ಕೊಪ್ಪಳ: ಊಟಕ್ಕೆಂದು ಹೋಗಿ ಹೆಣವಾದ ಕಂದಾಯ ಇಲಾಖೆ ನೌಕರ, ಸಾವಿನ ಸುತ್ತ ಬೆಳೆದ ಅನುಮಾನದ ಹುತ್ತ

TV9kannada Web Team

TV9kannada Web Team | Edited By: Kiran Hanumant Madar

Updated on: Jan 24, 2023 | 8:14 PM

ಹಲವು ವರ್ಷಗಳಿಂದ ಕೊಪ್ಪಳ ತಹಶೀಲ್ದಾರ್​ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ತಾಯಪ್ಪ ಊಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವ ಶವವಾಗಿ ವಾಪಾಸ್ಸು ಬಂದಿದ್ದಾನೆ.

ಕೊಪ್ಪಳ: ಊಟಕ್ಕೆಂದು ಹೋಗಿ ಹೆಣವಾದ ಕಂದಾಯ ಇಲಾಖೆ ನೌಕರ, ಸಾವಿನ ಸುತ್ತ ಬೆಳೆದ ಅನುಮಾನದ ಹುತ್ತ
ಮೃತ ಸರ್ಕಾರಿ ನೌಕರ ತಾಯಪ್ಪ

ಕೊಪ್ಪಳ: ಕಳೆದ ನಾಲ್ಕೈದು ವರ್ಷಗಳಿಂದ ಕೊಪ್ಪಳ ತಹಶೀಲ್ದಾರರ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ತಾಯಪ್ಪ ಎಂಬುವವರು ನಿನ್ನೆ(ಜ.22) ಸಂಜೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿಯ ಪೆದಸ್೯ ರೇಸಾಟ್೯ ಸ್ವಿಮ್ಮಿಂಗ್ ಪೂಲ್​ನಲ್ಲಿ ಹೆಣವಾಗಿದ್ದಾನೆ. ಇದೀಗ ತಾಯಪ್ಪನ ಸಾವಿನ ಸುತ್ತ ಸಧ್ಯ ನೂರೆಂಟೂ ಅನುಮಾದ ಹುತ್ತ ಬೆಳೆದುಕೊಂಡಿದೆ. ನಿನ್ನೆ ತಹಶೀಲ್ದಾರ ಕಚೇರಿಯಿಂದ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಪತ್ನಿಗೆ ಊಟಕ್ಕೆಂದು ಹೊರಗಡೆ ಹೊರಟಿದ್ದಿನಿ ಎಂದು ಹೇಳಿ ತಾಯಪ್ಪ ಸೀದಾ ರೇಸಾಟ್೯ಗೆ ಹೋಗಿದ್ದಾನೆ. ಪಾರ್ಟಿಯಲ್ಲಿ ಎಲ್ಲರೊಂದಿಗೆ ಖುಷಿಯಾಗೇ ಇದ್ದ ತಾಯಪ್ಪ, ಕೆಲ ಹೊತ್ತಿನಲ್ಲೆ ಸ್ವಿಮ್ಮಿಂಗ್ ಪೂಲ್​ನಲ್ಲಿ ಹೆಣವಾಗಿ ಬಿದ್ದಿದ್ದಾನೆ. ಆತನನ್ನ ನೋಡಿದ ಸಿಬ್ಬಂದಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಮಾತ್ರ ಬದುಕಿ ಬರಲಿಲ್ಲ.

ಇನ್ನು ರಾಯಚೂರು ಮೂಲದ ತಾಯಪ್ಪ ಕಂದಾಯ ಇಲಾಖೆ ಸೇರಿದ ದಿನದಿಂದಲೂ ಕೊಪ್ಪಳದಲ್ಲೇ ತನ್ನ ಪತ್ನಿ ಹಾಗೂಒಂದು ವರ್ಷದ ಮುಗವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.ನಿನ್ನೆಯವರೆಗೂ ಇಲಾಖೆಯಿಂದ ಆಯೋಜಿಸಿದ್ದ ವಾರ್ಷಿಕ ಕ್ರಿಡಾಕೂಟದಲ್ಲಿ ಭಾಗಿಯಾಗಿದ್ದು, ಅದಕ್ಕಾಗಿಯೇ ತಮ್ಮ ತಹಶೀಲ್ದಾರ್​ ಕಚೇರಿಯಿಂದಲೇ ಎಲ್ಲಾ ಸಿಬ್ಬಂದಿಗೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಹೀಗಾಗಿಯೇ ತಾಯಪ್ಪ ಕೂಡಾ ಗೆಟ್ ಟು ಗೆದರ್ ಪಾರ್ಟಿಗೆ ಹೋಗಿದ್ದ. ಖುದ್ದು ತಹಶೀಲ್ದಾರ್​ ಕೂಡಾ ಪಾರ್ಟಿಗೆ ಬಂದಿದ್ದರು. ಎಲ್ಲರೂ ಊಟ ಅದ ಮೇಲೆ ನಾಲ್ಕೈದು ಜನ ಸ್ವಿಮ್ಮಿಂಗ್ ಪೂಲ್ ಕಡೆ ಹೋಗಿದ್ದರಂತೆ. ಅವಾಗಲೇ ನೀರಿಗೆ ಬಿದ್ದು ತಾಯಪ್ಪ ಸಾವನ್ನಪ್ಪಿರಬಹುದು ಎನ್ನಲಾಗಿದ್ದು, ಪೋಸ್ಟ್ ಮಾಟಮ್ ರಿಪೋರ್ಟ್ ಬಂದ ಮೇಲೆ ಎಲ್ಲವೂ ಗೊತ್ತಾಗಲಿದೆ ಎಂದು ತಹಶೀಲ್ದಾರರು ಹೇಳುತ್ತಿದ್ದಾರೆ.

ಇದನ್ನೂ ಓದಿ:ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮುನಿರಾಬಾದ ಪೊಲೀಸ್​ರು ತನಿಖೆ ಕೈಗೆತ್ತಿಕೊಂಡಿದ್ದಾರೆ. ನಿಜಕ್ಕೂ ತಾಯಪ್ಪ ಈಜು ಬಾರದೇ ಸಾವನ್ನಪ್ಪಿದ್ನೋ ಅಥವಾ ಇನ್ನೇನಾದ್ರು ಕಾರಣ ಇದಿಯೋ ಎನ್ನೋದು ಪೊಲೀಸರ ತನಿಖೆಯಿಂದಲೇ ಬಯಲಾಗಬೇಕಾಗಿದೆ. ಅದೇನೆ ಇರಲಿ ಪತ್ನಿ ಮಗುವಿನೊಂದಿಗೆ ಖುಷಿಯಾಗಿದ್ದ ತಾಯಪ್ಪನ ಜೀವಕ್ಕೆ ಪಾರ್ಟಿ ಕುತ್ತು ತಂದಿದ್ದು ನಿಜಕ್ಕೂ ದುರ್ದೈವವೇ ಸರಿ.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada