AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಐಡಿ ವಿಚಾರಣೆ ವೇಳೆ ಕನ್ನಾಳೆ ಕಳ್ಳಾಟಗಳು ಬಯಲು

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದ್ದು, ಆರೋಪಿ ಬಸವರಾಜ್ ಕನ್ನಾಳೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೊತೆಗೂಡಿ ಕೋಟ್ಯಾಂತರ ರೂಪಾಯಿ ಡೀಲ್ ನಡೆಸಿರುವುದು ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ. ಕನ್ನಾಳೆ ಸ್ನೇಹಿತರು, ಆಪ್ತರ ಅಕೌಂಟ್ ಮೂಲಕವೂ ವ್ಯವಹಾರ ನಡೆದಿರುವ ಕಾರಣ ಅವರ ವಿಚಾರಣೆಗೂ ಸಿಐಡಿ ಸಿದ್ಧತೆ ನಡೆಸಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಐಡಿ ವಿಚಾರಣೆ ವೇಳೆ ಕನ್ನಾಳೆ ಕಳ್ಳಾಟಗಳು ಬಯಲು
ಸಿಐಡಿ ವಿಚಾರಣೆವೇಳೆ ಬಸವರಾಜ್ ಕನ್ನಾಳೆ ಕಳ್ಳಾಟಗಳು ಬಯಲುImage Credit source: deccanherald.com
ಕಿರಣ ಹೆಚ್​. ವಿ.
| Edited By: |

Updated on:Sep 07, 2026 | 11:54 AM

Share

ಬೆಂಗಳೂರು, ಸೆಪ್ಟೆಂಬರ್​​ 07: ಕರ್ನಾಟಕ ಲೋಕಸೇವಾ ಆಯೋಗ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ವಿಚಾರಣೆ ವೇಳೆ ಬಗೆದಷ್ಟೂ ಸ್ಫೋಟಕ ಮಾಹಿತಿಗಳು ರಿವೀಲ್​​ ಆಗುತ್ತಿವೆ. 400 ಪೋಸ್ಟ್‌ಗೆ ಸುಮಾರು 2000ಕ್ಕೂ ಹೆಚ್ಟು ಅರ್ಜಿಗಳು ಬಂದಿದ್ದು, ಆರೋಪಿ ಬಸವರಾಜ್ ಕನ್ನಾಳೆಯೇ ಕೆಲಸ ಕೊಡಿಸುವುದಾಗಿ ಕುದ್ದು ಅಭ್ಯರ್ಥಿಗಳಿಗೆ ಕರೆ ಮಾಡಿದ್ದ ಎಂಬ ವಿಚಾರವೀಗ ರಿವೀಲ್​ ಆಗಿದೆ. ಈ ಬಗ್ಗೆ ಸ್ವತಃ ಅಭ್ಯರ್ಥಿಗಳೇ ಸಿಐಡಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಬಸವರಾಜ್ ಕನ್ನಾಳೆ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ

ಎಕ್ಸಾಂ ಕಂಟ್ರೋಲರ್​​ ಆಗಿದ್ದ ಐಎಎಸ್​​ ಅಧಿಕಾರಿ ಜ್ಞಾನೇಂದ್ರ ಕುಮಾರ್‌ರಿಂದ ಅಭ್ಯರ್ಥಿಗಳ ಮಾಹಿತಿ ಪಡೆಯುತ್ತಿದ್ದ ಬಸವರಾಜ್ ಕನ್ನಾಳೆ, ನಾನು ನಿಮಗೆ ಕೆಲಸ ಪಕ್ಕಾ ಕೊಡಿಸುವುದಾಗಿ ಫೋನ್ ಕರೆ ಮಾಡುತ್ತಿದ್ದ. ಜ್ಞಾನೇಂದ್ರರಿಂದ ಅಭ್ಯರ್ಥಿಗಳ ಸಂಪೂರ್ಣ ವಿಳಾಸ ಪಡೆದು ಖುದ್ದು ಕರೆಸಿ ಡೀಲ್ ಮಾಡುತ್ತಿದ್ದ. ನಗದು ರೂಪದಲ್ಲಿ ಬಂದಿದ್ದ ಹಣವನ್ನ ಜ್ಞಾನೇಂದ್ರಗೆ ಕೊಡುತ್ತಿದ್ದರೆ, ಅಕೌಂಟ್‌ಗೆ ಬರುತ್ತಿದ್ದ ಹಣವನ್ನ ತನ್ನ ಬಾಲ್ಕಿಯ ಬ್ಯಾಂಕ್‌ ಅಕೌಂಟ್‌ಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಅಕೌಂಟ್‌ಗೆ ಹಣ ಹಾಕಿಸಿಕೊಳ್ಳುತ್ತಿದ್ದರಿಂದ ಕೆಲಸ ಪಕ್ಕಾ ಎಂದು ಅಭ್ಯರ್ಥಿಗಳೂ ನಂಬುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕೆಪಿಎಸ್​ಸಿ ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ: ಟಾಪರ್ಸ್ ಲಿಸ್ಟ್ ನೋಡಿ ಪೊಲೀಸರೇ ಶಾಕ್!

35ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್​​ಗಳು ಫ್ರೀಜ್

ಮತ್ತೊಂದೆಡೆ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಇದುವರೆಗೂ 35ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್​​ಗಳನ್ನು ಫ್ರೀಜ್ ಮಾಡಲಾಗಿದೆ. ಜ್ಞಾನೇಂದ್ರ ಕುಮಾರ್ ಮತ್ತು ಬಸವರಾಜ ಕನ್ನಾಳೆಯ ಭಾಲ್ಕಿಯ ಕೋ-ಆಪರೇಟಿವ್ ಬ್ಯಾಂಕ್​ನ ಅಕೌಂಟ್​​ಗಳು, ಬೆಳಗಾವಿ, ಕಲಬುರಗಿಯ ಖಾಸಗಿ ಬ್ಯಾಂಕ್ ಅಕೌಂಟ್​ಗಳ ಜೊತೆಗೆ ಅವರ ಆಪ್ತರ ಬ್ಯಾಂಕ್​ ಖಾತೆಗಳನ್ನು ಸಹ ಸೀಜ್ ಮಾಡಲಾಗಿದೆ. ಪರಿಶೀಲನೆ ವೇಳೆ ಜ್ಞಾನೇಂದ್ರ-ಕನ್ನಾಳೆ ಮಧ್ಯೆ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರೋದು ಕಂಡುಬಂದಿದ್ದು, ಜ್ಞಾನೇಂದ್ರ ಖಾತೆಗೆ ಹಲವು ಬಾರಿ ಕನ್ನಾಳೆ ಹಣ ವರ್ಗಾಯಿಸಿದ್ದಾನೆ. ಕನ್ನಾಳೆ ಸ್ನೇಹಿತರು, ಆಪ್ತರ ಅಕೌಂಟ್ ಮೂಲಕವೂ ವ್ಯವಹಾರ ನಡೆದಿರುವ ಕಾರಣ ಅವರ ವಿಚಾರಣೆಗೂ ಸಿಐಡಿ ಸಿದ್ಧತೆ ನಡೆಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:43 am, Mon, 7 September 26

Follow Us