AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಗಲು ಹಳೇ ಪಾತ್ರೆ ಮಾರಾಟ, ರಾತ್ರಿ ಮನೆಗಳ್ಳತನ: ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್

ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಕಿ ಕ್ಯಾಪ್ ಕಳ್ಳರ ಗ್ಯಾಂಗ್​​ ಅನ್ನು ಕೋಲಾರದ ಮುಳಬಾಗಿಲು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಆತಂಕಗೊಂಡಿದ್ದ ಜನರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಬಂಧಿತರಿಂದ 322 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ಸೇರಿ 52 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಗಲು ಹಳೇ ಪಾತ್ರೆ ಮಾರಾಟ, ರಾತ್ರಿ ಮನೆಗಳ್ಳತನ: ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್
ಬಂಧಿತರುImage Credit source: tv9 kannada
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Oct 14, 2026 | 6:31 PM

Share

ಮುಖ್ಯಾಂಶಗಳು

  • ಮುಳಬಾಗಿಲು ಪೊಲೀಸರ ಭರ್ಜರಿ ಕಾರ್ಯಾಚರಣೆ
  • ಕೋಲಾರ ಜನರ ನಿದ್ದೆಗಡೆಸಿದ್ದ ಮಂಕಿ ಕ್ಯಾಪ್ ಕಳ್ಳರ ಬಂಧನ
  • ಹಳೆ ಪಾತ್ರೆ, ಸಾಮಾನು ಮಾರಾಟ ನೆಪದಲ್ಲಿ ಕಳ್ಳತನ

ಕೋಲಾರ, ಅಕ್ಟೋಬರ್​​ 14: ಮುಳಬಾಗಿಲು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಜನರ ನಿದ್ದೆಗಡೆಸಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಮಂಕಿ ಕ್ಯಾಪ್​​​​ ಕಳ್ಳರನ್ನ ಬಂಧಿಸಿದ್ದಾರೆ. ತಮಿಳುನಾಡಿನ ತಿರುಪತ್ತೂರು ಮೂಲದ ಮುನಿರಾಜು, ಸತೀಶ್ ಕುಮಾರ್ ಮತ್ತು ಪೆರುಮಾಳ್ ಬಂಧಿತರು. ಇವರು ಹಗಲಲ್ಲಿ ಹಳೆ ಪಾತ್ರೆಗಳನ್ನು ಮಾರಾಟ ಮಾಡುವ ನೆಪದಲ್ಲಿ ಊರಲ್ಲಿ ಓಡಾಡುತ್ತಿದ್ದರು. ರಾತ್ರಿ ಆಯ್ತು ಅಂದರೆ ಸಾಕು ಮಂಕಿ ಕ್ಯಾಪ್​ ಧರಿಸಿ ಬೀಗ ಹಾಕಿರುವ ಮನೆಗಳ ಕಳ್ಳತನಕ್ಕೆ ಇಳಿಯುತ್ತಿದ್ದರು. ಹೀಗೆ ಎರಡು ವರ್ಷಗಳಿಂದ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್​​ ಗ್ಯಾಂಗ್​ ಇದೀಗ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

52 ಲಕ್ಷ ರೂ. ಮೌಲ್ಯದ 322 ಗ್ರಾಂ ಚಿನ್ನ,  2 ಕೆ.ಜಿ. ಬೆಳ್ಳಿ ವಶಕ್ಕೆ 

ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಟೀಚರ್ಸ್ ಕಾಲೋನಿ, ಶಿವಕೇಶವ ನಗರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬಂಧಿತರು ಕಳ್ಳತನ ಮಾಡುತ್ತಿದ್ದರು. ಕೃಷ್ಣ ಎಂಬಾತನ ಬಂಧನಕ್ಕೆ ಬಲೆಬೀಸಿದ್ದಾರೆ. ಬಂಧಿತರಿಂದ ಸುಮಾರು 52 ಲಕ್ಷ ರೂ. ಮೌಲ್ಯದ 322 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಕಳ್ಳತ: ತಮಿಳುನಾಡಿನ ಮನೆ ನಿರ್ಮಾಣ

ಇನ್ನು ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಆರೋಪಿಗಳು ಕರ್ನಾಟಕದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿ ತಮಿಳುನಾಡಿನ ತಿರುಪತ್ತೂರುನಲ್ಲಿ ಸುಮಾರು 20 ಲಕ್ಷ‌ ರೂ ಮೌಲ್ಯದ ಮನೆಯನ್ನು ನಿರ್ಮಾಣ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸದ್ಯ ಪೊಲೀಸರು ಮನೆಯನ್ನು ಸಹ ತಮ್ಮ ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾನೂನು ಕ್ರಮ ನಡೆಸಿದ್ದಾರೆ. ಇನ್ನು ಕಳೆದ ಎರಡು ವರ್ಷಗಳಿಂದ ಕೋಲಾರ ಜಿಲ್ಲೆಯ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು, ಜಿಲ್ಲೆಯ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಸುಮಾರು 10 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

LIVE TV

ಹಗಲಲ್ಲಿ ಹಳೇ ಪಾತ್ರೆ ಮಾರಾಟ: ರಾತ್ರಿ ಕಳ್ಳತನ

ಇನ್ನು ಮುಳಬಾಗಿಲು ಎಎಸ್ಪಿ ಮನೀಷಾ ಅವರು ನಿರಂತರವಾಗಿ ಕಳ್ಳರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಕೆಲವು ಸಂದರ್ಭದಲ್ಲಿ ವೇಷ ಮರೆಸಿಕೊಂಡು ಹೋಗಿ ಆರೋಪಿಗಳ ಪತ್ತೆಗೂ ಮುಂದಾಗಿದ್ದರು. ಮುಳಬಾಗಿಲು ನಗರದಲ್ಲಿ ಮಂಕಿ ಕ್ಯಾಪ್ ಧರಿಸಿಕೊಂಡು, ಬರಿಗಾಲಿನಲ್ಲಿ ಸಂಚರಿಸುತ್ತಿದ್ದ ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದವು. ಆರೋಪಿಗಳು ಹಗಲಲ್ಲಿ ಹಳೇ ಪಾತ್ರೆ ಮಾರಾಟ ಮಾಡುವ ರೀತಿಯಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಓಡಾಡುತ್ತಿದ್ದರು. ಆದರೆ ರಾತ್ರಿ ಆಗುತ್ತಿದ್ದಂತೆ ಕಳ್ಳರಾಗುತ್ತಿದ್ದರು.

ಇದನ್ನೂ ಓದಿ: ಗಮನ ಬೇರೆಡೆ ಸೆಳೆದು KSRTC ಬಸ್‌ನಲ್ಲಿ ಚಿನ್ನಾಭರಣ ಕಳ್ಳತನ: ಆಂಧ್ರಪ್ರದೇಶದ ಮಹಿಳೆಯರ ಬಂಧನ

ಕರ್ನಾಟಕ ಸೇರಿದಂತೆ ವಿವಿಧೆಡೆ ನಡೆದಿರುವ ಕಳ್ಳತನ ಪ್ರಕರಣಗಳಲ್ಲೂ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ನಡೆದಿದೆ. ಪೊಲೀಸರು ಕಳ್ಳತನವಾಗಿರುವ ಪ್ರಕರಣವನ್ನು ಶೀಘ್ರದಲ್ಲಿ ಬಗೆಹರಿಸಿ ಮಾಲೀಕರಿಗೆ ಚಿನ್ನಾಭರಣಗಳನ್ನು ಕಳೆದುಕೊಂಡ ಜನರಿಗೆ ಹಿಂತಿರುಗಿಸುವ ಕೆಲಸ ಮಾಡಿದ್ದಾರೆ. ‘ನಮ್ಮ ಮನೆಯಲ್ಲಿ ಚಿನ್ನಾರಣ‌ ಸೇರಿ ಸುಮಾರು 1ಲಕ್ಷ ರೂ ಹೆಚ್ಚು ಹಣ ಕಳೆದುಕೊಂಡಾಗ ನಮಗೆ ಮತ್ತೆ ಸಿಗುತ್ತೆ ಎಂಬ ಭಾವನೆ ಇರಲಿಲ್ಲ’ ಎಂದು ರೂಪ ಎನ್ನುವವರ ಮಾತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಬಿಗ್ ಬಾಸ್ ಬಿಟ್ಟು ಬಂದ ಬಳಿಕ ಮಂಜುಗೆ ಕಾಡುತ್ತಿದೆ ಪಶ್ಚಾತ್ತಾಪ
ಬಿಗ್ ಬಾಸ್ ಬಿಟ್ಟು ಬಂದ ಬಳಿಕ ಮಂಜುಗೆ ಕಾಡುತ್ತಿದೆ ಪಶ್ಚಾತ್ತಾಪ
ಒಬ್ಬರಿಗಾಗಿ ಬಸ್ ತಡೆದ ಸಿಬ್ಬಂದಿ
ಒಬ್ಬರಿಗಾಗಿ ಬಸ್ ತಡೆದ ಸಿಬ್ಬಂದಿ
ಸಿದ್ದರಾಮಯ್ಯರನ್ನು ಭೇಟಿಯಾದ ರಮೇಶ್​ ಜಾರಕಿಹೊಳಿ: ಕುತೂಹಲ ಮೂಡಿಸಿದ ನಡೆ
ಸಿದ್ದರಾಮಯ್ಯರನ್ನು ಭೇಟಿಯಾದ ರಮೇಶ್​ ಜಾರಕಿಹೊಳಿ: ಕುತೂಹಲ ಮೂಡಿಸಿದ ನಡೆ
ಡಿಸೆಂಬರ್ ಒಳಗೆ 17,000 ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ
ಡಿಸೆಂಬರ್ ಒಳಗೆ 17,000 ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ
ಸಕಲೇಶಪುರದಲ್ಲಿ ನೂರಾರು ವೋಟರ್ ಐಡಿ, ಆಧಾರ್ ಕಾರ್ಡ್‌ಗಳಿಗೆ ಬೆಂಕಿ!
ಸಕಲೇಶಪುರದಲ್ಲಿ ನೂರಾರು ವೋಟರ್ ಐಡಿ, ಆಧಾರ್ ಕಾರ್ಡ್‌ಗಳಿಗೆ ಬೆಂಕಿ!
ಲಕ್ಷ್ಮೇಶ್ವರದ ಕಾಟನ್ ಮಿಲ್‌ನಲ್ಲಿ ಭಾರಿ ಅಗ್ನಿ ಅವಘಡ
ಲಕ್ಷ್ಮೇಶ್ವರದ ಕಾಟನ್ ಮಿಲ್‌ನಲ್ಲಿ ಭಾರಿ ಅಗ್ನಿ ಅವಘಡ
'ಸಿದ್ದರಾಮಯ್ಯ ಸ್ಟಿಂಗ್​​ ಮಾಡಿಸಿದ್ದು ಜನತಾ ದಳ'​​: ಸಚಿವ ಚಲುವರಾಯಸ್ವಾಮಿ
'ಸಿದ್ದರಾಮಯ್ಯ ಸ್ಟಿಂಗ್​​ ಮಾಡಿಸಿದ್ದು ಜನತಾ ದಳ'​​: ಸಚಿವ ಚಲುವರಾಯಸ್ವಾಮಿ