ಅನೈತಿಕ ಸಂಬಂಧ: ಲಾಸ್ಟ್ ಕಾಲ್ ಆಧಾರದಲ್ಲಿ ಪಿಡಿಓ ಕೊಲೆ ಪ್ರಕರಣ ಬೇಧಿಸಿದ ಲಿಂಗಸುಗೂರು ಪೊಲೀಸರು!
Lingasugur police: ಆರೋಪಿಗಳು ಗಜದಂಡಯ್ಯನ ತಲೆ, ಹೊಟ್ಟೆ ಭಾಗಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದರು. ಆರೋಪಿಗಳು ಮಾಡಿದ್ದ ಲಾಸ್ಟ್ ಕಾಲ್ ಆಧಾರದಲ್ಲಿ ಲಿಂಗಸುಗೂರು ಪೊಲೀಸರು ಇದೀಗ ಪ್ರಕರಣ ಬೇಧಿಸಿದ್ದಾರೆ.
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ದೇವರಬೂಪೂರು ಗ್ರಾಮ ಮೂಲದ ಪಿಡಿಓ ಗಜದಂಡಯ್ಯ ಸ್ವಾಮಿ (Gajadandayya Swamy) ಅವರನ್ನು ಇದೇ ಅಕ್ಟೋಬರ್ 6 ರಂದು ಹತ್ಯೆ ಮಾಡಲಾಗಿತ್ತು. ಇದೀಗ ಲಿಂಗಸುಗೂರು ಪೊಲೀಸರು ಲಾಸ್ಟ್ ಕಾಲ್ ಆಧಾರದಲ್ಲಿ ಕೊಲೆ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಪಿಡಿಓ ಗಜದಂಡಯ್ಯ (Kota Gram Panchayat PDO) ಹತ್ಯೆ ಆರೋಪಿ ಶೀಲವಂತ ತಿಮ್ಮನಗೌಡ ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪ್ರಕರಣದ ಸಂಬಂಧ ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸರು ಇಬ್ಬರು ಹಂತಕರನ್ನು ಬಂಧಿಸಿದ್ದಾರೆ. ಶೀಲವಂತ ತಿಮ್ಮನಗೌಡ (21) ಹಾಗೂ ಶೀಲವಂತ ಬಸವರಾಜ್ (22) ಬಂಧಿತರು. ಆರೋಪಿಗಳು ಮತ್ತು ಪಿಡಿಓ (Panchayat Development Officer -PDO) ಲಿಂಗಸುಗೂರು ತಾಲ್ಲೂಕಿನ ದೇವರಬೂಪೂರು ಗ್ರಾಮದವರು.
ಪಿಡಿಓ ಗಜದಂಡಯ್ಯ ಅಕ್ಟೋಬರ್ 6 ರಂದು ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಸ್ ಆಗುತ್ತಿದ್ದ. ಈ ವೇಳೆ ಇಬ್ಬರೂ ಆರೋಪಿಗಳು ಬೈಕ್ ನಲ್ಲಿ ಹೊರಟಿದ್ದರು. ಆಗ ಪೆಟ್ರೋಲ್ ಖಾಲಿಯಾಗಿದೆ ಅಂತಾ ಆರೋಪಿಗಳು ಪಿಡಿಓಗೆ ಕರೆ ಮಾಡಿದ್ದಾರೆ. ಅದು ಮಿಸ್ ಕಾಲ್ ಆಗಿದ್ರಿಂದ ಪಿಡಿಒ ಗಜದಂಡಯ್ಯ ಮತ್ತೆ ಆರೋಪಿಗಳಿಗೆ ಕರೆ ಮಾಡಿದ್ದ. ಆ ವೇಳೆ ಆರೋಪಿಗಳು ಪಿಡಿಓ ಗಜದಂಡಯ್ಯನನ್ನು ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದರು.
ಈ ವೇಳೆ “ನನ್ನ ತಾಯಿ ಜೊತೆಗಿನ ಅನೈತಿಕ ಸಂಬಂಧ ಬಿಡು..” “ಇದೇ ಕಾರಣಕ್ಕೆ ನನಗೆ ಮದುವೆಗೆ ಹುಡುಗಿ ಸಿಗ್ತಿಲ್ಲ..”ಎಂದಿದ್ದ ಶೀಲವಂತ ತಿಮ್ಮನಗೌಡ. ಆಗ “ಏನು ಮಾಡ್ತಿಯಾ ಮಾಡ್ಕೊ” ಅಂತ ಹೇಳಿದ್ದ ಪಿಡಿಓ ಗಜದಂಡಯ್ಯ. ಕೊನೆಗೆ ಪಿಡಿಓ ಗಜದಂಡಯ್ಯ ಮೇಲೆ ಹಲ್ಲೆ ನಡೆಸಿದ್ದರು. ಆರೋಪಿಗಳು ಗಜದಂಡಯ್ಯನ ತಲೆ, ಹೊಟ್ಟೆ ಭಾಗಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದರು. ಆರೋಪಿಗಳು ಮಾಡಿದ್ದ ಲಾಸ್ಟ್ ಕಾಲ್ ಆಧಾರದಲ್ಲಿ ಲಿಂಗಸುಗೂರು ಪೊಲೀಸರು (Lingasugur police) ಇದೀಗ ಪ್ರಕರಣ ಬೇಧಿಸಿದ್ದಾರೆ.