‘ಕರ್ನಾಟಕದ 94 ನದಿಗಳು, ಉಪ ನದಿಗಳಿಂದ ನೀರು ಸಂಗ್ರಹಿಸಿ ಪೂಜೆ; ನೀರಾವರಿ ಯೋಜನೆ ಜಾರಿಮಾಡದಿದ್ದರೆ JDS ವಿಸರ್ಜನೆ’

HD Kumaraswamy: JDSಗೆ ಪೂರ್ಣಪ್ರಮಾಣದ ಅಧಿಕಾರ ನೀಡಿದರೆ ಯೋಜನೆ ಜಾರಿ ಮಾಡುತ್ತೇವೆ. ರಾಜ್ಯದ ನೀರಾವರಿ ಯೋಜನೆ ಜಾರಿಮಾಡದಿದ್ದರೆ JDS ವಿಸರ್ಜನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಕರ್ನಾಟಕದ 94 ನದಿಗಳು, ಉಪ ನದಿಗಳಿಂದ ನೀರು ಸಂಗ್ರಹಿಸಿ ಪೂಜೆ; ನೀರಾವರಿ ಯೋಜನೆ ಜಾರಿಮಾಡದಿದ್ದರೆ JDS ವಿಸರ್ಜನೆ’
ಹೆಚ್​ಡಿ ಕುಮಾರಸ್ವಾಮಿ
Follow us
TV9 Web
| Updated By: ganapathi bhat

Updated on:Apr 11, 2022 | 5:40 PM

ರಾಮನಗರ: ಕರ್ನಾಟಕ ರಾಜ್ಯದ 94 ನದಿಗಳು, ಉಪ ನದಿಗಳಿಂದ ನೀರು ಸಂಗ್ರಹಿಸಿ ಪೂಜೆ ನಡೆಸುತ್ತೇವೆ. ಬೆಂಗಳೂರಲ್ಲಿ ಗಂಗಾ ಪೂಜೆ ಮಾಡಿ ಗಂಗಾ ಆರತಿ ಮಾಡುತ್ತೇವೆ ಎಂದು ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸುತ್ತೇವೆ. ಮುಂದಿನ ಚುನಾವಣೆವರೆಗೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ನದಿ ನೀರು ಬಳಸಿಕೊಳ್ಳಲು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಪಕ್ಕದ ತೆಲಂಗಾಣದಲ್ಲಿ ನೀರಾವರಿ ಯೋಜನೆ ಪೂರ್ಣವಾಗಿದೆ. ತೆರಿಗೆ ಪಾವತಿಸುವಲ್ಲಿ ದೇಶದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ. ಟ್ರಿಬ್ಯುನಲ್​ ಆದೇಶವಾಗಿದ್ದರೂ ಗೆಜೆಟ್​ ನೋಟಿಫಿಕೇಷನ್​ ಆಗಿಲ್ಲ. ಒಂದೊಂದು ಯೋಜನೆಗಳಿಗೆ 1 ಸಾವಿರ ಕೋಟಿ ಹಣ ಸಾಕಾಗಲ್ಲ. ಯೋಜನೆ ಜಾರಿಗೆ ಯಾವುದೇ ಕಾರಣಕ್ಕೂ ಈ ಹಣ ಸಾಕಾಗಲ್ಲ. ಸರ್ಕಾರದ ದ್ರೋಹದ ಬಗ್ಗೆ ಮನೆಮನೆಗೆ ಮಾಹಿತಿ ತಲುಪಿಸ್ತೇವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ JDSಗೆ ಅಧಿಕಾರ ಕೊಡಿ ಅಂತೇವೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಜಾರಿ ಮಾಡಿಲ್ಲ. ರಾಜ್ಯದ ನೀರಾವರಿ ಯೋಜನೆ ಜಾರಿಗೆ ಬಿಜೆಪಿ ಪ್ರಯತ್ನಿಸಿಲ್ಲ. ನೀರಾವರಿ ಯೋಜನೆ ಜಾರಿಗೆ ಬಿಜೆಪಿ ಇಚ್ಛಾಸಕ್ತಿ ಪ್ರದರ್ಶಿಸುತ್ತಿಲ್ಲ. ಧಾರ್ಮಿಕ ಅಂಶಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದೆ. ಮೇಕೆದಾಟು, ಮಹದಾಯಿ, ಕೃಷ್ಣಾ & ಭದ್ರಾ ಮೇಲ್ದಂಡೆ ಯೋಜನೆ, ನೀರಾವರಿ ಯೋಜನೆ ಪೂರ್ಣಗೊಳಿಸಲು 5 ಲಕ್ಷ ಕೋಟಿ ಬೇಕು. JDSಗೆ ಪೂರ್ಣಪ್ರಮಾಣದ ಅಧಿಕಾರ ನೀಡಿದರೆ ಯೋಜನೆ ಜಾರಿ ಮಾಡುತ್ತೇವೆ. ರಾಜ್ಯದ ನೀರಾವರಿ ಯೋಜನೆ ಜಾರಿಮಾಡದಿದ್ದರೆ JDS ವಿಸರ್ಜನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಬೇಸತ್ತಿದ್ದಾರೆ. ನನ್ನ ನಿಲುವಿನ ಬಗ್ಗೆ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜನತಾ ಜಲಧಾರೆ ಬಗ್ಗೆ ರಾಜ್ಯದ ಜನರಲ್ಲಿ ಅರಿವು ಮೂಡಿಸುತ್ತೇವೆ. ರಾಜ್ಯದಲ್ಲಿ 40 ಸೀಟ್ ಗೆದ್ದಿರುವ ನಮಗೆ ಟಾರ್ಗೆಟ್​ 123 ಕಷ್ಟವಲ್ಲ. ಮುಂದಿನ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್​ 150 ರೋಡ್​ಮ್ಯಾಪ್​ ಇದೆ. ಜೆಡಿಎಸ್​ನಿಂದ ಗೆಲ್ಲಬಹುದಾದ ವ್ಯಕ್ತಿಗಳನ್ನು ಕರೆಸಿ ಮಾತಾಡಿದ್ದಾರೆ. ಕಾಂಗ್ರೆಸ್, ಬಿಜೆಪಿಯವರನ್ನು ಭೇಟಿಯಾಗಿ ಬಂದವರು ಹೇಳಿದ್ದಾರೆ. ಅವರ ಆಸೆ ಆಮಿಷಗಳಿಗೆ ನಮ್ಮ ಕಾರ್ಯಕರ್ತರು ಬಲಿಯಾಗಲ್ಲ. ಏನೇ ಆದರೂ ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಮೀರ್​ ಅಹ್ಮದ್​ ಜೆಡಿಎಸ್​ಗೆ ಮರಳುವ ಬಗ್ಗೆ ಚರ್ಚೆಯಾಗಿಲ್ಲ. ಕೆಲವರ ಮರು ಸೇರ್ಪಡೆಗೆ ಪಕ್ಷದಲ್ಲೇ ಪ್ರಬಲ ವಿರೋಧವಿದೆ. ಪ್ರಾದೇಶಿಕ ಪಕ್ಷದಲ್ಲಿ ಒಬ್ಬ ವ್ಯಕ್ತಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಆಂಧ್ರ, ತಮಿಳುನಾಡು, ಪಶ್ಚಿಮ ಬಂಗಾಳ ಸಿಎಂಗಳ ಉದಾಹರಣೆ ಇದೆ. ಕರ್ನಾಟಕದಲ್ಲಿ ಹೆಚ್​ಡಿಕೆ ಗುರಿ ಏನೆಂದು ಜನರಿಗೆ ಅರಿವಾಗಿದೆ. ಪ್ರಾದೇಶಿಕ ಪಕ್ಷ ಮುಗಿಸಲು ಬಿಜೆಪಿ, ಕಾಂಗ್ರೆಸ್​ನಿಂದ ಪ್ರಯತ್ನ ನಡೆಯುತ್ತಿದೆ. ಆದರೆ, JDS​ ಪಕ್ಷವೇ ರಾಜ್ಯದ ಜನರ ಏಕೈಕ ಆಯ್ಕೆಯಾಗಿದೆ. ರಾಮನಗರದಲ್ಲಿ ಟಿಟಿಡಿ ಮೂಲಕ ದೇವಸ್ಥಾನ ನಿರ್ಮಿಸುತ್ತೇವೆ. ಜೆಡಿಎಸ್​ ಪಕ್ಷದ 122 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ವೇದಿಕೆಯಲ್ಲಿ ತಲವಾರ್​ ಹಂಚಿಕೆಮಾಡಿ ಪ್ರದರ್ಶನ ಬಗ್ಗೆ ಲಹ್​ ಜಿಹಾದ್ ಅಲ್ಲ ಇನ್ಮುಂದೆ ಲವ್ ಕೇಸರಿ ಎಂದು ಹೇಳ್ತಾರೆ. ಯಾರಿಗೋಸ್ಕರ ತಲವಾರ್​ ತೋರಿಸುತ್ತಿದ್ದೀರಿ ಎಂದು ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡಲು ಹೊರಟಿದ್ದೀರಾ. ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡಕ್ಕೆ ಯತ್ನಿಸ್ತಿದ್ದೀರಾ. ರಾಜ್ಯ ಸರ್ಕಾರ ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು. ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಸಮಯ ನೀಡಿದ್ದೇನೆ. ಅಷ್ಟರಲ್ಲಿ ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಹೆಚ್.​ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಲ್ಲಂಗಡಿ ಒಡೆದಿದ್ದಕ್ಕೆ ಕನಿಕರ ತೋರುವವರು ಸುಮ್ಮನಿದ್ದರು. ತಲೆ ಒಡೆದಾಗ ಕನಿಕರ ತೋರಲಿಲ್ಲವೆಂಬ ಸಿ.ಟಿ.ರವಿ ಹೇಳಿಕೆಗೆ ಟಾಂಗ್​ ಅವರು ನೀಡಿದ್ದಾರೆ. ನೀವು ತಲೆ ಒಡೆಯುವ ಕೆಲಸ ಮಾಡುತ್ತಿರಿ, ಕನಿಕರ ತೋರಿಸ್ತೇವೆ. ಸಿ.ಟಿ.ರವಿಯವರೇ ನಿಮಗೆ ನಾಚಿಕೆ ಆಗುವುದಿಲ್ಲ ಎಂದು ಗರಂ ಆಗಿದ್ದಾರೆ. ಬಿಜೆಪಿಯವರು ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳುಮಾಡುತ್ತೀರಿ. ಕಲ್ಲಂಗಡಿ ಮಾರುವವನು ಮಾಡಿದ ತಪ್ಪಾದರೂ ಏನೆಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮಂಥವರ ಪ್ರಚೋದನಕಾರಿ ಹೇಳಿಕೆಯಿಂದ ಹೀಗಾಗುತ್ತಿದೆ. ಇಷ್ಟು ಅರ್ಥಮಾಡಿಕೊಳ್ಳದಿದ್ದರೆ ಯಾವ ದೇಶ ಕಟ್ಟುತ್ತೀರಿ ನೀವು ಎಂದು ಕೇಳಿದ್ದಾರೆ.

ಇದನ್ನೂ ಓದಿ: Communal Harmony: ಎಲ್ಲವನ್ನು ಸರಿಪಡಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒಂದು ತಿಂಗಳ ಗಡುವು

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಜೆಡಿಎಸ್​ನಿಂದ ಪ್ರತಿಭಟನೆ! ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕಿಡಿ

Published On - 5:24 pm, Mon, 11 April 22