Pradhan Mantri Awas Yojana: ಬೀದರ್ – ಮನೆ ಕಟ್ಟಿಕೊಳ್ಳಿ ಧನ ಸಹಾಯ ಮಾಡ್ತೇವೆ ಎಂದು ಅರ್ಧಕ್ಕೆ ಕೈಬಿಟ್ಟ ಅಧಿಕಾರಿಗಳು, ಅರ್ಧಂಬರ್ಧ ಮನೆಗಳಲ್ಲೇ ವಾಸವಿರುವ ಫಲಾನುಭವಿಗಳು

Bidar: 6,357 ಮನೆಗಳು ಅರ್ಧಕ್ಕೆ ನಿಂತಿದ್ದು ಸರ್ಕಾರದಿಂದ ಹಣ ಬಿಡುಗಡೆಯಾಗದ್ದಕ್ಕೆ ಮನೆ ನಿರ್ಮಾಣ ಪೂರ್ಣಗೊಳಿಸದೆ ನಾಲ್ಕೈದು ವರ್ಷವಾಗಿದೆ . ಸಾಲ ಮಾಡಿದ ಕೆಲವರು ಹಣ ಬಾರದಕ್ಕೆ ಅದೇ ಅರ್ಧಂಬರ್ಧ ಮನೆಯ ಚಾವಣಿಗೆ ತಗಡಿನ ಚಾವಣಿ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ.

Pradhan Mantri Awas Yojana: ಬೀದರ್ - ಮನೆ ಕಟ್ಟಿಕೊಳ್ಳಿ ಧನ ಸಹಾಯ ಮಾಡ್ತೇವೆ ಎಂದು ಅರ್ಧಕ್ಕೆ ಕೈಬಿಟ್ಟ ಅಧಿಕಾರಿಗಳು, ಅರ್ಧಂಬರ್ಧ ಮನೆಗಳಲ್ಲೇ ವಾಸವಿರುವ ಫಲಾನುಭವಿಗಳು
Pradhan Mantri Awas Yojana: ಬೀದರ್ - ಮನೆ ಕಟ್ಟಿಕೊಳ್ಳಿ ಧನ ಸಹಾಯ ಮಾಡ್ತೇವೆ ಎಂದು ಅರ್ಧಕ್ಕೆ ಕೈಬಿಟ್ಟ ಅಧಿಕಾರಿಗಳು, ಅರ್ಧಂಬರ್ಧ ಮನೆಗಳಲ್ಲೇ ವಾಸವಿರುವ ಫಲಾನುಭವಿಗಳು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 01, 2022 | 2:06 PM

ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆನ್ನುವ ಉದ್ದೇಶದಿಂದ ಸರಕಾರ ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿದೆ. ಡಾ. ಅಂಬೇಡ್ಕರ್ ವಸತಿ ಯೋಜನೆ, ಇಂದಿರಾ ಆವಾಸ್ ಯೋಜನೆ, ಬಸವ ವಸತಿ ಯೋಜನೆ ಜಾರಿಗೆ ತಂದು ಲಕ್ಷಾಂತರ ಬಡರಿಗೆ ಸೂರು ಕಲ್ಪಿಸಿದೆ. ಆದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana) ಆಯ್ಕೆಯಾದ ಫಲಾನುಭವಿಗಳು ಅಲ್ಲಿ ಇಲ್ಲಿ ಸಾಲ ತಂದೂ ಮನೆಯನ್ನ ನಿರ್ಮಿಸಿದ (House construction) ಬಡ ಫಲಾನುಭವಿಗಳಿಗೆ ಸರಕಾರದಿಂದ ಹಣ ಬಂದಿಲ್ಲ. ಹೀಗಾಗಿ ಮನೆ ಕಟ್ಟಿಸಿಕೊಂಡವರು ಹಣಕ್ಕಾಗಿ ಅಲೇದಾಡಬೇಕಾದ ಸ್ಥಿತಿ ಎದುರಾಗಿದ್ದು, ಹಣವಿಲ್ಲದೆ ಮನೆಯನ್ನ ಅರ್ಧಕ್ಕೇ ನಿಲ್ಲಿಸಿದ್ದಾರೆ…

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆ ಕಟ್ಟಿಕೊಂಡವರು ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ಏಳು ಸಾವಿರಕ್ಕೂ ಸಾವಿರಕ್ಕೂ ಅಧಿಕ ಮನೆಗಳು ಕಟ್ಟಿಕೊಳ್ಳಲು ಮನೆ‌ ಮಂಜೂರು‌ ಆದೇಶ ಮಾಡಿ, ಹಣ ಬಿಡುಗಡೆಗೆ ಮೀನಾಮೇಶ ಎಣಿಸುತ್ತಿದೆ. ಮನೆ ಮಂಜೂರಾಗಿದೆ ಅನ್ನೋ ಖುಷಿಯಲ್ಲಿ ಮನೆ ಕಟ್ಟಿಸಿದ‌ ಫಲಾನುಭವಿಗಳಿಗೆ ಹಣ ಬಂದಿಲ್ಲ! ಸಾಲಸೋಲ ಮಾಡಿ ಕಟ್ಟಿದ‌ ಮನೆಗಳನ್ನ ಫಲಾನುಭವಿಗಳು ಅರ್ಧಕ್ಕೇ ನಿಲ್ಲಿಸಿದ್ದಾರೆ. ಮನೆ ಕಟ್ಟಿಸಿಕೊಂಡು ಸಹಾಯ ಧನಕ್ಕಾಗಿ ಅಲೇದಾಡ ಬೇಕಾಗಿದೆ ಆ ಬಡ ಫಲಾನುಭವಿಗಳಿಗೆ ಒದಗಿದೆ.

ಹೌದು ಬೀದರ್ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ವಸತಿ ಯೋನೆಯಡಿ ಮನೆ ಕಟ್ಟಿಕೊಂಡ ಫಲಾನುಭವಿಗಳು ಸರಕಾರದ ಸಹಾಯ ಧನಕ್ಕಾಗಿ ಪರದಾಡ ಬೇಕಾದ ಸ್ಥಿತಿ ಎದುರಾಗಿದೆ. ಬೀದರ್ ಜಿಲ್ಲೆಯಲ್ಲಿ (Bidar) 2013-14 ನೇ ಸಾಲಿನಿಂದ 2017-18 ನೇ ಸಾಲಿನವರೆಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 7,899 ಮನೆಗಳು ಮಂಜೂರಾಗಿದ್ದವು. ಅದರಲ್ಲಿ 1,531 ಮನೆಗಳು ಮಾತ್ರ ಪೂರ್ಣಗೊಂಡಿದ್ದು ಅವರಿಗೆ ಎಲ್ಲಾ ಕಂತುಗಳು ಬಿಡುಗಡೆಯಾಗಿ ಮನೆಗಳು ಪೂರ್ಣಗೊಂಡಿವೆ.

Pradhan Mantri Awas Yojana beneficiaries live in half built house in Bidar district as government fail to release Money for House construction

ಆದರೆ ಉಳಿದ 6,357 ಮನೆಗಳು ಅರ್ಧಕ್ಕೆ ನಿಂತಿದ್ದು ಸರ್ಕಾರದಿಂದ ಹಣ ಬಿಡುಗಡೆಯಾಗದ್ದಕ್ಕೆ ಮನೆ ನಿರ್ಮಾಣ ಪೂರ್ಣಗೊಳಿಸದೆ ನಾಲ್ಕೈದು ವರ್ಷವಾಗಿದೆ . ಸಾಲ ಮಾಡಿದ ಕೆಲವರು ಹಣ ಬಾರದಕ್ಕೆ ಅದೇ ಅರ್ಧಂಬರ್ಧ ಮನೆಯ ಚಾವಣಿಗೆ ತಗಡಿನ ಚಾವಣಿ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಹೀಗಾಗಿ ಬಡವರಿಗೆ ಸೂರು ಕಲ್ಪಿಸಿಕೊಡುತ್ತೇವೆಂದು ಹೇಳಿದ ಕೇಂದ್ರ ಸರಕಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳು ಮಂಜೂರಾದವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ಕೆಲವು ಫಲಾನುಭವಿಗಳಿಗೆ ಪೂರ್ತಿ ಹಣ ಬಿಡುಗಡೆಯಾದರೆ ಕೆಲಸವರಿಗೆ ಒಂದು ಕಂತು, ಕೆಲವರಿಗೆ ಎರಡು ಕಂತು ಕೆಲ ಫಲಾನುಭವಿಗಳಿಗೆ ಇನ್ನೂವರೆಗೂ ಒಂದೇ ಒಂದು ನಯಾಪೈಸೆಯೂ ಕೂಡಾ ಸಹಾಯಧನ ಬಂದಿಲ್ಲ. ಬೀದರ್ ಜಿಲ್ಲೆಯಲ್ಲಿ ಸರಿ ಸುಮಾರು 7899 ಸಾವಿರ ಫಲಾನುಭವಿಗಳು ಆಯ್ಕೆಯಾಗಿ ಅವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಆದೇಶದ ಪ್ರತಿಯನ್ನೂ ಕೂಡಾ ನೀಡಲಾಗಿದೆ. ಆದರೆ ಬಹುತೇಕ ಸರಕಾರದಿಂದ ಹಣ ಬಂದಿಲ್ಲವಾದ್ದರಿಂದ ಅನೇಕ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲಾಗದೆ ಅರ್ಧಕ್ಕೆ ನಿಲ್ಲಿಸಿದ್ದಾರೆ.

ಇತ್ತ ಸರಕಾರದ ಸಹಾಯ ಧನವೂ ಇಲ್ಲ, ಅತ್ತ ಮನೆಯನ್ನ ಪೂರ್ಣಗೊಳಿಸಲಾಗಿದೆ ಫಲಾನುಭವಿಗಳು ಪಂಚಾಯತ್ ಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಹೆಸರಿಗೆ ಮಾತ್ರ ಸಹಾಯ ಧನ ನೀಡುತ್ತೇವೆ ಮನೆಗಳನ್ನ ಕಟ್ಟಿಕೊಳ್ಳಿ ಎಂದು ಆಯ್ಕೆ ಮಾಡಿ ಮನೆಗಳನ್ನ ಕಟ್ಟಿಸಿಕೊಂಡ ನಂತರ ಈಗ ಪರಿಹಾರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಸಾವಿರಾರು ಜನರು ಅಧಿಕಾರಿಗಳ ಬೇಜವ್ದಾರಿತನದಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಂಡ ನರಳಾಡುತ್ತಿದ್ದಾರೆ.

ಹಣ ಬಾರದ ವಿಚಾರದ ಬಗ್ಗೆ ಇಲ್ಲಿನ ಅಧಿಕಾರಿಗಳನ್ನ ಕೇಳಿದರೆ ಅವರು ಕೂಡಾ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಜನರು ರೋಸಿ ಹೋಗಿದ್ದಾರೆ. ಈ ಬಗ್ಗೆ ವಸತಿಯೋಜನೆ ಅಧಿಕಾರಿ ಮೋತಿಲಾಲ್ ಅವರನ್ನ ಕೇಳಿದರೆ ಕಳೆದ ಐದು ವರ್ಷದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಕೆಲವು ತೊಂದರೆಯಾಗುತ್ತಿದೆ. ಈಗ ಕಳೆದ 9 ತಿಂಗಳಿಂದ ಹಣ ಕೂಡಾ ಬಂದಿಲ್ಲ. ಹೀಗಾಗಿ ಜನರು ಮನೆಯನ್ನ ಅರ್ಧಕ್ಕೆ ನಿಲ್ಲಿಸಿದ್ದು ಈ ಬಗ್ಗೆ ಸರಕಾಕ್ಕೆ ಪತ್ರ ಬರೆದು ಅವರಿಗೆ ಹಣ ಬಿಡುಗಡೆ ಗೊಳಿಸುವಂತೆ ಕೋರುತ್ತೇವೆಂದು ಹೇಳುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಮಾತ್ರ ಕಂಡೂಕಾಣದಂತೆ ಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸರಕಾರದ ಸಹಾಯ ಧನದಲ್ಲಿ ಮನೆಗಳನ್ನ ಕಟ್ಟಿಸಿಕೊಂಡ ಬಡವರಿಗೆ ಈಗಲಾದರೂ ಸರಕಾರದ ಸಹಾಯ ಧನ ಬರಲಿ. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನ ಸ್ವಚ್ಛ ಮಹಾನಗರವಾಗಿಸಲು ಬಂದಿದ್ದ ಸ್ಮಾರ್ಟ್‌ ಸಿಟಿ ಯೋಜನೆ ಯಾವ ಕಸದ ಬುಟ್ಟಿ ಸೇರಿತೋ ಬಲ್ಲವರು ಯಾರು?

ಇದನ್ನೂ ಓದಿ: ಸಿತಾರ್‌ ರತ್ನ ರಹಿಮತ್‌ ಖಾನ್‌ 68ನೇ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದಲ್ಲಿ ಡಿ.2ರಿಂದ ಸಂಗೀತ ಕಾರ್ಯಕ್ರಮ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್