‘ಹಿಟ್ ಆ್ಯಂಡ್ ರನ್ ಬೇಡ, ಸಾಕ್ಷ್ಯ ಇದ್ರೆ ಕೊಡಿ’: ಕುಮಾರಸ್ವಾಮಿ ಆರೋಪಕ್ಕೆ ಪ್ರಿಯಾಂಕ್ ಕೌಂಟರ್
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಹಿಟ್ ಅಂಡ್ ರನ್ ಮಾಡುವ ಬದಲು ಸಾಕ್ಷ್ಯಗಳಿದ್ದರೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಹೆಚ್‌ಡಿಕೆರನ್ನು ನಾವು ಟಚ್ ಮಾಡುತ್ತೇವೆಂದು ಹೇಳಿದ್ದೇವಾ? ಕುಮಾರಸ್ವಾಮಿ ಹೇಳಿಕೆಯಲ್ಲಿ ಕಾಮನ್‌ಸೆನ್ಸ್, ಲಾಜಿಕ್ ಇದೆಯಾ? ಇಡೀ ಕೇಂದ್ರದಲ್ಲಿ ಕುಮಾರಸ್ವಾಮಿ ಒಬ್ಬರು ಮಾತ್ರ ಸಚಿವರಾಗಿದ್ದಾರಾ? ಅಂತಲೂ ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಬೆಂಗಳೂರು, ನವೆಂಬರ್ 02: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ವಿಚಾರ ಸಂಬಂಧ ಹೆಚ್.ಡಿ. ಕುಮಾರಸ್ವಾಮಿ ಅವರು ಏನಾದ್ರೂ ಸಾಕ್ಷ್ಯಗಳಿದ್ದರೆ ಕೊಡಲಿ. ಹಿಟ್ ಆ್ಯಂಡ್ ರನ್ ಬೇಡ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಹೆಚ್‌ಡಿಕೆ ಆರೋಪಗಳಿಗೆ ಕೌಂಟರ್ ನೀಡಿರು ಅವರು, ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿಕೆಗೆ ಏಕೆ ಇಷ್ಟು ಆತುರ? ಎಂದು ಪ್ರಶ್ನಿಸಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆಯೂ ಹೆಚ್‌ಡಿಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರವೇ ಪೊಲೀಸರಿಗೆ ಮೆಡಲ್ ಕೊಟ್ಟಿದೆ. ಇದಕ್ಕೆ ಅವರು ಏನು ಹೇಳುತ್ತಾರೆ? ಎಂದವರು ಪ್ರಶ್ನಿಸಿದ್ದಾರೆ.
‘ಸ್ಟಿಂಗ್ ಪ್ರಕರಣದಲ್ಲೂ ಅವಾರ್ಡ್ ಸಿಗುತ್ತೆ’
ನಿಮ್ಮ ಕೆಟ್ಟ ಕೆಲಸಗಳಿಗೆ ಪುರಸ್ಕಾರ ಸಿಗಲ್ಲ, ಅಂಟಿರುವ ಕಳಂಕ ಹೋಗಲ್ಲ. ಸತ್ಯಾಂಶ ಹೊರಬರುತ್ತೆ ಕಾಯಿರಿ. ಸ್ಟಿಂಗ್ ಕೇಸ್‌ನಲ್ಲಿ ಪೊಲೀಸರು ಯಾವುದೇ ನಿಮಯ ಉಲ್ಲಂಘಿಸಿಲ್ಲ. ಯಾವುದೇ ಸುಳ್ಳು ಮಾಹಿತಿಯನ್ನು ಸೋರಿಕೆ ಮಾಡಿಲ್ಲ. ಎಲ್ಲರೂ ನಿಯಮಗಳಡಿಯೇ ಕೆಲಸ ಮಾಡಬೇಕಾಗುತ್ತೆ. ಕೇಂದ್ರ ಸಚಿವರಾಗಲಿ, ಯಾರೇ ಆಗಲಿ ಅಗತ್ಯವಿದ್ದರೆ ವಿಚಾರಣೆ ನಡೆಸ್ತೇವೆ. ಸಣ್ಣ ಸಾಕ್ಷ್ಯ ಸಿಕ್ಕದರೂ ಯಾರನ್ನೇ ಆಗಲಿ ಕರೆದು ವಿಚಾರಣೆ ಮಾಡುತ್ತೇವೆ. ಸ್ಟಿಂಗ್ ಪ್ರಕರಣದಲ್ಲೂ ಅವಾರ್ಡ್ ಸಿಗುತ್ತೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
‘ನಾವು ಹೆಚ್‌ಡಿಕೆ ಟಚ್ ಮಾಡುತ್ತೇವೆಂದು ಹೇಳಿದ್ದೇವಾ?’
ಬಂಧಿತ ರಿತೇಶ್ ಪಾಂಡೆಗೆ ಮೊಬೈಲ್ ಖರೀದಿಸಲು ಹೇಳಿದ್ದು ಯಾರು? ಹೆಚ್‌ಡಿಕೆ ನಿವಾಸದಲ್ಲಿ ರಿತೇಶ್ ಬಂಧಿಸಲಾಗಿದೆ ಎಂದು ನಾವು ಹೇಳಿಲ್ಲ. ರಿತೇಶ್ ಪಾಂಡೆ ಜೊತೆ ಏನು ನಂಟಿದೆ ಎಂದು ಹೆಚ್‌ಡಿಕೆ ಹೇಳಬೇಕು. ಕುಮಾರಸ್ವಾಮಿಯವರನ್ನು ಟಚ್ ಮಾಡುತ್ತೇವೆಂದು ನಾವು ಹೇಳಿದ್ದೇವಾ? ಅವರ ಹೇಳಿಕೆಯಲ್ಲಿ ಕಾಮನ್‌ಸೆನ್ಸ್, ಲಾಜಿಕ್ ಇದೆಯಾ? ಇಡೀ ಕೇಂದ್ರದಲ್ಲಿ ಕುಮಾರಸ್ವಾಮಿ ಒಬ್ಬರು ಮಾತ್ರ ಸಚಿವರಾಗಿದ್ದಾರಾ? ಅಂತಲೂ ಪ್ರಿಯಾಂಕ್ ಪ್ರಶ್ನಿಸಿದ್ದಾರೆ. ದಲಿತ, ಬಲಿತಾ ಅಂತಾರೆ. ಕುಮಾರಸ್ವಾಮಿ ಯೋಗ್ಯತೆ ಇಷ್ಟೇನಾ? ಎಲ್ಲವನ್ನೂ ಬಿಟ್ಟು ನಿಂತುಕೊಂಡರೆ ಹೆಚ್‌ಡಿಕೆಗೆ ಕಷ್ಟವಾಗುತ್ತೆ. ನಮಗೆ ಸಿಕ್ಕ ಮಾಹಿತಿಯಂತೆ ನಾವು ತನಿಖೆ ನಡೆಸುತ್ತೇವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Mon, 2 November 26




