AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಒಂದು ತಿಂಗಳ ಶಿಶುವಿಗೆ ರೋಬೋಟಿಕ್ ಮೇದೋಜೀರಕ ಗ್ರಂಥಿ ಶಸ್ತ್ರಚಿಕಿತ್ಸೆ

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ, ಹೈಪರ್‌ಇನ್ಸುಲಿನಿಸಮ್‌ನಿಂದ ಬಳಲುತ್ತಿದ್ದ ತಿಂಗಳ ಶಿಶುವಿಗೆ ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೆದುಳಿನ ಹಾನಿ ಅಪಾಯದಲ್ಲಿದ್ದ ಶಿಶುವನ್ನು ಈ ಸೂಕ್ಷ್ಮ ಶಸ್ತ್ರಚಿಕಿತ್ಸೆ ರಕ್ಷಿಸಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ಬಂದಿದ್ದು, ಮಗು ಈಗ ಆರೋಗ್ಯವಾಗಿ ಮನೆಗೆ ಮರಳಿದೆ ಎಂಬುದು ಖುಷಿಯ ವಿಷಯ.

ಬೆಂಗಳೂರಲ್ಲಿ ಒಂದು ತಿಂಗಳ ಶಿಶುವಿಗೆ ರೋಬೋಟಿಕ್ ಮೇದೋಜೀರಕ ಗ್ರಂಥಿ ಶಸ್ತ್ರಚಿಕಿತ್ಸೆ
ಸಾಂದರ್ಭಿಕ ಚಿತ್ರImage Credit source: Google
ಪ್ರಸನ್ನ ಹೆಗಡೆ
| Edited By: |

Updated on:Mar 23, 2026 | 10:37 AM

Share

ಬೆಂಗಳೂರು, ಮಾರ್ಚ್​​ 22: ಜನ್ಮತಃ ಹೈಪರ್‌ಇನ್ಸುಲಿನಿಸಮ್ (Congenital Hyperinsulinism) ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಒಂದು ತಿಂಗಳ ಶಿಶುವಿಗೆ ರೋಬೋಟಿಕ್​​ ಶಸ್ತ್ರಚಿಕಿತ್ಸೆಯನ್ನು ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ತೀವ್ರ ಹೈಪೋಗ್ಲೈಸೀಮಿಯಾ (ರಕ್ತದಲ್ಲಿ ಶರ್ಕರ ಪ್ರಮಾಣ ಕಡಿಮೆಯಾಗುವುದು) ಪರಿಣಾಮವಾಗಿ ಶಿಶುವಿಗೆ ಶಾಶ್ವತ ಮೆದುಳು ಹಾನಿಯ ಅಪಾಯ ಉಂಟಾಗಿತ್ತು. 4.6 ಕೆ.ಜಿ ತೂಕ ಹೊಂದಿದ್ದ ಈ ನವಜಾತ ಶಿಶುವಿಗೆ ಹೆಚ್ಚಿನ ಪ್ರಮಾಣದ ಇಂಟ್ರಾವೀನಸ್ ಗ್ಲೂಕೋಸ್ ನೀಡುತ್ತಿದ್ದರೂ ರಕ್ತದಲ್ಲಿ ಶರ್ಕರ ಪ್ರಮಾಣ ತೀವ್ರವಾಗಿ ಕುಸಿಯುತ್ತಿತ್ತು. ಈ ಹಿನ್ನೆಲೆ ತುರ್ತು ಚಿಕಿತ್ಸೆ ನಡೆಸಲಾಗಿದೆ.

ವೈದ್ಯರು ಮೇದೋಜೀರಕ ಗ್ರಂಥಿಯಲ್ಲಿ ಅತಿಯಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತಿದ್ದ ಸಣ್ಣ ಫೋಕಲ್ ಲೀಷನ್ ಅನ್ನು ಪತ್ತೆಹಚ್ಚಿದರು. ಈ ಸಮಸ್ಯೆ ನಿರ್ದಿಷ್ಟ ಭಾಗಕ್ಕೆ ಮಾತ್ರ ಸೀಮಿತವಾಗಿದ್ದರಿಂದ, ಸಂಪೂರ್ಣ ಮೇದೋಜೀರಕ ಗ್ರಂಥಿ ತೆಗೆದುಹಾಕುವ ಅಗತ್ಯವಿಲ್ಲದೆ ನಿರ್ದಿಷ್ಟ ಜಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿದೆ. ಇದರಿಂದ ದೀರ್ಘಕಾಲಿಕ ಅಡ್ಡ ಪರಿಣಾಮಗಳ ಅಪಾಯವೂ ಕಡಿಮೆ ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ: ತಂದೆ ಧೂಮಪಾನ ಮಾಡುತ್ತಿದ್ದರೆ ಮಕ್ಕಳಿಗೆ ಬರುತ್ತೆ ಈ ಗಂಭೀರ ರೋಗಗಳು; ಅಧ್ಯಯನದಿಂದ ಬಹಿರಂಗ

ರೋಬೋಟಿಕ್​​ ಶಸ್ತ್ರಚಿಕಿತ್ಸೆ ಯಾಕೆ?

ಶಿಶುವಿನ ವಯಸ್ಸು ಹಾಗೂ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ವೈದ್ಯರು ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದರ ಮೂಲಕ ಸಮಸ್ಯೆಯಿದ್ದ ಭಾಗದಲ್ಲಿ ನಿಖರವಾಗಿ ಚಿಕಿಯ್ಸೆ ನೀಡಲಾಗಿದೆ. ಯಾವುದೇ ರಕ್ತಸ್ರಾವ ಅಥವಾ ಸಂಕೀರ್ಣತೆ ಇಲ್ಲದೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಳಿಕ ಶಿಶುವಿನ ರಕ್ತದ ಶರ್ಕರ ಮಟ್ಟ ತಕ್ಷಣವೇ ಸಾಮಾನ್ಯಗೊಂಡಿದ್ದಲ್ಲದೆ, ಗ್ಲೂಕೋಸ್ ನೀಡುವ ಅಗತ್ಯವೂ ಬಂದಿಲ್ಲ. ಇನ್ನು ಶಿಶುವನ್ನು ಒಂಬತ್ತು ದಿನಗಳ ಕಾಲ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (NICU) ಇಟ್ಟು, ಆರೋಗ್ಯ ಸುಧಾರಣೆಯ ಬಳಿಕ ಪೋಷಕರ ಜೊತೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:45 am, Sun, 22 March 26

Follow Us