AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಬೇಲಿಯೇ ಎದ್ದು ಹೊ ಮೇಯ್ದ ಕಥೆ! ಹೊಯ್ಸಳ ವಾಹನದಲ್ಲಿ ಬಂದು ವಸೂಲಿ ಆರೋಪದಲ್ಲಿ ಇಬ್ಬರು ಪೊಲೀಸರ ಬಂಧನ

‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ಮಂಗಳೂರಿನಲ್ಲಿ ಅಂಥದ್ದೇ ಒಂದು ಘಟನೆಗೆ ಪೊಲೀಸರು ಕಾರಣವಾಗಿದ್ದಾರೆ. ನಗರದ ನೆಹರು ಮೈದಾನದ ಬಳಿ ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದ ಎಲೆಕ್ಟ್ರಿಷಿಯನ್ ಒಬ್ಬರನ್ನು ಹೊಯ್ಸಳ ವಾಹನದಲ್ಲಿ ಬಂದು ತಡೆದು, ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ದಕ್ಷಿಣ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಇದು ಬೇಲಿಯೇ ಎದ್ದು ಹೊ ಮೇಯ್ದ ಕಥೆ! ಹೊಯ್ಸಳ ವಾಹನದಲ್ಲಿ ಬಂದು ವಸೂಲಿ ಆರೋಪದಲ್ಲಿ ಇಬ್ಬರು ಪೊಲೀಸರ ಬಂಧನ
ಸಾಂದರ್ಭಿಕ ಚಿತ್ರ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Nov 07, 2026 | 9:41 AM

Share

ಮುಖ್ಯಾಂಶಗಳು

  • ಹೊಯ್ಸಳ ವಾಹನದಲ್ಲಿ ಬಂದು ದೌರ್ಜನ್ಯ ಎಸಗಿದ ಆರೋಪ
  • ಸಾರ್ವಜನಿಕರಿಂದ ಹಣ ವಸೂಲಿ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿ ಬಂಧನ
  • ಮತ್ತೊಬ್ಬ ಪೊಲೀಸ್ ಸಿಬ್ಬಂದಿ ವಿರುದ್ಧ ತನಿಖೆ ಮುಂದುವರಿಕೆ

ಮಂಗಳೂರು, ನವೆಂಬರ್ 7: ಗಸ್ತಿನ ಹೆಸರಿನಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಯುವಕನೊಬ್ಬನಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸಿಬ್ಬಂದಿಯಾದ ಶಿವರಾಜ್ ಮತ್ತು ಹಿರಣ್ಣ ಬೆನ್ನಿ ಬಂಧಿತರು. ಇವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುವ ವಿಟ್ಲ ನಿವಾಸಿ ರವಿರಾಜ್ ನೀಡಿದ ದೂರಿನ ಆಧಾರದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಾಕಿಂಗ್ ಮುಗಿಸಿ ಹೋಗುವಾಗ ಘಟನೆ

ದೂರಿನ ಪ್ರಕಾರ, ರವಿರಾಜ್ ಮಂಗಳೂರಿನ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದರು. ಆಗ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರವಿರಾಜ್ ಅವರ ಜೇಬಿನಿಂದ ಮೊಬೈಲ್ ತೆಗೆದು, ಮೊಬೈಲ್ ಕವರ್‌ನಲ್ಲಿದ್ದ ₹300 ಹಣವನ್ನು ತೆಗೆದುಕೊಂಡಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರುದಿನವೂ ಬೆದರಿಕೆ, ಎಟಿಎಂ ಕಾರ್ಡ್ ವಶಕ್ಕೆ

ಮರುದಿನ ಮತ್ತೆ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್, ರವಿರಾಜ್ ಅವರಿಗೆ ಮತ್ತೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮೊಬೈಲ್ ಕವರ್‌ನಲ್ಲಿದ್ದ ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ ಎರಡು ಎಟಿಎಂ ಕಾರ್ಡ್‌ಗಳು, ₹1,000 ನಗದು ಹಾಗೂ ಮೋಟಾರು ಸೈಕಲ್‌ನ ಕೀಯನ್ನು ತೆಗೆದುಕೊಂಡಿದ್ದಾರೆ. ಮೊಬೈಲ್‌ನ ಪಾಸ್‌ವರ್ಡ್ ಪಡೆದು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ. ₹2,000 ನೀಡಬೇಕು, ಇಲ್ಲದಿದ್ದರೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೈಕ್ ವಶಪಡಿಸಿ ಹಣಕ್ಕೆ ಬೇಡಿಕೆ

ಇದಾದ ಬಳಿಕ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಉಮಾನಾಥ್ ಅವರು ಬೈಕ್ ಅನ್ನು ವಶಪಡಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಬಲವಂತವಾಗಿ ನಗದು ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಮಿಷನರ್ ಸೂಚನೆ ಮೇರೆಗೆ ಇಬ್ಬರ ಬಂಧನ

ರವಿರಾಜ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚನೆ ನೀಡಿದ ಬೆನ್ನಲ್ಲೇ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಸಿಬ್ಬಂದಿ ಉಮಾನಾಥ್ ವಿರುದ್ಧ ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು