AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸವಾರರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ನೈಸ್ ರಸ್ತೆ, ಇ-ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಏರಿಕೆ

ಬೆಂಗಳೂರಿನ ಪ್ರಮುಖ ರಸ್ತೆಗಳಾದ ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ನಲ್ಲಿ ಜುಲೈ 1, 2026 ರಿಂದ ಟೋಲ್ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿವೆ. ಇದು ವಾಹನ ಸವಾರರಿಗೆ, ವಿಶೇಷವಾಗಿ ಐಟಿ ಉದ್ಯೋಗಿಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪರಿಷ್ಕೃತ ದರಗಳ ಸಂಪೂರ್ಣ ಮಾಹಿತಿ ಲೇಖನದಲ್ಲಿದೆ.

ಬೆಂಗಳೂರು ಸವಾರರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ನೈಸ್ ರಸ್ತೆ, ಇ-ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಏರಿಕೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 01, 2026 | 4:00 PM

Share

ಮುಖ್ಯಾಂಶಗಳು

  • ಬೆಂಗಳೂರಿನ ಪ್ರಮುಖ ಟೋಲ್ ರಸ್ತೆಗಳ ದರದಲ್ಲಿ ಹೆಚ್ಚಳ
  • ಈ ರಸ್ತೆಗಳಲ್ಲಿ ಪರಿಷ್ಕೃತ ಟೋಲ್ ದರಗಳನ್ನು ಪಾವತಿಸಬೇಕಾಗಿದೆ.
  • ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಬೆಂಗಳೂರು, ಜು. 1: ಸಿಲಿಕಾನ್ ಸಿಟಿಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಸಾರಿಗೆ ಬಸ್ ದರ ಏರಿಕೆಯ ಪ್ರಸ್ತಾವನೆಯ ಬೆನ್ನಲ್ಲೇ, ಈಗ ಬೆಂಗಳೂರಿನ ಪ್ರಮುಖ ಟೋಲ್ ರಸ್ತೆಗಳ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬೆಂಗಳೂರಿನ ಅತಿ ಬ್ಯುಸಿ ಕಾರಿಡಾರ್‌ಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಹೊಸೂರು ರಸ್ತೆ) ಮತ್ತು ನೈಸ್ ರಸ್ತೆಗಳನ್ನು (NICE Road) ಬಳಸುವ ವಾಹನ ಸವಾರರು ಇಂದು ಜುಲೈ 1, 2026 ರಿಂದ ಪರಿಷ್ಕೃತ ಟೋಲ್ ದರಗಳನ್ನು ಪಾವತಿಸಬೇಕಾಗಿದೆ.

ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NECE) ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ವಿವಿಧ ಹಂತಗಳ ಟೋಲ್ ದರವನ್ನು ಪರಿಷ್ಕರಿಸಿದೆ. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ ಸಂಪೂರ್ಣ ಪೆರಿಫೆರಲ್ ರಸ್ತೆಯಲ್ಲಿ ಚಲಿಸುವ ಕಾರುಗಳಿಗೆ ಸೆಕ್ಷನ್ ವಾರು ನಿಗದಿಪಡಿಸಲಾದ ದರ ಪಟ್ಟಿ ಇಲ್ಲಿದೆ.

ನೈಸ್ ರಸ್ತೆಯಲ್ಲಿ ಕಾರುಗಳ ಹೊಸ ದರ ವಿವರ:

ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ: 72 ರೂ.

ಬನ್ನೇರುಘಟ್ಟ ರಸ್ತೆ – ಕನಕಪುರ ರಸ್ತೆ: 53 ರೂ.

ಕನಕಪುರ ರಸ್ತೆ – ಕ್ಲೋವರ್‌ಲೀಫ್ ಜಂಕ್ಷನ್: 39 ರೂ.

ಕ್ಲೋವರ್‌ಲೀಫ್ ಜಂಕ್ಷನ್ – ಮೈಸೂರು ರಸ್ತೆ: 36 ರೂ.

ಮೈಸೂರು ರಸ್ತೆ – ಮಾಗಡಿ ರಸ್ತೆ: 77 ರೂ.

ಮಾಗಡಿ ರಸ್ತೆ – ತುಮಕೂರು ರಸ್ತೆ: 61 ರೂ.

ಲಿಂಕ್ ರಸ್ತೆ (Link Road): 83 ರೂ.

ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಹೊಸ ದರ ಪಟ್ಟಿ:

ಬೆಂಗಳೂರು ಎಲಿವೇಟೆಡ್ ಟೋಲ್ವೇ ಪ್ರೈವೇಟ್ ಲಿಮಿಟೆಡ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಮಾರ್ಚ್ 31, 2026 ರ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿ ಟೋಲ್ ದರ ಹೆಚ್ಚಿಸಿದೆ. ಈ ದರಗಳು ಜೂನ್ 30, 2027 ರವರೆಗೆ ಜಾರಿಯಲ್ಲಿರಲಿವೆ. ಇನ್ಮುಂದೆ ಕಾರುಗಳು ಸಿಂಗಲ್ ಜರ್ನಿಗೆ 65 ರೂ. (ಹಿಂದೆ 60 ರೂ. ಇತ್ತು) ಹಾಗೂ ಮಲ್ಟಿಪಲ್ ಜರ್ನಿಗೆ 100 ರೂ. ಪಾವತಿಸಬೇಕು.

ವಾಹನದ ವರ್ಗ ಸಿಂಗಲ್ ಜರ್ನಿ ಮಲ್ಟಿಪಲ್ ಜರ್ನಿ ಮಂತ್ಲಿ ಪಾಸ್
ದ್ವಿಚಕ್ರ ವಾಹನ (ಟೂ-ವೀಲರ್) 25 ರೂ. 40 ರೂ. 785 ರೂ.
ಕಾರು / ಜೀಪ್ / ವ್ಯಾನ್ 65 ರೂ. 100 ರೂ. 1,960 ರೂ.
ಲಘು ವಾಣಿಜ್ಯ ವಾಹನ / ಮಿನಿ ಬಸ್ 90 ರೂ. 135 ರೂ. 2,745 ರೂ.
ಬಸ್ / ಟ್ರಕ್ 185 ರೂ. 275 ರೂ. 5,495 ರೂ.
ಮಲ್ಟಿ-ಆಕ್ಸಲ್ ವಾಹನ (MAV) 365 ರೂ. 550 ರೂ. 10,985 ರೂ.

ಇದನ್ನೂ ಓದಿ: ಎತ್ತಿನಹೊಳೆಯ ಆಳ-ಅಗಲ: ಯೋಜನೆ ಕಾಮಗಾರಿ ಎಷ್ಟಾಯ್ತು? ಇನ್ನೆಷ್ಟಿದೆ? ಇಲ್ಲಿದೆ ಮಾಹಿತಿ

ಅತ್ತಿಬೆಲೆ ಟೋಲ್ ಪ್ಲಾಜಾ ಪರಿಷ್ಕೃತ ದರಗಳು:

ತಮಿಳುನಾಡು ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆಯ ಅತ್ತಿಬೆಲೆ ಟೋಲ್‌ನಲ್ಲೂ ದರ ಏರಿಕೆಯಾಗಿದೆ. ಆದರೆ, ಎಂದಿನಂತೆ ದ್ವಿಚಕ್ರ ವಾಹನಗಳಿಗೆ ಅತ್ತಿಬೆಲೆಯಲ್ಲಿ ಟೋಲ್ ವಿನಾಯಿತಿ ಮುಂದುವರಿದಿದೆ.

ವಾಹನದ ವರ್ಗ ಸಿಂಗಲ್ ಜರ್ನಿ ಮಲ್ಟಿಪಲ್ ಜರ್ನಿ ಮಂತ್ಲಿ ಪಾಸ್
ಕಾರು / ಜೀಪ್ / ವ್ಯಾನ್ 40  ರೂ. 60 ರೂ. 1,175 ರೂ.
ಲಘು ವಾಣಿಜ್ಯ ವಾಹನ / ಮಿನಿ ಬಸ್ 65 ರೂ. 100 ರೂ. 1,960 ರೂ.
ಬಸ್ / ಟ್ರಕ್  130 ರೂ. 195 ರೂ.  3,925 ರೂ.
ಮಲ್ಟಿ-ಆಕ್ಸಲ್ ವಾಹನ (MAV)  275 ರೂ.  410 ರೂ.  8,240 ರೂ.

ಐಟಿ ಉದ್ಯೋಗಿಗಳು ಹಾಗೂ ನಿತ್ಯ ಈ ಮಾರ್ಗಗಳಲ್ಲಿ ಸಂಚರಿಸುವ ಸವಾರರಿಗೆ ಈ ದರ ಏರಿಕೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಲಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us