ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಗುತ್ತಿಗೆದಾರನ ವಿರುದ್ಧ ದೂರು ದಾಖಲು!
ಕಾರಟಗಿ ತಾಲೂಕು ಪಂಚಾಯತಿ ಇಒ ಮೋಹನ್ ಎಂಬುವವರು ದೂರು ನೀಡಿದ್ದಾರೆ. ಸರ್ಕಾರದ ನಿಯಮಾವಳಿಗೆ ಬದ್ಧವಿರದೆ ನಂಬಿಕೆ ದ್ರೋಹವೆಸಗಿದ್ದಾರೆ. ಸಾಮಗ್ರಿ ಪೂರೈಸದೆ ತಾಂತ್ರಿಕ ಸಹಕಾರಿಗೆ ಹಣ ನೀಡಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಪ್ಪಳ: ದೇಶದ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಪತ್ರ ಬರೆದಿದ್ದ ಗುತ್ತಿಗೆದಾರನ (Contractor) ವಿರುದ್ದ್ಧ ದೂರು ದಾಖಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ಎರಿಽಸ್ವಾಮಿ ವಿರುದ್ಧ ದೂರು ದಾಖಲಾಗಿದೆ. ಕಾಮಗಾರಿ ಬಿಲ್ ಪಾವತಿ ವಿಚಾರವಾಗಿ ಎರಿಽಸ್ವಾಮಿ ಪತ್ರ ಬರೆದಿದ್ದರು. ಅಧಿಕಾರಿಗಳು ಕಮಿಷನ್ ಕೇಳಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಗುತ್ತಿಗೆದಾರ ಎರಿಽಸ್ವಾಮಿ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿದ್ದಾರೆ.
ಕಾರಟಗಿ ತಾಲೂಕು ಪಂಚಾಯತಿ ಇಒ ಮೋಹನ್ ಎಂಬುವವರು ದೂರು ನೀಡಿದ್ದಾರೆ. ಸರ್ಕಾರದ ನಿಯಮಾವಳಿಗೆ ಬದ್ಧವಿರದೆ ನಂಬಿಕೆ ದ್ರೋಹವೆಸಗಿದ್ದಾರೆ. ಸಾಮಗ್ರಿ ಪೂರೈಸದೆ ತಾಂತ್ರಿಕ ಸಹಕಾರಿಗೆ ಹಣ ನೀಡಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಗುತ್ತಿಗೆದಾರ ಎರಿಽಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 406ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕನಕಗಿರಿ ಶಾಸಕರು, ಜಿಪಂ ಸಿಇಓ ಒತ್ತಡದಿಂದ ನನ್ನ ಮೇಲೆ ಕೇಸ್ ದಾಖಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರ ಎರ್ರಿಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ನನಗೆ ನ್ಯಾಯ ಸಿಗದೆ ಹೋದರೆ, ಸಂತೋಷ್ ಪಾಟೀಲ್ ತರಹ ಆತ್ಮಹತ್ಯೆ ಮಾಡಿಕೊಳ್ಳುವ ಪರಸ್ಥಿತಿ ಬರತ್ತದೆ. ನನಗೆ ಇನ್ನು 7 ಲಕ್ಷ ಹಣ ಬರಬೇಕು. ನಾನು ಕೆಲ ಅಧಿಕಾರಿಗಳಿಗೆ ಫೋನ್ ಪೇ ಮಾಡಿದ್ದೇನೆ. ಸಾಲಲ್ಲ ಎಂದು ಅವರು ನನಗೆ ವಾಪಸ್ ಮಾಡಿದ್ದಾರೆ. ಅಕಸ್ಮಾತ್ ನನಗೆ ಏನಾದರೂ ಆದರೆ ಗ್ರಾಪಂ ಅಧ್ಯಕ್ಷ ಜಿಪಂ ಸಿಇಓ, ಪಿಡಿಓ ಕಾರಣ ಅಂತ ಎರ್ರಿಸ್ವಾಮಿ ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಸಿಇಓ ಅವರ ಮೇಲೆ ರಾಜಕೀಯ ಒತ್ತಡ ಇರುವುದಕ್ಕೆ ನನ್ನ ಮೇಲೆ ಎಫ್ಐಆರ್ ಮಾಡಿಸಿದ್ದಾರೆ. ನನ್ನ ಮೇಲೆ ಈಗಲೂ ಬೆದರಿಕೆ ಇದೆ. ನನಗೆ ಏನಾದರೂ ತೊಂದರೆ ಆದರೆ ಅವರೇ ಜವಾಬ್ದಾರರು ಎಂದು ಗುತ್ತಿಗೆದಾರ ಹೇಳಿದರು.
ಇದನ್ನೂ ಓದಿ
Vijay Deverakonda Birthday: ಮನೆ ಖರೀದಿಗೆ ಹಣ ಇಲ್ಲದಿದ್ದಾಗ ವಿಜಯ್ ದೇವರಕೊಂಡ ಮಾಡಿದ್ದೇನು?
ವಿಶೇಷ ಚೇತನ ಮಗುವಿಗೆ ವಿಮಾನ ಹತ್ತಲು ಬಿಡದ ಇಂಡಿಗೋ ಸಿಬ್ಬಂದಿ: ತನಿಖೆಗೆ ಆದೇಶಿಸಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
Published On - 12:23 pm, Mon, 9 May 22