ಮಾನವೀಯತೆ ಮೆರೆದ ಆಟೋ ಚಾಲಕ: ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಮಹಿಳೆಗೆ ವಾಪಾಸ್
ಆಟೋದಲ್ಲಿ ಬಿಟ್ಟು ಹೋಗಿದ್ದ 40 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಮೊಹಮ್ಮದ್ ಗೌಸ್
ಶಿವಮೊಗ್ಗ: ಮಾನವೀಯತೆ ಎಲ್ಲಡೆ ಪ್ರಶಂಸೆಗೆ ಒಳಗಾಗುತ್ತದೆ. ಯಾವುದೇ ವ್ಯಕ್ತಿ ಮಾನವೀಯತೆ ಕಾರ್ಯ ಮಾಡಿದರೂ ಆತ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಶಿವಮೊಗ್ಗನಗರದಲ್ಲಿ ಆಟೋ ಚಾಲಕ ಮಾನವೀಯತೆ ಮೆರೆದಿದ್ದು, ಇವರ ಕಾರ್ಯಕ್ಕೆ ಜನರು ಪ್ರಶಂಸಿಸುತ್ತಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮಹ್ಮದ್ ಗೌಸ್ ಎಂಬುವರು ಆಟೋ ಚಾಲನೆ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸೆ.10ರಂದು ಅವರ ಆಟೋದಲ್ಲಿ ಮಹಿಳೆ ಶಹತಾಜ್ ಭಾನು ಎಂಬುವರು ನಗರದ ಅಶೋಕ ಸರ್ಕಲ್ನಿಂದ ಟಿಪ್ಪುನಗರಕ್ಕೆ ಪ್ರಾಯಾಣಿಸಿದ್ದರು.
ಮಹಿಳೆ ಶಹತಾಜ್ ಭಾನು ಆಟೋದಿಂದ ಇಳಿಯುವಾಗ ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ನಂತರ ಮಹ್ಮದ್ ಗೌಸ್ ಬ್ಯಾಗ್ನ್ನು ಮಹಿಳೆಗೆ ವಾಪಾಸ್ ಮಾಡಿ ಮಾನಿವಯತೆ ಮೆರದಿದ್ದಾರೆ. ಬ್ಯಾಗಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಬ್ಯಾಗ್ ನಲ್ಲಿ 40 ಗ್ರಾಂ ಚಿನ್ನಾಭರಣವಿತ್ತು.
ಆಟೋ ಚಾಲಕ ಮಹಮ್ಮದ್ ಗೌಸ್ ಕಾರ್ಯಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಅಭಿನಂದನಾ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ