ವಾಣಿಜ್ಯ ಬೆಳೆ ಬೆಳೆದು ಕೋಟ್ಯಾಧಿಪತಿಯಾದ ರೈತ; ಅಷ್ಟಕ್ಕೂ ಆ ರೈತ ಯಾರು? ಏನೆಲ್ಲ ಬೆಳೆದಿದ್ದಾನೆ ಅಂತೀರಾ? ಇಲ್ಲಿದೆ ನೋಡಿ

ನಂಬಿ‌ ಕೆಟ್ಟವರಿಲ್ಲವೋ ಮಣ್ಣನ್ನು ಅಂತಾರೆ. ಈ ಮಾತು ಸಾರ್ವಕಾಲಿಕ ಸತ್ಯ, ರೈತರಿಗೆ ಆಗಾಗ ಎಷ್ಟೇ ನಷ್ಟವಾದರೂ ಮಣ್ಣನ್ನು‌ ನಂಬಿದ ಮಣ್ಣಿನ ಮಕ್ಕಳನ್ನು ಭೂತಾಯಿ ಎಂದೂ ಕೈ ಬಿಟ್ಟಿಲ್ಲ. ಇನ್ನು ಅಲ್ಲಿ ಮಣ್ಣನ್ನೇ ನಂಬಿ ಮಣ್ಣಿನ ಮಗನಾದ ರೈತ, ವಾಣಿಜ್ಯ ಬೆಳೆ ಬೆಳೆದು ಕೋಟಿ ಕೋಟಿ ಗಳಿಸಿ ಕೋಟ್ಯಾಧಿಪತಿ ರೈತ ಆಗಿದ್ದಾನೆ. ಅಷ್ಟಕ್ಕೂ ಆ ರೈತ ಯಾರು?ಆತ ಏನೆಲ್ಲ ಬೆಳೆದಿದ್ದಾನೆ ಇಲ್ಲಿದೆ ನೋಡಿ ಡಿಟೇಲ್ಸ್.

ವಾಣಿಜ್ಯ ಬೆಳೆ ಬೆಳೆದು ಕೋಟ್ಯಾಧಿಪತಿಯಾದ ರೈತ; ಅಷ್ಟಕ್ಕೂ ಆ ರೈತ ಯಾರು? ಏನೆಲ್ಲ ಬೆಳೆದಿದ್ದಾನೆ ಅಂತೀರಾ? ಇಲ್ಲಿದೆ ನೋಡಿ
ಮಾದರಿ ರೈತ ಶಿವಪ್ಪ ಕುರಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 18, 2023 | 7:40 AM

ಬಾಗಲಕೋಟೆ: ಸಾಲು ಸಾಲು ಪಪ್ಪಾಯಿ ಗಿಡಗಳು, ಗಿಡದಲ್ಲಿ ಪಪ್ಪಾಯಿ(Papaya) ಹಣ್ಣು ಕಾಯಿಗಳ ಗೊಂಚಲು, ಇನ್ನೊಂದು ಕಡೆ ಟೊಮ್ಯಾಟೊ(Tomato) ಮತ್ತೊಂದು ಕಡೆ ಡ್ರ್ಯಾಗನ್ ಪ್ರೂಟ್(Dragon Fruit) ಕೃಷಿ. ಎಲ್ಲವೂ ಕೈಗೆ ಜಣ ಜಣ ಕಾಂಚಾಣ ತಂದು ಕೊಡುವ ಬೆಳೆಗಳೆ. ಇಂತಹ ಹೊಲದಲ್ಲಿ ಸಾದಾ ರೈತನಂತೆ ಕೆಲಸ‌ ಮಾಡುತ್ತಿರುವ ರೈತರು. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ(Bagalkote) ಜಿಲ್ಲೆಯ ಬಾದಾಮಿ ಹೊರವಲಯದ ಹೊಲದಲ್ಲಿ. ಇಲ್ಲಿ ಕಾಣುತ್ತಿರುವ ಈ ರೈತನ ಹೆಸರು ಶಿವಪ್ಪ ಕುರಿ. ಇವರ ಕೃಷಿ ಜೀವನವೇ ಒಂದು ಯಶೋಗಾಥೆ ಎಂದು ಹೇಳಿದರೆ ತಪ್ಪಾಗೋದಿಲ್ಲ. 25 ವರ್ಷದಿಂದ ಟೊಮ್ಯಾಟೊ, ಪಪ್ಪಾಯಿ ಸೇರಿದಂತೆ ಅನೇಕ ಹಣ್ಣು ತರಕಾರಿಯನ್ನು ದಾಖಲೆ ಪ್ರಮಾಣದಲ್ಲಿ ಬೆಳೆದವರು. ಈಗ ಪಪ್ಪಾಯಿ, ಟೊಮ್ಯಾಟೊ ಜೊತೆಗೆ ಡ್ರ್ಯಾಗನ್ ಪ್ರೂಟ್ ಕೂಡ ಬೆಳೆದಿದ್ದು, ವರ್ಷಕ್ಕೆ ಕೋಟಿ ಕೋಟಿ ಲಾಭ ಪಡೆಯುತ್ತಿದ್ದಾರೆ.

35 ಎಕರೆಯಲ್ಲಿ ಪಪ್ಪಾಯಿ; ಒಂದು ಕೋಟಿಗೂ ಅಧಿಕ ಲಾಭದ ನಿರೀಕ್ಷೆ

ಈ ವರ್ಷ ಹನ್ನೊಂದು ಎಕರೆ ಟೊಮ್ಯಾಟೊದಿಂದ ಹತ್ತು ಲಕ್ಷ ಆದಾಯ ಪಡೆದಿದ್ದು, ಇನ್ನು ಹದಿನೈದು ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಒಟ್ಟು 25 ಎಕರೆ ಹೊಲದಲ್ಲಿ ಪಪ್ಪಾಯಿ ಬೆಳೆದಿದ್ದಾರೆ. ಕಳೆದ ವರ್ಷ 17 ಎಕರೆ ಪಪ್ಪಾಯಿಯಿಂದ ಖರ್ಚು ತೆಗೆದು ಲಾಭ ಪಡೆದದ್ದು ಬರೊಬ್ಬರಿ 60 ಲಕ್ಷ. ಟೊಮ್ಯಾಟೊ 17 ಎಕರೆಯಲ್ಲಿ ಖರ್ಚು ವೆಚ್ಚ ತೆಗೆದು 80 ಲಕ್ಷ ಲಾಭ ಪಡೆದಿದ್ದರು. ಈ ವರ್ಷ ಪಪ್ಪಾಯಿ 35 ಎಕರೆ ಮೂಲಕ ಒಂದು ಕೋಟಿಗೂ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಡ್ರ್ಯಾಗನ್ ಪ್ರೂಟ್​ನಿಂದಲೂ ಆದಾಯ ಕೈ ಸೇರಲಿದೆ ಎನ್ನುವ ರೈತ, ಮಣ್ಣನ್ನು ನಂಬಿದರೆ ಭೂ ತಾಯಿ ಎಂದು ಕೈ ಬಿಡೋದಿಲ್ಲ ಎನ್ನುತ್ತಿದ್ದಾರೆ.

ಇದನ್ನೂ ಓದಿ:ಬಿಕಾಂ ಪದವೀಧರನ ಕೃಷಿ ಪಯಣ; 20 ಎಕರೆ ಜಮೀನಿನಲ್ಲಿ ಸಮೃದ್ಧ ಬೆಳೆ, ಸ್ವಾವಲಂಬಿ ಜೀವನದ ಯಶೋಗಾಥೆ ಇಲ್ಲಿದೆ

ಶಿವಪ್ಪ ಕುರಿ ಮೂಲತಃ ಕೊಪ್ಪಳ ಜಿಲ್ಲೆಯ ನಿಲುಗಲ್ ಗ್ರಾಮದವರು. ಇವರದ್ದು, ಊರಲ್ಲಿ ಇದ್ದಿದ್ದು ಕೇವಲ 2 ಎಕರೆ ಮಾತ್ರ. 25 ವರ್ಷದ ಹಿಂದೆ ಬಾದಾಮಿಗೆ ಕೃಷಿ ಮಾಡುವುದಕ್ಕೆಂದು ಬಂದು ದುಡಿದು 12 ಎಕರೆ ಜಮೀನು ಖರೀಧಿ ಮಾಡಿದ್ದಾರೆ. 40ಎಕರೆ ಜಮೀನು ಲಾವಣಿ ಮೇಲೆ ಹಿಡಿದು ಕೃಷಿ ಮಾಡುತ್ತಿದ್ದಾರೆ. ಹೊಲದಲ್ಲಿ 9 ಬೋರ್ವೆಲ್ ಇದ್ದು, ಹನಿ ನೀರಾವರಿ ಅಳವಡಿಸಿದ್ದಾರೆ. ಕೃಷಿ ಹೊಂಡ ಮಾಡಿದ್ದಾರೆ. ಸತತ 25 ವರ್ಷದಿಂದಲೂ ಇವರು ತರಕಾರಿ ಹಣ್ಣು, ಬೆಳೆಯುತ್ತಲೇ ಇಂದು ಕೋಟಿ ಕೋಟಿ ಲಾಭ ಪಡೆಯುತ್ತಿದ್ದಾರೆ. ಪಪ್ಪಾಯಿಗೆ ಕೆಜಿ 10, 12, 15 ರೂಪಾಯಿಯಂತೆ ಬೆಲೆ ಸಿಗುತ್ತಿದ್ದು, ಎಕರೆಗೆ 50-60 ಟನ್ ಪಪ್ಪಾಯಿ ಇಳುವರಿ ಬರುತ್ತಿದೆ. ಇದರಿಂದ ಶಿವಪ್ಪ ಪಪ್ಪಾಯಿ ಮೂಲಕ ಒಪ್ಪಾದ ಜೀವನ ಸಾಗಿಸುತ್ತಿದ್ದಾರೆ.

ಡ್ರ್ಯಾಗನ್ ಪ್ರುಟ್​ನಿಂದ 50 ಸಾವಿರ ಆದಾಯ ಬರಲಿದೆ

ಇನ್ನು ಈ ವರ್ಷ ಡ್ರ್ಯಾಗನ್ ಪ್ರುಟ್​ನಿಂದ 50 ಸಾವಿರ ಆದಾಯ ಬರಲಿದ್ದು, ಮುಂದಿನ ವರ್ಷದಿಂದ ಡ್ರ್ಯಾಗನ್ ಪ್ರೂಟ್​ನಿಂದಲೂ ಭರ್ಜರಿ ಲಾಭ ಕೈ ಸೇರಲಿದೆ. ಒಟ್ಟು 57 ಎಕರೆಯಲ್ಲಿ ತರಕಾರಿ ಹಣ್ಣು ಕೃಷಿಯಿಂದ ಪ್ರತಿ ವರ್ಷ ಒಂದುವರೆ ಕೋಟಿಯಷ್ಟು ಆದಾಯ ಪಡೆದು ಕೋಟ್ಯಾಧಿಪತಿ ರೈತ ಎಂದನೆಸಿಕೊಳ್ಳುತ್ತಿದ್ದಾರೆ ಶಿವಪ್ಪ. ಇವರ ಕೃಷಿ ಕಾರ್ಯ ಎಲ್ಲ ರೈತರಿಗೂ ಮಾದರಿಯಾಗಿದ್ದು, ಇವರ ಕೃಷಿ ಕಾರ್ಯಕ್ಕೆ ಇತರೆ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿ ಅದರಲ್ಲೇ ಕೊರಗುವ ರೈತರು ಅನೇಕರಿದ್ದಾರೆ.ಆದರೆ ಹುಟ್ಟಿದ ಊರನ್ನು ಬಿಟ್ಟು ಬಂದು ಕೃಷಿಯಲ್ಲಿ ಕೋಟಿ ಕೋಟಿ ಗಳಿಸುವ ಶಿವಪ್ಪ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ