AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಹಿ ಸುದ್ದಿ; 2032ರ ಒಳಗೆ ಇನ್ನೂ ನಾಲ್ಕು ಹೊಸ ಮೆಟ್ರೋ ಮಾರ್ಗಗಳು, ಬೆಂಗಳೂರು ಟ್ರಾಫಿಕ್​ಗೆ ಬೀಳುತ್ತಾ ಬ್ರೇಕ್​​?

ನಾಗರಿಕರಿಗೆ ಅವರ ಕೆಲಸದ ಸ್ಥಳ ಅಥವಾ ನಿವಾಸದ ಸುತ್ತಮುತ್ತಲಿನ 1-2 ಕಿಮೀ ಒಳಗೆ ಸಂಚಾರಕ್ಕೆ ಅವಕಾಶ ಸಾಧ್ಯವಾಗುವಂತೆ ಮೆಟ್ರೋ ಒದಗಿಸಲು ಬೆಂಗಳೂರಿನಲ್ಲಿ ನಾಲ್ಕು ಹೊಸ ಮೆಟ್ರೋ ಮಾರ್ಗಗಳನ್ನು ಸ್ಥಾಪಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.

ಸಿಹಿ ಸುದ್ದಿ; 2032ರ ಒಳಗೆ ಇನ್ನೂ ನಾಲ್ಕು ಹೊಸ ಮೆಟ್ರೋ ಮಾರ್ಗಗಳು, ಬೆಂಗಳೂರು ಟ್ರಾಫಿಕ್​ಗೆ ಬೀಳುತ್ತಾ ಬ್ರೇಕ್​​?
ಬೆಂಗಳೂರು ನಮ್ಮ ಮೆಟ್ರೋ
ಆಯೇಷಾ ಬಾನು
ಆಯೇಷಾ ಬಾನು|

Updated on:Mar 13, 2023 | 8:41 AM

Share

ಬೆಂಗಳೂರು: ರಾಜ್ಯ ಸರ್ಕಾರ ಮೆಟ್ರೋ (Namma Metro)ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಮುಂದಿನ ಒಂದು ದಶಕದಲ್ಲಿ (2032) ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಲಭ್ಯವಾಗುವಂತೆ ನಾಲ್ಕು ಹೊಸ ಮೆಟ್ರೋ ಮಾರ್ಗಗಳನ್ನು ಸಿದ್ಧಪಡಿಸಲು ಮುಂದಾಗಿದೆ. ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯೊಂದಿಗೆ, ರಾಜ್ಯ ಸರ್ಕಾರವು 2032 ರ ವೇಳೆಗೆ ನಾಗರಿಕರಿಗೆ ಅವರ ಕೆಲಸದ ಸ್ಥಳ ಅಥವಾ ನಿವಾಸದ ಸುತ್ತಮುತ್ತಲಿನ 1-2 ಕಿಮೀ ಒಳಗೆ ಸಂಚಾರಕ್ಕೆ ಅವಕಾಶ ಸಾಧ್ಯವಾಗುವಂತೆ ಮೆಟ್ರೋ ಒದಗಿಸಲು ಬೆಂಗಳೂರಿನಲ್ಲಿ ನಾಲ್ಕು ಹೊಸ ಮೆಟ್ರೋ ಮಾರ್ಗಗಳನ್ನು ಸ್ಥಾಪಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದೆ.

ಈ ಕ್ರಿಯಾ ಯೋಜನೆಯಲ್ಲಿ ಅಂಕಿ ಅಂಶ ಇಲಾಖೆ ಮತ್ತು ಉದ್ಯಮ ಸಂಸ್ಥೆ ಫಿಕ್ಕಿ ಹೊರತಂದಿದೆ. ಇದರ ಪ್ರಕಾರ, ಪ್ರಸ್ತಾಪ ಮಾಡಲಾಗಿರುವ 4 ಹೊಸ ಮೆಟ್ರೋ ಮಾರ್ಗಗಳು ಒಟ್ಟು 59 ಕಿಲೋ ಮೀಟರ್ ಉದ್ದದ ಹೊಸ ಮೆಟ್ರೋ ಮಾರ್ಗಗಳಿಗೆ 27,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್​ಸಿಎಲ್) 56 ಕಿಲೋ ಮೀಟರ್ ಮೆಟ್ರೋ ಜಾಲವನ್ನು ಹೊಂದಿದೆ.

ಮೆಟ್ರೋ ಯೋಜನೆಯ ಪ್ರಕಾರ, ಹೊಸ ಮೆಟ್ರೋ ಮಾರ್ಗಗಳು ವೈಟ್‌ಫೀಲ್ಡ್ ಮಾರ್ಗವನ್ನು ಕಾಟಮನ್ನಾಲೂರು ಅಥವಾ ಹೊಸಕೋಟೆ (6 ಕಿಮೀ) ಮತ್ತು ಬನ್ನೇರುಘಟ್ಟದಿಂದ ಜಿಗಣಿ (12 ಕಿಮೀ) ವರೆಗೆ ವಿಸ್ತರಿಸಲು ಪ್ರಯತ್ನಿಸಲಾಗಿದೆ. ಹಳೆಯ ವಿಮಾನ ನಿಲ್ದಾಣ ರಸ್ತೆಯ ಮೂಲಕ ಎಂಜಿ ರಸ್ತೆಯಿಂದ ಹೋಪ್ ಫಾರ್ಮ್ ಜಂಕ್ಷನ್ ನಡುವೆ ಹೊಸ ಮಾರ್ಗವಾಗಲಿದೆ. ಮಾರತಹಳ್ಳಿ ಮತ್ತು ವೈಟ್‌ಫೀಲ್ಡ್ (16 ಕಿಮೀ) ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಾಗವಾರದ ನಡುವೆ ಥಣಿಸಂದ್ರ (25 ಕಿಮೀ) ಮೂಲಕ ಮತ್ತೊಂದು ಹೊಸ ಮಾರ್ಗಕ್ಕೆ ಸಿದ್ಧತೆ ನಡೆದಿದೆ.

ಇದನ್ನೂ ಓದಿ: ಪ್ರಿಯಕರನ ಭೇಟಿಗೆ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ ಅಪಾರ್ಟ್‌ಮೆಂಟ್​ ಮೇಲಿಂದ ಬಿದ್ದು ಸಾವು

ಸಂಚಾರ ದಟ್ಟಣೆ ಕಡಿಮೆಗಾಗಿ ಜೊತೆಗೆ ಆದಾಯವನ್ನು ಹೆಚ್ಚಿಸಲು ಹೊಸೂರು ರಸ್ತೆ, ಮೈಸೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ಸೇರಿದಂತೆ ವಿವಿಧ ಒಂಬತ್ತು ಕಡೆಯಿಂದ ಪೀಕ್ ಅವರ್‌ನಲ್ಲಿ ನಗರಕ್ಕೆ ಬರುವ ವಾಹನಗಳಿಗೆ ಪ್ರವೇಶದ ಸ್ಥಳದಲ್ಲಿ ಶುಲ್ಕ ವಿಧಿಸಬೇಕೆಂಬ ಪ್ರಸ್ತಾವನೆಯೂ ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.

ನಗರದ ಜನರಿಗೆ ಆರೋಗ್ಯ ರಕ್ಷಣೆಗೆ, ಶಿಕ್ಷಣ, ಸಂಚಾರ, ಶಾಪಿಂಗ್ ಹೀಗೆ ಹಲವಾರು ಸೇವೆಗಳಿಗೆ ಅನುಕೂಲವಾಗುವ ರೀತಿಯಲ್ಲಿ 30 ನಿಮಿಷಗಳ ಪ್ರಸ್ತಾಪ ಅಳವಡಿಸಿಕೊಳ್ಳಬೇಕು. ಅದಕ್ಕಾಗಿ 12 ‘ಉತ್ತಮ ಜೀವನ’ ಕ್ಲಸ್ಟರ್‌ ರಚಿಸಬೇಕು ಎಂಬುದನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾವಿತ ಕ್ಲಸ್ಟರ್‌ಗಳೆಂದರೆ ‘ಮಲ್ಲೇಶ್ವರಂ-ರಾಜಾಜಿನಗರ, ಜಯನಗರ-ಜೆಪಿ ನಗರ, ಇಂದಿರಾನಗರ-ರಮಂಗಲ, ಎಚ್‌ಎಸ್‌ಆರ್ ಲೇಔಟ್- ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್-ಕಾಡುಗೋಡಿ, ಬನ್ಶಂಕರಿ-ಕನಕಪುರ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ-ಬೊಮ್ಮನಹಳ್ಳಿ, ಬಾಣಸವಾಡಿ- ಎಚ್‌ಆರ್‌ಬಿಆರ್ ಲೇಔಟ್, ಥಣಿಕವಾಡ, ಥಣಿಕವಾಡ, ಥಣಿಸಂದ್ರ- ಯಶವಂತಪುರ-ಪೀಣ್ಯ ಮತ್ತು ಮಾರತ್ತಹಳ್ಳಿ-ಯೆಮ್ಲೂರು’ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:32 am, Mon, 13 March 23

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ