ಪಲ್ಲಕ್ಕಿ ಮೇಲೆ ಕುರಿಮರಿಗಳನ್ನ ಎಸೆಯುವ ಪದ್ದತಿಗೆ ಬಿತ್ತು ಬ್ರೇಕ್: ಬಂದ ಆದಾಯದಿಂದ ದೇವಸ್ಥಾನ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು!

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ.. ಪಲ್ಲಕ್ಕಿ ಮೇಲೆ ಕುರಿಮರಿಗಳನ್ನ ಎಸೆಯುವ ಪದ್ದತಿಗೆ ಅಧಿಕಾರಿಗಳು ಮತ್ತು ಪೊಲೀಸರಿಂದಾಗಿ ಬ್ರೇಕ್ ಬಿದ್ದಿದೆ. ಭಕ್ತರು ತಂದಿದ್ದ ನೂರಾರು ಕುರಿಮರಿಗಳಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯ ಬಂದಿದೆ. ಈ ಹಣದಿಂದ ದೇವಸ್ಥಾನದಲ್ಲಿ ಮೂಲ ಸೌಕರ್ಯ ಒದಗಿಸಲು ಮುಂದಾಗಿದೆ.

ಪಲ್ಲಕ್ಕಿ ಮೇಲೆ ಕುರಿಮರಿಗಳನ್ನ ಎಸೆಯುವ ಪದ್ದತಿಗೆ ಬಿತ್ತು ಬ್ರೇಕ್: ಬಂದ ಆದಾಯದಿಂದ ದೇವಸ್ಥಾನ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು!
ಪಲ್ಲಕ್ಕಿ ಮೇಲೆ ಕುರಿಮರಿಗಳನ್ನ ಎಸೆಯುವ ಪದ್ದತಿಗೆ ಬ್ರೇಕ್!
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on:Jan 16, 2024 | 12:57 PM

ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಪ್ರಸಿದ್ಧ ಮೈಲಾರಲಿಂಗನ ಜಾತ್ರೆ ಅದ್ದೂರಿಯಾಗಿ ನಡೆದಿದೆ.. ಜಾತ್ರೆಯಲ್ಲಿ ಮೈಲಾರನ ಪಲ್ಲಕ್ಕಿ ಮೇಲೆ ಭಕ್ತರು ಕುರಿ ಮರಿಗಳನ್ನ ಎಸೆಯಲು ತರುತ್ತಾರೆ.. ಆದ್ರೆ ಈ ಪದ್ದತಿ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು ತಂದಿದ್ದ ಕುರಿಮರಿಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ರು.. ಆದ್ರೆ ಈಗ ಅದೆ ಕುರಿಮರಿಗಳನ್ನ ಟೆಂಡರ್ ಮೂಲಕ ರೈತರಿಗೆ ಮಾರಾಟ ಮಾಡಿದ್ದರಿಂದ ದೇವಸ್ಥಾನಕ್ಕೆ ಆದಾಯ ಹರಿದು ಬಂದಿದೆ.. ಹೀಗಾಗಿ ಜಾತ್ರೆಯಲ್ಲೂ ಕುರಿಗಳಿಂದ ಕಾಣಿಕೆ ರೂಪದಲ್ಲಿ ಲಕ್ಷ ಲಕ್ಷ ಆದಾಯ ಬಂದಿದೆ. ಅದ್ದೂರಿಯಾಗಿ ಸಮಾಪ್ತಿಯಾದ ಮೈಲಾರಲಿಂಗ ಜಾತ್ರೆ.. ಪಲ್ಲಕ್ಕಿ ಮೇಲೆ ಕುರಿಮರಿ ಎಸೆಯುವ ಸಂಪ್ರದಾಯಕ್ಕೆ ಬ್ರೇಕ್, ಮರಿಗಳನ್ನ ಜಪ್ತಿ ಮಾಡಿದ ಅಧಿಕಾರಗಳು.. ಪಲ್ಲಕ್ಕಿ ಮೇಲೆ ಎಸೆಯಲು ತಂದಿದ್ದ 683 ಕುರಿಗಳಿಂದ ದೇವಸ್ಥಾನಕ್ಕೆ ಬಂತು ಭರ್ಜರಿ ಆದಾಯ… ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ..

ಹೌದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೈಲಾರಲಿಂಗನ ಜಾತ್ರೆ ಅದ್ದೂರಿಯಾಗಿ ನಡೆದಿದೆ.. ವಿವಿಧ ಜಿಲ್ಲೆ ಮತ್ತು ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರ ದಂಡೆ ಜಾತ್ರೆಗೆ ಹರಿದು ಬಂದಿತ್ತು.. ಈ ಜಾತ್ರೆಯಲ್ಲಿ ಮೈಲಾರಲಿಂಗನನ್ನ ಪಲ್ಲಕ್ಕಿ ಮೇಲೆ ಕುರಿಸಿಕೊಂಡು ಸಂಕ್ರಾಮಣ ದಿನದಂದು ಹೊನ್ನ ಕೆರೆಗೆ ಗಂಗ ಸ್ನಾನ ಮಾಡಿಸಲು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತೆ..

ಆದ್ರೆ ಪಲ್ಲಕ್ಕಿ ಹೊನ್ನ ಕೆರೆಗೆ ಹೋಗುವಾಗ ಪಲ್ಲಕ್ಕಿ ಮೇಲೆ ಕುರಿಮರಿಗಳ ಎಸೆದು ಹರಕೆ ತೀರಿಸೋದು ಇಲ್ಲಿನ ವಾಡಿಕೆಯಾಗಿತ್ತು.. ಆದ್ರೆ ಪ್ರಾಣಿ ಹಿಂಸೆ ಮಾಡಬಾರದು ಎನ್ನುವ ಕಾರಣಕ್ಕೆ ಈ ಸಂಪ್ರದಾಯಕ್ಕೆ ಕಳೆದ ಕೆಲ ವರ್ಷಗಳಿಂದ ಬ್ರೇಕ್ ಹಾಕಲಾಗಿದೆ.. ಆದ್ರೂ ಭಕ್ತರು ನೂರಾರು ಕುರಿಮರಿಗಳನ್ನ ಪಲ್ಲಕ್ಕಿ ಮೇಲೆ ಎಸೆಯಲು ತರ್ತಾರೆ..

ಆದ್ರೆ ಇದ್ದನ್ನ ತಡೆಯೋಕೆ ಜಿಲ್ಲಾಡಳಿತ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನ ಚೆಕ್ ಪೋಸ್ಟ್ ಗಳನ್ನ ಹಾಕಿತ್ತು.. ಹೀಗಾಗಿ ಭಕ್ತರು ಬರ್ತಾಯಿದ್ದ ಹಾಗೆ ಪೊಲೀಸರು ಪರಿಶೀಲನೆ ನಡೆಸಿ ಭಕ್ತರು ತಂದಿದ್ದ ಕುರಿಮರಿಗಳನ್ನ ಜಪ್ತಿ ಮಾಡುವ ಕೆಲಸ ಮಾಡಿದ್ದಾರೆ.. ಈ ವರ್ಷ ನೂರಾರು ಭಕ್ತರು ತಂದಿದ್ದ 683 ಕುರಿಮರಿಗಳನ್ನ ಜಪ್ತಿ ಮಾಡಿದ್ದಾರೆ.. ಅಧಿಕಾರಿಗಳು ಮತ್ತು ಪೊಲೀಸರು ಜಪ್ತಿ ಮಾಡಿದ ಕುರಿಮರಿಗಳನ್ನ ಅಲ್ಲೆ ಪಶು ಇಲಾಖೆಯಿಂದ ನಿರ್ಮಾಣ ಮಾಡಲಾಗಿದ್ದ ಶೆಡ್ ಬಿಡಲಾಗಿತ್ತು.. ಭಕ್ತರಿಂದ ವಶ ಪಡಿಸಿಕೊಂಡಿದ್ದ 683 ಕುರಿಮರಿಗಳಿಂದ ದೇವಸ್ಥಾನಕ್ಕೆ ಲಕ್ಷಾಂತರ ರೂ. ಆದಾಯ ಹರಿದು ಬಂದಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣ ಭೂಪಾಲರೆಡ್ಡಿ ಮಾಹಿತಿ ನೀಡಿದ್ದಾರೆ.

Also Read: ವೀರಗಲ್ಲು ಪಾರ್ಕ್​.. ರಾಜ್ಯದಲ್ಲಿ ಮೊದಲ ಬಾರಿಗೆ ವೀರಗಲ್ಲುಗಳ ಸಂರಕ್ಷಿಸಿ, ವಿದ್ಯಾರ್ಥಿಗಳಿಗೆ ಬೋಧಿಸುವ ಕೆಲಸ ನಡೆಯುತ್ತಿದೆ

ಪ್ರತಿ ವರ್ಷ ಜಾತ್ರೆಯಲ್ಲಿ ವಶ ಪಡಿಸಿಕೊಂಡ ಕುರಿಮರಿಗಳನ್ನ ಯಾದಗಿರಿ ನಗರದಲ್ಲಿರುವ ಪಶು ಆಸ್ಪತ್ರೆಗೆ ತರಲಾಗುತ್ತಿತ್ತು.. ಇಲ್ಲಿ ಶೆಡ್ ಗಳನ್ನ ಮಾಡಿ ಕುರಿಗಳನ್ನ ಶೇಖರಿಸಲಾಗುತ್ತಿತ್ತು.. ಬಳಿಕ ಹರಾಜ್ ಮೂಲಕವಾಗಿ ತಲಾ 20 ಕುರಿಗಳನ್ನ ರೈತರಿಗೆ ಹಾಗೂ ವ್ಯಾಪರಸ್ಥರಿಗೆ ಮಾರಾಟ ಮಾಡಲಾಗುತ್ತಿತ್ತು.. ಆದ್ರೆ ಪಶು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಶೇಖರಿಸಿಡುವ ಕಾರಣಕ್ಕೆ ಕೆಲ ಕುರಿಮರಿಗಳು ಸಾವನ್ನಪ್ಪುತ್ತಿದ್ದವು..

ಇದೇ ಕಾರಣಕ್ಕೆ ಕಳೆದ ಎರಡು ವರ್ಷದಿಂದ ಜಾತ್ರೆಗೂ ಮುನ್ನವೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆಸಕ್ತ ರೈತರು ಮತ್ತು ವ್ಯಾಪರಸ್ಥರಿಗೆ ಕರೆದು ಟೆಂಡರ್ ಮಾಡಲಾಗಿದೆ.. ಯಾರೆ ಕುರಿಮರಿಗಳನ್ನ ಖರೀದಿ ಮಾಡಿದ್ರು ಕನಿಷ್ಠ 100 ಕುರಿಗಳನ್ನ ಖರೀದಿ ಮಾಡಬೇಕಾಗಿತ್ತು.. ಪ್ರತಿ ಕುರಿಮರಿಗೆ ಅಧಿಕಾರಿಗಳು 1200 ದರ ನಿಗದಿ ಮಾಡಿದ್ರು. ಇದರ ಮೇಲೆ ಟೆಂಡರ್ ನಲ್ಲಿ ಭಾಗವಹಿಸಿದವರು ಬೆಲೆ ಏರಿಸಿ ಟೆಂಡರ್ ಪಡೆಯಬಹುದಾಗಿತ್ತು..

ಒಟ್ಟು ಈ ಬಾರಿ ಟೆಂಡರ್ ಪ್ರಕ್ರಿಯೆ ಮಾಡಿದ್ದರಿಂದ 20 ಮಂದಿ ಭಾಗವಹಿಸಿದ್ರು.. ಭಾಗವಹಿಸಿದವರು ಪ್ರತಿಯೊಂದು ಕುರಿಗೆ 1400 ರಿಂದ 2900 ತನಕ ಬೆಲೆಯನ್ನ ಏರಿಕೆ ಮಾಡಿ ಟೆಂಡರ್ ಪಡೆದಿದ್ರು.. ಸುಮಾರು 8 ಜನರಿಗೆ ಮಾತ್ರ ಟೆಂಡರ್ ಆಗಿತ್ತು. ಇದರಲ್ಲಿ 6 ಜನರಿಗೆ ಮಾತ್ರ ಈ ಬಾರಿ ಕುರಿಗಳನ್ನ ಖರೀದಿ ಮಾಡುವುದಕ್ಕೆ ಅವಕಾಶ ಸಿಕ್ಕಿದೆ..

ಮೈಲಾರಪುರ ಹತ್ತಿರ ಹಾಕಿದ್ದ ಶೆಡ್ ಬಳಿಯ ಟೆಂಡರ್ ಪಡೆದವರು 100 ಕುರಿಮರಿಗಳ ಜಮಾ ಆಗುತ್ತಿದ್ದ ಹಾಗೆ ವಾಹನ ತಂದು ತೆಗೆದುಕೊಂಡು ಹೋಗಿದ್ದಾರೆ.. ಇದರಿಂದ ಸುಮಾರು ದೇವಸ್ಥಾನಕ್ಕೆ 12 ಲಕ್ಷಕ್ಕೂ ಅಧಿಕ ಹಣ ಹರಿದು ಬಂದಿದೆ.. ಕಳೆದ ಎರಡು ವರ್ಷಗಳ ಹಿಂದೆ ಸಾವಿರ ಕುರಿಗಳು ಇದ್ರು ಇಷ್ಟು ಹಣ ಬಂದಿರಲಿಲ್ಲ.. ಆದ್ರೆ ಈ ಬಾರಿ ಟೆಂಡರ್ ಮಾಡಿದ್ದರಿಂದ ಹೆಚ್ಚಿನ ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆ.. ಇನ್ನು ಕುರಿಮರಿಗಳ ಟೆಂಡರ್ ನಿಂದ ಹರಿದು ಬಂದ ಹಣದಿಂದ ದೇವಸ್ಥಾನವನ್ನ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಲಾಗುತ್ತೆ.

ಒಟ್ನಲ್ಲಿ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ಪದ್ದತಿಗೆ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು ತಂದಿದ್ದ ಕುರಿಮರಿಗಳಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ.. ಹೀಗಾಗಿ ಕುರಿಮರಿಗಳಿಂದ ಬಂದ ಹಣವನ್ನ ದೇವಸ್ಥಾನದಲ್ಲಿ ಭಕ್ತರಿಗಾಗಿ ಮೂಲಭೂತ ಸೌಕರ್ಯಗಳನ್ನ ಒದಗಿಸಿ ಕೊಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Tue, 16 January 24

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ