AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆದುಳಿನ ಆರೋಗ್ಯ ಕಾಪಾಡಲು ಡಬ್ಲ್ಯೂಎಚ್ಓ ಶಿಫಾರಸು ಮಾಡಿರುವ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ವಯಸ್ಸಾದಂತೆ, ನಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆರೋಗ್ಯಕರ ಮೆದುಳಿಗೆ, ಕೇವಲ ಚಿಕಿತ್ಸೆ ಮಾತ್ರವಲ್ಲ, ದೈನಂದಿನ ಜೀವನಶೈಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂದರ್ಭದಲ್ಲಿ, ಮೆದುಳನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಲು ಕೆಲವು ಅಗತ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಡಬ್ಲ್ಯೂಎಚ್ಓ ಸಲಹೆ ನೀಡಿದೆ. ಹೌದು, ಇದನ್ನು ಸರಿಯಾಗಿ ಪಾಲನೆ ಮಾಡುವುದರಿಂದ ನಮ್ಮ ಮೆದುಳಿನ ಆರೋಗ್ಯವನ್ನು ನಾವು ಸರಿಯಾಗಿ ಕಾಪಾಡಿಕೊಳ್ಳಬಹುದಾಗಿದೆ.

ಮೆದುಳಿನ ಆರೋಗ್ಯ ಕಾಪಾಡಲು ಡಬ್ಲ್ಯೂಎಚ್ಓ ಶಿಫಾರಸು ಮಾಡಿರುವ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
Who Tips For Brain HealthImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 02, 2026 | 6:18 PM

Share

ಮುಖ್ಯಾಂಶಗಳು

  • ದೀರ್ಘಕಾಲ ಮೆದುಳು ಆರೋಗ್ಯವಾಗಿರಲು ಡಬ್ಲ್ಯೂಎಚ್ಓ ನೀಡಿರುವ ಸಲಹೆಗಳು
  • ಮರೆವಿನ ಸಮಸ್ಯೆ ತಡೆಯಲು ದಿನನಿತ್ಯದ ಅನುಸರಿಸಬೇಕಾದ ಅಭ್ಯಾಸಗಳು
  • ಮೆದುಳಿನ ಕ್ಷಮತೆ ಹೆಚ್ಚಿಸಲು ಆರೋಗ್ಯಕರ ಜೀವನಶೈಲಿ

ವಯಸ್ಸು ಹೆಚ್ಚಾದಂತೆ ದೇಹದ ಜೊತೆಗೆ ಮೆದುಳಿನ ಆರೋಗ್ಯದ ಮೇಲೂ ಗಮನ ಹರಿಸುವುದು ಅಗತ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಡಿಮೆಯಾಗುವುದು ಮತ್ತು ಯೋಚನಾ ಸಾಮರ್ಥ್ಯದಲ್ಲಿ ಬದಲಾವಣೆ ಕಾಣುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮೆದುಳಿನ ಆರೋಗ್ಯವನ್ನು (Brain Health) ದೀರ್ಘಕಾಲ ಕಾಪಾಡಿಕೊಳ್ಳಲು ಕೆಲವು ಪ್ರಮುಖ ಜೀವನಶೈಲಿ ಸಲಹೆಗಳನ್ನು ನೀಡಿದೆ. ಇದನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದಲ್ಲಿ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಹಾಗಾದರೆ ಡಬ್ಲ್ಯೂಎಚ್ಓ ಪ್ರಕಾರ ಮೆದುಳು ಆರೋಗ್ಯವಾಗಿರಲು ಯಾವ ರೀತಿಯ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಬ್ಲ್ಯೂಎಚ್ಓ ಶಿಫಾರಸು ಮಾಡಿರುವ ಆರೋಗ್ಯಕರ ಅಭ್ಯಾಸಗಳು:

ಮೆದುಳು ಆರೋಗ್ಯವಾಗಿರಲು ಪ್ರತಿದಿನ ನಿಯಮಿತವಾಗಿ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡಬೇಕು. ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಧೂಮಪಾನದಿಂದ ದೂರವಿದ್ದು, ಮದ್ಯಪಾನವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಜೊತೆಗೆ ಹೊಸ ವಿಷಯಗಳನ್ನು ಕಲಿಯುವುದು, ಪುಸ್ತಕ ಓದುವುದು, ಒಗಟುಗಳನ್ನು ಬಿಡಿಸುವುದು ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗುವುದು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: ಪ್ರತಿ ಸಣ್ಣ ಆರೋಗ್ಯ ಸಮಸ್ಯೆಗೂ ಔಷಧಿ ಸೇವಿಸುತ್ತೀರಾ? ಈ ಅಭ್ಯಾಸ ಎಷ್ಟು ಅಪಾಯಕಾರಿ ಗೊತ್ತಾ?

ಈ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಿ:

ಡಬ್ಲ್ಯೂಎಚ್ಓ ಪ್ರಕಾರ, ಅಧಿಕ ರಕ್ತದೊತ್ತಡ, ಮಧುಮೇಹ, ಹೆಚ್ಚಿದ ಕೊಲೆಸ್ಟ್ರಾಲ್, ಅಧಿಕ ತೂಕ, ಶ್ರವಣ ಸಮಸ್ಯೆ ಮತ್ತು ಖಿನ್ನತೆ (ಡಿಪ್ರೆಶನ್) ಮುಂತಾದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡುವುದು ಅಗತ್ಯ. ಇವುಗಳನ್ನು ನಿರ್ಲಕ್ಷಿಸಿದರೆ ಮೆದುಳಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಮತ್ತು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಮುಖ್ಯ.

ಈ ಕೆಟ್ಟ ಅಭ್ಯಾಸಗಳಿಂದ ದೂರವಿರಿ;

ಧೂಮಪಾನ, ಅತಿಯಾದ ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಮೆದುಳಿನ ಕಾರ್ಯಕ್ಷಮತೆಯನ್ನು ಕುಗ್ಗಿಸಬಹುದು. ಆದ್ದರಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆಗಳನ್ನು ಪಾಲಿಸುವುದು ದೀರ್ಘಕಾಲ ಮೆದುಳನ್ನು ಆರೋಗ್ಯವಾಗಿಡಲು ನೆರವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ