AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟಾವಿಗೆ ಬಂದ ಕಬ್ಬು ಬೆಂಕಿಗಾಹುತಿ: ಜೆಸ್ಕಾಂ ನಿರ್ಲಕ್ಷ್ಯದಿಂದ 20 ದಿನದಲ್ಲಿ 100 ಎಕರೆ ಸುಟ್ಟು ಭಸ್ಮ

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟದ ಮಧ್ಯೆ ಇತ್ತ ಬೀದರ್ ಕಬ್ಬು ಬೆಳೆಗಾರರೊಂದಿಗೆ ಜೆಸ್ಕಾಂ ಚೆಲ್ಲಾಟವಾಡುತ್ತಿದೆ. ಜಿಲ್ಲೆಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳಿಂದಾಗಿ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದ್ದು, ಈಗಾಗಲೇ ರೈತರು ಲಕ್ಷಾಂತರ ರೂ ನಷ್ಟ ಅನುಭವಿಸುವಂತಾಗಿದೆ. ತಕ್ಷಣ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಕಟಾವಿಗೆ ಬಂದ ಕಬ್ಬು ಬೆಂಕಿಗಾಹುತಿ: ಜೆಸ್ಕಾಂ ನಿರ್ಲಕ್ಷ್ಯದಿಂದ 20 ದಿನದಲ್ಲಿ 100 ಎಕರೆ ಸುಟ್ಟು ಭಸ್ಮ
ಸುಟ್ಟು ಕರಕಲಾದ ಕಬ್ಬು
ಸುರೇಶ್ ನಾಯಕ್
| Edited By: |

Updated on: Oct 26, 2026 | 6:51 PM

Share

ಬೀದರ್​, ಅಕ್ಟೋಬರ್​​ 26: ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ಹೇಳತೀರದಾಗಿದೆ. ವರ್ಷವಿಡಿ ಬೆಳೆದ ಕಬ್ಬಿಗೆ ಕಾರ್ಖಾನೆಗಳು ಸೂಕ್ತ ಬೆಲೆ ಕೊಡದೆ ಚೆಲ್ಲಾಟವಾಡುತ್ತಿವೆ. ಇದರ ನಡುವೆ ಶಾರ್ಟ್ ಸಕ್ಯೂರ್ಟ್​​ನಿಂದ ವರ್ಷಕ್ಕೆ ಹತ್ತಾರು ಎಕರೆಯಷ್ಟು ಕಬ್ಬು ಸುಟ್ಟು ಕರಕಲಾಗುತ್ತಿದೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕುಳಿತಿದ್ದು, ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

20 ದಿನದಲ್ಲಿ 100ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಗಾಹುತಿ 

ಬೀದರ್ ಜಿಲ್ಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗುತ್ತಿದ್ದು, ಕೈಗೆ ಬಂದ ತುತ್ತು ರೈತರ ಬಾಯಿಗೆ ಬರದಂತಾಗಿದೆ. ಕಳೆದ 20 ದಿನದಲ್ಲಿ 26 ರೈತರಿಗೆ ಸೇರಿದ 100ಕ್ಕೂ ಹೆಚ್ಚು ಎಕರೆ ಪ್ರದೇಶದ ಕಬ್ಬು ಬೆಂಕಿಗೆ ಆಹುತಿ ಆಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ಜೋತು ಬಿದ್ದ ವಿದ್ಯುತ್ ತಂತಿಗಳು    

ಹೊಲಗಳ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿಗಳು ಕೈಗೆ ತಾಗುವಷ್ಟು ಕೆಳಮಟ್ಟದಲ್ಲಿ ಜೋತು ಬಿದ್ದಿವೆ. ಗಾಳಿಗೆ ತಂತಿಗಳು ಪರಸ್ಪರ ತಗುಲಿ ಅಥವಾ ಕಬ್ಬಿನ ಬೆಳೆಗೆ ತಾಗುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕ್ಷಣಾರ್ಧದಲ್ಲಿ ಹೊತ್ತಿಕೊಳ್ಳುವ ಬೆಂಕಿ ಇಡೀ ಹೊಲಕ್ಕೆ ವ್ಯಾಪಿಸಿ, ಕಷ್ಟಪಟ್ಟು ಬೆಳೆದ ಕಬ್ಬು ಸುಟ್ಟು ಕರಕಲಾಗುತ್ತಿದೆ. ಕಟಾವಿಗೆ ಸಿದ್ಧವಾಗಿದ್ದ ಕಬ್ಬು ಬೆಂಕಿಯಲ್ಲಿ ಭಸ್ಮವಾಗುತ್ತಿರುವುದರಿಂದ ರೈತರು ಲಕ್ಷಾಂತರ ರೂ ನಷ್ಟ ಅನುಭವಿಸುವಂತಾಗಿದೆ. ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸುವುದಾದರೂ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

LIVE TV

ಜೆಸ್ಕಾಂ ಇಲಾಖೆಯಿಂದ ಸೂಕ್ತ ಪರಿಹಾರಕ್ಕೆ ಆಗ್ರಹ 

ಕಳೆದ ವರ್ಷವು ವಿದ್ಯುತ್ ಅವಘಡಗಳಿಂದ ಸುಮಾರು 225 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟುಹೋಗಿತ್ತು. ಆದರೂ ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿ ಅಗತ್ಯ ಕ್ರಮಕೈಗೊಳ್ಳದಿರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಅವಘಡದಿಂದ ಬೆಳೆ ನಾಶವಾದರೂ ಜೆಸ್ಕಾಂ ಇಲಾಖೆಯಿಂದ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂಬುದು ರೈತರ ಪ್ರಮುಖ ಆರೋಪ. ‘ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಜೊತೆಗೆ ಹೊಲಗಳ ಮೇಲೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು. ಅಪಾಯಕಾರಿಯಾಗಿ ಹಾದುಹೋಗಿರುವ ತಂತಿಗಳನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ರೈತ ವಿಠ್ಠಲ್ ರೆಡ್ಡಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನವರಾತ್ರಿ ವಿನೂತನ ಆಚರಣೆ: ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಗೆ ದೇವಿಗೆ ಕಬ್ಬಿನಿಂದ ವಿಶೇಷ ಅಲಂಕಾರ

ರೈತರ ಬೆಳೆಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯಲ್ಲಿ ಪದೇ ಪದೇ ಜರುಗುತ್ತಲಿವೆ. ಇಷ್ಟಾದರೂ ನೆಲಕ್ಕೆ ಬಾಗಿರುವ ತಂತಿಯನ್ನ ಮೇಲಕ್ಕೆತ್ತುವ ಕೆಲಸವನ್ನ ಅಧಿಕಾರಿಗಳು ಮಾಡುತ್ತಿಲ್ಲ, ಇದರ ಜೊತೆಗೆ ರೈತನಿಗೆ ಪರಿಹಾರ ಕೊಡುವ ಪ್ರಯತ್ನ ಕೂಡ ಜೆಸ್ಕಾಂ ಮಾಡುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ವಿದ್ಯುತ್ ತಂತಿಗಳನ್ನ ಜೆಸ್ಕಾಂ ಅಧಿಕಾರಿಗಳು ಸರಿಪಡಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ಸುರೇಶ್ ನಾಯಕ್
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ಲಖನೌದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಗುಂಡಿನ ದಾಳಿ
ಲಖನೌದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಗುಂಡಿನ ದಾಳಿ
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?