AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ, ಅನಂತ್ ಅಂಬಾನಿ ಡೀಪ್‌ಫೇಕ್‌ ವಿಡಿಯೋ ನಂಬಿ ಕೆಟ್ಟ ಬೆಂಗಳೂರು ವ್ಯಕ್ತಿ: 7.66 ಲಕ್ಷ ರೂ. ವಂಚನೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಅನಂತ್ ಅಂಬಾನಿ ಅವರ ಡೀಪ್‌ಫೇಕ್ ಹೂಡಿಕೆ ವೀಡಿಯೊಗಳನ್ನು ನಂಬಿದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ, ಆನ್‌ಲೈನ್ ಫಾರೆಕ್ಸ್ ಟ್ರೇಡಿಂಗ್ ನೆಪದಲ್ಲಿ 7.66 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತಮ್ಮ ಹೂಡಿಕೆಯಿಂದ ಲಾಭ ಬರುತ್ತಿದೆ ಎಂಬ ನಂಬಿಕೆಯಲ್ಲಿದ್ದ ವ್ಯಕ್ತಿ, ಹಣವನ್ನು ಹಿಂಪಡೆಯಲು ಮುಂದಾದಾಗ ವಂಚಕರು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಲು ಆರಂಭಿಸಿದ್ದರು. ಈ ವೇಳೆ ಮೋಸ ಹೋಗಿದ್ದು ಅರಿವಾಗಿ ಅವರು ದೂರು ದಾಖಲಿಸಿದ್ದಾರೆ.

ಪ್ರಧಾನಿ ಮೋದಿ, ಅನಂತ್ ಅಂಬಾನಿ ಡೀಪ್‌ಫೇಕ್‌ ವಿಡಿಯೋ ನಂಬಿ ಕೆಟ್ಟ ಬೆಂಗಳೂರು ವ್ಯಕ್ತಿ: 7.66 ಲಕ್ಷ ರೂ. ವಂಚನೆ
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Sep 26, 2026 | 7:48 AM

Share

ಬೆಂಗಳೂರು, ಸೆಪ್ಟೆಂಬರ್​​ 26: ಆನ್​​ಲೈನ್​​ ವಂಚನೆಗಳ ಬಗ್ಗೆ ಪೊಲೀಸರು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರೆ ಅತ್ತ ವಂಚಕರು ಮಾತ್ರ ಮೋಸ ಮಾಡಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ಡೀಪ್‌ಫೇಕ್ ವಿಡಿಯೋಗಳ ಮೂಲಕ ಜನರನ್ನು ನಂಬಿಸಿ ಹಣ ಪೀಕುವ ಕೆಲಸಗಳೂ ನಡೆಯುತ್ತಿದ್ದು, ಇಂತಹುದ್ದೇ ಘಟನೆ ಬೆಂಗಳೂರಲ್ಲಿಯೂ ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಹಾಗೂ ಅನಂತ್ ಅಂಬಾನಿ ಅವರ ಡೀಪ್‌ಫೇಕ್ ವಿಡಿಯೋಗಳನ್ನು ನೈಜವೆಂದು ನಂಬಿದ ನಗರದ ನಿವಾಸಿಯೊಬ್ಬರು ಹೂಡಿಕೆ ವಂಚನೆಗೆ ಬಲಿಯಾಗಿ ಬರೋಬ್ಬರಿ 7.66 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಹೇಗಿತ್ತು ಗೊತ್ತಾ ವಂಚಕರ ಬಲೆ?

ಎಫ್‌ಐಆರ್‌ ಪ್ರಕಾರ, ಮಹಾಲಕ್ಷ್ಮಿ ಲೇಔಟ್‌ನ 39 ವರ್ಷದ ವ್ಯಕ್ತಿಗೆ ಜುಲೈ 10ರಂದು ಫೇಸ್‌ಬುಕ್‌ನಲ್ಲಿ ಈ ವಿಡಿಯೋಗಳು ಕಾಣಿಸಿಕೊಂಡಿದ್ದವು. ಮೋದಿ ಸೇರಿದಂತೆ ಇತರರು ಆನ್‌ಲೈನ್ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ವಿಡಿಯೋಗಳಲ್ಲಿ ತೋರಿಸಲಾಗಿತ್ತು. ವಿಡಿಯೋದಲ್ಲಿದ್ದ ಲಿಂಕ್‌ ಕ್ಲಿಕ್ ಮಾಡಿದ ವ್ಯಕ್ತಿ ಹೂಡಿಕೆ ಆರಂಭಿಸಲು 22,000 ರೂಪಾಯಿ ವರ್ಗಾಯಿಸಿದ್ದರು. ಬಳಿಕ ಯುನೈಟೆಡ್ ಕಿಂಗ್‌ಡಂನ +44 ಕಂಟ್ರಿ ಕೋಡ್ ಹೊಂದಿದ್ದ ಐದು ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕ ಅವರಿಗೆ ಕರೆಗಳು ಬಂದಿದ್ದವು. ಕರೆ ಮಾಡಿದವರು ತಮ್ಮನ್ನು ‘ಒನ್​​ ಟು ಮಾರ್ಕೆಟ್ಸ್​​’ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದರು. ಬಳಿಕ ವಂಚಕರು ವ್ಯಕ್ತಿಯ ಹೆಸರಿನಲ್ಲಿ ನಕಲಿ ಫಾರೆಕ್ಸ್ ಖಾತೆಯೊಂದನ್ನು ತೆರೆದಿದ್ದರು ಎನ್ನಲಾಗಿದೆ.

LIVE TV

ಇದನ್ನೂ ಓದಿ: ಜಿಬಿಎ ನಿಮಯದಿಂದ ಪತ್ತೆಯಾಯ್ತು ಕೊಲೆ ಪ್ರಕರಣ: ಸೈಟ್ ಕ್ಲೀನ್ ಮಾಡಲು ಹೋದಾಗ ಕೊಳೆತ ಶವ ಪತ್ತೆ!

ಜುಲೈ 10ರಿಂದ ಜುಲೈ 22ರವರೆಗೆ ವಿವಿಧ ವಹಿವಾಟುಗಳ ಮೂಲಕ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ವ್ಯಕ್ತಿ 7.6 ಲಕ್ಷ ರೂಪಾಯಿ ವರ್ಗಾಯಿಸಿದ್ದರು. ತಮ್ಮ ಹೂಡಿಕೆಯಿಂದ ಲಾಭ ಬರುತ್ತಿದೆ ಎಂಬ ನಂಬಿಕೆಯಲ್ಲಿದ್ದ ವ್ಯಕ್ತಿ, ಹಣವನ್ನು ಹಿಂಪಡೆಯಲು ಮುಂದಾದಾಗ ವಂಚಕರು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಲು ಆರಂಭಿಸಿದ್ದರು. ಕೆಲ ಸಮಯ ಕಾದ ಬಳಿಕ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದ್ದು, ಸೆಪ್ಟೆಂಬರ್ 19ರಂದು ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಮಾಡರ್ನ್ ಮಹಾಕವಿ ಮಂಜು ವಿರುದ್ಧ ಕುಶಾಲ ದೂರು: ವಿಡಿಯೋ
ಮಾಡರ್ನ್ ಮಹಾಕವಿ ಮಂಜು ವಿರುದ್ಧ ಕುಶಾಲ ದೂರು: ವಿಡಿಯೋ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ