ಕೇಂದ್ರ ಸರ್ಕಾರದಿಂದ ಕರ್ನಾಟಕದ ಕರಾವಳಿಗೆ ಇಂದು ಹೊಸ ಯೋಜನೆಗಳ ಕೊಡುಗೆ, ಸಂಪೂರ್ಣ ವಿವರ ಇಲ್ಲಿದೆ
Narendra Modi in Mangalore: ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಲಾಗುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೂ. 3,800 ಕೋಟಿ ಮೊತ್ತದ ಒಟ್ಟು 8 ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಡಿಡಿ ನ್ಯೂಸ್‍ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
ಬೆಂಗಳೂರು: ಕರ್ನಾಟಕದ ಕರಾವಳಿ ಭಾಗಕ್ಕೆ ಕೇಂದ್ರ ಸರ್ಕಾರದಿಂದ ನಾನಾ ಹೊಸ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿನ ಕುಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಸೆಪ್ಟೆಂಬರ್ 2 ರಂದು ನೆರವೇರಿಸಲಿದ್ದಾರೆ.
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಲಾಗುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೂ. 3,800 ಕೋಟಿ ಮೊತ್ತದ ಒಟ್ಟು 8 ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ್ ಜೋಶಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವರಾದ ಸರ್ಬಾನಂದ್ ಸೊನೊವಾಲ್, ಕೇಂದ್ರ ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೊ ನಾಯಕ್, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶಂತನು ಠಾಕೂರ್ ಸೇರಿದಂತೆ ರಾಜ್ಯದ ಸಚಿವರು ಸಹ ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಡಿಡಿ ನ್ಯೂಸ್‍ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
ಲೋಕಾರ್ಪಣೆಗೊಳ್ಳಲಿರುವ ಯೋಜನೆಗಳ ಮಾಹಿತಿ:
1. ಕಂಟೇನರ್‍ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ • 2,200 ಜನರಿಗೆ ಉದ್ಯೋಗಾವಕಾಶಗಳು • ಸಾಮಥ್ರ್ಯ ಹೆಚ್ಚಳ ಹಾಗೂ ಕಾರ್ಯನಿರ್ವಹಣಾ ಸಮಯದಲ್ಲಿ 35% ಉಳಿತಾಯ • ಬಂದರು ಕಡಲತೀರ ಹಾಗೂ ಪರಿಸರ ವ್ಯವಸ್ಥೆಗಳಿಗೆ ಪರಿಸರ ಸಂರಕ್ಷಣೆಯ ಲಾಭಗಳು • ಯೋಜನೆ ವೆಚ್ಚ: ರೂ.281 ಕೋಟಿ • 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ
2. ಬಿಎಸ್ ಗಿI ಉನ್ನತೀಕರಣ ಯೋಜನೆ • ಬಿಎಸ್ ಗಿI ಶ್ರೇಣಿ ಇಂಧನಗಳ ಉತ್ಪಾದನೆ • ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ • ಯೋಜನೆ ವೆಚ್ಚ: ರೂ.1,829 ಕೋಟಿ
3. ಸಮುದ್ರ ನೀರಿನ ನಿರ್ಲವಣೀಕರಣ ಘಟಕ • ಶುದ್ಧ ನೀರಿನ ಸಂರಕ್ಷಣೆ • 30 ಎಂಎಲ್‍ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ • ಯೋಜನೆ ವೆಚ್ಚ: ರೂ.677 ಕೋಟಿ
ಶಿಲಾನ್ಯಾಸ ಯೋಜನೆಗಳ ಮಾಹಿತಿ:
4. ಎನ್‍ಎಂಪಿಯಲ್ಲಿ ಸಮಗ್ರ ಎಲ್‍ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ ಸ್ಥಾಪನೆ • 2,200 ಜನರಿಗೆ ಉದ್ಯೋಗಾವಕಾಶಗಳು • ದ್ರವರೂಪದ ಸರಕುಗಳ ಅನ್‍ಲೋಡಿಂಗ್ ಸಮಯದಲ್ಲಿ ಉಳಿತಾಯ • ಎಲ್‍ಪಿಜಿಯ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ಪಿಎಂ ಉಜ್ವಲಾ ಯೋಜನೆಗೆ ನೇರ ಬೆಂಬಲ • ಯೋಜನೆ ವೆಚ್ಚ: ರೂ.500 ಕೋಟಿ • ಸಾಮರ್ಥ್ಯ ಹೆಚ್ಚಳ: 200 ಎಂಟಿಪಿಎ
5. ಎನ್‍ಎಂಪಿಯಲ್ಲಿ ಶೇಖರಣಾ ಟ್ಯಾಂಕ್‍ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ • ಖಾದ್ಯ ತೈಲದ ದೋಣಿಗಳ ಓಡಾಟದಲ್ಲಿ ಸುಧಾರಣೆ • ಖಾದ್ಯ ತೈಲದ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ದರ-ಸಾಮರ್ಥ್ಯ ಸುಧಾರಣೆ • 700 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: 0.30
6. ಎನ್‍ಎಂಪಿಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ • ಬಿಟುಮೆನ್ ಸಾಗಣೆಯಲ್ಲಿ ಸುಧಾರಣೆ • ಬಿಟುಮೆನ್‍ನ ಒಟ್ಟಾರೆ ದರದಲ್ಲಿ ಇಳಿಕೆ • ಪಿಎಂ ಗತಿ ಶಕ್ತಿ ಯೋಜನೆಗೆ ನೇರ ಬೆಂಬಲ • 275 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: 40,000 ಎಂಟಿ/ ಬಿಟುಮೆನ್ ದ್ರವರೂಪದ ಸರಕು
7. ಎನ್‍ಎಂಪಿಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್‍ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ • ಖಾದ್ಯ ತೈಲ ಮತ್ತು ಬಿಟುಮೆನ್‍ನ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ದರ-ಸಾಮರ್ಥ್ಯ ಸುಧಾರಣೆ • 275 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: ಪ್ರತಿ ಎಕರೆಗೆ ವಾರ್ಷಿಕ 8,000 ಟನ್‍ಗಳ ಎಂಜಿಟಿ
ಭೂಮಿ ಪೂಜೆ
8. ಕುಲೈನಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ • 8,500 ಜನರಿಗೆ ಉದ್ಯೋಗಾವಕಾಶಗಳು ಕರಾವಳಿ ಮೀನುಗಾರಿಕಾ ಸಮುದಾಯದವರಿಗೆ ಸುಮಾರು ರೂ.192 ಕೋಟಿ ವಾರ್ಷಿಕ ಆದಾಯ • ಯೋಜನೆ ವೆಚ್ಚ: ರೂ.196.51 ಕೋಟಿ.
ಕರ್ನಾಟಕ ಸರ್ಕಾರದ: ಬಂದರುಗಳು ಹಾಗೂ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ಮಹತ್ವದ ಕ್ರಮಗಳು ಕುರಿತು ಮಾಹಿತಿ.
• ಪಿಎಂ ಮತ್ಸ್ಯ ಸಂಪದ ಯೋಜನೆಯಡಿ (ಪಿಎಂಎಂಎಸ್‍ವೈ) ರೂ.120 ಕೋಟಿ ವೆಚ್ಚದಲ್ಲಿ ಮೀನು ಉತ್ಪಾದನೆ, ರಫ್ತು ಸಾಮಥ್ರ್ಯ ವೃದ್ಧಿ ಹಾಗೂ ಉದ್ಯೋಗಗಳ ಸೃಷ್ಟಿಗಾಗಿ 100 ಆಳ ಸಮುದ್ರ ದೋಣಿಗಳಿಗೆ ಅನುಮೋದನೆ ನೀಡಲಾಗಿದೆ.
• ಉತ್ತರ ಕನ್ನಡ ಜಿಲ್ಲೆಯ ಮಜಲಿಯಲ್ಲಿ ಭಾರತ ಸರ್ಕಾರ (ಸಾಗರಮಾಲ ಹಾಗೂ ಪಿಎಂಎಂಎಸ್‍ವೈ ಯೋಜನೆಗಳಡಿ) ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಒಟ್ಟು ಅಂದಾಜು ರೂ.250 ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕೆ ಬಂದರು ಅಭಿವೃದ್ಧಿ.
• ಕಾರವಾರ ಬಂದರಿನಲ್ಲಿ, ಕೇಂದ್ರದ ಸಾಗರಮಾಲಾ ಕರಾವಳಿ ಬರ್ತ್ ಯೋಜನೆಯಡಿ ರೂ.276 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನದಲ್ಲಿವೆ.
• ಹಳೆ ಮಂಗಳೂರಿನಲ್ಲಿ ಅಂದಾಜು ರೂ.65 ಕೋಟಿ ವೆಚ್ಚದಲ್ಲಿ, ಲಕ್ಷದ್ವೀಪ ದ್ವೀಪಗಳೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಗಳನ್ನು ಪುನರುಜ್ಜೀವನಗೊಳಿಸಲು ಪೂರಕ ಮೂಲಭೂತಸೌಕರ್ಯಗಳು ಹಾಗೂ ಹಡಗು ಟರ್ಮಿನಲ್ ಸಹಿತ ಸಮರ್ಪಿತ ಜೆಟ್ಟಿ ಅಭಿವೃದ್ಧಿ.
• ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ) ಅಂದಾಜು ರೂ.5,000 ಕೋಟಿ ವೆಚ್ಚದಲ್ಲಿ ಕೇನಿಯಲ್ಲಿ 30 ಎಂಟಿಪಿಎ ಆಳ ನೀರು ಸರ್ವಋತು ಗ್ರೀನ್‍ಫೀಲ್ಡ್ ಬಂದರು ಅಭಿವೃದ್ಧಿ.
• ಮೀನುಗಾರಿಕೆ ದೋಣಿಗಳ ಸುಗಮ ಹಾಗೂ ವೇಗದ ಓಡಾಟಕ್ಕಾಗಿ ರೂ.20 ಕೋಟಿ ವೆಚ್ಚದಲ್ಲಿ 8 ಮೀನುಗರಿಕಾ ಬಂದರುಗಳಲ್ಲಿ ಜಲಸಂಚಾರ ಮಾರ್ಗಗಳಲ್ಲಿ ಹೂಳೆತ್ತುವಿಕೆ.
• ಹಳೆ ಮಂಗಳೂರು ಬಂದರಿನಲ್ಲಿ ಅಂದಾಜು ರೂ.65 ಕೋಟಿ ವೆಚ್ಚದಲ್ಲಿ 350 ಮೀ. ಕರಾವಳಿ ಬರ್ತ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದೆ.
• ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ, ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಾಸಿಸುತ್ತಿರುವ ಯುವಜನರಿಗಾಗಿ ಉದ್ಯೋಗ ಸೃಷ್ಟಿಸಲು ಮತ್ತು ಕೈಗಾರಿಕೆಗೆ ಬೇಕಾದಂತಹ ಕೌಶಲ್ಯಗಳನ್ನು ಒದಗಿಸಲು ಅಂದಾಜು ರೂ.30.35 ಕೋಟಿ ವೆಚ್ಚದಲ್ಲಿ ಸಮುದ್ರಯಾನ ತರಬೇತಿ ಸಂಸ್ಥೆ ಸ್ಥಾಪನೆ.
• ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ), ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರಿನಲ್ಲಿ ರೂ.600 ಕೋಟಿ ಹೂಡಿಕೆಯ 5 ದಶಲಕ್ಷ ಎಂಟಿಪಿಎ ಬಂದರು ಅಭಿವೃದ್ಧಿಪಡಿಸಲಾಗುತ್ತಿದೆ.
• ಹೊನ್ನಾವರ ತಾಲ್ಲೂಕಿನ ಪವಿನಕುರ್ವೆಯಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ) ಅಂದಾಜು ರೂ.2,000 ಕೋಟಿ ವೆಚ್ಚದಲ್ಲಿ 12 ಎಂಟಿಪಿಎ ಆಳ ನೀರು ಸರ್ವಋತು ಗ್ರೀನ್‍ಫೀಲ್ಡ್ ಬಂದರು ಅಭಿವೃದ್ಧಿ.
• 2021-22ನೇ ಸಾಲಿನಲ್ಲಿ, ಸಮುದ್ರ ಕೊರೆತವನ್ನು ತಡೆಗಟ್ಟುವ ಯೋಜನೆಗಳಿಗೆ ರೂ.35 ಕೋಟಿ ಹಾಗೂ ಸಾಧಾರಣ ಬಂದರುಗಳು, ಒಳನಾಡು ಜಲಸಾರಿಗೆ ಹಾಗೂ ಸಾಗರಮಾಲಾ ಯೋಜನೆಗಳಿಗೆ ರೂ.37.90 ಕೋಟಿ ವೆಚ್ಚ ಮಾಡಲಾಗಿದೆ.
Published On - 8:15 pm, Thu, 1 September 22