AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರಿನಲ್ಲಿ ಮತ್ತೊಂದು ವಿವಾದ: ಟಿಪ್ಪು ನಗರದಲ್ಲಿ ರಾರಾಜಿಸಿದ ಐ ಲವ್ ಮೊಹಮ್ಮದ್ ಬ್ಯಾನರ್!

ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾದ ‘ಐ ಲವ್ ಮೊಹಮ್ಮದ್’ ಬ್ಯಾನರ್ ಹೊಸ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್‌ನ ವಿಡಿಯೋಯವನ್ನು ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ದೇಶವಿರೋಧಿ ಹಾಡನ್ನು ಬಳಸಿ ಹಂಚಿಕೊಂಡಿದ್ದ ವಿವಾದ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಮತ್ತೊಂದು ವಿವಾದ: ಟಿಪ್ಪು ನಗರದಲ್ಲಿ ರಾರಾಜಿಸಿದ ಐ ಲವ್ ಮೊಹಮ್ಮದ್ ಬ್ಯಾನರ್!
ಐ ಲವ್ ಮಹಮ್ಮದ್ ಬ್ಯಾನರ್Image Credit source: Tv9 Kannada
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Aug 26, 2026 | 7:42 PM

Share

ಮುಖ್ಯಾಂಶಗಳು

  • ಚಿಕ್ಕಮಗಳೂರಿನಲ್ಲಿ ಮತ್ತೊಂದು ವಿವಾದ
  • ರಾರಾಜಿಸಿದ ಐ ಲವ್ ಮಹಮ್ಮದ್ ಬ್ಯಾನರ್!
  • ಏನಿದು ಐ ಲವ್ ಮಹಮ್ಮದ್ ಬ್ಯಾನರ್ ವಿವಾದ?

ಚಿಕ್ಕಮಗಳೂರು, ಆಗಸ್ಟ್​​ 26: ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆ ಅಳವಡಿಸಲಾಗಿದ್ದ ಟಿಪ್ಪು ಕಟೌಟ್​​ ವಿಡಿಯೋಗೆ ದೇಶ ವಿರೋಧಿ ಹಾಡು ಬಳಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದ ಪ್ರಸಂಗ ಮಾಸುವ ಮುನ್ನವೇ ಚಿಕ್ಕಮಗಳೂರಲ್ಲಿನ (Chikkamagaluru) ಮತ್ತೊಂದು ಘಟನೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಟಿಪ್ಪು ನಗರದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ಅಳವಡಿಕೆ ಮಾಡಲಾಗಿರೋದೀಗ ಕಿಡಿ ಹೊತ್ತಿಸಿದೆ. ಕಳೆದ ವರ್ಷ ಈದ್ ಮಿಲಾದ್ ವೇಳೆ ಉತ್ತರ ಪ್ರದೇಶದ ಕಾನ್ಪುರದಿಂದ ಪ್ರಾರಂಭವಾಗಿದ್ದ ಈ ರೀತಿಯ ಬ್ಯಾನರ್ ವಿವಾದ, ಕರ್ನಾಟಕ ಸೇರಿ ದೇಶಾದ್ಯಂತ ಸದ್ದು ಮಾಡಿತ್ತು. ಅದೇ ಬ್ಯಾನರ್​​ ಈಗ ಚಿಕ್ಕಮಗಳೂರಿನಲ್ಲಿ ರಾರಾಜಿಸಿದೆ.

ಏನಿದು ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ?

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಮೆರವಣಿಗೆ ವೇಳೆ ಮೊದಲ ಬಾರಿಗೆ ಈ ರೀತಿಯ ಬ್ಯಾನರ್​​ ಬಳಸಲಾಗಿತ್ತು.  ಉತ್ತರ ಪ್ರದೇಶದ ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ‘ಐ ಲವ್ ಮೊಹಮ್ಮದ್’ ಘೋಷವಾಕ್ಯ ವೈರಲ್ ಆಗಿತ್ತು. ಮುಂಬೈ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರದ ನಾಗ್ಪುರ, ವೋಮಿನ್​ಪುರದಲ್ಲೂ ‘ಐ ಲವ್ ಮೊಹಮ್ಮದ್’ ಹೆಸರಿನಲ್ಲಿ ರ್ಯಾಲಿಗಳು ನಡೆದಿದ್ದವು.

ಇದನ್ನೂ ಓದಿ: ಚಿಕ್ಕಮಗಳೂರು ಟಿಪ್ಪು ಕಟೌಟ್ ವಿವಾದ: ಪ್ರಮುಖ ಆರೋಪಿ ಅಫ್ರಿದ್ ಬಂಧನ!

ಕರ್ನಾಟಕದಲ್ಲಿ ಘಟನೆ ಮೊದಲಲ್ಲ

ಅಷ್ಟಕ್ಕೂ ಐ ಲವ್ ಮೊಹಮ್ಮದ್ ಬ್ಯಾನರ್ ಮತ್ತು ಘೋಷಣೆ ವಿವಾದ ಕರ್ನಾಟಕದಲ್ಲಿ ಇದು ಮೊದಲೇನಲ್ಲ. ಈ ಹಿಂದೆಯೂ ರಾಜ್ಯದ ಹಲವೆಡೆ ಈ ವಿಚಾರ ಸಂಘರ್ಷಕ್ಕೆ ಕಾರಣವಾಗಿತ್ತು. ಬೆಳಗಾವಿ, ದಾವಣಗೆರೆ, ಆಳಂದ ಸೇರಿ ಇತರ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದಿದ್ದವು. ಪೊಲೀಸ್​​ ಪ್ರಕರಣಗಳು ದಾಖಲಾಗಿ, ರಾಜಕೀಯ ಜಟಾಪಟಿಗಳಿಗೂ ಈ ವಿಚಾರ ಕಾರಣವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:28 pm, Wed, 26 August 26

Follow Us
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ