ವಿಜಯಪುರ: ಬಸ್-ಕಾರ್ ಮುಖಾಮುಖಿ, ನಾಗಠಾಣ ಶಾಸಕರ ಸೋದರಳಿಯ ಸೇರಿ ನಾಲ್ವರು ಸಾವು
ಅಪಘಾತದಲ್ಲಿ ಮೃತಪಟ್ಟವರ ಪೈಕಿ ಒಬ್ಬರು ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ್ ಚೌವ್ಹಾಣ ಅಳಿಯ ವಿಜಯಕುಮಾರ್ ಕಾಶಿನಾಥ ದೊಡಮನಿ ಎಂದು ಗುರುತಿಸಲಾಗಿದೆ
ವಿಜಯಪುರ: ಸಾರಿಗೆ ನಿಗಮದ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರ ಪೈಕಿ ಒಬ್ಬರು ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ್ ಚೌವ್ಹಾಣ ಅಳಿಯ ವಿಜಯಕುಮಾರ್ ಕಾಶಿನಾಥ ದೊಡಮನಿ ಎಂದು ಗುರುತಿಸಲಾಗಿದೆ. ಇತರ ಮೂವರ ವಿಳಾಸ ಪತ್ತೆಗಾಗಿ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇವರು ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಮೂಲದವರು ಎನ್ನಲಾಗಿದೆ.
ಮೃತರನ್ನು ಶಾಸಕರ ಸಹೋದರಿ ಪುತ್ರ ವಿಜಯಕುಮಾರ್ ದೊಡ್ಡಮನಿ, ನಾಂದೇಡ್ ಮೂಲದ ಚಿದಾನಂದ ನಾಗೇಶ ಸೂರ್ಯವಂಶಿ, ಸೊಲ್ಲಾಪುರದ ಸೋಮನಾಥ ಕಾಳೆ, ಸಂದೀಪ್ ಪವಾರ್ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿ ತೆರಳುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಾರ್ಕೋನಹಳ್ಳಿ ಜಲಾಶಯದಲ್ಲಿ ನಾಲ್ವರು ನೀರುಪಾಲು ತುಮಕೂರು: ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಜಲಾಶಯದಲ್ಲಿ ಭಾನುವಾರ ನಾಲ್ವರು ನೀರುಪಾಪಾಗಿದ್ದಾರೆ. ಮಧ್ಯಾಹ್ನ ಇಬ್ಬರು ಮತ್ತು ಸಂಜೆ ಇನ್ನಿಬ್ಬರು ಯುವಕರು ನೀರುಪಾಲಾಗಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗಿರುವ ಯುಕವರನ್ನು ರಾಜು (20) ಮತ್ತು ಅಪ್ಪು (23) ಎಂದು ಗುರುತಿಸಲಾಗಿದೆ ಇವರಿಬ್ಬರೂ ಆಟವಾಡಲು ನೀರಿಗೆ ಇಳಿದಿದ್ದರು. ಮಧ್ಯಾಹ್ನ ಪರ್ವಿನಾ (17) ಹಾಗೂ ಸಾದಿಕಾ (22) ಕೊಚ್ಚಿಹೋಗಿದ್ದರು. ನೀರಿನ ರಭಸ ಹೆಚ್ಚಾಗಿ ಯುವತಿಯರು ಕೊಚ್ಚಿ ಹೋಗಿದ್ದರು. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಶವಗಳಿಗಾಗಿ ಹುಡುಕಾಟ ನಡೆಸಿದ್ದರು. ಅಮೃತೂರು ಪೊಲೀಸ್ ಠಾಣಾ ಘಟನೆ ನಡೆದಿದೆ.
ಗಜೇಂದ್ರಗಡ: ನಜ್ಮಾ ನಜೀರ್ ಭಾಷಣಕ್ಕೆ ವಿರೋಧ ಸಿಎಎ ಕಾಯ್ದೆ ವಿರೋಧಿ ಹೋರಾಟಗಾರ್ತಿ ನಜ್ಮಾ ನಜೀರ್ ಭೇಟಿಯ ಹಿನ್ನೆಲೆಯಲ್ಲಿ ಗಜೇಂದ್ರಗಡ ಸರ್ಕಲ್ನಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಗಜೇಂದ್ರಗಡ ಪಟ್ಟಣದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನಜ್ಮಾ ನಜೀರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಜ್ಮಾ ನಜೀರ್ ಆಹ್ವಾನದ ಮುನ್ನ ಪೊಲೀಸ್ ಪರವಾನಗಿ ತೆಗೆದುಕೊಂಡಿಲ್ಲ, ಅವರು ದೇಶದ್ರೋಹದ ಭಾಷಣ ಮಾಡುತ್ತಾರೆ ಎಂದು ಎಂದು ಕೆಲವರು ಆರೋಪಿಸಿ, ನಜ್ಮಾ ನಜೀರ್ ಕಾರ್ಯಕ್ರಮವನ್ನು ವಿರೋಧಿಸಿದ್ದರು.
ಪಡಿತ ಅಕ್ಕಿ ಅಕ್ರಮ ಸಾಗಣೆ ಶಿವಮೊಗ್ಗದ ಹೊಳೆಹೊನ್ನೂರು ತಿರುವು ಬಳಿ ಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಜಪ್ತಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿ ಮನ್ಸೂರ್ ಉದ್ದೀನ್ ಹೆಸರಿನ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಶಿವಮೊಗ್ಗದ ಜಾವಳ್ಳಿಯಿಂದ ಕಾಸರಗೋಡಿಗೆ ಪಡಿತರ ಅಕ್ಕಿ ಸಾಗಾಟ ಆಗುತ್ತಿತ್ತು. ಲಾರಿಯಲ್ಲಿ 143 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ.
ಇದನ್ನೂ ಓದಿ: ಪೊಲೀಸರು ಅಪಘಾತವೆಂದು ನಂಬಿದ್ದ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್; ಉದ್ಯಮಿಯ ಜೀವ ತೆಗೆದ ಗೆಳೆಯ ! ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮ ಸಾಗಣೆ, ಶಿಕ್ಷಕ ಆತ್ಮಹತ್ಯೆ, ಲಿಂಗಸುಗೂರು ಬಳಿ ಅಪಘಾತ, ಇಂಡಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
Published On - 10:32 pm, Sun, 28 November 21