧತಿ ಮತ್ತು ಇತರ ಅಂಶಗಳೂ ಮೂಳೆಗಳ ಬಲದ ಮೇಲೆ ಪರಿಣಾಮ ಬೀರುತ್ತವೆ. ಹೌದು, ಈ ರೀತಿ ಆಗುವುದನ್ನು ಬಹಳ ಸಾಮಾನ್ಯ ಅಥವಾ ಕ್ಯಾಲ್ಸಿಯಂ ಕೊರತೆ ಎಂದು ನಿರ್ಲಕ್ಷ್ಯ ಮಾಡುವ ಬದಲು ಈ ರೀತಿ ಆಗುವುದಕ್ಕೆ ಕಾರಣಗಳೇನು, ಮೂಳೆಗಳು ಗಟ್ಟಿಯಾಗಿ ಆರೋಗ್ಯವಾಗಿರಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೂಳೆಗಳನ್ನು ದುರ್ಬಲಗೊಳಿಸುವ ಅಭ್ಯಾಸಗಳು
ತಜ್ಞರ ಪ್ರಕಾರ, ನಿಯಮಿತ ವ್ಯಾಯಾಮದ ಕೊರತೆ ಮೂಳೆಗಳ ಸಾಂದ್ರತೆಯನ್ನು ಕಡಿಮೆ ಮಾಡಬಹುದು. ಧೂಮಪಾನ, ಅತಿಯಾದ ಮದ್ಯಪಾನ, ವಿಟಮಿನ್ ಡಿ ಕೊರತೆ ಮತ್ತು ದೀರ್ಘಕಾಲ ಅನಾರೋಗ್ಯಕರ ಆಹಾರ ಸೇವನೆಯೂ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಕೆಲವು ಔಷಧಿಗಳ ದೀರ್ಘಕಾಲದ ಬಳಕೆ ಹಾಗೂ ಹೆಚ್ಚುತ್ತಿರುವ ವಯಸ್ಸು ಕೂಡ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಮೂಳೆಗಳನ್ನು ಗಟ್ಟಿಯಾಗಿ, ಆರೋಗ್ಯವಾಗಿರಲು ಏನು ಮಾಡಬೇಕು?
ಪ್ರತಿದಿನ ನಿಯಮಿತವಾಗಿ ವಾಕ್ ಮಾಡುವುದು, ಮೆಟ್ಟಿಲು ಹತ್ತುವುದು, ಲಘು ಓಟ ಅಥವಾ ತೂಕ ಎತ್ತುವಂತಹ ವ್ಯಾಯಾಮಗಳನ್ನು ಮಾಡುವುದು ಮೂಳೆಗಳನ್ನು ಬಲಪಡಿಸಲು ಸಹಕಾರಿ. ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಕೂಡ ಮುಖ್ಯ. ಜೊತೆಗೆ ಪ್ರತಿದಿನ ಸ್ವಲ್ಪ ಸಮಯ ಸೂರ್ಯನ ಬೆಳಕಿನಲ್ಲಿ ಇರುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಲಭ್ಯವಾಗುತ್ತದೆ.
ಇದನ್ನೂ ಓದಿ: ಮೆದುಳಿನ ಆರೋಗ್ಯ ಕಾಪಾಡಲು ಡಬ್ಲ್ಯೂಎಚ್ಓ ಶಿಫಾರಸು ಮಾಡಿರುವ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಮೂಳೆಗಳ ಆರೋಗ್ಯಕ್ಕೆ ಯಾವ ಆಹಾರ ಉತ್ತಮ?
ಹಾಲು, ಮೊಸರು, ಪನ್ನೀರ್, ಹಸಿರು ಎಲೆಗಳ ತರಕಾರಿಗಳು, ಬಾದಾಮಿ ಹಾಗೂ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ನಿಯಮಿತವಾಗಿ ಸೇವಿಸಿ. ಸಮತೋಲಿತ ಆಹಾರ, ಸಾಕಷ್ಟು ನೀರು ಕುಡಿಯುವುದು ಮತ್ತು ಹೆಚ್ಚು ಸಮಯ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಸಹ ಅಗತ್ಯ. ವೈದ್ಯರ ಸಲಹೆಯಿದ್ದರೆ ಮಾತ್ರ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ಪೂರಕಗಳನ್ನು ಬಳಸಬೇಕು. ಆರೋಗ್ಯಕರ ಜೀವನಶೈಲಿಯೇ ದೀರ್ಘಕಾಲ ಮೂಳೆಗಳನ್ನು ಗಟ್ಟಿಯಾಗಿಡುವ ಅತ್ಯುತ್ತಮ ಮಾರ್ಗವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




