ಪತ್ತೆಯಾಯ್ತು ನರಭಕ್ಷಕ ಹುಲಿಯ ಹೆಜ್ಜೆ ಗುರುತು, ಹುಲಿಯೆಲ್ಲಿ?

ಚಾಮರಾಜನಗರ: ಈಗಾಗಲೆ ಇಬ್ಬರು ರೈತರನ್ನು ಬಲಿ ಪಡೆದ ನರಭಕ್ಷಕ ಹುಲಿಗಾಗಿ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಡುಕಾಟ ಜೋರಾಗಿದೆ. ದಸರಾದ ಗಜಪಡೆ ಅಭಿಮನ್ಯು ನೇತೃತ್ವದಲ್ಲಿ ಸತತ 2 ದಿನಗಳಿಂದ ನಡೆಯುತ್ತಿರುವ ಕಿಲ್ಲರ್ ಟೈಗರ್ ಆಪರೇಷನ್ ನಲ್ಲಿ ಅರಣ್ಯಾಧಿಕಾರಿಗಳು ಹಗಲು ರಾತ್ರಿ ಕೈಯಲ್ಲಿ ಗನ್ ಹಿಡಿದು ಕಣ್ಣಿಗೆ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ.  ಆಕ್ಟೋಬರ್ 8 ರಂದು ಚೌಡಳ್ಳಿ ಗ್ರಾಮಕ್ಕೆ ಸೈಲೆಂಟಾಗಿ ಎಂಟ್ರಿ ಕೊಟ್ಟಿದ್ದ ಹುಲಿ ರೈತ ಶಿವಲಿಂಗಪ್ಪನನ್ನ ಬಲಿ ಪಡೆದಿತ್ತು. ಚಾಮರಾಜನಗರ ಜಿಲ್ಲೆ […]

ಪತ್ತೆಯಾಯ್ತು ನರಭಕ್ಷಕ ಹುಲಿಯ ಹೆಜ್ಜೆ ಗುರುತು, ಹುಲಿಯೆಲ್ಲಿ?
Follow us
ಸಾಧು ಶ್ರೀನಾಥ್​
|

Updated on:Oct 11, 2019 | 3:16 PM

ಚಾಮರಾಜನಗರ: ಈಗಾಗಲೆ ಇಬ್ಬರು ರೈತರನ್ನು ಬಲಿ ಪಡೆದ ನರಭಕ್ಷಕ ಹುಲಿಗಾಗಿ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಡುಕಾಟ ಜೋರಾಗಿದೆ. ದಸರಾದ ಗಜಪಡೆ ಅಭಿಮನ್ಯು ನೇತೃತ್ವದಲ್ಲಿ ಸತತ 2 ದಿನಗಳಿಂದ ನಡೆಯುತ್ತಿರುವ ಕಿಲ್ಲರ್ ಟೈಗರ್ ಆಪರೇಷನ್ ನಲ್ಲಿ ಅರಣ್ಯಾಧಿಕಾರಿಗಳು ಹಗಲು ರಾತ್ರಿ ಕೈಯಲ್ಲಿ ಗನ್ ಹಿಡಿದು ಕಣ್ಣಿಗೆ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ.

 ಆಕ್ಟೋಬರ್ 8 ರಂದು ಚೌಡಳ್ಳಿ ಗ್ರಾಮಕ್ಕೆ ಸೈಲೆಂಟಾಗಿ ಎಂಟ್ರಿ ಕೊಟ್ಟಿದ್ದ ಹುಲಿ ರೈತ ಶಿವಲಿಂಗಪ್ಪನನ್ನ ಬಲಿ ಪಡೆದಿತ್ತು. ಚಾಮರಾಜನಗರ ಜಿಲ್ಲೆ ಬಂಡೀಪು ಹುಲಿ ಸಂರಕ್ಷಿತ ಪ್ರದೇಶದ ಜಿಎಸ್ ಬೆಟ್ಟ ವಲಯದ ಚೌಡಹಳ್ಳಿ ಗ್ರಾಮದ ಬಳಿ ಕಳೆದ 2 ದಿನಗಳಿಂದ ಟೈಗರ್ ಆಪರೇಷನ್ ನಡೀತಿದೆ. ಆದರೆ ಅರಣ್ಯಾಧಿಕಾರಿಗಳು, ಹುಲಿ ವಿಭಾಗದ ಎಪಿಸಿಸಿಎಪ್ ಅದೇನ್ ಪ್ರಯತ್ನ ಮಾಡಿದ್ರೂ ಹುಲಿ ಮಾತ್ರ ಸೆರೆಸಿಕ್ಕಿಲ್ಲ. ಕೇವಲ 48 ಗಂಟೆಯೊಳಗೆ ಹುಲಿ ಸೆರೆ ಹಿಡಿತೀವಿ ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು ಆದ್ರೆ ಇನ್ನೂ ಆಪರೇಷನ್ ಸಕ್ಸಸ್ ಆಗಿಲ್ಲ.

 ಚೌಡಹಳ್ಳಿ ಗ್ರಾಮದ ಕಾಡಂಚಿನ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಚರಣೆ ಎಕ್ಸ್​ಪರ್ಟ್ ಆಗಿರೋ ದಸರಾದ ಆನೆ ಅಭಿಮಾನ್ಯು ನೇತೃತ್ವದಲ್ಲಿ ಆಪರೇಷನ್ ನಡೀತಿದೆ. ಗೋಪಾಲಸ್ವಾಮಿ, ಕೃಷ್ಣ, ಗಂಜೇಂದ್ರ, ರೋಹಿತ್ ಪಾರ್ಥ ಸಾರಥಿ ಮತ್ತು ಗಣೇಶ್ ಆನೆಗಳು ಕೂಡ ಕಾರ್ಯಾಚರಣಡಯಲ್ಲಿ ಭಾಗಿಯಾಗಿದ್ದು, ಮೊದಲನೇ ದಿನ 100ಕ್ಕೂ ಹೆಚ್ಚು ಕ್ಯಾಮಾರಾ ಟ್ರ್ಯಾಬ್, ಡ್ರೋನ್ ಬಳಸಿ 75ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಆಪರೇಷನ್​​ ಟೈಗರ್​ ಅಖಾಡಕ್ಕೆ ಇಳಿದಿದ್ರು. ನಿನ್ನೆಯಷ್ಟೇ ತೋಟವೊಂದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಆದ್ರೆ ಹುಲಿಯನ್ನ ಕೊಲ್ಲದೇ ಜೀವಂತಾಗಿ ಸೆರೆ ಹಿಡಿಯೋಕೆ ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.

Published On - 3:10 pm, Fri, 11 October 19

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ