AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು

ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಮಾರ್ಚ್ 09 ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿ ತಾವು ಸಾವಿನ ಮನೆ ಸೇರಿದ್ದಾರೆ.ಆದ್ರೆ, ಪವಾಡಸದೃಶ ರೀತಿಯಲ್ಲಿ ಮಗು ಬದುಕುಳಿದಿದೆ.

ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು
Darshan And Divyashree
ದಿಲೀಪ್​, ಚೌಡಹಳ್ಳಿ
| Edited By: |

Updated on:Mar 09, 2026 | 4:32 PM

Share

ಮಂಡ್ಯ, (ಮಾರ್ಚ್ 09): ಕೌಟುಂಬಿಕ ಕಲಹಕ್ಕೆ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪವಾಡದಂತೆ ಬದುಕುಳಿದಿದ್ದು, ಇದೀಗ ತಂದೆ ತಾಯಿ ಇಲ್ಲದೇ ಅನಾಥವಾಗಿದೆ. ಈ ಹೃದಯ ವಿದ್ರಾವಕ ಘಟನೆ ಮಂಡ್ಯದ (Mandya) ಕೆ.ಆರ್.ಪೇಟೆ (KR Pete) ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಕಳೆದ ಮೂರು ವರ್ಷದ‌ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವಿನೊಂದಿಗೆ ಮಂಡ್ಯದ ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದ್ರೆ, ಗಂಡ ಹೆಂಡತಿ ನಡುವೆ ಅದೇನಾಗಿತ್ತೋ ಏನೋ ದಂಪತಿ ಇಂದು (ಮಾರ್ಚ್ 09) ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ. ಆದ್ರೆ, ದಂಪತಿ ಸಾಯುವ ಮುನ್ನ ತಮ್ಮ ಎರಡು ವರ್ಷದ ಮಗುವನ್ನು ಸಹ ಕೊಲ್ಲಲು ತೀರ್ಮಾನಿಸಿದ್ದರು.

ಇದನ್ನೂ ಓದಿ: ಸ್ನೇಹಿತೆಯ ಲವ್​​ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ

ಅದರಂತೆ ಮಗುವನ್ನು ಕತ್ತು ಹಿಸುಕಿದ್ದಾರೆ. ಇದರಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಬಳಿಕ  ದಂಪತಿ ಮಗು ಸಾವನ್ನಪ್ಪಿದೆ ಎಂದು ತಾವು ಸಹ ನೇಣಿಗೆ ಕೊರಳೊಡ್ಡಿದ್ದಾರೆ. ಆದ್ರೆ, ದಂಪತಿ ಸಾವನ್ನಪ್ಪುತ್ತಿದ್ದಂತೆಯೇ  ಇನ್ನೊಂದೆಡೆ ಮಗು ಉಸಿರಾಡಿದ್ದು, ಪವಾಡದ ತೀರಿಯಲ್ಲಿ ಬದುಕುಳಿದಿದೆ. ಆದ್ರೆ, ತಂದೆ ತಾಯಿ ಇಲ್ಲದೇ ಅನಾಥವಾಗಿದ್ದು, ಎರಡು ಕಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನನ್ನು  ಬದುಕುಳಿದ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಂಪತಿಯ ಕೆಟ್ಟ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಂಟುಂಬಿಕ ಕಲಹದಿಂದ ಬೇಸತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Mon, 9 March 26

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್