AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಫೈರಿಂಗ್​​ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆಯಿಂದ ಮತ್ತಷ್ಟು ಸಾಕ್ಷ್ಯ ರಿಲೀಸ್​​

ಚಾಮರಾಜನಗರ ಹನೂರು ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆ ಮತ್ತಷ್ಟು ಹೊಸ ಸಾಕ್ಷ್ಯ ಬಿಡುಗಡೆ ಮಾಡಿದೆ. ಸ್ಥಳದಲ್ಲಿದ್ದ ಜಿಂಕೆ ಮಾಂಸದಲ್ಲಿ ಗುಂಡಿನ ಗುರುತು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಮತ್ತೊಂದೆಡೆ ದುಷ್ಕರ್ಮಿಗಳು ಅರಣ್ಯ ಇಲಾಖೆಯನ್ನೇ ಟಾರ್ಗೆಟ್​​ ಮಾಡಿರುವ ಹಿನ್ನೆಲೆ ಕಚೇರಿ, ವಸತಿಗೃಹಗಳ ಭದ್ರತೆ ಹೆಚ್ಚಿಸಲಾಗಿದೆ.

ಚಾಮರಾಜನಗರ ಫೈರಿಂಗ್​​ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆಯಿಂದ ಮತ್ತಷ್ಟು ಸಾಕ್ಷ್ಯ ರಿಲೀಸ್​​
ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆಯಿಂದ ಮತ್ತಷ್ಟು ಸಾಕ್ಷ್ಯ ರಿಲೀಸ್​​ (ಫೈಲ್​​ ಫೋಟೋ)Image Credit source: Tv9 Kannada
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Aug 21, 2026 | 7:48 PM

Share

ಮುಖ್ಯಾಂಶಗಳು

  • ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಕೇಸ್​​
  • ಮೃತರು ಬೇಟೆಗಾರರು ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ರಿಲೀಸ್​​
  • ಅರಣ್ಯ ಇಲಾಖೆಯಿಂದ ಮಹತ್ವದ ದಾಖಲೆಗಳ ಬಿಡುಗಡೆ

ಚಾಮರಾಜನಗರ, ಆಗಸ್ಟ್​​ 21: ಹನೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​​ ಸಿಗುತ್ತಿದೆ. ದನ ಹುಡುಕಲು ಹೋಗಿದ್ದವರ ಮೇಲೆ ಅರಣ್ಯ ಇಲಾಖೆಯವರು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಮೃತರ ಕುಟುಂಬಸ್ಥರ ಆರೋಪಗಳಿಗೆ ಇಲಾಖೆ ಮತ್ತೆ ಕೌಂಟರ್​​ ನೀಡಿದೆ. ಮೃತ ಮೂವರು ಸೇರಿ ನಾಲ್ವರೂ ಬೇಟೆಗೆ ಹೋಗಿದ್ದರು ಎಂಬುದಕ್ಕೆ ಸಾಕ್ಷಿ ಬಿಡುಗಡೆ ಮಾಡಿದೆ. ಸ್ಥಳದಲ್ಲಿ ಸಿಕ್ಕ ಬ್ಯಾಗ್​, ಮಾಂಸ, ಅಡುಗೆ ಸಾಮಗ್ರಿ ಚಿತ್ರ ರಿಲೀಸ್​​ ಮಾಡಲಾಗಿದ್ದು, ವನ್ಯಮೃಗದ ಮಾಂಸದಲ್ಲಿ ಗುಂಡಿನ ಗುರುತು ಪತ್ತೆಯಾಗಿರೋದು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಪ್ರಕರಣ ಸಂಬಂಧ ಅರಣ್ಯ ಅಧಿಕಾರಿಗಳು ಈ ಹಿಂದೆಯೂ ಕೆಲಸ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ್ದರು. ಆತ್ಮರಕ್ಷಣೆಗಾಗಿ ತಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದ ಇಲಾಖೆ, ಘಟನಾ ಸ್ಥಳದಲ್ಲಿ ಸಿಕ್ಕಿದ್ದ 34 ಕೆ.ಜಿ ಜಿಂಕೆ ಮಾಂಸ ಹಾಗೂ ಬಂದೂಕುಗಳು ಮತ್ತು ಚಪ್ಪಲಿಯ ಫೋಟೋಗಳನ್ನು ಸಾಕ್ಷಿಯಾಗಿ ಪ್ರದರ್ಶಿಸಿತ್ತು. ಆದರೆ ಹೊಸ ಚಪ್ಪಲಿಯ ಮೇಲಿದ್ದ ಸ್ಟಿಕ್ಕರ್​​ ಕೂಡ ಹಾಗೇ ಇದ್ದಿದ್ದು ಕಂಡುಬಂದಿದ್ದ ಕಾರಣ ಸಾಕ್ಷ್ಯಗಳ ಬಗ್ಗೆಯೇ ಅನುಮಾನ ವ್ಯಕ್ತವಾಗಿದ್ದವು. ಇದೇ ವಿಚಾರ ಕರ್ನಾಟಕ ಸೇರಿ ನೆರೆ ರಾಜ್ಯ ತಮಿಳುನಾಡು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು.

ಇದನ್ನೂ ಓದಿ: ಹನೂರು ಶೂಟೌಟ್‌ಗೆ ಬಿಗ್ ಟ್ವಿಸ್ಟ್: ಅರಣ್ಯ ಇಲಾಖೆ ಸಾಕ್ಷ್ಯಗಳ ಮೇಲೆ ಅನುಮಾನ!

ಅರಣ್ಯ ಕಚೇರಿಗಳ ಭದ್ರತೆ ಹೆಚ್ಚಳ

ಮೂವರ ಸಾವಿನ ಬಳಿಕ ದುಷ್ಕರ್ಮಿಗಳು ಅರಣ್ಯ ಇಲಾಖೆಯನ್ನೇ ಟಾರ್ಗೆಟ್​​ ಮಾಡಿರುವ ಹಿನ್ನೆಲೆ ಹನೂರಿನ ಅರಣ್ಯ ಕಚೇರಿ ಹಾಗೂ ವಸತಿ ಗೃಹಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳು 8 ಕಳ್ಳಬೇಟೆ ತಡೆ ಶಿಬಿರ ಸ್ಫೋಟಿಸಿದ್ದ ಕಾರಣ ಅರಣ್ಯ ಇಲಾಖೆ ಕಚೇರಿ ಬಳಿ ಡಿಎಆರ್ ತುಕಡಿ ನಿಯೋಜಿಸಲಾಗಿದೆ. ನಿರಂತರ ದಾಳಿಯಿಂದ ಬೆಚ್ಚಿ ಬಿದ್ದಿರುವ ಅರಣ್ಯ ಇಲಾಖೆ ಸಿಬ್ಬಂದಿ, ಕಾಡಿನೊಳಗೆ ಬೀಟ್ಗೆ ತೆರಳಲೂ ಭಯ ಪಡಬೇಕಾದ ಸ್ಥಿತಿ ಸದ್ಯ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:14 pm, Fri, 21 August 26

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!