AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು, ನಂದಿನಿ ಉತ್ಪನ್ನಗಳ ದರ ಏರಿಕೆಯ ಸುಳಿವು ನೀಡಿದ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್

ಕರ್ನಾಟಕದಲ್ಲಿ ಹಾಲಿನ ದರ ಏರಿಕೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ದರ ಏರಿಕೆ ಸಂಬಂಧ ಹಾಲು ಒಕ್ಕೂಟಗಳ ನಿಯೋಗ ಈಗಾಗಲೇ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರು ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು (ಸೆ,25) ಒಕ್ಕೂಟಗಳು ಸಭೆ ಮಾಡಿದ್ದು, ಹಾಲಿನ ದರ ಏರಿಕೆ ಬಗ್ಗೆ ತೀರ್ಮಾನಿಸಿದ್ದಾರೆ.

ಹಾಲು, ನಂದಿನಿ ಉತ್ಪನ್ನಗಳ ದರ ಏರಿಕೆಯ ಸುಳಿವು ನೀಡಿದ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್
Dk Suresh
TV9 Web
| Edited By: |

Updated on: Sep 25, 2026 | 5:38 PM

Share

ಬೆಂಗಳೂರು, ಸೆಪ್ಟೆಂಬರ್ 25): ಕಳೆದ ಹಲವು ದಿನಗಳಿಂದ ಹಾಲಿನ ದರ ಲೀಟರ್ಗೆ 10ರೂ.ಯಿಂದ 14 ರೂ. ಏರಿಕೆ ಮಾಡುವಂತೆ ಹಾಲು ಒಕ್ಕೂಟಗಳು ಬೇಡಿಕೆ ಇಟ್ಟಿದ್ದವು. ಈಗಾಗಲೇ 14 ಹಾಲು ಒಕ್ಕೂಟಗಳು ಸಿಎಂಗೆ ದರ ಏರಿಕೆಗೆ ಮಾಡುವಂತೆ ಮನವಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಇದೀಗ ಸಿಎಂ ಕೆಎಂಎಫ್‌ಗೆ ಪ್ರಸ್ತಾವನೆ ಕೇಳಿದ್ದರು. ಈ ಸಂಬಂಧ ಇಂದು (ಸೆಪ್ಟೆಂಬರ್ 25) ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸತತ ಮೂರು ಗಂಟೆಗಳ ಕಾಲ ಸಭೆ ನಡೆದಿದ್ದು, ಹಾಲಿನ ದರ ಕನಿಷ್ಠ 10 ರೂ. ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳು ಮನವಿ ಮಾಡಿವೆ. ಸಭೆ ಬಳಿಕ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದು, ಕನಿಷ್ಠ 10 ರೂ. ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ನಾಳೆ (ಸೆ.26) ಬೆಳಗ್ಗೆ 10 ಗಂಟೆಗೆ ಸಿಎಂ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಹಾಲಿನ ದರ ಕನಿಷ್ಠ 10 ರೂ. ಹೆಚ್ಚಳ ಎಂದ ಸುರೇಶ್

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​, ಹಾಲಿನ ದರ ಕನಿಷ್ಠ 10 ರೂ. ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ನಾಳೆ (ಸೆ.26) ಬೆಳಗ್ಗೆ 10 ಗಂಟೆಗೆ ಸಿಎಂ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸುತ್ತೇವೆ. ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶ. ಕನಿಷ್ಠ 10 ರೂ. ಹೆಚ್ಚಳ ಮಾಡಲು ರೈತರು ಬೇಡಿಕೆ ಇಟ್ಟಿದ್ದಾರೆ. ಒಕ್ಕೂಟದ ಸಮಸ್ಯೆಗಳು, ಆಡಳಿತ ವೆಚ್ಚ, ಉತ್ಪಾದನೆ ಸೇರಿ ನಾಳೆ ಸಿಎಂ ಭೇಟಿ ಮಾಡಿ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಇದನ್ನೂ ನೋಡಿ: ಬೆಂಗಳೂರು: ಹಾಲಿನ ದರ ಏರಿಕೆಯ ಚರ್ಚೆ ಬೆನ್ನಲ್ಲೇ 48 ಲೀಟರ್ ನಂದಿನಿ ಹಾಲು ಕದ್ದ ಕದೀಮರು!

25-26ನೇ ಸಾಲಿನ ಮಹಾ ಮಂಡಳಿಯ ವಾರ್ಷಿಕ ಸಭೆ ಇತ್ತು. ಕಳೆದ ವರ್ಷದ ಆದಾಯದ ವೆಚ್ಚ ಮತ್ತು ಮುಂದಿನ ವರ್ಷದಲ್ಲಿ ನಂದಿನಿ ಬ್ರಾಂಡ್ ನ್ನು ಯಾವ ರೀತಿ ಜನರ ಮುಂದೆ ತಗೊಂಡು ಹೋಗಬೇಕು? ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣೆ, ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕಳೆದ ಆರೇಳು ತಿಂಗಳಿಂದ ಬೆಲೆ ಏರಿಕೆ ಎಲ್ಲಾ ಕಡೆ ಆಗಿದೆ. ರಾಜ್ಯದ ರೈತರು ಸಾಕಷ್ಟು ಹಾಲು ಉತ್ಪಾದನೆ ತೊಡಗಿದ್ದಾರೆ. ಅವರಿಗೆ ಪ್ರೋತ್ಸಾಹ ಧನ ಕೊಡಬೇಕೆಂದು ಹೋರಾಟ ಮಾಡಿದ್ದಾರೆ. ಅಧಿವೇಶನ ನಡೆಯುವ ವೇಳೆಯೂ ಹಾಲಿನ ದರ ಏರಿಕೆ ಬಗ್ಗೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಹಾಲಿನ ದರ ಹೆಚ್ಚಳ ಖಚಿತ ಎಂದಿದ್ದಾರೆ.

ಈ ವಿಷಯದ ಬಗ್ಗೆ ಮಾರುಕಟ್ಟೆ ಬೇರೆ ರಾಜ್ಯದ ಮಾರುಕಟ್ಟೆಗಳು ಅಲ್ಲಿ ರೈತರಿಗೆ ಯಾವ ಬೆಲೆ ಕೊಡ್ತಿದ್ದಾರೆ? ಉತ್ಪಾದನೆ ವೆಚ್ಚ, ನಂದಿನಿ ಉತ್ಪನ್ನಗಳು ಇಡೀ ರಾಷ್ಟ್ರೀಯ ಮಟ್ಟದಲ್ಲೇ ಗುಣಮಟ್ಟ ಹೊಂದಿವೆ. ಒಟ್ಟಾರೆಯಾಗಿ ನಂದಿನಿ ಬ್ರಾಂಡ್ ಗೆ ಧಕ್ಕೆ ಬಾರದ ರೀತಿಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಲು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. ಬೇರೆ ರಾಜ್ಯಗಳಲ್ಲಿ ಹಾಲು ಉತ್ಪಾದಕರ ದರಕ್ಕೂ, ಇಲ್ಲಿನ ಉತ್ಪಾದಕರ ದರಕ್ಕೂ ಏನು ವ್ಯತ್ಯಾಸ ಇದೆ ಎಂಬುದನ್ನು ಚರ್ಚೆ ಮಾಡುತ್ತೇವೆ. ಇಲ್ಲಿ ಲಾಭ ಮಾಡಿ ಸಂಸ್ಥೆ ಮಾಡುವುದು ಏನಿಲ್ಲ. ಗ್ರಾಹಕರನ್ನು ನಂಬಿಕೊಂಡು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಇವತ್ತು ಪ್ರತಿನಿತ್ಯ ಪೆಟ್ರೋಲ್ ಡೀಸೆಲ್ ದರ ಜಾಸ್ತಿ ಯಾಗಿದೆ. ಕಳೆದ ವರ್ಷಕ್ಕಿಂತ ಕೆಎಂಎಫ್ ಲಾಭ ಈ ವರ್ಷ ಕಡಿಮೆ ಇದೆ ಎಂದರು.

ಹಾಲಿನ ದರ ಏರಿಕೆಯಾದ್ರೆ, ಉತ್ಪನ್ನಗಳು ದರ ಕೂಡ ಹೆಚ್ಚಳ

ನಮ್ಮ ನಂದಿನಿ ಬ್ರಾಂಡ್ ಗೆ ಯಾವುದೇ ರೀತಿಯ ಧಕ್ಕೆ ಬರಬಾರದು. ನಮ್ಮ ವ್ಯವಸ್ಥೆ ಸಂಪೂರ್ಣ ವಾಗಿ ಪಾರದರ್ಶಕವಾಗಿದೆ. ಒಳ್ಳೆಯ ಬ್ರಾಂಡ್ ಕಾಪಾಡಲು ನಂದಿನಿ ಕೆಲಸ ಮಾಡುತ್ತದೆ. ಹಾಲಿನ ದರ ಏರಿಕೆಯಾದಾಗ ಹಾಲಿನ ಉತ್ಪನ್ನಗಳು ದರ ಕೂಡ ಹೆಚ್ಚಾಗುತ್ತದೆ. ನಾವು ಯಾರಿಗೂ ಶಾಕ್ ಕೊಡುವುದಿಲ್ಲ. ಹಾಲಿನ ದರ ಏರಿಕೆ ಪ್ರಸ್ತಾವವನ್ನು ಕೆಎಂಎಫ್ ನ ಆಡಳಿತಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತಾರೆ. ನಾಳೆ ನಾವೆಲ್ಲರೂ ಬೆಳಿಗ್ಗೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಒತ್ತಾಯ ಮಾಡುತ್ತೇವೆ. ಬೇರೆ ರಾಜ್ಯಗಳ ಹಾಲಿನ ಉತ್ಪನ್ನಗಳ ಮಾರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More