Tomato Experiment: ಲಾಟರಿ ಬೆಳೆ ಟೊಮ್ಯಾಟೊ ಕಸಿಗೆ ಇಳಿದ ಕೋಲಾರದ ಶ್ರಮಜೀವಿ ರೈತ: ಬದನೆ ಕಾಯಿಗೆ ಟೊಮ್ಯಾಟೊ ಕಸಿ! ಏನಿದು ಪ್ರಯೋಗ?

ಬದನೆ ಗಿಡದ ಕಾಂಡಕ್ಕೆ ಟೊಮೆಟೊ ಗಿಡದ ಕಾಂಡವನ್ನ ಕಸಿ ಮಾಡುವ ಮೂಲಕ ನೂತನ ತಳಿಯೊಂದಕ್ಕೆ ನಾಂದಿ ಹಾಡಿದ್ದಾರೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೊತ್ತಪೇಟ ಗ್ರಾಮದ ನಾರಾಯಣಸ್ವಾಮಿ ಎಂಬ ರೈತ.

Tomato Experiment: ಲಾಟರಿ ಬೆಳೆ ಟೊಮ್ಯಾಟೊ ಕಸಿಗೆ ಇಳಿದ ಕೋಲಾರದ ಶ್ರಮಜೀವಿ ರೈತ: ಬದನೆ ಕಾಯಿಗೆ ಟೊಮ್ಯಾಟೊ ಕಸಿ! ಏನಿದು ಪ್ರಯೋಗ?
ಬದನೆ ಕಾಯಿಗೆ ಟೊಮ್ಯಾಟೊ ಕಸಿ! ಏನಿದು ಪ್ರಯೋಗ?
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Jul 26, 2023 | 12:41 PM

ದೇಶದಲ್ಲಿ ಟೊಮ್ಯಾಟೊ ಬೆಳೆಯೋದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇನ್ನು ರಾಜ್ಯದಲ್ಲಿ, ಅತೀ ಹೆಚ್ಚು ಟೊಮ್ಯಾಟೊ ಬೆಳೆಯೋದು ಕೋಲಾರ ಜಿಲ್ಲೆಯಲ್ಲಿ. ಅನುಭವವೇದ್ಯ ಮಾತೆಂದರೆ ಸುಖಾಸುಮ್ಮನೆ ಕೋಲಾರದ ರೈತರು ( Kolar Progressive farme) ಕೃಷಿ‌ ಮಾಡೋದಿಲ್ಲ. ತಮ್ಮನ್ನು ತಾವೇ ಕೃಷಿಯಲ್ಲಿ ತೊಡಗಿಸಿಕೊಂಡ ಇಲ್ಲಿಯ ರೈತರು ವ್ಯವಸಾಯದಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಲೇ‌ ಇರುತ್ತಾರೆ. ಇದೀಗ ಟೊಮ್ಯಾಟೊ ಮತ್ತು ಬದನೆ ಮಿಶ್ರಿತ ತಳಿಯೊಂದು ಜಿಲ್ಲೆಯ ಕೃಷಿ ವಲಯದಲ್ಲಿ ಸದ್ದು‌ ಮಾಡುತ್ತಿದೆ.. (Success story)

ಕೆಂಪು ಚಿನ್ನ, ಕಿಚನ್ ಕ್ವೀನ್ ಎಂದು ಹೆಸರಾದ ಟೊಮ್ಯಾಟೊ (Tomato price) ಅತೀ ಹೆಚ್ಚು ಬೆಳೆಯುವ ಜಿಲ್ಲೆ ಅಂದರೆ ಅದು ಕೋಲಾರ, ದಶಕಗಳಿಂದ ಇಲ್ಲಿಯ ರೈತರಿಗೆ ಲೀಲಾಜಾಲವಾಗಿ ಟೊಮ್ಯಾಟೊ ಬೆಳೆಯುವುದು ಹೇಗೆಂದು ಗೊತ್ತು. ಹಾಗಾಗಿಯೇ ಇಲ್ಲಿಯ ಟೊಮ್ಯಾಟೊ ದೇಶ, ವಿದೇಶಗಳಲ್ಲಿ ಸಹ ಹೆಸರು ಮಾಡಿದೆ. ವರ್ಷ ಒಂದರಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯುವ ರೈತರಿಗೆ ಅದರ ರೋಗ ಭಾಧೆ, ಇಳುವರಿ ಕಡಿಮೆ, ಗಿಡದ ಜೀವಿತಾ ಅವಧಿ ಕಡಿಮೆಯಂತಹ ಸಮಸ್ಯೆಗಳು ಕಾಡುತ್ತಲೇ‌ ಇವೆ.

ಹೀಗಾಗಿ ಹೊಸದಾಗಿ ಏನಾದರು ಮಾಡಲು ಹವಣಿಸುವ ಕೃಷಿಕರು ಟೊಮ್ಯಾಟೊ ಬೆಳೆಗೆ ಈಗ ಹೊಸ ಆಯಾಮ ಕೊಟ್ಟು ಲಾಭ ಕಂಡುಕೊಳ್ಳುತಿದ್ದಾರೆ. ಟೊಮ್ಯಾಟೊ ಮತ್ತು ಬದನೆ ನಡುವೆ ಬಂಧ ಬೆಸೆಯುವ ಕೆಲಸ ಮಾಡಿದ್ದಾರೆ. ಅರ್ಥಾತ್‌ ಬದನೆ ಗಿಡದ ಕಾಂಡಕ್ಕೆ ಟೊಮ್ಯಾಟೊ ಗಿಡದ ಕಾಂಡವನ್ನ ಕಸಿ ಮಾಡುವ ಮೂಲಕ ನೂತನ ತಳಿಯೊಂದಕ್ಕೆ ನಾಂದಿ ಹಾಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ (Srinivaspur) ಕೊತ್ತಪೇಟ ಗ್ರಾಮದ ನಾರಾಯಣಸ್ವಾಮಿ ಎಂಬ ರೈತ ತನ್ನ ನೂತನ ಟೊಮ್ಯಾಟೊ ತಳಿಯ ಮೂಲಕ ಹೆಚ್ಚಿನ ಲಾಭ ಪಡೆಯುತಿದ್ದು ಕಸಿ ಪ್ರಯತ್ನ ಯಶಸ್ವಿಯಾಗಿದೆ.

ಸಾಮಾನ್ಯವಾಗಿ ರೈತರು ಬೆಳೆಯುವ ಟೊಮ್ಯಾಟೊ ಎಕರೆ ಒಂದಕ್ಕೆ ಒಂದುವರೆಯಿಂದ ಎರಡು ಲಕ್ಷ ಹಣ ಖರ್ಚು ಬರುತ್ತದೆ. ಆದರೆ ಎರಡು ಫಸಲು ನೀಡುವಷ್ಟರಲ್ಲಿ ಗಿಡದ ಆಯಸ್ಸು ಮುಗಿದು ಹೋಗಿ, ಗಿಡ ಒಣಗಿ ಹೋಗುತ್ತದೆ. ಅದಷ್ಟೆ ಅಲ್ಲ ರೋಗಗಳು ಬಹಳ ಬೇಗ ಬಾಧಿಸುತ್ತವೆ. ಅಲ್ಲದೆ ಕೀಟಗಳ ಬಾಧೆಯೂ ಸಹ ಸಾಕಷ್ಟು ಕಾಡುವ‌ ಮೂಲಕ ಟೊಮ್ಯಾಟೊಗೆ ಒಂದು ರೀತಿಯ ಕಂಟಕವಾಗಿದೆ.

ಆದರೆ ಈ ಹೊಸ ತಳಿ ಈಗ ಇವೆಲ್ಲದಕ್ಕು ರಾಮಬಾಣವಾಗಿದೆ. ಟೊಮ್ಯಾಟೊ-ಬದನೆ ಕಸಿ ಮಾಡಿದ ಗಿಡ ಆರು ತಿಂಗಳವರೆಗೆ ಬೆಳೆಯುತ್ತದೆ. ಅಷ್ಟೇ ಅಲ್ಲ ಎರಡು ಬಾರಿ ಫಸಲು ಬಂದ ನಂತರ ಸಾಮಾನ್ಯವಾಗಿ ಟೊಮ್ಯಾಟೊ ಗಿಡದ ಎಲೆಗಳು ಉದುರುತ್ತವೆ. ಅಥವಾ ಒಣಗುತ್ತವೆ. ಆದರೆ ನೂತನ ಕಸಿ ಗಿಡದಲ್ಲಿ ಎರಡು ತಿಂಗಳ ನಂತರ ಎಲೆಗಳು ಒಣಗಿದ ನಂತರ‌ ಮತ್ತೆ ಚಿಗುರುತ್ತದೆ!

ಅಷ್ಟೆ ಅಲ್ಲ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಈ ಗಿಡಗಳಿಗೆ ಕೀಟಗಳ ಬಾಧೆ, ವೈರಸ್ ಬಾಧೆ ಕಾಡುವುದಿಲ್ಲ. ಹೀಗಾಗಿ ರೈತನಿಗೆ ಆರು ತಿಂಗಳವರೆಗೆ ಗಿಡ ಉಳಿಸಿಕೊಳ್ಳಲು ಅವಕಾಶ ಇದೆ. ರೈತ ನಾರಾಯಣಸ್ವಾಮಿ ಈಗಾಗಲೆ ಎಕರೆ ಒಂದಕ್ಕೆ ಮೂರು ಲಕ್ಷ ಖರ್ಚಿನಂತೆ ಎರಡು ಎಕರೆಗೆ ಆರು ಲಕ್ಷ ತೊಡಗಿಸಿದ್ದಾರೆ. ಈಗಾಗಲೆ ಎರಡು ಸಲ‌ ಕೊಯ್ಲು ಮಾಡಿದ್ದು 10 ಲಕ್ಷ ಆದಾಯ ಗಳಿಸಿದ್ದಾರೆ. ಇನ್ನೂ 6-8 ಲಕ್ಷದವರೆಗೆ ಅವರು ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅನ್ನೋದು ಅಧಿಕಾರಿ ಬೈರರೆಡ್ಡಿ, ಸಹಾಯಕ ತೋಟಗಾರಿಕಾ ನಿರ್ದೇಶಕ, ಶ್ರೀನಿವಾಸಪುರ ಅವರ ಮಾತು.

ಒಟ್ಟಾರೆ ಲಾಟರಿ ಬೆಳೆಯಾದ ಟೊಮ್ಯಾಟೊ ವರ್ಷವೆಲ್ಲ ರೈತರಿಗೆ ಲಾಭ ತರೋದಿಲ್ಲ. ಹೀಗಾಗಿ ಗಿಡ ಕೂಡ ಆಯಸ್ಸು ಹೆಚ್ಚು ಇರೋದಿಲ್ಲ, ಇದೀಗ ಟೊಮ್ಯಾಟೊ ಬದನೆ ಕಸಿ ಗಿಡ ರೈತರ ಎಲ್ಲ ರೀತಿಯ ಸಮಸ್ಯೆಗಳಿಗೂ ಉತ್ತರವಾಗಿದ್ದು ಸಾವಯವ ಕೃಷಿಯಲ್ಲಿ ಈ ತಳಿ ಉತ್ತಮವಾಗಬಹುದಾಗಿದೆ. ಹೊಸ ಪ್ರಯತ್ನಗಳು ಮಾಡುವ ಮೂಲಕ ರೈತರು ಕೂಡ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂಬುದಕ್ಕೆ ಈ ರೈತನ ಪ್ರಯತ್ನವೇ ನಿದರ್ಶನ.

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ