ಬುರ್ಖಾ ಧರಿಸಿ ವಾಚ್ ಅಂಗಡಿಗೆ ಎಂಟ್ರಿ ಕೊಟ್ಟ ವೈದ್ಯ ಪೊಲೀಸರ ಅತಿಥಿಯಾದ!
ಹುಬ್ಬಳ್ಳಿ: ತನ್ನ ಪ್ರೇಯಸಿಗೆ ದುಬಾರಿ ಮೌಲ್ಯದ ವಾಚ್ ನೀಡಿ ಪ್ರಪೋಸ್ ಮಾಡಲು ಪ್ಲ್ಯಾನ್ ರೂಪಿಸಿದ್ದ ವೈದ್ಯನೊಬ್ಬ ಬುರ್ಖಾ ಧರಿಸಿ ವಾಚ್ ಖರೀದಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ತಡರಾತ್ರಿ ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ನಲ್ಲಿ ಬುರ್ಖಾ ಧರಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವೈದ್ಯ ವಸಂತರಾವ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾನು ವಾಚ್ ಖರೀದಿ ಮಾಡಿದ್ದು ಯಾರಿಗೂ ಗೊತ್ತಾಗಬಾರದೆಂದು ವೈದ್ಯ ವಸಂತರಾವ್ ಬುರ್ಖಾ ಧರಿಸಿದ್ದ. ನ್ಯಾಷನಲ್ ಮಾರ್ಕೆಟ್ನ ಟೈಟಾನ್ ಶೋರೂಂನಲ್ಲಿ 20 ಸಾವಿರ ರೂಪಾಯಿ ಮೌಲ್ಯದ ವಾಚ್ ಖರೀದಿ […]
ಹುಬ್ಬಳ್ಳಿ: ತನ್ನ ಪ್ರೇಯಸಿಗೆ ದುಬಾರಿ ಮೌಲ್ಯದ ವಾಚ್ ನೀಡಿ ಪ್ರಪೋಸ್ ಮಾಡಲು ಪ್ಲ್ಯಾನ್ ರೂಪಿಸಿದ್ದ ವೈದ್ಯನೊಬ್ಬ ಬುರ್ಖಾ ಧರಿಸಿ ವಾಚ್ ಖರೀದಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ತಡರಾತ್ರಿ ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ನಲ್ಲಿ ಬುರ್ಖಾ ಧರಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವೈದ್ಯ ವಸಂತರಾವ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾನು ವಾಚ್ ಖರೀದಿ ಮಾಡಿದ್ದು ಯಾರಿಗೂ ಗೊತ್ತಾಗಬಾರದೆಂದು ವೈದ್ಯ ವಸಂತರಾವ್ ಬುರ್ಖಾ ಧರಿಸಿದ್ದ. ನ್ಯಾಷನಲ್ ಮಾರ್ಕೆಟ್ನ ಟೈಟಾನ್ ಶೋರೂಂನಲ್ಲಿ 20 ಸಾವಿರ ರೂಪಾಯಿ ಮೌಲ್ಯದ ವಾಚ್ ಖರೀದಿ ಮಾಡಿದ್ದಾನೆ. ಆದ್ರೆ, ಆತನ ಚಲನವಲನ ನೋಡಿ ಅಂಗಡಿಯವರು ಅನುಮಾನಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬುರ್ಖಾ ಧರಿಸಿದ್ದ ವೈದ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆಗ ಪ್ರೇಯಸಿಗೆ ವಾಚ್ ನೀಡಿ ಪ್ರಪೋಸ್ ಮಾಡುವ ಸಲುವಾಗಿ ಯಾರಿಗೂ ಗೊತ್ತಾಗಬಾರದೆಂದು ಈ ರೀತಿ ಪ್ಲ್ಯಾನ್ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಸದ್ಯ ಡಾ.ವಸಂತರಾವ್ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರ ವಶದಲ್ಲಿದ್ದಾರೆ.
Published On - 1:31 pm, Mon, 3 February 20