ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬಳ್ಳಾರಿಯಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹ

ಉದಯಪುರದಲ್ಲಿ ನಡೆದ ಕನ್ಹಯ್ಯಾರ ಭೀಕರ ಹತ್ಯೆ ಖಂಡಿಸಿ ವಿವಿಧ ಹಿಂದೂ  ಪರ ಸಂಘಟನೆಗಳು ಇಂದು ಬಳ್ಳಾರಿ ಬಂದ್​​ಗೆ ಕರೆ ನೀಡಿವೆ. ಬೆಳಗ್ಗೆ 8 ಗಂಟೆಯಿಂದ ಪ್ರತಿಭಟನಾ ರ್ಯಾಲಿ ಆರಂಭಗೊಳ್ಳಲಿದೆ.

ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬಳ್ಳಾರಿಯಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jul 04, 2022 | 12:47 PM

ಬಳ್ಳಾರಿ: ಉದಯಪುರದಲ್ಲಿ ನಡೆದ ಕನ್ಹಯ್ಯಾರ ಭೀಕರ ಹತ್ಯೆ (Kanhaiya’s Gruesome Murder) ಖಂಡಿಸಿ ವಿವಿಧ ಹಿಂದೂ  ಪರ ಸಂಘಟನೆಗಳು ಇಂದು ಬಳ್ಳಾರಿ ಜಿಲ್ಲಾದ್ಯಂತ ಬಂದ್​ಗೆ ಕರೆಕೊಟ್ಟು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸುತ್ತಿದೆ. ಅದರಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ದೇಶಭಕ್ತಿ ನಾಗರಿಕ ವೇದಿಕೆ, ಹಿಂದೂ ಸಂಘಟನೆಗಳು ಈ ಪ್ರತಿಭಟನೆಯ ನೇತೃತ್ವವಹಿಸಿಕೊಂಡಿದ್ದು, ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಹರ್ಯಾಣದ ಮನೇಸರ್​​ನಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಲು ಹಿಂದೂಗಳ ಕರೆ

ಕನ್ಹಯ್ಯ ಹತ್ಯೆ ಖಂಡಿಸಿ  ವಿವಿಧ ಹಿಂದೂ ಸಂಘಟನೆಗಳು, ದೇಶಭಕ್ತಿ ನಾಗರಿಕ ವೇದಿಕೆ ಸೇರಿದಂತೆ ವಿವಿದ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಯಲ್ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಂಸದೆ ಜೆ ಶಾಂತಾ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಭಾಷಣ ಮಾಡಿದ ಕಾರ್ಯಕರ್ತರು, ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸೋಮಶೇಖರರೆಡ್ಡಿ, ಕನ್ಹಯ್ಯ ಲಾಲ್ ಹತ್ಯೆ ರಾಕ್ಷಸ ಪ್ರವೃತ್ತಿಯಾಗಿದೆ. ಕನ್ಹಯ್ಯ ಲಾಲ್ ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿ ಉಮೇಶ ಹತ್ಯೆಯಾಗಿದೆ. ಪಾಕಿಸ್ತಾನದಿಂದ ಮೇಸೇಜ್ ಬಂದಿದ್ದಕ್ಕೆ ಹತ್ಯೆ ಮಾಡಿದ್ದಾರೆ. ನಾವೂ ದೇಶದಲ್ಲಿ ಐಕತ್ಯೆಯಿಂದ ಇದ್ದೇವೆ. ಆದರೆ ಕನ್ಹಯ್ಯ ಲಾಲ್ ಹತ್ಯೆಯನ್ನ ನಾವೂ ಸಹಿಸುವುದಿಲ್ಲ. ಕನ್ಹಯ್ಯ ಲಾಲ್ ಹತ್ಯೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗದಿದ್ದರೇ ಬಳ್ಳಾರಿ ಅಷ್ಟೇ ಅಲ್ಲ. ಈಡೀ ರಾಜ್ಯ, ದೇಶವೇ ಬಂದ್ ಆಗುತ್ತದೆ ಎಂದಿದ್ದಾರೆ.

ನಮ್ಮ ದೇಶದಲ್ಲಿ ನ್ಯಾಯ ವ್ಯವಸ್ಥೆ ನಿಧಾನವಾಗಿದೆ. ಇತಂಹ ಆರೋಪಿಗಳಿಗೆ ಕೂಡಲೇ ಶಿಕ್ಷೆ ಆಗಬೇಕು. ಮಹಿಳೆಯರನ್ನ ಚುಡಾಯಿಸಿದವರನ್ನ ವೈಎಸ್ ಆರ್ ರೆಡ್ಡಿ ಅವರು ಸಿಎಂ ಆಗಿದ್ದಾಗ ಎನ್​ಕೌಂಟರ್ ಮಾಡಿಸಿದ್ದರು. ಈಗ ಯೋಗಿ ಆದಿತ್ಯನಾಥ್ ಅವರು ಕೆಲಸವನ್ನ ಮಾಡುತ್ತಿದ್ದಾರೆ. ಹತ್ಯೆ ಆರೋಪಿಗಳು ಮೋದಿ ಕೊಲ್ಲಲು ಚಾಕು ತೋರಿಸುತ್ತಾರೆ. ಆದರೆ ಅವರು ಜೈಲಿನಿಂದ ಹೊರಗೆ ಬರಲಿಲ್ಲ. ಹೀಗಾಗಿ ಮೋದಿ‌ ಹತ್ಯೆ ಮಾಡುವುದು ಕನಸಿನ ಮಾತಾಗಿದೆ ಎಂದರು.

ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ

ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ರಾಯಲ್ ವೃತ್ತದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ಈ ವೇಳೆ ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಗಿದ್ದು, ಸಾವಿರಾರು ಪ್ರತಿಭಟನಾಕಾರರು ಮತ್ತು ಕಾರ್ಯಕರ್ತರು ಎರಡು ನಿಮಿಷಗಳ ಕಾಲ ಮೌನ ಆಚರಣೆ ನಡೆಸಿದರು. ಪ್ರತಿಭಟನಾ ಸಭೆ ನಂತರ ಹಿಂದು ಕಾರ್ಯಕರ್ತರು ಪಾದಯಾತ್ರೆ ನಡೆಸಿದ್ದು, ರಾಯಲ್ ವೃತ್ತದಿಂದ ಬ್ರೂಸಪೇಟೆ ಪೊಲೀಸ್ ಠಾಣೆಯವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.

ಬಂದ್​ ಕರೆಗೆ ಬೆಂಬಲ ಸೂಚಿಸುವಂತೆ ವ್ಯಾಪಾರ ವಹಿವಾಟು, ಸಿನಿ ಪ್ರದರ್ಶಕರು, ಆಟೋ ಚಾಲಕರು, ಬಸ್ ಮಾಲೀಕರು, ಲಾರಿ ಮಾಲೀಕರು, ಸೇರಿದಂತೆ ವಾಣಿಜ್ಯ ವಹಿವಾಟು, ಸಾರಿಗೆ ಸಂಪರ್ಕ ಸ್ಥಗಿತಕ್ಕೆ ಪ್ರತಿಭಟನಾಕಾರರು ಮನವಿ ಮಾಡಿದ್ದರು. ಅದರಂತೆ ಥಿಯೇಟ್ ಮಾಲೀಕರು, ವ್ಯಾಪಾರಸ್ಥರು, ಆಟೋ ಚಾಲಕರು ಸೂಚಿಸಿದ್ದಾರೆ.

ಇದನ್ನೂ ಓದಿ: ಅಮರಾವತಿಯಲ್ಲಿ ಕೆಮಿಸ್ಟ್ ಹತ್ಯೆ ಪ್ರಕರಣ: ಮಾಸ್ಟರ್‌ಮೈಂಡ್ ಇರ್ಫಾನ್ ಖಾನ್ ಗೆ ಜುಲೈ7ರ ವರೆಗೆ ಪೊಲೀಸ್ ಕಸ್ಟಡಿ

ರಾಜಸ್ತಾನದ ಉದಯಪುರದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಇಬ್ಬರು ಮುಸ್ಲಿಂ ಹಂತಕರು ಬಟ್ಟೆ ಹೊಲಿಸಲು ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿಗೆ ನುಗ್ಗಿ ಕತ್ತು ಸೀಳಿ ಭೀಕರವಾಗಿ ಹತ್ಯೆ ನಡೆಸಿದ್ದರು. ನಂತರ ಹಂತಕರು ವಿಡಿಯೋ ಹತ್ಯೆಯನ್ನು  ಮಾಡಿರುವುದಾಗಿ ಒಪ್ಪಿಕೊಂಡಿದ್ದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು.

ಹಂತಕರು ಕನ್ಹಯ್ಯ ಅವರ ದೇಹಕ್ಕೆ ಹರಿತವಾದ ಮಾರಕಾಸ್ತ್ರದಿಂದ 26 ಬಾರಿ ಇರಿದಿದ್ದು, ವಿಪರೀತವಾಗಿ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ಪ್ರಕಣದ ತನಿಖೆಯನ್ನು ಎನ್​ಐಎ ನಡೆಸುತ್ತಿದ್ದು, ಹಂತಕರಿಗೆ ಉಗ್ರರ ನಂಟು ಇರುವುದು ಬಹಿರಂಗಗೊಂಡಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ 5 ವರ್ಷದ ಮಗಳ ಕೆನ್ನೆ, ಎದೆ ಭಾಗ ಕಚ್ಚಿ ವಿಕೃತಿ ಮೆರೆದ ತಂದೆ ಪೊಲೀಸರ ವಶಕ್ಕೆ

Published On - 6:43 am, Mon, 4 July 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು