AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ಕಾಮನ್‌ವೆಲ್ತ್‌ ನಲ್ಲಿ ಕಂಚು ಗೆದ್ದ ಕನ್ನಡತಿಗೆ ಸರ್ಕಾರಿ ಹುದ್ದೆ, 15 ಲಕ್ಷ ರೂ. ಬಹುಮಾನ

Karnataka News Today Live Updates: ದರ್ಶನ್ ಪ್ರಕರಣದಲ್ಲಿ A-14 ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿ ಮಹತ್ವದ ತಿರುವು ನೀಡಿದ್ದಾರೆ. ಹೊಸಕೋಟೆಯಲ್ಲಿ ಬಡ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ಲೋನ್ ವಂಚನೆ ನಡೆದಿದೆ. ಗದಗದಲ್ಲಿ ಉಪಲೋಕಾಯುಕ್ತರು ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಯಚೂರು ಜೈಲಿನಲ್ಲಿ ಕೈದಿ ಮರಣ ಮತ್ತು ಬೀದರ್ ರಸ್ತೆ ಕಾಮಗಾರಿ ಸ್ಥಗಿತದಂತಹ ಪ್ರಮುಖ ಸುದ್ದಿಗಳು ಇಲ್ಲಿದೆ ನೋಡಿ

TV9 Kannada News Live: ಕಾಮನ್‌ವೆಲ್ತ್‌ ನಲ್ಲಿ ಕಂಚು ಗೆದ್ದ ಕನ್ನಡತಿಗೆ ಸರ್ಕಾರಿ ಹುದ್ದೆ, 15 ಲಕ್ಷ ರೂ. ಬಹುಮಾನ
Shilpa K
ಅಕ್ಷಯ್​ ಪಲ್ಲಮಜಲು​​
| Edited By: |

Updated on:Aug 06, 2026 | 10:35 PM

Share

Breaking News Today Live Updates in Kannada: ನಟ ದರ್ಶನ್ ಅಂಡ್ ಗ್ಯಾಂಗ್ ಒಳಗೊಂಡಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ 14ನೇ ಆರೋಪಿ (A-14) ಪ್ರದೋಷ್, ಪ್ರಕರಣದಲ್ಲಿ ಸತ್ಯ ಹೇಳುವುದಾಗಿ ತಿಳಿಸಿ ತಮ್ಮನ್ನು ‘ಮಾಫಿ ಸಾಕ್ಷಿ’ (Approver) ಯನ್ನಾಗಿ ಪರಿಗಣಿಸಿ ಕ್ಷಮೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ರಾಯಚೂರು ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಗದಗ ನಗರದ ಬಳಗಾನೂರು ರಸ್ತೆಯಲ್ಲಿರುವ ಕಸ ನಿರ್ವಹಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಸಹಾಯ ಸಂಘದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಬಡ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಹೊಸಕೋಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಂದಿದೆ. ಬೀದರ್ ತಾಲೂಕಿನ ಮಮದಾಪುರದಿಂದ ಮರಕಲ್‌ವರೆಗಿನ 5 ಕಿಲೋಮೀಟರ್ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಗುತ್ತಿಗೆದಾರ ಪಲಾಯನ ಮಾಡಿದ್ದು, ಸಾರ್ವಜನಿಕರು ಹಾಗೂ ರೈತರು ನಿತ್ಯ ಪರದಾಡುವಂತಾಗಿದೆ. ಸ್ವಸಹಾಯ ಸಂಘದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಬಡ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಹೊಸಕೋಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಂದಿದೆ. ಗದಗ ನಗರದ ಬಳಗಾನೂರು ರಸ್ತೆಯಲ್ಲಿರುವ ಕಸ ನಿರ್ವಹಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

LIVE NEWS & UPDATES

The liveblog has ended.
  • 06 Aug 2026 08:14 PM (IST)

    ಕಾಮನ್‌ವೆಲ್ತ್‌ ನಲ್ಲಿ ಕಂಚು ಗೆದ್ದ ಕನ್ನಡತಿಗೆ ಸರ್ಕಾರಿ ಹುದ್ದೆ

    ಕರ್ನಾಟಕದ ಹೆಮ್ಮೆಯ ಪ್ಯಾರಾ ಅಥ್ಲೀಟ್‌ ಕೆ.ಎಸ್‌.ಶಿಲ್ಪಾ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಕೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದು, ಇಂದು (ಆಗಸ್ಟ್ 06) ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಭರ್ಜರಿ ಸ್ವಾಗತಕೋರಲಾಗಿದೆ. ಇನ್ನು ಇವರಿಗೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಸಹ ಅಭಿನಂದನೆಗಳ್ನು ತಿಳಿಸಿದ್ದಾರೆ. ಜೊತೆಗೆ ಮೈಸೂರು ಮೂಲದ ಶಿಲ್ಪಾ ಅವರಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಸರ್ಕಾರಿ ಗ್ರೂಪ್ ʼಬಿʼ ಹುದ್ದೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

  • 06 Aug 2026 06:59 PM (IST)

    ಮೆಟ್ರೋ ಹಸಿರು ಮಾರ್ಗದ ಸೇವೆಯಲ್ಲಿ ನಾಳೆ ತಾತ್ಕಾಲಿಕ ಬದಲಾವಣೆ

    ಬೆಂಗಳೂರು ನಮ್ಮ ಮೆಟ್ರೋ ಹಸಿರು ಮಾರ್ಗದ ಸೇವೆಯಲ್ಲಿ ನಾಳೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ನೂತನ ರೈಲುಗಳ ಸೇರ್ಪಡೆ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಪಾಸಣೆಗೆ ಪೂರ್ವಭಾವಿಯಾಗಿ BMRCL, CMRS ಅಧಿಕಾರಿಗಳ ತಂಡದಿಂದ ನಾಳೆ ಪ್ರಾಯೋಗಿಕ ಸಂಚಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಹಸಿರು ಮಾರ್ಗದ ಸೇವೆಯಲ್ಲಿ ಬದಲಾವಣೆಯಾಗಲಿದೆ. ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ರಾತ್ರಿ 10:30 ರಿಂದ 11:00 ಗಂಟೆಯವರೆಗೆ, ಪ್ರಯಾಣಿಕ ಸೇವೆ ಮುಕ್ತಾಯಗೊಳ್ಳುವವರೆಗೆ, ನಿಯಮಿತ 10 ನಿಮಿಷಗಳ ಬದಲಾಗಿ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲು ಸೇವೆಗಳು ವೇಳಾಪಟ್ಟಿಯಂತೆ ಮುಂದುವರಿಯಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

  • 06 Aug 2026 05:03 PM (IST)

    ರೇಣುಕಾಸ್ವಾಮಿ ಕೊಲೆ ಕೇಸ್, ಆದೇಶ ಕಾಯ್ದಿರಿಸಿದ ಕೋರ್ಟ್​​

    ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದು, ಎ14 ಪ್ರದೋಷ್ ಅರ್ಜಿಗೆ ದರ್ಶನ್ ವಕೀಲರ ಆಕ್ಷೇಪ ಹಿನ್ನೆಲೆಯಲ್ಲಿ ಸಹ ಆರೋಪಿಗಳಿಗೆ ಆಕ್ಷೇಪಣೆಗೆ ಅವಕಾಶ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಆಗಸ್ಟ್ 10ಕ್ಕೆ ಆದೇಶ ಕಾಯ್ದಿರಿಸಿದೆ

  • 06 Aug 2026 03:46 PM (IST)

    ಕುತೂಹಲಕ್ಕೆ‌ ಕಾರಣವಾದ ಸಿ ಎಂ ಇಬ್ರಾಹಿಂ-ಸಿದ್ದರಾಮಯ್ಯ ಭೇಟಿ

    ಸಚಿವ ಸಂಪುಟ ವಿಸ್ತರಣೆ ಬಳಿಕ ಕರ್ನಾಟಕ ಕಾಂಗ್ರೆಸ್​​​​​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಸಹ ತಾವು ಹೇಳಿದವರಿಗೆ ಸಚಿವ ನೀಡಿಲ್ಲ ಎಂದು ಬೇಸರಲ್ಲಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಇನ್ನೊಂದೆಡೆ ಹಳೇ ದೋಸ್ತ್ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಹೌದು.. ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.

  • 06 Aug 2026 03:37 PM (IST)

    ಚಿನ್ನದಂಗಡಿ ಮಾಲೀಕನ ಮೇಲೆ ಫೈರಿಂಗ್

    ಗ್ರಾಹಕರ ಸೋಗಿನಲ್ಲಿ ಬಂದು ದುಷ್ಕರ್ಮಿಗಳು ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್​ಪೇಟೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಡಾಬಸ್​ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಗೆ ಬಂದು ಚಿನ್ನದಂಗಡಿ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಚಿನ್ನದಂಗಡಿ ಮಾಲೀಕ ವಿರೋಧ ವ್ಯಕ್ತಪಡಿಸಿದಾಗ ಫೈರಿಂಗ್ ಮಾಡಿದ್ದಾರೆ. ಬುಲೆರೋ ಕಾರಿನಲ್ಲಿ ಬಂದಿದ್ದ ಐದಾರು ಜನರಿಂದ ಕೃತ್ಯ ಎಸಗಿದ್ದಾರೆ. ಚಿನ್ನದಂಗಡಿ ಮಾಲೀಕ ಪುನ್ನಾರಾಮ್​ಗೆ ಗಾಯವಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಚಿನ್ನದಂಗಡಿಯಲ್ಲಿ 2 ಜೀವಂತ ಗುಂಡುಗಳು ಪತ್ತೆಯಾಗಿವೆ.

  • 06 Aug 2026 03:25 PM (IST)

    ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾನದಿ

    ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆ ಹಿನ್ನಲೆ ಭೀಮಾನದಿಗೆ ಅಪಾರ ಪ್ರಮಾಣದ ‌ನೀರು ಹರಿದು ಬರುತ್ತಿದೆ.ಹೀಗಾಗಿ ಭೀಮಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗುರುಸಣಗಿ ಬ್ಯಾರೇಜ್ ನಿಂದ ನದಿಗೆ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ನದಿ ತೀರದಲ್ಲಿ ಅಕ್ಷರಶ ಪ್ರವಾಹದ ಆತಂಕ ಸೃಷ್ಟಿಯಾಗಿದ್ದು, ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ

  • 06 Aug 2026 03:20 PM (IST)

    ತರುಣ್ ತೇಜ್​ಪಾಲ್​ಗೆ 10 ವರ್ಷ ಜೈಲು ಶಿಕ್ಷೆ

    ಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್​ಪಾಲ್​ಗೆ ಕೋರ್ಟ್​​ ಜೈಲು ಶಿಕ್ಷೆ ವಿಧಿಸಿದೆ. ಸೆಷನ್ಸ್ ಕೋರ್ಟ್​​ ತೀರ್ಪನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್, ತರುಣ್ ತೇಜ್​ಪಾಲ್​ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

  • 06 Aug 2026 03:16 PM (IST)

    ಬೆಂಗಳೂರಿಗೆ ಆಗಮಿಸಿದ ಕಂಚಿನ ಪದಕ ವಿಜೇತೆ ಶಿಲ್ಪಾ

    ಕಾಮನ್‌ವೆಲ್ತ್ ಗೇಮ್ಸ್​​​​ ನಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿದ ಶಿಲ್ಪಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕುಟುಂಬಸ್ಥರು, ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಇನ್ನು ಇದೇ ವೇಳೆ ಜನರು, ಶಿಲ್ಪಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ನಿವಾಸಿಯಾಗಿರುವ ಪ್ಯಾರಾ ಅಥ್ಲೀಟ್​ ಶಿಲ್ಪಾ ಅವರು ಮಹಿಳೆಯರ Shot Put F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

  • 06 Aug 2026 02:39 PM (IST)

    ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಅಧಿಕೃತ ಚಾಲನೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

    ಸಿಲಿಕಾನ್ ಸಿಟಿಯ ಹೆಮ್ಮೆಯ ಲಾಲ್‌ಬಾಗ್ ಸಸ್ಯತೋಟದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show 2026) ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ಇಂದಿನಿಂದ (ಆಗಸ್ಟ್ 6) ಪ್ರಾರಂಭವಾಗಿ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ ನಡೆಯಲಿರುವ ಈ ಪ್ರಸಿದ್ಧ ಹೂಗಳ ಹಬ್ಬವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ (MLC) ಟಿ.ಎ. ಶರವಣ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ತೋಟಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಸಾಥ್ ನೀಡಿದರು.

  • 06 Aug 2026 02:03 PM (IST)

    KSRTC ಬಸ್-ಬೈಕ್ ಭೀಕರ ಡಿಕ್ಕಿ; 4 ವರ್ಷದ ಮಗು ಸೇರಿ ಮೂವರ ದಾರುಣ ಸಾವು

    ಸರ್ಕಾರಿ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಪುಟ್ಟ ಮಗು ಸೇರಿದಂತೆ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ದುರ್ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ನಡೆದಿದೆ.

  • 06 Aug 2026 01:43 PM (IST)

    ಬೆಂಗಳೂರು ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಅಧಿಕೃತ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್

    ಸಿಲಿಕಾನ್ ಸಿಟಿಯ ಹೆಮ್ಮೆಯ ಲಾಲ್‌ಬಾಗ್ ಸಸ್ಯತೋಟದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show 2026) ಇಂದು ಅಧಿಕೃತ ಚಾಲನೆ ಸಿಕ್ಕಿದೆ.

  • 06 Aug 2026 01:12 PM (IST)

    ನೆಲಮಂಗಲ: ಕುಡಿತದ ಚಟ ಬಿಡಿಸಲು ರಿಹ್ಯಾಬ್‌ಗೆ ಸೇರಿಸುವ ಮುನ್ನ ಎಚ್ಚರ

    ಕುಡಿತದ ದಾಸರಾದವರನ್ನು ಸನ್ಮಾರ್ಗಕ್ಕೆ ತರಲೆಂದು ಪುನರ್ವಸತಿ ಕೇಂದ್ರಗಳಿಗೆ (Rehab Centers) ಸೇರಿಸುವ ಸಾರ್ವಜನಿಕರಿಗೆ ಬೆಚ್ಚಿಬೀಳಿಸುವ ಘಟನೆಯೊಂದು ಬೆಂಗಳೂರು ಉತ್ತರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕುಡಿತದ ಚಟ ಬಿಡಿಸಲು ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ ಯುವಕನ ಮೇಲೆ ಸಿಬ್ಬಂದಿಗಳು ರೌಡಿಸಂ ನಡೆಸಿ, ರಕ್ತ ಹೆಪ್ಪುಗಟ್ಟುವಂತೆ ನರಕಯಾತನೆ ನೀಡಿದ್ದಾರೆ.

  • 06 Aug 2026 12:24 PM (IST)

    ವಿಜಯನಗರದಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಚಾಲಕನಿಗೆ ಗಂಭೀರ ಗಾಯ

    ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಭೀಕರವಾಗಿ ಡಿಕ್ಕ ಹೊಡೆದ ಪರಿಣಾಮ ಚಾಲಕ ಕಾರಿನಲ್ಲೇ ಸಿಲುಕಿ ತೀವ್ರವಾಗಿ ನರಳಾಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಕ್ರಾಸ್ ಬಳಿ ನಡೆದಿದೆ.

  • 06 Aug 2026 11:05 AM (IST)

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 4 ಲಕ್ಷ ರೂ. ಇನಾಮು ಘೋಷಿತ ಮೋಸ್ಟ್ ವಾಂಟೆಡ್ ಆರೋಪಿ ಕೊಚ್ಚಿಯಲ್ಲಿ ಎನ್‌ಐಎ ಖೆಡ್ಡಾಗೆ

    ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಫಲ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

  • 06 Aug 2026 10:43 AM (IST)

    ನನಗೆ ಸಚಿವ ಸ್ಥಾನ ಸಿಗದಂತೆ ನಮ್ಮ ಜಿಲ್ಲೆಯವರೇ ಅಡ್ಡಿಪಡಿಸಿದ್ರು

    ರಾಜ್ಯ ಸಚಿವ ಸಂಪುಟ ಸೇರ್ಪಡೆ ಹಾಗೂ ಸಚಿವ ಸ್ಥಾನ ವಂಚಿತ ವಿಚಾರಕ್ಕೆ ಸಂಬಂಧಿಸಿದಂತೆ ಆಳಂದ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ಸ್ವಪಕ್ಷೀಯರ ವಿರುದ್ಧವೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನನಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ನಮ್ಮ ಸ್ವಂತ ಜಿಲ್ಲೆಯ ನಾಯಕರೇ ಅಡ್ಡಿಪಡಿಸಿದ್ದಾರೆ ಎಂಬ ಬಾಂಬ್ ಸಿಡಿಸಿದ್ದಾರೆ.

  • 06 Aug 2026 09:44 AM (IST)

    ಕಲಬುರಗಿಯಲ್ಲಿ ಭೀಕರ ಬರ: ರೈತರ ಖಾತೆಗೆ 10, 20 ರೂಪಾಯಿ ಬೆಳೆವಿಮೆ ಜಮಾ

    ಭೀಕರ ಬರದ ಬೇಗೆಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯ ಅನ್ನದಾತರಿಗೆ ಬೆಳೆವಿಮೆ ಕಂಪನಿಗಳು ಹಾಗೂ ಅಧಿಕಾರಿಗಳು ಗಾಯದ ಮೇಲೆ ಬರೆ ಎಳೆದಿದ್ದಾರೆ. ಮಳೆಯಿಲ್ಲದೆ ಬೆಳೆ ಸಂಪೂರ್ಣ ನಾಶವಾಗಿದ್ದರೂ, ವಿಮೆ ಪಾವತಿಸಿದ್ದ ರೈತರ ಖಾತೆಗೆ ಕೇವಲ 10, 20 ಹಾಗೂ 50-60 ರೂಪಾಯಿಗಳ ಬಿಡಿಗಾಸಿನ ಪರಿಹಾರ ಜಮಾ ಮಾಡುವ ಮೂಲಕ ತೀವ್ರ ಅನ್ಯಾಯ ಎಸಗಲಾಗಿದೆ.

  • 06 Aug 2026 09:24 AM (IST)

    ಗದಗ ಕಸ ನಿರ್ವಹಣಾ ಘಟಕಕ್ಕೆ ಉಪಲೋಕಾಯುಕ್ತರ ದಿಢೀರ್ ಭೇಟಿ

    ಗದಗ ನಗರದ ಬಳಗಾನೂರು ರಸ್ತೆಯಲ್ಲಿರುವ ಕಸ ನಿರ್ವಹಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟಕದ ದುಸ್ಥಿತಿ ಕಂಡು ಕೆಂಡಾಮಂಡಲವಾದ ಉಪಲೋಕಾಯುಕ್ತರು, “13 ವರ್ಷಗಳಿಂದ ಇದೇ ಅವ್ಯವಸ್ಥೆ ಇದೆ ಅಂದರೆ ನೀವೇನು ಮಾಡುತ್ತಿದ್ದೀರಿ? ಸರ್ಕಾರದ ಬಳಿ ಹಣ ಇಲ್ಲವೆಂದರೆ ಹೇಳಿ, ನಾನೇ ಹಣ ಮಂಜೂರು ಮಾಡಿಸಿಕೊಡುತ್ತೇನೆ” ಎಂದು ಆಕ್ರೋಶ ಹೊರಹಾಕಿದರು.

  • 06 Aug 2026 09:23 AM (IST)

    ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಸಾವು: ಕುಟುಂಬಸ್ಥರಿಂದ ಅನುಮಾನ

    ರಾಯಚೂರು ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ದೇವದುರ್ಗ ತಾಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42). ಕೊಲೆ ಪ್ರಕರಣವೊಂದರಲ್ಲಿ ಕಳೆದ 2 ತಿಂಗಳ ಹಿಂದೆ ಜೈಲು ಸೇರಿದ್ದ ಭೀಮರಾಯಗೆ ನಿನ್ನೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹಾಗೂ ಜೈಲು ಸಿಬ್ಬಂದಿ ತಿಳಿಸಿದ್ದಾರೆ.

  • 06 Aug 2026 09:23 AM (IST)

    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು ಎ-14 ಆರೋಪಿ ಪ್ರದೋಷ್ ಅರ್ಜಿ

    ನಟ ದರ್ಶನ್ ಅಂಡ್ ಗ್ಯಾಂಗ್ ಒಳಗೊಂಡಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿ (A-14) ಪ್ರದೋಷ್, ಪ್ರಕರಣದಲ್ಲಿ ಸತ್ಯ ಹೇಳುವುದಾಗಿ ತಿಳಿಸಿ ತಮ್ಮನ್ನು ‘ಮಾಫಿ ಸಾಕ್ಷಿ’ (Approver) ಯನ್ನಾಗಿ ಪರಿಗಣಿಸಿ ಕ್ಷಮೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ (CCH) ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಿದ್ದು, ನಟ ದರ್ಶನ್ ಇರುವ ಜೈಲು ಕೊಠಡಿಯಿಂದ ಅಲ್ಲದೆ ಬೇರೆ ಪ್ರತ್ಯೇಕ ಜೈಲು ಕೊಠಡಿಯಿಂದ ತಮ್ಮನ್ನು ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಮನವಿ ಮಾಡಿದ್ದಾರೆ.

Published On - Aug 06,2026 9:20 AM

Follow Us
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?
ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ
ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ
ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!
ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!
ಈದ್ ಮಿಲಾದ್​ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ
ಈದ್ ಮಿಲಾದ್​ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ
ನಾಗೇಂದ್ರ ರಾಜೀನಾಮೆ ಕೊಟ್ರೆ ಬಿಜೆಪಿ ಪಾದಯಾತ್ರೆ ಮಾಡುತ್ತೋ ಇಲ್ವೋ?
ನಾಗೇಂದ್ರ ರಾಜೀನಾಮೆ ಕೊಟ್ರೆ ಬಿಜೆಪಿ ಪಾದಯಾತ್ರೆ ಮಾಡುತ್ತೋ ಇಲ್ವೋ?
ಅಮೆರಿಕದಲ್ಲಿ ಹೇಗಿದೆ ‘ಟಾಕ್ಸಿಕ್’ ಸಿನಿಮಾ ಅಬ್ಬರ: ವಿಡಿಯೋ ನೋಡಿ
ಅಮೆರಿಕದಲ್ಲಿ ಹೇಗಿದೆ ‘ಟಾಕ್ಸಿಕ್’ ಸಿನಿಮಾ ಅಬ್ಬರ: ವಿಡಿಯೋ ನೋಡಿ