ದೇವನಹಳ್ಳಿ: ಖಾಸಗಿ ಕಂಪನಿಯೊಂದಕ್ಕೆ ಕರೆಂಟ್ ಶಾಕ್, ಬರೋಬ್ಬರಿ 20 ಲಕ್ಷ ರೂ ಬಿಲ್ ನೀಡಿದ ಬೆಸ್ಕಾಂ
ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಎಂ.ಎಸ್. ಫುಡ್ ಅಂಡ್ ಬೇವರೇಜಸ್ ಕಂಪನಿಗೆ ಬೆಸ್ಕಾಂ ಮೂರು ತಿಂಗಳ ವಿದ್ಯುತ್ ಬಿಲ್ 20 ಲಕ್ಷ ರೂ ವಿಧಿಸಿದೆ. ಇದರಿಂದ ಕಂಪನಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಮೂರು ತಿಂಗಳಿಂದ ಬಿಲ್ ನೀಡದ ಬೆಸ್ಕಾಂನ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಬಿಲ್ ಅನ್ನು ಹಂತ ಹಂತವಾಗಿ ಪಾವತಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ದೇವನಹಳ್ಳಿ, ಮೇ 24: ನಗರದ ಖಾಸಗಿ ಕಂಪನಿಯೊಂದಕ್ಕೆ 20 ಲಕ್ಷ ರೂ. ವಿದ್ಯುತ್ ಬಿಲ್ (Electricity bill) ಅನ್ನು ನೀಡುವ ಮೂಲಕ ಬೆಸ್ಕಾಂ (Bescom) ಶಾಕ್ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ ಕಂಡುಬಂದಿದೆ. ಎಂಎಸ್ ಫುಡ್ ಆ್ಯಂಡ್ ಬೇವರೇಜಸ್ ಕಂಪನಿಗೆ ಮೂರು ತಿಂಗಳಿಗೆ ಬರೋಬ್ಬರಿ 20 ಲಕ್ಷ ರೂ ಬಿಲ್ ನೀಡಲಾಗಿದೆ.
ಮೂರು ತಿಂಗಳ ಹಿಂದೆ ಅಷ್ಟೇ ಎಂಎಸ್ ಫುಡ್ ಆ್ಯಂಡ್ ಬೇವರೇಜಸ್ ಕಂಪನಿ ಆರಂಭಿಸಲಾಗಿದೆ. ಸದ್ಯ ಬೆಸ್ಕಾಂನ ನಡೆಗೆ ಖಾಸಗಿ ಕಂಪನಿ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿಗೆ ಮೂರು ತಿಂಗಳಿಂದ ಬಿಲ್ ನೀಡದೆ ಬೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಇದೀಗ ಒಂದೇ ಬಾರೀ 20 ಲಕ್ಷ ರೂ. ಬಿಲ್ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬೆಸ್ಕಾಂ ಬಿಲ್ ಜತೆ ಬಂದ ಅಡಿಷನಲ್ ಚಾರ್ಜ್ ಕಂಡು ಮನೆ ಮಾಲೀಕರು ಶಾಕ್!
ಇನ್ನು ಬೆಸ್ಕಾಂ ಎಇಇ ಅಧಿಕಾರಿಗೆ ಕರೆ ಮಾಡಿದರು ಫೋನ್ ತೆಗೆಯುವುದಿಲ್ಲ ಎಂದು ಆರೋಪ ಮಾಡಲಾಗಿದ್ದು, 20 ಲಕ್ಷ ರೂ ಒಂದೇ ಬಾರೀ ಕಟ್ಟಲು ಖಾಸಗಿ ಕಂಪನಿ ಮಾಲೀಕ ನಿರಾಕರಿಸಿದ್ದಾರೆ. ಹಂತ ಹಂತವಾಗಿ ಬಿಲ್ ಹಣವನ್ನ ಕಟ್ಟಲು ಅವಕಾಶ ಕೊಡುವಂತೆ ಒತ್ತಾಯಿಸಿದ್ದಾರೆ.
ಈ ರೀತಿಯ ಘಟನೆಗಳು ರಾಜ್ಯದಲ್ಲಿ ಈ ಮುಂಚೆ ಕೂಡ ನಡೆದಿವೆ. ಇತ್ತೀಚೆಗೆ ಉಚಿತವಾಗಿ ವಿದ್ಯುತ್ ಬಳಸುತ್ತಿದ್ದ ಮನೆಗಳಿಗೆ ಬೆಸ್ಕಾಂ ಅಡಿಷನಲ್ ಸೆಕ್ಯೂರಿಟೀ ಡೆಪಾಸಿಟಿ ಹೆಸರಲ್ಲಿ ಸಾವಿರಾರು ರೂ. ಹಣ ಕಟ್ಟುವಂತೆ ತಿಂಗಳ ಬಿಲ್ ಜೊತೆಗೆ ನೀಡಿತ್ತು. ಇದು ಮನೆ ಮಾಲೀಕರು ಮತ್ತು ಬಾಡಿಗೆಗೆದಾರರ ಆಕ್ರೋಶಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: Gruha Jyothi Scheme: ಶೂನ್ಯ ಬಿಲ್ ಬದಲು ಹೆಚ್ಚುವರಿ ಬಿಲ್, ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹೆಚ್ಚಳ
ವಿದ್ಯುತ್ ಬಗ್ಗೆ ಜಾಗ್ರತೆ ಇರಲಿ ಹಾಗೂ ಸುರಕ್ಷಾ ಕ್ರಮಗಳನ್ನು ಸದಾ ಅನುಸರಿಸುವಂತೆ ಬೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ವಿದ್ಯುತ್ ಸಂಬಂಧಿತ ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಬೆಸ್ಕಾಂ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ ಹಾಗೂ ನಿಮ್ಮ ಸಮೀಪದ ಬೆಸ್ಕಾಂ ಉಪವಿಭಾಗಕ್ಕೆ ಭೇಟಿ ನೀಡಿವಂತೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Sat, 24 May 25







