Haveri Cattle: ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ಕಾಡ್ತಿದೆ, ಅರ್ಧಕ್ಕರ್ಧ ಸಿಬ್ಬಂದಿ ಇಲ್ಲಿಲ್ಲ

Lumpy Skin Disease: ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಕಾಡ್ತಿದೆ. ಜಿಲ್ಲೆಯಲ್ಲಿ 104 ಜನ ಪಶು ವೈದ್ಯರು, 230 ಜನ ಪಶು ವೈದ್ಯ ಪರೀಕ್ಷಕರು ಇರಬೇಕಿತ್ತು. ಆದ್ರೆ ಅದರಲ್ಲಿ ಅರ್ಧಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.

Haveri Cattle: ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ಕಾಡ್ತಿದೆ, ಅರ್ಧಕ್ಕರ್ಧ ಸಿಬ್ಬಂದಿ ಇಲ್ಲಿಲ್ಲ
ಹಾವೇರಿ ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ಕಾಡ್ತಿದೆ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on:Aug 01, 2023 | 2:53 PM

ಕೃಷಿ ಪ್ರಧಾನವಾದ ಹಾವೇರಿ (Haveri) ಜಿಲ್ಲೆಯಲ್ಲಿ ರೈತರನ್ನು ಸಮಸ್ಯೆಗಳು ಬೆಂಬಿಡದೆ ಕಾಡ್ತಿವೆ. ಅದ್ರಲ್ಲೂ ರೈತರ ಮನೆಗಳಲ್ಲಿ ಜಾನುವಾರುಗಳಿಗೆ ಕಳೆದ ವರ್ಷ ಕಾಡ್ತಿದ ಚರ್ಮ ಗಂಟು ರೋಗ ರೈತರನ್ನು ದಿಕ್ಕು ತೋಚದಂತೆ ಮಾಡಿದೆ. ಯಾಕಂದ್ರೆ ಜಿಲ್ಲೆಯಲ್ಲಿನ ಪಶು ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕಾಡ್ತಿದೆ. ಇದ್ರಿಂದ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆ ಕಡೆ ರೋಗದಿಂದ ಬಳಲ್ತಿರೋ ಜಾನುವಾರುಗಳು (Cattle). ಪಶು ಇಲಾಖೆಯನ್ನು (veterinary) ಕಾಡ್ತಿರೋ ವೈದ್ಯರು ಮತ್ತು ಸಿಬ್ಬಂದಿ ಕೊರತೆ. ಹೌದು ಹಾವೇರಿ ಜಿಲ್ಲೆಯಲ್ಲಿ ಒಟ್ಟು ಎಂಟು ತಾಲೂಕುಗಳಿವೆ. ಜಿಲ್ಲೆಯಲ್ಲಿ ಬರೋಬ್ಬರಿ ಮೂರೂವರೆ ಲಕ್ಷ ಜಾನುವಾರುಗಳಿವೆ. ಜಿಲ್ಲೆಯ ಹಾವೇರಿ, ಸವಣೂರು, ಬ್ಯಾಡಗಿ, ಹಾನಗಲ್ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿನ ಜಾನುವಾರುಗಳಿಗೆ ಈ ಹಿಂದೆ ಗಂಟು ರೋಗ (Lumpy Skin Disease) ಕಾಣಿಸಿಕೊಂಡಿದೆ.

ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಡ್ತಿದೆ. ಜಿಲ್ಲೆಯಲ್ಲಿ 104 ಜನ ಪಶು ವೈದ್ಯರು ಹಾಗೂ 230 ಜನ ಪಶು ವೈದ್ಯಕೀಯ ಪರೀಕ್ಷಕರು ಇರಬೇಕಿತ್ತು. ಆದ್ರೆ ಅದರಲ್ಲಿ ಅರ್ಧಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಅಂದ್ರೆ 104 ವೈದ್ಯರು ಇರಬೇಕಾಗಿದ್ದ ಜಿಲ್ಲೆಯಲ್ಲಿ ಕೇವಲ 40 ಜನ ವೈದ್ಯರಿದ್ದಾರೆ‌. ಇನ್ನು ಇರಬೇಕಾಗಿದ್ದ 230 ಜನ ಪಶು ವೈದ್ಯಕೀಯ ಪರೀಕ್ಷಕರಲ್ಲಿ ಕೇವಲ 77 ಜನ ಪಶು ವೈದ್ಯಕೀಯ ಪರೀಕ್ಷಕರಿದ್ದಾರೆ. ಬಹಳಷ್ಟು ಹುದ್ದೆ ಖಾಲಿ ಇವೆ ಅಂತಾರೆ ಉಪನಿರ್ದೇಶಕರಾದ ಡಾ. ಸಂತಿ.

ಕಳೆದ ವರ್ಷ ಲಂಪಿ ಸ್ಕಿನ್ ಗೆ ತುತ್ತಾದ ಜಾನುವಾರುಗಳಿಗೆ ಯಾವುದೇ ರೀತಿಯ ನಿರ್ಧಿಷ್ಟ ಔಷಧಿ ಇಲ್ಲ. ಗಂಟು ರೋಗಗಳಿಗೆ ಒಳಗಾದ ಜಾನುವಾರುಗಳಿಗೆ ವ್ಯಾಕ್ಸಿನ್ ಮಾಡೋ ಮೂಲಕ ಗಂಟು ರೋಗವನ್ನು ನಿಯಂತ್ರಣ ಮಾಡಬಹುದಾಗಿದೆ. ಆದ್ರೆ ವ್ಯಾಕ್ಸಿನ್ ಮಾಡೋಕೂ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕಾಡ್ತಿದೆ. ಇರಬೇಕಾದ ಸಂಖ್ಯೆಯ ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿರುವುದೆ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದಿರೋದಕ್ಕೆ ಕಾರಣ ಎನ್ನಲಾಗಿದೆ.

ಇರೋ ವೈದ್ಯರು ಮತ್ತು ಸಿಬ್ಬಂದಿ ಬಳಸಿಕೊಂಡು ಜಿಲ್ಲೆಯ ಪಶು ಇಲಾಖೆ ಅಧಿಕಾರಿಗಳು ರೋಗ ನಿಯಂತ್ರಣ ಮಾಡೋಕೆ ಹರಸಾಹಸ ಮಾಡ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿನ ಪಶು ಇಲಾಖೆಯಲ್ಲಿ ಖಾಲಿ ಇರೋ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡೋ ಮೂಲಕ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಬೇಕಿದೆ.

Also Read: ತಿರುಮಲ ಟಿಟಿಡಿಯಲ್ಲಿ ತುಪ್ಪ ಖರೀದಿ ವಿವಾದ -ಮಾರ್ಚ್‌ನಿಂದಲೇ ಕೆಎಂಎಫ್ ಟೆಂಡರ್ ಹಾಕಿಲ್ಲ ಎಂಬ ವಾದ ಮುಂದಿಟ್ಟ ಟಿಟಿಡಿ

ಜಿಲ್ಲೆಯಲ್ಲಿನ ಪಶು ಇಲಾಖೆಯಲ್ಲಿ ಇರೋ ವೈದ್ಯರು ಮತ್ತು ಸಿಬ್ಬಂದಿ ಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಕಡಿಮೆ ವೈದ್ಯರು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸ್ತಿದ್ದಾರೆ. ಹೀಗಾಗಿ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗ್ತಿಲ್ಲ. ಇನ್ನಾದರು ಸರ್ಕಾರ ಎಚ್ಚೆತ್ತು ಪಶು ಇಲಾಖೆ ಸಿಬ್ಬಂದಿಯನ್ನ ನೇಮಕ ಮಾಡುತ್ತಾ ಅನ್ನೋದು ಕಾದುನೋಡಬೇಕಾಗಿದೆ. ಈ ಮಧ್ಯೆ, ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಜಿ ಅವರ ಜಿಲ್ಲೆಗೆ ಕಳೆದ ವಾರವಷ್ಟೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಆ ವೇಳೆ ಈ ವಿಷಯವನ್ನು ಸ್ಥಳೀಯ ಜನಪ್ರತಿನಿಧಿಗಳು ಅವರ ಗಮನಕ್ಕೆ ತಂದಿಲ್ಲವಾ ಎಂಬ ವಿಚಾರ ರೈತನ್ನು ಈಗ ಕಾಡುತ್ತಿದೆ.

ಹಾವೇರಿ ಜಿಲ್ಲೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Tue, 1 August 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್