ಸೋಲಾರ್ ನಿಂದ ನಮ್ಮ ಮೆಟ್ರೋ ರೈಲು ಓಡಿಸಲು ಪ್ಲ್ಯಾನ್: ಕೋಟ್ಯಂತರ ರೂ ಉಳಿತಾಯ
ಅದು ಸಿಲಿಕಾನ್ ಸಿಟಿ ಬೆಂಗಳೂರಿನ ಬಹುನಿರೀಕ್ಷಿತ ಮೆಟ್ರೋ ಮಾರ್ಗ,ಈ ವರ್ಷ ಡಿಸೆಂಬರ್ ನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಳ್ತಿದೆ ಆದರೆ ಐಐಎಸ್ಸಿ ತಜ್ಞರು ನಡೆಸಿದ ಅಧ್ಯಯನದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳನ್ನು ಸಂಪೂರ್ಣವಾಗಿ ಸೋಲಾರ್ ನಲ್ಲೇ ರನ್ ಮಾಡಬಹುದು ಎಂದು ವರದಿ ನೀಡಿದ್ದಾರೆ. ಹಾಗಾದ್ರೆ, ಈ ಸೋಲಾರ್ ಬಳಕೆಯಿಂದ ಏನೆಲ್ಲಾ ಲಾಭ ಎನ್ನುವ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 04): ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58 ಕಿಮೀ ಉದ್ದಕ್ಕೂ ನಮ್ಮ ನೀಲಿ ಮಾರ್ಗದ ಮೆಟ್ರೋ ರೈಲುಗಳಿಗೆ ಸೌರಶಕ್ತಿ ಬಳಸುವ ಪ್ಲ್ಯಾನ್ ನಡೆದಿವೆ. ಸೋಲಾರ್ನಿಂದ ನಮ್ಮ ಮೆಟ್ರೋ ಓಡಾಟ ನಡೆಸಿದರೆ ವಿದ್ಯುತ್ ಉಳಿತಾಯ ಮಾಡುವ ಜೊತೆಗೆ ವಾರ್ಷಿಕವಾಗಿ ಬರೋಬ್ಬರಿ 61 ಕೋಟಿ ರೂ.ವರೆಗೆ ಉಳಿತಾಯವಾಗಲಿದೆ. ಈ ಬಗ್ಗೆ IISC ವರದಿ ನೀಡಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಸೋಲಾರ್ ಸಹಾಯದಿಂದ ನಮ್ಮ ಮೆಟ್ರೋ ಸಂಚಾರ ಮಾಡಿದ್ರೆ, ದೇಶದಲ್ಲೇ ಮೊದಲ ಸೋಲಾರ್ ಮೆಟ್ರೋ ಸಂಚಾರ ಎನ್ನಿಸಿಕೊಳ್ಳಲಿದೆ.
ಸಿಲ್ಕ್ ಬೋರ್ಡ್- ಕೆ.ಆರ್ ಪುರ, ಟು ಏರ್ಪೋರ್ಟ್ ಮೆಟ್ರೋ 58.19 ಕಿಮೀ ವಿಸ್ತೀರ್ಣವಿದ್ದು,ಈ ಮಾರ್ಗದಲ್ಲಿ ಮೂವತ್ತು ಮೆಟ್ರೋ ಸ್ಟೇಷನ್ ಗಳಿರಲಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರ 19.75 ಕಿಮೀ 13 ಸ್ಟೇಷನ್ ಗಳು. ಕೆ.ಆರ್ ಪುರ ಟು ಏರ್ಪೋರ್ಟ್ 38.44 ಕಿಮೀ 17 ಮೆಟ್ರೋ ಸ್ಟೇಷನ್ ಗಳಿರಲಿವೆ. ನೀಲಿ ಮಾರ್ಗವನ್ನು ಬರೋಬ್ಬರಿ 14,788 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗ್ತಿದೆ. ಈ ಲೈನ್ ಬಗ್ಗೆ ಅಧ್ಯಯನ ನಡೆಸಿದ ಐಐಎಸ್ಸಿಯ ಐದು ತಜ್ಞರ ತಂಡ ಈ ಮಾರ್ಗದಲ್ಲಿ ಮೆಟ್ರೋ ರೈಲನ್ನು ಸೋಲಾರ್ ನಲ್ಲೇ ರನ್ ಮಾಡಬಹುದು ಎಂದು ಬಿಎಂಆರ್ಸಿಎಲ್ ಗೆ ವರದಿ ನೀಡಿದ್ದಾರೆ.
ಇದನ್ನೂ ಓದಿ: ಉದ್ಘಾಟನೆಗೆ ಸಿದ್ಧವಾದ ಪಿಂಕ್ ಲೈನ್ ಮೆಟ್ರೋ ಮಾರ್ಗ: ಕೊಂಚ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ದೇಶದಲ್ಲೇ ಮೊದಲ ಸೋಲಾರ್ ನಲ್ಲೇ ಮೆಟ್ರೋ ರೈಲು ಸಂಚಾರ
ಇನ್ನೂ ಐಐಎಸ್ಸಿಯ ಐವರು ತಜ್ಞರ ತಂಡವು ನೀಡಿದ ವರದಿಯಲ್ಲಿ ಬ್ಲೂ ಲೈನ್ ನಲ್ಲಿ ಸೋಲಾರ್ ಬಳಕೆ ಮಾಡಿಕೊಂಡು ರೈಲನ್ನು ಸಂಚಾರ ಮಾಡಬಹುದು ವಿದ್ಯುತ್ ಬೇಕಾಗಿಲ್ಲ ಎಂದು ಬಿಎಂಆರ್ಸಿಎಲ್ ಗೆ ವರದಿ ಸಲ್ಲಿಸಿದೆ. ಐಐಎಸ್ಸಿ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ. ಅಶಿಶ್ ವರ್ಮಾ ನೇತೃತ್ವದಲ್ಲಿ ಈ ವರದಿಯನ್ನು ಸಿದ್ದಪಡಿಸಲಾಗಿದೆ.ದೇಶದಲ್ಲೇ ಇದೇ ಮೊದಲ ಬಾರಿಗೆ ಸೋಲಾರ್ ನಲ್ಲೇ ಮೆಟ್ರೋ ರೈಲು ಸಂಚಾರ ಮಾಡುವ ಬಗ್ಗೆ ವರದಿ ಸಿದ್ದಪಡಿಸಲಾಗಿದೆ. ಇದರಿಂದ ಬೆಂಗಳೂರಿನ ರಸ್ತೆಗಳಲ್ಲಿ ಸುಮಾರು 19 ಸಾವಿರ ಪೆಟ್ರೋಲ್ ಕಾರುಗಳನ್ನು ಶಾಶ್ವತವಾಗಿ ನಿವಾರಿಸುವುದಕ್ಕೆ ಸಮವಾಗಲಿದೆ.
ಸೋಲಾರ್ ಬಳಕೆಯಿಂದ ಏನೆಲ್ಲಾ ಲಾಭ?
ಈ ಸೋಲಾರ್ ಯೋಜನೆಯಿಂದ ವರ್ಷಕ್ಕೆ 44,526 ಕಾರ್ಬನ್ ಡೈಆಕ್ಸೈಡ್ ವಾತವರಣ ಸೇರುವುದು ತಪ್ಪಲಿದ್ಯಂತೆ. ಇದರಿಂದ ಬಿಎಂಆರ್ಸಿಎಲ್ ಪ್ರತಿ ವರ್ಷ 61 ಕೋಟಿ ರುಪಾಯಿಯಷ್ಟು ಉಳಿತಾಯ ಆಗಲಿದ್ಯಂತೆ.ಮುಂಬರುವ ಎಲ್ಲಾ ಮೆಟ್ರೋ ಮಾರ್ಗದಲ್ಲೂ ಸೋಲಾರ್ ಬಳಸಿ ಮೆಟ್ರೋ ರೈಲು ಓಡಿಸಲು ಐಐಎಸ್ಸಿ ತಜ್ಞರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಐಐಎಸ್ಸಿ ತಜ್ಞರ ತಂಡ ನಮಗೆ ವರದಿ ನೀಡಿದೆ, ವರದಿಯನ್ನು ಅಧ್ಯಯನ ಮಾಡಿ ನಂತರ ತೀರ್ಮಾನ ಮಾಡುತ್ತೇವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Fri, 4 September 26




