ಶಿವಮೊಗ್ಗ: ಗ್ರಾಮ ಪಂಚಾಯಿತಿ ಆಸ್ತಿ ಲಪಟಾಯಿಸಲು ವಾಮಾಚಾರ, ಇಬ್ಬರು ಜೈಲುಪಾಲು

ಅದು ಲಕ್ಷಾಂತರ ಬೆಲೆ ಬಾಳೋ ಜಮೀನು. ಸಾಲದ್ದಕ್ಕೆ ಗ್ರಾಮ ಪಂಚಾಯಿತಿಗೆ ಸೇರಿರೋ ಜಾಗ. ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವ್ರ ವಿರುದ್ಧ ಗ್ರಾಮ ಪಂಚಾಯಿತಿ ಸಮರ ಸಾರಿತ್ತು. ಆದರೆ ಅಕ್ರಮ ಒತ್ತುವರಿದಾರರು ಗ್ರಾಮ ಪಂಚಾಯಿತಿಗೇ ವಾಮಾಚಾರ ಮಾಡೋಕೆ ಹೋಗಿ ತಗಲಾಕ್ಕೊಂಡಿದ್ದಾರೆ.

ಶಿವಮೊಗ್ಗ: ಗ್ರಾಮ ಪಂಚಾಯಿತಿ ಆಸ್ತಿ ಲಪಟಾಯಿಸಲು ವಾಮಾಚಾರ, ಇಬ್ಬರು ಜೈಲುಪಾಲು
ಸಂಗ್ರಹ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Sep 13, 2021 | 7:59 AM

ಶಿವಮೊಗ್ಗ ತಾಲೂಕು ಚೋರಡಿ ಗ್ರಾಮಪಂಚಾಯಿತಿ ಆವರಣದಲ್ಲಿ ಕುಂಕುಮ, ಕುಂಬಳಕಾಯಿ, ಎಳ್ಳು, ನಿಂಬೆ ಹಣ್ಣು ಚೆಲ್ಲಿರೋ ದೃಶ್ಯ ಕಂಡು ಬಂದಿತ್ತು. ಮೊನ್ನೆ ಬೆಳಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಬಂದು ನೋಡಿದಾಗ ಆವರಣದಲ್ಲೇ ವಾಮಾಚಾರ ಮಾಡಿರೋದು ಬೆಳಕಿಗೆ ಬಂದಿದೆ. ಕುಂಬಳಕಾಯಿ, ಅರಿಶಿನ ಕುಂಕುಮ, ಬಿಳಿ ಎಳ್ಳು ಸೇರಿದಂತೆ ಹಲವು ವಸ್ತುಗಳನ್ನು ಹಾಕಿ ವಾಮಾಚಾರ ಮಾಡೋ ಮೂಲಕ ಭೀತಿ ಸೃಷ್ಟಿಸಿದ್ದರು. ಮತ್ತೊಂದೆಡೆ ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ್ ಬೆಳಗ್ಗೆದ್ದು ಮನೆಯಾಚೆ ಬರುವಷ್ಟರಲ್ಲಿ ಶಾಕ್ ಕಾದಿತ್ತು. ಅವ್ರ ಮನೆ ಮುಂದೆಯೂ ಇಂಥದ್ದೇ ಸೀನ್ ಕ್ರಿಯೇಟ್ ಆಗಿತ್ತು.

ಅಂದಹಾಗೆ ಇಷ್ಟೆಲ್ಲಾ ವಾಮಾಚಾರ ಹೈಡ್ರಾಮಾಕ್ಕೆ ಕಾರಣವಾಗಿದ್ದು ಜಮೀನು ವಿಚಾರ ಹಾಗೂ ಅಲ್ಲಿ ನಿರ್ಮಿಸಲಾಗ್ತಿರೋ ಕಟ್ಟಡ. ಯೆಸ್, ಇಲ್ಲಿ ಗ್ರಾಮ ಪಂಚಾಯಿತಿಗೆ ಸೇರಿರೋ ಆಸ್ತಿಯನ್ನು ಕಬಳಿಸಿ ಕಟ್ಟಡ ನಿರ್ಮಾಣ ಮಾಡಲಾಗ್ತಿದ್ಯಂತೆ. ಮಹೇಶ್ ಅನ್ನೋ ವ್ಯಕ್ತಿ ಪ್ರಭಾವ ಬಳಸಿಕೊಂಡು ಚೋರಡಿ ಗ್ರಾಮ ಠಾಣಾಗೆ ಸೇರಿದ ಆರು ಗುಂಟೆ ಜಾಗ ಒತ್ತುವರಿ ಮಾಡಿದ್ದಾರೆ. ಸರ್ವೇ ನಂ.109/4 ಹೊಂದಿಕೊಂಡಿರುವಂತಹ ಗ್ರಾಮ ಠಾಣಾ ಜಾಗ ಇದಾಗಿದ್ದು, ಕ್ರಮೇಣವಾಗಿ ತನ್ನದೇ ಜಮೀನು ಅಂತಾ ಬಿಂಬಿಸಿಕೊಂಡಿದ್ದ. ಒಂದಿಷ್ಟು ದಾಖಲೆಗಳನ್ನು ತನ್ನದೇ ಆಸ್ತಿ ಎನ್ನುವ ರೀತಿಯಲ್ಲಿ ಮಹೇಶ್ ಸೃಷ್ಟಿ ಮಾಡಿಕೊಂಡಿದ್ದಾರಂತೆ. ಈ ಆಸ್ತಿಯನ್ನು ತನ್ನ ಸ್ನೇಹಿತ ಮಲ್ಲೇಶ್ ಅನ್ನೋರಿಗೆ ಮಾರಾಟ ಮಾಡಿದ್ದಾರೆ. ಈ ವಿಚಾರ ಗೊತ್ತಾಗ್ತಿದ್ದಂತೆ ಮಹೇಶ್ಗೆ ಗ್ರಾಮ ಪಂಚಾಯಿತಿ ನೋಟಿಸ್ ಜಾರಿಮಾಡಿತ್ತು. ಆದ್ರೆ ಗ್ರಾಮ ಪಂಚಾಯಿತಿ ವಿರುದ್ಧವೇ ಆತ ಕೋರ್ಟ್ ಮೆಟ್ಟಿಲೇರಿದ್ದಾನೆ. ಆದ್ರೆ ಕೋರ್ಟ್ನಲ್ಲೂ ಈತನ ವಿರುದ್ಧ ಫೈಟ್ ಮಾಡೋಕೆ ಮುಂದಾದಾಗ ವಾಮಾಚಾರದಂಥಾ ಕೆಲ್ಸಕ್ಕೆ ಕೈ ಹಾಕಿದ್ದಾನಂತೆ.

ಇದಕ್ಕೂ ಮೊದಲು ಜಮೀನು ವಿಚಾರವಾಗಿ ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ್ಗೆ ಈ ಮಹೇಶ್ ಬೆದರಿಕೆ ಹಾಕಿದ್ದ. ಇದಾದ ಬಳಿಕ ಕಟ್ಟಡ ನಿರ್ಮಾಣಕ್ಕೂ ಬ್ರೇಕ್ ಬಿದ್ದಿತ್ತು. ಇದ್ರಿಂದ ಮತ್ತಷ್ಟು ಕುಪಿತಗೊಂಡ ಮಹೇಶ್, ಮೊನ್ನೆ ರಾತ್ರೋ ರಾತ್ರಿ ಕಾರಲ್ಲಿ ಬಂದಿದ್ದ ಮಹೇಶ್ ಹಾಗೂ ಮಲ್ಲೇಶ್ ವಾಮಾಚಾರ ಮಾಡಿ ಎಸ್ಕೇಪ್ ಆಗಿದ್ರು. ಸಿಸಿ ಕ್ಯಾಮರಾದಲ್ಲಿ ಇಬ್ಬರ ಕುಕೃತ್ಯ ಕೂಡಾ ಸೆರೆಯಾಗಿತ್ತು. ಇವ್ರಿಬ್ಬರ ವಿರುದ್ಧ ಕೇಸ್ ದಾಖಲಾಗ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಇಬ್ಬರನ್ನೂ ಜೈಲಿಗಟ್ಟಿದ್ದಾರೆ.

ಮಲೆನಾಡಿನಲ್ಲಿ ಅರಣ್ಯ ಭೂಮಿ, ಕಂದಾಯ ಭೂಮಿಯನ್ನು ಒತ್ತುವರಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ನಡುವೆ ಚೋರಡಿಯಲ್ಲಿ ಸರ್ಕಾರಿ ಆಸ್ತಿ ಒತ್ತುವರಿ ಮಾಡಿ ಮನೆ ಕಟ್ಟುತ್ತಿರುವ ವ್ಯಕ್ತಿಗಳ ವಿರುದ್ಧ ಗ್ರಾಮ ಪಂಚಾಯಿತಿ ಸಮರ ಸಾರಿದೆ. ಇದೀಗ ಆಸ್ತಿ ಉಳಿಸಿಕೊಳ್ಳೋದಕ್ಕೆ ಏನೋ ಮಾಡಲು ಹೋಗಿ ಇಬ್ಬರು ಜೈಲುಪಾಲಾಗಿದ್ದಾರೆ.

ಇದನ್ನೂ ಓದಿ:  ಶಿವಮೊಗ್ಗ: ಗ್ರಾಮ ಪಂಚಾಯತ್ ಆವರಣದಲ್ಲಿ ವಾಮಾಚಾರ ಆರೋಪ; ಪೊಲೀಸರಿಂದ ವಿಚಾರಣೆ

ಬೀದರ್: ಸಿಖ್ಖರ ಪವಿತ್ರ ಸ್ಥಳ ಗುರುನಾನಕ್​ ಝಿರಾ; ಧಾರ್ಮಿಕತೆ ಮತ್ತು ಪರಂಪರೆಗೆ ಹೆಸರುವಾಸಿಯಾದ ದೇವಾಲಯ

Published On - 7:59 am, Mon, 13 September 21

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ