AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂಗ್ರೆಸನ್ನ ತುಂಡುತುಂಡಾಗಿ ಕತ್ತರಿಸುತ್ತಾರೆ’: ವ್ಯಕ್ತಿಯೋರ್ವನಿಂದ ಛಲವಾದಿ ನಿವಾಸಕ್ಕೆ ಚಾಕು ಆರ್ಡರ್!​​ ​​

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ‘ಕಾಂಗ್ರೆಸ್‌ನ್ನ ತುಂಡುತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂಬ ಹೇಳಿಕೆ ಬೆನ್ನಲ್ಲೇ ಅವರ ಸರ್ಕಾರಿ ನಿವಾಸಕ್ಕೆ ಬ್ಲಿಂಕಿಟ್ ಆ್ಯಪ್​ ಮೂಲಕ ಚಾಕು ಬುಕಿಂಗ್ ಮಾಡಲಾಗಿದೆ. ಡೆಲಿವರಿ ಬಾಯ್‌ಗಳನ್ನು ಪೊಲೀಸರು ನಿವಾಸದೊಳಗೆ ಬಿಡದೆ ವಾಪಸ್ ಕಳುಹಿಸಿದ್ದಾರೆ. ಘಟನೆ ನಂತರ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.

‘ಕಾಂಗ್ರೆಸನ್ನ ತುಂಡುತುಂಡಾಗಿ ಕತ್ತರಿಸುತ್ತಾರೆ’: ವ್ಯಕ್ತಿಯೋರ್ವನಿಂದ ಛಲವಾದಿ ನಿವಾಸಕ್ಕೆ ಚಾಕು ಆರ್ಡರ್!​​ ​​
ಚಾಕು ಬುಕ್ಕಿಂಗ್
ಕಿರಣ್​ ಹನಿಯಡ್ಕ
| Edited By: |

Updated on: Nov 07, 2026 | 3:17 PM

Share

ಮುಖ್ಯಾಂಶಗಳು

  • ಕಾಂಗ್ರೆಸ್‌ನ್ನ ತುಂಡುತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ
  • ಛಲವಾದಿ ನಾರಾಯಣಸ್ವಾಮಿ ಸರ್ಕಾರಿ ನಿವಾಸಕ್ಕೆ ಚಾಕು ಬುಕ್ಕಿಂಗ್
  • ಡೆಲಿವರಿ ಬಾಯ್ಸ್​ನಾ​​​​ ನಿವಾಸದೊಳಕ್ಕೆ ಬಿಡದೆ ವಾಪಸ್ ಕಳುಹಿಸಿದ ಪೊಲೀಸರು

ಬೆಂಗಳೂರು, ನವೆಂಬರ್​​ 07: ‘ಕಾಂಗ್ರೆಸ್​​ ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂಬ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲದೆ ಇತ್ತೀಚೆಗೆ ಕಾಂಗ್ರೆಸ್​ ಕಾರ್ಯಕರ್ತರು ಅವರ ಮನೆಗೆ ಮುತ್ತಿಗೆ ಹಾಕಲು ಕೂಡ ಯತ್ನಿಸಿದ್ದರು. ಆದರೆ ಇದೀಗ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಬ್ಲಿಂಕಿಟ್ ಆ್ಯಪ್​​​ ಮೂಲಕ ಚಾಕು ಬುಕ್ಕಿಂಗ್ ಮಾಡಲಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಲಿಂಕಿಟ್​ನಲ್ಲಿ ಚಾಕು ಆರ್ಡರ್​

​​ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬ್ಲಿಂಕಿಟ್ ಆ್ಯಪ್​ ಮೂಲಕ ಚಾಕು ಬುಕ್ಕಿಂಗ್​​ ಮಾಡಲಾಗಿದೆ. ಹೀಗಾಗಿ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ನಾಲ್ವರು ಡೆಲಿವರಿ ಬಾಯ್ಸ್​ ಬಂದಿದ್ದಾರೆ. ಈ ವೇಳೆ ಅವರನ್ನು ನಿವಾಸದೊಳಗೆ ಬಿಡದೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಘಟನೆ ಹಿನ್ನೆಲೆ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಕೊತ್ವಾಲ್ ಸಂಸ್ಕೃತಿ ಇನ್ನೂ ಬದುಕಿದೆ ಎಂಬುದಕ್ಕೆ ಜೀವಂತ ಸಾಕ್ಷಿ: ಛಲವಾದಿ ನಾರಾಯಣಸ್ವಾಮಿ

ಇನ್ನು ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ‘ರಾಜ್ಯದಲ್ಲಿ ಈ ಹಿಂದಿನಿಂದಲೇ ಗೂಂಡಾ ಸಂಸ್ಕೃತಿ ನೋಡಿದ್ದೇವೆ. ಕೊತ್ವಾಲ್ ಸಂಸ್ಕೃತಿ ಇನ್ನೂ ಬದುಕಿದೆ ಎಂಬುದಕ್ಕೆ ಜೀವಂತ ಸಾಕ್ಷಿ ಸಿಗುತ್ತಿದೆ. ಅರಾಜಕತೆ ಸೃಷ್ಟಿಸಿದರೆ ಕಾಂಗ್ರೆಸ್‌ನ್ನು ತುಂಡುತುಂಡು ಮಾಡಿ ಎಸೆಯುತ್ತಾರೆ ಅಂದಿದ್ದೆ. ಕಾಂಗ್ರೆಸ್ ತುಂಡು ಆಗಿರುವುದು ಹೊಸದೇನಲ್ಲ. ಬ್ಲಿಂಕಿಟ್‌ಗೆ ಚಾಕು, ಚೂರಿಗಳನ್ನು ಆರ್ಡರ್ ಮಾಡಿ ನನ್ನ ಮನೆಗೆ ಕಳುಹಿಸುತ್ತಿದ್ದಾರೆ. ಚಾಕು, ಚೂರಿ ಸಂಸ್ಕೃತಿ ಯಾರದ್ದು ಅಂತಾ ದೇಶಕ್ಕೆ ಗೊತ್ತಿದೆ’ ಎಂದು ವಾಗ್ದಾಳಿ ಮಾಡಿದ್ದಾರೆ.

LIVE TV

ನಾವು ಚಾಕು, ಚೂರಿಗೆಲ್ಲಾ ಹೆದರಲ್ಲ

‘ಕೊತ್ವಾಲ್ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇನ್ನೂ ಬದುಕಿದೆ. ಹಣ ಕೊಟ್ಟು ಆದರೂ ಅದನ್ನು ಕಳುಹಿಸಬಹುದಿತ್ತಲ್ವಾ? ತರಕಾರಿ ಕೊಯ್ಯಲು ಆದರೂ ಪ್ರಯೋಜನ ಆಗುತ್ತಿತ್ತು. ಎನ್‌ಎಸ್‌ಯುಐನ ಇಬ್ಬರು ಹುಡುಗರು ಹೋಗಿ ಹೋಗಿ ಅಂತಾ ಕಳಿಸ್ತಿದ್ರು. ನಾವು ಚಾಕು, ಚೂರಿಗೆಲ್ಲಾ ಹೆದರಲ್ಲ, ನಿಜವಾದ ಅಂಬೇಡ್ಕರ್ ರಕ್ತ ಇಲ್ಲಿದೆ. ನೀವು ಎಷ್ಟು ಚಾಕು, ಚೂರಿ ಕಳುಹಿಸುತ್ತೀರೋ ಕಳುಹಿಸಿ, ಚಾಕು ಬುಕ್ಕಿಂಗ್ ಮಾಡುವಾಗ ಅದಕ್ಕೆ ದುಡ್ಡು ಕೊಟ್ಟು ಕಳುಹಿಸಿ. ಫ್ರೇಮ್ ಹಾಕಿಸಿ ಮನೆ ಬಾಗಿಲಲ್ಲಿ ಕಾಂಗ್ರೆಸ್ ಕೊಡುಗೆ ಅಂತಾ ಇರಿಸುತ್ತೇನೆ. ಇದನ್ನೆಲ್ಲಾ ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇನೆ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನನ್ನ ಹೇಳಿಕೆಯನ್ನು ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ

‘ವಿನಯ್ ಕುಮಾರ್.ಎನ್ ಎಂಬ ಹೆಸರಿನಲ್ಲಿ ಚಾಕು ಬುಕ್ ಮಾಡಿದ್ದಾರೆ. ಸುಮಾರು 20 ನಂಬರ್‌ಗಳಿಂದ ಚಾಕು, ಚೂರಿ ಬುಕ್ ಮಾಡಿದ್ದಾರೆ. ನನ್ನ ಆಪ್ತ ಸಹಾಯಕ ಮಲ್ಲಪ್ಪ ಹೆಸರಿಗೂ ಚಾಕು ಬುಕ್‌ ಮಾಡಿದ್ದಾರೆ. ನನಗೆ ಸುಮಾರು ಬ್ಲಿಂಕಿಟ್ ಕಾಲ್‌ಗಳು ಬರುತ್ತಿವೆ. ಕಾಂಗ್ರೆಸ್ ಕಮಂಗಿಗಳೇ ನಿಮ್ಮ ಬಗ್ಗೆ ಈಗಲೂ ಗೌರವ ಇಟ್ಟು ಮಾತಾಡುತ್ತೇನೆ. ಚಾಕು, ಚೂರಿ ರಾಜಕಾರಣ ಮಾಡಬಾರದು, ತಿಳಿದುಕೊಳ್ಳಿ. ತಿಳಿದುಕೊಳ್ಳದೇ ಇದ್ದರೆ ಜನ ತಿಳಿಸುತ್ತಾರೆ. ಹಣಕೊಡುವ ಯೋಗ್ಯತೆ ಇಲ್ಲದವರು ಯಾವ ಮುಖ ಇಟ್ಟುಕೊಂಡು ಕಳಿಸ್ತೀರಿ’ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರಣ್​ ಹನಿಯಡ್ಕ
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು