ಬಿರುಕು ಬಿಟ್ಟ ಶಾಲಾ ಕೊಠಡಿಯಲ್ಲಿಯೇ ಮಕ್ಕಳಿಗೆ ಪಾಠ: ಸರ್ಕಾರಿ ಶಾಲೆಗೆ ಬೇಕಿದೆ ಮೂಲಭೂತ ಸೌಲಭ್ಯ
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿರುವ ಸರಕಾರಿ ಶಾಲೆಯ ಕಟ್ಟಡ ಇಗಲೋ ಆಗಲೋ ಬಿಳುವ ಹಂತಕ್ಕೆ ಬಂದಿದೆ. ಕನ್ನಡ ಹಾಗೂ ಉರ್ದು ಮಾಧ್ಯಮದ ಸುಮಾರು 180 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಎಲ್ಲಾ ಕೊಠಡಿಗಳು ಬಿರುಕು ಬಿಟ್ಟಿವೆ. ಶಾಲೆಯ ಮೇಲ್ಚಾವಣೆ ಆಗಾಗ ಕಳಚಿಬಿಳುತ್ತಿದ್ದು, ಮಕ್ಕಳು ಭಯದಲ್ಲಿಯೇ ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ. ಸರ್ಕಾರಿ ಶಾಲೆಗೆ ಮೂಲಭೂತ ಸೌಲಭ್ಯ ಇಲ್ಲದಂತಾಗಿದೆ.
ಬೀದರ್, ಅಕ್ಟೋಬರ್ 07: ಮಕ್ಕಳನ್ನ ಸರಕಾರಿ ಶಾಲೆ (Govt schools) ಗೆ ಕರೆತರಲು ಉಚಿತವಾಗಿ ಹಾಲು, ಮೊಟ್ಟೆ, ಬಿಸಿಯೂಟ, ಸಮವಸ್ತ್ರದಂತಹ ಅನೇಕ ಯೋಜನೆಗಳನ್ನ ಸರಕಾರ ಜಾರಿಗೆ ತಂದಿದೆ. ಉಚಿತ ಶಿಕ್ಷಣದ ಜೊತೆಗೆ ಸುಸಜ್ಜಿತ ಕಟ್ಟಡಗಳನ್ನ ನೀಡಿ ಕೆಲ ಜಿಲ್ಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಆದರೇ ಗಡೀ ಜಿಲ್ಲೆ ಬೀದರ್ನಲ್ಲಿ ಮಾತ್ರ ಮಕ್ಕಳು ಈಗಲೋ ಆಗಲೋ ಬೀಳುವ ಕಟ್ಟಡದಲ್ಲಿ ಕುಳಿತು ಮಕ್ಕಳು ಮಾಠ ಕೇಳುವಂತಾ ಸ್ಥಿತಿ ಇಲ್ಲಿನ ಶಾಲೆಗಳಲ್ಲಿದೆ.
ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿರುವ ಸರಕಾರಿ ಶಾಲೆಯ ಕಟ್ಟಡ ಇಗಲೋ ಆಗಲೋ ಬಿಳುವ ಹಂತಕ್ಕೆ ಬಂದಿದೆ. ಮೊನ್ನೆ ಗಾಂಧಿ ಜಯಂತಿ ವೇಳೆ ಮಕ್ಕಳು ಶಾಲಾ ಆವರಣದಲ್ಲಿ ಆಟ ಆಡುವ ವೇಳೆಯಲ್ಲಿ ಶಾಲೆಯ ಒಂದು ಕೊಠಡಿ ಏಕಾಏಕಿ ಕುಸಿದಿದೆ. ಶಾಲೆಯ ಗೋಡೆ ಕುಸಿದ ಪರಿಣಾಮ ಮಕ್ಕಳು ಕುಳಿಯುಕೊಳ್ಳುವ ಆಸನಗಳು ಮುರಿದುಹೋಗಿದಿವೆ. ಮಕ್ಕಳು ಶಾಲೆಯಲ್ಲಿ ಕೊಟಡಿಯಲ್ಲಿ ಇಲ್ಲದೆ ವೆಳೆಯಲ್ಲಿ ಗೋಡೆ ಕುಸಿದಿದೆ ಮಕ್ಕಳು ಶಾಲೆಯಲ್ಲಿ ಕುಳಿಕೊಂಡಾಗ ಶಾಲೆಯ ಗೋಡೆ ಕುಸಿದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಅದು ತಪ್ಪಿದಂತಾಗಿದೆ.
ಕನ್ನಡ ಹಾಗೂ ಉರ್ದು ಮಾಧ್ಯಮದ ಸುಮಾರು 180 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಎಲ್ಲಾ ಕೊಟಡಿಗಳು ಬಿರುಕುಬಿಟ್ಟಿದ್ದು ಶಾಲೆಯ ಮೇಲ್ಚಾವಣೆ ಆಗಾಗ ಕಳಚಿಬಿಳುತ್ತಿದ್ದು ಮಕ್ಕಳು ಭಯದಲ್ಲಿಯೇ ಶಾಲೆಗೆ ಬರುವಂತಾ ಸ್ಥಿತಿಯಿಲ್ಲಿ ಉಂಟಾಗಿದೆ. ಮಳೆಗಾದಲ್ಲಿ ಮಳೆ ಆರಂಭವಾದರೆ ಶಾಲೆ ಸೋರಲಾರಂಭಿಸುತ್ತದೆ. ಶಾಲೆ ಸೋರಲು ಆರಂಭಿಸಿದರೆ ಮಕ್ಕಳು ಎಲ್ಲಿ ಕುಳಿತುಕೊಂಡು ಪಾಠ ಕೇಳಬೇಕು ಅನ್ನೊ ಚಿಂತೆ ಶಿಕ್ಷಕರಿಗೆ ಎದುರಾಗುತ್ತದೆ.
ಸೋರುತ್ತಿರುವ ಶಾಲೆಯಲ್ಲಿ ಮಕ್ಕಳು ಕುಳಿತುಕೊಂಡು ಪಾಠ ಕೇಳಲು ಕೂಡಾ ಭಯ ಪಡುವಂತಾ ಸ್ಥಿತಿಯಿಲ್ಲಿ ನಿರ್ಮಾಣವಾಗುತ್ತದೆ ಹೀಗಾಗಿ ಸುಸ್ಸಜ್ಜಿತವಾದ ಕಟ್ಟಡವನ್ನ ಕಟ್ಟಿಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ಇಲ್ಲಿನ ಮಕ್ಕಳು ಶಿಕ್ಷಣ ಇಲಾಕೆಗೆ ಮನವಿ ಮಾಡುತ್ತಿದ್ದಾರೆ.
ಇಲ್ಲಿನ ಕಟ್ಟಡಗಳನ್ನ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಿ ಎಂದು ಸಾಕಷ್ಟು ಸಲ ಶಿಕ್ಷಣ ಇಲಾಕೆಗೆ ಮಕ್ಕಳ ಪಾಲಕರು ಬಂದು ಮನವಿ ಮಾಡಿದರೂ ಕೂಡಾ ಶಿಕ್ಷಣ ಇಲಾಖೆ ಮಾತ್ರ ಜನರ ಮನವಿಗೆ ಸ್ಫಂಧಿಸುತ್ತಿಲ್ಲ. ಕಟ್ಟಡ ಸಮಸ್ಯೆಯೊಂದೆ ಅಲ್ಲಾ ಶಾಲೆಯಲ್ಲಿ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆಯಿಲ್ಲ, ಮಳೆ ಬಂದರೆ ಮೇಲ್ಛಾವಣಿ ಸೋರುತ್ತದೆ. ಪಾಠ ಕೇಳುವಾಗ ಜಲ್ಲಿ ಕಲ್ಲುಗಳ ಮೇಲೆ ಕುಳಿತುಕೊಂಡು ಕಲಿಯಬೇಕಾದಂತಹ ದುಸ್ಥಿತಿಯಿದೆ.
ಇದನ್ನೂ ಓದಿ: ಅವಸಾನದ ಅಂಚಿಗೆ ತಲುಪಿದ ಮೈಲಾರ ಮಲ್ಲಣ್ಣನ ಹೊಂಡಗಳು: ಕಾಪಾಡುವಲ್ಲಿ ಪುರಾತತ್ವ ಇಲಾಖೆ ವಿಫಲ
ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಗಡೀ ಗ್ರಾಮದ ಸರಕಾರಿ ಶಾಲೆಯ ದುಸ್ಥಿತಿಯ ಬಗ್ಗೆ ಗಮನಕ್ಕೆ ಬಾರದಿರುವುದು ನಮ್ಮ ದೌರ್ಭಾಗ್ಯ ಎಂದು ಮಕ್ಕಳ ಪಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಶಾಲೆಯ ಕಟ್ಟಡ ಯಾವಾಗ ಕುಸಿದು ಬೀಳುತ್ತದೋ ಎಂಬ ಭಯದಿಂದ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ವಿದ್ಯಾಭ್ಯಾಸ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ.
ಶಾಲೆಯಲ್ಲಿ ಎಂಟು ರೂಮ್ ಗಳಿವೆ ಅದರಲ್ಲಿ ಎರಡು ರೂಮ್ ಗಳು ಮಾತ್ರ ಚನ್ನಾಗಿವೆ ಇನ್ನೂಳಿದ 6 ಕೊಟಡಿಗಳು ಸೂರುತ್ತಿದೆ ಚನ್ನಾಗಿರುವ ಎರಡು ರೂಮ್ ನಲ್ಲಿಯೇ 1 ರಿಂದ 8 ನೇ ತರಗತಿಯ ವರೆಗೆ ಕ್ಲಾಸ್ ಗಳನ್ನ ನಡೆಸಬೇಕಾಗಿದೆ. ಎರಡು ರೂಮ್ ನಲ್ಲಿ 180 ಕ್ಕೂ ಹೆಚ್ಚು ಮಕ್ಕಳು ಕುಳಿತುಕೊಂಡು ಪಾಠ ಕೇಳಬೇಕಾದ ಸ್ಥಿತಿಯಿಲ್ಲಿ ಎದುರಾಗಿದ್ದು ಇದರಿಂದಾಗಿ ಮಕ್ಕಳಿಗೂ ಸಮಸ್ಯೆ ಶಿಕ್ಷಕರಿಗೂ ಕೂಡಾ ಸಮಸ್ಯೆಯಾಗುತ್ತಿದೆ.
ಈ ವಿಚಾರ ಇಲ್ಲಿನ ಜನಪ್ರತಿನಿಧಿಗಳಿಗೆ ಶಿಕ್ಷಣ ಇಲಾಖೆಗೆ ಗೊತ್ತಿದ್ದರು ಅವರು ಜಾನಮೌನವಾಗಿರುವುದು ಯಾಕೇ ಅನ್ನೋ ಪ್ರಶ್ನೇ ಇಲ್ಲಿನ ಜನರನ್ನ ಕಾಡುತ್ತಿದೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಯೊಂದು ಇಷ್ಟೊಂದು ದುಸ್ಥಿತಿಗೆ ತಲುಪಿದ್ದರು ಸಂಭಂಧಪಟ್ಟ ಅಧಿಕಾರಿಗಳು ಶಾಲೆಯ ಕೊಠಡಿಗಳನ್ನು ದುರಸ್ತಿಮಾಡುವ ಗೋಜಿಗೆ ಹೊಗಿಲ್ಲ. ಹೀಗಾಗಿ ಇಲ್ಲಿ ಮಕ್ಕಳು ಪಾಠ ಕಲಿಯುವದು ಕಷ್ಟಕರವಾಗಿದೆ. ಆದಷ್ಟು ಬೇಗ ಸಂಭಂಧಪಟ್ಟವರು ಈ ಶಾಲೆಯನ್ನು ದುರಸ್ತಿಗೊಳಿಸಿ ಮೂಲಭೂತ ಸೌಲಬ್ಯಗಳನ್ನ ಕಲ್ಪಿಸಿದರೇ ಮಕ್ಕಳಿಗೆ ಪಾಠ ಕಲಿಯಲು ಅನೂಕುಲವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.