ಡಿಕೆಶಿಗೆ ನಿಂಬೆಹಣ್ಣು ನಿವಾಳಿಸಿ ಆಶೀರ್ವದಿಸಿದ ಮಂಗಳಮುಖಿಯರು! ಆಮೇಲೆ ಏನಾಯ್ತು?

ಬೆಂಗಳೂರು:ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ವಿಶೇಷ ಪೂಜಾ ಸಮಾರಂಭದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪೇಚಿಗೆ ಸಿಲುಕುವಂಥ ಪ್ರಸಂಗವೊಂದು ನಡೆಯಿತು. ಇಂದು ಒಳ್ಳೆಯ ದಿನವೆಂದು ಕೆಪಿಸಿಸಿ ಕಚೇರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಹೋಮ ಹವನಗಳನ್ನು ಆಯೋಜಿಸಲಾಗಿತ್ತು. ಇದೇ ಸಮಯದಲ್ಲಿ ಪೂಜಾ ಸ್ಥಳಕ್ಕೆ ಬಂದ ಮಂಗಳಮುಖಿಯರ ಗುಂಪೊಂದು ಡಿ.ಕೆ ಶಿವಕುಮಾರ್​ರನ್ನು ಹರಸಲು ಮುಂದಾದರು. ನಿಂಬೆಹಣ್ಣೊಂದನ್ನು ಅಧ್ಯಕ್ಷರಿಗೆ ನಿವಾಳಿಸಿ, ದೃಷ್ಟಿ ತೆಗೆದು, ಅವರಿಗೆ ಹರಿಸಿದರು. ಆಶೀರ್ವಾದ ಮಾಡಿದ ನಂತರ ಎಂದಿನಂತೆ ಕಾಣಿಕೆಯ ಡಿಮ್ಯಾಂಡನ್ನು​ ಶಿವಕುಮಾರ್​ ಮುಂದಿಟ್ಟರು. ಶಿವಕುಮಾರ್​ ಕೂಡ ತಮ್ಮ […]

ಡಿಕೆಶಿಗೆ ನಿಂಬೆಹಣ್ಣು ನಿವಾಳಿಸಿ ಆಶೀರ್ವದಿಸಿದ ಮಂಗಳಮುಖಿಯರು! ಆಮೇಲೆ ಏನಾಯ್ತು?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 15, 2020 | 10:54 AM

ಬೆಂಗಳೂರು:ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ವಿಶೇಷ ಪೂಜಾ ಸಮಾರಂಭದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪೇಚಿಗೆ ಸಿಲುಕುವಂಥ ಪ್ರಸಂಗವೊಂದು ನಡೆಯಿತು. ಇಂದು ಒಳ್ಳೆಯ ದಿನವೆಂದು ಕೆಪಿಸಿಸಿ ಕಚೇರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಹೋಮ ಹವನಗಳನ್ನು ಆಯೋಜಿಸಲಾಗಿತ್ತು. ಇದೇ ಸಮಯದಲ್ಲಿ ಪೂಜಾ ಸ್ಥಳಕ್ಕೆ ಬಂದ ಮಂಗಳಮುಖಿಯರ ಗುಂಪೊಂದು ಡಿ.ಕೆ ಶಿವಕುಮಾರ್​ರನ್ನು ಹರಸಲು ಮುಂದಾದರು. ನಿಂಬೆಹಣ್ಣೊಂದನ್ನು ಅಧ್ಯಕ್ಷರಿಗೆ ನಿವಾಳಿಸಿ, ದೃಷ್ಟಿ ತೆಗೆದು, ಅವರಿಗೆ ಹರಿಸಿದರು. ಆಶೀರ್ವಾದ ಮಾಡಿದ ನಂತರ ಎಂದಿನಂತೆ ಕಾಣಿಕೆಯ ಡಿಮ್ಯಾಂಡನ್ನು​ ಶಿವಕುಮಾರ್​ ಮುಂದಿಟ್ಟರು. ಶಿವಕುಮಾರ್​ ಕೂಡ ತಮ್ಮ ಜೇಬಿನಿಂದ ಐನೂರಿನ ಎರಡು ನೋಟುಗಳನ್ನು ಹೊರತೆಗೆದು ಅವರಿಗೆ ನೀಡಲು ಮುಂದಾದರು.

ಬರೀ ಇಷ್ಟೇನಾ! ಎಂದು ಮುಖ ನೋಡಿ ಸುಮ್ಮನಾದ ಮಂಗಳಮುಖಿಯರು! ಇದನ್ನು ಕಂಡ ಮಂಗಳಮುಖಿಯರು ಒಂದು ಕ್ಷಣ ಸುಮ್ಮನಾದರು. ಕೆಪಿಸಿಸಿ ಅಧ್ಯಕ್ಷರ ಕೈಯಲ್ಲಿ, ಅದೂ ಡಿಕೆಶಿ ಅವರ ಬಳಿ ಕೇವಲ 1,000 ರೂಪಾಯಿ ಕಂಡು ಅವರಿಗೆ ಕೊಂಚ ನಿರಾಸೆಯೂ ಆಯಿತು. ನೋಟುಗಳನ್ನು ಸ್ವೀಕರಿಸದೆ ಹಾಗೆಯೇ ಒಮ್ಮೆ ಅವರನ್ನು ನೋಡಿದ ಮಂಗಳಮುಖಿಯೊಬ್ಬರು ಅವರಿಗೆ ನಮಸ್ಕರಿಸಿ ಕೈಯಲ್ಲಿ ಒಂದು ನಾಣ್ಯವಿಡಲು ಮುಂದಾದರು.

ಮಂಗಳಮುಖಿಯರ ವರ್ತನೆಗೆ ತಬ್ಬಿಬ್ಬಾದ ಕನಕಪುರ ಬಂಡೆ! ಡಿ.ಕೆ. ಶಿವಕುಮಾರ್‌ರಿಗೂ ಸ್ವಲ್ಪ ಹೊತ್ತು ಯಾಕೆ ಇವರು ನಾನು ಕೊಟ್ಟ ದುಡ್ಡು ತಗೊಳ್ತಿಲ್ಲ ಅಂತಾ ಅರ್ಥ ಅಗ್ಲಿಲ್ಲ! ಆಮೇಲೇ ಅವರಿಗೆ ಹೊಳೆದಿದ್ದು. ಕೊಡುತ್ತಿದ್ದ ಹಣ ಅವರ ಆರ್ಥಿಕ ಘನತೆಗೆ ಸರಿ ಹೊಂದುವಂಥದಲ್ಲ ಅಂತಾ. ಕೂಡಲೇ, ತಮ್ಮ ರೇಷ್ಮೆ ಜುಬ್ಬಾದ ಎಡ ಜೆಬಿಗೆ ಕೈಹಾಕಿ ಐನೂರು ಐನೂರು ನೋಟಿನ ಕಂತೆಯನ್ನೇ ಹೊರತೆಗೆದರು. ಕಂತೆಯಿಂದ ಐದಾರು ನೋಟುಗಳನ್ನು ಎಳೆದು ಅವರಿಗೆ ಕೊಡಲು ಮುಂದಾದರು. ತಕ್ಷಣ ಖುಷಿಯಾದ ಮಂಗಳಮುಖಿಯರು ತಮ್ಮ ಸೆರಗನ್ನು ಚಾಚಿ, ಕಾಣಿಕೆ ಸ್ವೀಕರಿಸಿ, ಅಲ್ಲಿಂದ ಹೊರಟರು!

ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡ‌ಬೇಕಿದ್ದ ಡಿ.ಕೆ ಶಿವಕುಮಾರ್ ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡುವ ಸನ್ನಿವೇಶ ಎದುರಾಗಿದ್ದು ಎಲ್ಲರಿಗೂ ಗೊತ್ತೇಯಿದೆ. ಆದರೆ ಭಾನುವಾರ ಒಳ್ಳೇ ಮುಹೂರ್ತವಿದ್ದ ಕಾರಣ, ಅದನ್ನು ವ್ಯರ್ಥವಾಗದಂತೆ ಕೆಪಿಸಿಸಿ ಕಟ್ಟಡದಲ್ಲಿ ವಿಶೇಷ ಹೋಮ ಹವನ ಆಯೋಜಿಸಿದ್ದರು. ಬೆಳಿಗ್ಗೆ 5 ಗಂಟೆಗೆ ಆರಂಭವಾದ ಪೂಜೆ 11.30ಕ್ಕೆ ಪೂರ್ಣಾಹುತಿಯ ಮೂಲಕ ಮುಕ್ತಾಯವಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಕೂಡ ಪೂಜೆಯಲ್ಲಿ ಪಾಲ್ಗೊಂಡರು.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೇವಲ ಹಿರಿಯ ನಾಯಕರನ್ನು ಮಾತ್ರ ಪೂಜೆಗೆ ಆಹ್ವಾನಿಸಲಾಗಿತ್ತು.

Published On - 12:46 pm, Sun, 14 June 20

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ