ಮೀಸಲಾತಿ ನೀಡುವುದಾಗಿ ಸಿಎಂ ತಿಳಿಸಿದ್ದಾರೆ, ಭರವಸೆ ಕೊಟ್ಟ ಮೇಲೂ ಅವರ ವಿರುದ್ಧ ಮಾತಾಡೋದು ತಪ್ಪಾಗುತ್ತೆ: ವಚನಾನಂದ ಶ್ರೀ
ನೂರಕ್ಕೆ ನೂರರಷ್ಟು ನಮ್ಮ ಸಮಾಜಕ್ಕೆ ಮೀಸಲಾತಿ ಸಿಕ್ಕೇ ಸಿಗುತ್ತದೆ. ಪ್ರಾಣ ಬಿಟ್ಟೇವು ಹೊರತು ಮೀಸಲಾತಿ ಪಡೆಯದೇ ಬಿಡುವುದಿಲ್ಲ ಎಂದು ತಮ್ಮ ವಿರೋಧಿಗಳಿಗೆ ವಚನಾನಂದ ಸ್ವಾಮೀಜಿ ಟಾಂಗ್ ನೀಡಿದರು.
ಹಾವೇರಿ: ಕುಲಶಾಸ್ತ್ರ ಅಧ್ಯಯನ ವರದಿ ಬಂದ ಮೇಲೆ ಪಂಚಮಸಾಲಿಗರಿಗೆ ಮೀಸಲಾತಿ (reservation) ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಭರವಸೆ ಕೊಟ್ಟ ಮೇಲೆ ಸಿಎಂ ವಿರುದ್ಧ ಮಾತಾಡೋದು ತಪ್ಪಾಗುತ್ತೆ ಎಂದು ಹರಿಹರ ಪೀಠದ ವಚನಾನಂದ ಶ್ರೀಗಳು ಹೇಳಿದರು. ನೂರಕ್ಕೆ ನೂರರಷ್ಟು ನಮ್ಮ ಸಮಾಜಕ್ಕೆ ಮೀಸಲಾತಿ ಸಿಕ್ಕೇ ಸಿಗುತ್ತದೆ. ಪ್ರಾಣ ಬಿಟ್ಟೇವು ಹೊರತು ಮೀಸಲಾತಿ ಪಡೆಯದೇ ಬಿಡುವುದಿಲ್ಲ ಎಂದು ತಮ್ಮ ವಿರೋಧಿಗಳಿಗೆ ವಚನಾನಂದ ಸ್ವಾಮೀಜಿ ಟಾಂಗ್ ನೀಡಿದರು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಅನ್ನೋ ಭಾವನೆ ಬರಬೇಕು. ಟೀಕೆ ಟಿಪ್ಪಣಿಗಳಿಗಿಂತ ಎಜ್ಯುಕೇಟ್ ಮಾಡೋ ಸಮಾವೇಶಗಳಾದರೆ ಸಮಾಜಕ್ಕೆ ಅನುಕೂಲ ಆಗುತ್ತದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡುತ್ತಾರೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡೋದಿಲ್ಲ ಎಂದು ಹೇಳಿದರು.
ನವಂಬರ್ 23ರಿಂದ ಮೀಸಲಾತಿ ಕುರಿತು ಜನಜಾಗೃತಿ ಯಾತ್ರೆ
ನವಂಬರ್ 23ರಿಂದ ಮೀಸಲಾತಿ ಕುರಿತು ಜನಜಾಗೃತಿ ಯಾತ್ರೆ ನಡೆಯಲಿದ್ದು, ಹಾನಗಲ್ ಪಟ್ಟಣದಿಂದ ಗ್ರಾಮದರ್ಶನ ಆರಂಭವಾಗುತ್ತದೆ. ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾಂವಿ ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಗ್ರಾಮದರ್ಶನ ನಡೆಯಲಿದೆ. ಗ್ರಾಮದರ್ಶನದ ನಂತರ ಡಿಸೆಂಬರ್ 11ರಂದು ಬೃಹತ್ ಹಕ್ಕೊತ್ತಾಯದ ಸಮಾವೇಶ ಮಾಡುತ್ತೇವೆ. ಸರಕಾರದ ನಮ್ಮ ಎಲ್ಲ ಮಂತ್ರಿಗಳು ಬರುತ್ತಾರೆ. ರಾಷ್ಟ್ರೀಯ ನಾಯಕರ ಜೊತೆಗೂ ಸಮುದಾಯದ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ್ದೇವೆ. ಅವರು ಮೀಸಲಾತಿ ಕೊಡೋ ವಿಚಾರದಲ್ಲಿದ್ದಾರೆ. ಇದೆ ಸರಕಾರದಲ್ಲಿ ನೂರಕ್ಕೆ ನೂರು ನಾವು ಮೀಸಲಾತಿ ಪಡೆಯುತ್ತೇವೆ ಎಂದು ವಚನಾನಂದ ಶ್ರೀಗಳು ಹೇಳಿದರು.
ಪೀಠಗಳ ನಡೆವೆ ಯಾವುದೇ ಒಡಕಿಲ್ಲ:
ಕೂಡಲಸಂಗಮ ಮತ್ತು ಹರಿಹರ ಪೀಠಗಳ ನಡುವೆ ಹೊಂದಾಣಿಕೆಯಿಲ್ಲವಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪೀಠಗಳ ಹೋರಾಟಗಳ ಹಾದಿ ಭಿನ್ನವಾಗಿರಬಹುದು. ಆದರೆ ಉದ್ದೇಶ ಮೀಸಲಾತಿ ಪಡೆಯುವುದಾಗಿದೆ. ಪೀಠ ಪೀಠಗಳ ನಡೆವೆ ಯಾವುದೇ ಒಡಕಿಲ್ಲ. ಸಮಾಜದ ಜನರ ಅಭಿಪ್ರಾಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ವಚನಾನಂದ ಶ್ರೀಗಳು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:46 pm, Sat, 5 November 22