ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದ ಕೆಎಸ್‌ಆರ್‌ಟಿಸಿ ಬಸ್ ಚಾಲಕ
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಬಸ್ ಚಲಾಯಿಸುತ್ತಿರುವಾಗ ಹೃದಯಾಘತ ಸಂಭವಿಸಿದೆ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಪಾರು ಮಾಡಿದ್ದಾರೆ.
ಕಾರವಾರ: ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕ ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಉತ್ತರಕನ್ನಡ (Uttar Kannada) ಜಿಲ್ಲೆ ಮುಂಡಗೋಡ (Mundgod) ತಾಲೂಕಿನ ಮೈನಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲ್ಲಪ್ಪ ಸೋಮಪ್ಪನವರ (56) ಬಸ್ಚಲಾಯಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಆಗ ಚಾಲಕ ಮಲ್ಲಪ್ಪ ಕೂಡಲೇ ಬಸ್ನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ತಕ್ಷಣ ಬಸ್ನಲ್ಲಿದ 38 ಪ್ರಯಾಣಿಕರು ಕೆಳಗಿಳಿದಿದ್ದಾರೆ.
ಇದನ್ನು ಓದಿ: ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ 2022 ಗೆದ್ದ 14 ವರ್ಷದ ಹರಿಣಿ ಲೋಗನ್
ನಂತರ ಪ್ರಯಾಣಿಕರು ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಾಲಕ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಸಾವನ್ನಪ್ಪಿದ್ದನು ಎಂದು ವೈದ್ಯರು ಹೇಳಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನು ಓದಿ: ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಕೆಟ್ಟು ನಿಂತ ಟ್ರ್ಯಾಲಿ; ರೈಡರ್ಗಳು ಕಂಗಾಲು
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಯಲ್ಲಾಪುರ ದಿಂದ ಮುಂಡಗೋಡಕ್ಕೆ ಬರುತ್ತಿದ್ದ ಬಸ್ ನ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜರುಗಿದೆ. ಮಲ್ಲಪ್ಪ ಸೋಮಪ್ಪನವರ (45) ಎಂಬವನೆ ಸಾವನ್ನಪ್ಪಿದ ಚಾಲಕನಾಗಿದ್ದು, ಯಲ್ಲಾಪುರ ದಿಂದ ಮುಂಡಗೋಡ ಬರುತ್ತಿದ್ದ ಬಸ್ ತಾಲೂಕಿನ ಮೈನಳ್ಳಿ ಸನಿಹ ಬರುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಬಸ್ ನ ವೇಗ ಕಡಿಮೆ ಮಾಡಿದ ಚಾಲಕ ಬಸ್ ನಿಲ್ಲಿಸುವಷ್ಟರಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಬಸ್ ನಲ್ಲಿರುವ ಪ್ರಯಾಣಿಕರೆಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಚಾಲಕ ಕಳೆದ 26 ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಬಹಳ ಪ್ರಮಾಣಿಕ ವ್ಯಕ್ತಿ ಎಂದು ತಿಳಿದು ಬಂದಿದೆ. ಇನ್ನೂ ಚಾಲಕ ಡಿಪೋದಲ್ಲಿ ತನ್ನ ಸಹದ್ಯೋಗಿಗಳೊಂದು ಅತ್ಯುತ್ತಮ ಬಾಂಧವ್ಯ ಹೊಂದಿದ್ದ.. ಸಹಹೃದಯಿ ವ್ಯಕ್ತಿಯಾಗಿದ್ದು ಎಲ್ಲರೊಂದು ಬೇರೆಯುತ್ತಿದ್ದ.. ಆದರೆ ದುರ್ದೈವ ವಶಾತ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ.
Published On - 5:48 pm, Fri, 3 June 22