ಮೃತ ವ್ಯಕ್ತಿ ಹೆಸರಲ್ಲಿ ಅಂಗವಿಕಲ, ವಯಸ್ಸಿನ ದೃಢೀಕರಣ ಪತ್ರ ವಿತರಣೆ: 2 ವೈದ್ಯರ ಸಸ್ಪೆಂಡ್
2022ರಲ್ಲಿ ಮೃತಪಟ್ಟಿದ್ದ ಹನುಮಂತರಾಯಪ್ಪ ಹೆಸರಲ್ಲಿ ದೃಢೀಕರಣ ಪತ್ರ, ಅಂಗವಿಕಲ ಪ್ರಮಾಣಪತ್ರ ಮತ್ತು ವಯಸ್ಸಿನ ದೃಢೀಕರಣ ಪತ್ರ ವಿತರಣೆ ಮಾಡಿದ ತುಮಕೂರು ಜಿಲ್ಲೆಯ ಮಧುಗಿರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಸಸ್ಪೆಂಡ್ ಮಾಡಲಾಗಿದೆ. ಆರೋಪ ಸಾಬೀತು ಹಿನ್ನೆಲೆ ಇಬ್ಬರು ವೈದ್ಯರ ಅಮಾನತು ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಚಂದ್ರಕಾಂತ್ರಿಂದ ಆದೇಶ ಹೊರಡಿಸಲಾಗಿದೆ.
ತುಮಕೂರು, ಡಿಸೆಂಬರ್ 08: ಮೃತ ವ್ಯಕ್ತಿ ಹೆಸರಿನಲ್ಲಿ ಅಂಗವಿಕಲ, ವಯಸ್ಸಿನ ದೃಢೀಕರಣ ಪತ್ರ ವಿತರಣೆ ಮಾಡಿದ ಜಿಲ್ಲೆಯ ಮಧುಗಿರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಸಸ್ಪೆಂಡ್ (suspended) ಮಾಡಲಾಗಿದೆ. ಡಾ.ಮಹೇಶ್ ಸಿಂಗ್ ಮತ್ತು ಡಾ.ಪುರುಷೋತ್ತಮ್ ಸಸ್ಪೆಂಡ್ ಆದ ವೈದ್ಯರು. ಘಟನೆ ಸಂಬಂಧ ಆರೋಗ್ಯ ಇಲಾಖೆ RTI ಕಾರ್ಯಕರ್ತರು ದೂರು ನೀಡಿದ್ದು, ಆರೋಪ ಸಾಬೀತು ಹಿನ್ನೆಲೆ ಇಬ್ಬರು ವೈದ್ಯರ ಅಮಾನತು ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಚಂದ್ರಕಾಂತ್ರಿಂದ ಆದೇಶ ಹೊರಡಿಸಲಾಗಿದೆ.
2022ರಲ್ಲಿ ಮೃತಪಟ್ಟಿದ್ದ ಹನುಮಂತರಾಯಪ್ಪ ಹೆಸರಲ್ಲಿ ದೃಢೀಕರಣ ಪತ್ರ, ಅಂಗವಿಕಲ ಪ್ರಮಾಣಪತ್ರ ಮತ್ತು ವಯಸ್ಸಿನ ದೃಢೀಕರಣ ಪತ್ರವನ್ನು ವೈದ್ಯರು ನೀಡಿದ್ದರು.
ಇದನ್ನೂ ಓದಿ: ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ PDO ವೆಂಕಟೇಶ ಅಮಾನತು-ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಆದೇಶ
ಆರೋಗ್ಯ ಇಲಾಖೆಯ ಮುಖ್ಯ ಜಾಗೃತಾಧಿಕಾರಿಗಳಿಂದ ತನಿಖೆ ಮಾಡಿದ್ದು, ಇಬ್ಬರು ವೈದ್ಯರು ತಪ್ಪಿತಸ್ಥರು ಎಂದು ಮೇಲ್ನೋಟಕ್ಕೆ ದೃಢವಾಗಿದೆ. ಇಲಾಖಾ ತನಿಖೆ ಬಾಕಿ ಇರಿಸಿ ಇಬ್ಬರನ್ನೂ ಆರೋಗ್ಯ ಇಲಾಖೆ ಅಮಾನತು ಮಾಡಿದೆ.
ಇದನ್ನೂ ಓದಿ: ಗದಗ: ಲವ್ ಪ್ರಕರಣದಲ್ಲಿ ನಿರ್ಲಕ್ಷ್ಯ, ಪಿಎಸ್ಐ ಅಮಾನತು
ಕಳೆದ ಕೆಲ ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಸವಣೂರಿಗೆ ಡಾ.ಮಹೇಶ್ ಸಿಂಗ್, ಕೋಲಾರ ಜಿಲ್ಲೆಯ ಕೆ.ಜಿ.ಎಫ್ಗೆ ಡಾ.ಪುರುಷೋತ್ತಮ್ ಅವರನ್ನು ಆರೋಗ್ಯ ಇಲಾಖೆ ವರ್ಗಾವಣೆ ಮಾಡಿತ್ತು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರ್ತವ್ಯ ಲೋಪ: ಎಂಟು ಅಧಿಕಾರಿಗಳು ಅಮಾನತು
ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ ಎಂಟು ಜನ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳ ಸಭೆಗೆ ಗೈರು ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತು ಮಾಡಲಾಗಿತ್ತು.
ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು
ಚಿಕ್ಕಮಗಳೂರು: ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಚಂದ್ರಶೇಖರ್ ಬಣಕಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಎಸ್ಪಿ ವಿಕ್ರಂ ಅಮಾಟೆ ಆದೇಶ ಹೊರಡಿಸಿದ್ದರು. ಸದ್ಯ ಚಂದ್ರಶೇಖರ್ ಸೇರಿದಂತೆ ದಾಳಿ ವೇಳೆ ಸಿಕ್ಕಿಬಿದ್ದ 13 ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.