ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್
ಆ ಪುಟ್ಟ ಹುಡುಗನಂತೂ ನೆಚ್ಚಿನ ನಟನ ಆಟೋಗ್ರಾಫ್ ಕೈಯಲ್ಲಿ ಹಿಡಿದು ಭಾವುಕನಾದ. ಕೆಂಪುಬಣ್ಣದ ಡ್ರೆಸ್ ತೊಟ್ಟಿದ್ದ ಚಿಣ್ಣರ ಮೊಗದಲ್ಲಿ ಫುಲ್ ಖುಷಿ ಮಿನುಗುತ್ತಿತ್ತು.

ಟಾಲಿವುಡ್ನ ‘ಸ್ಟೈಲಿಶ್ ಸ್ಟಾರ್’ ಅಲ್ಲು ಅರ್ಜುನ್ ತಮ್ಮ ಬಾಲ ಅಭಿಮಾನಿಯೊಬ್ಬನ ಆಸೆಯೊಂದನ್ನು ನೆರವೇರಿಸುವ ಮೂಲಕ, ಆ ಪುಟ್ಟ ಹುಡುಗನ ಮುಖದಲ್ಲಿ ಸಂತೋಷ ಮೂಡಿಸಿದ್ದಾರೆ.
ಡಿ.17ರಂದು ನಟಿ ವಿತಿಕಾ ಶೆರು ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಅದರಲ್ಲಿ ಈ ಹುಡುಗ ಬಗ್ಗೆ ನಟ ಅಲ್ಲು ಅರ್ಜುನ್ಗೆ ತಿಳಿಸಿದ್ದರು. ವಿಡಿಯೋ ಸಾರಾಂಶ ಹೀಗಿತ್ತು..: ‘ಹೆಲೋ..ಅರ್ಜುನ್, ನಾನು ಕ್ರಿಸ್ಮಸ್ ಪ್ರಯುಕ್ತ ಅನಾಥಾಶ್ರಮವೊಂದರಲ್ಲಿ ಸೀಕ್ರೆಟ್ ಸಂತ ವಿಡಿಯೋ ಮಾಡುತ್ತಿದ್ದೇನೆ. ಈ ಬಾರಿ ಸಂತ ಕ್ಲಾಸ್ ನಿಮ್ಮ ಯಾವ ಆಸೆಯನ್ನು ಈಡೇರಿಸಬೇಕು ಎಂದು ಪುಟ್ಟ ಮಕ್ಕಳ ಬಳಿ ಕೇಳಿದೆ. ಅದಕ್ಕೆ ಒಬ್ಬೊಬ್ಬರೂ ಒಂದೊಂದು ಆಸೆಯನ್ನು ಬರೆದಿದ್ದಾರೆ. ಅವರಲ್ಲಿ ಈ ಪುಟ್ಟ ಹುಡುಗನ ಆಸೆಯನ್ನು ನೀವು ಮಾತ್ರ ನೆರವೇರಿಸಬಲ್ಲಿರಿ. ನಿಮ್ಮ ಅಭಿಮಾನಿ ಬಾಲಕ ದೊಡ್ಡದನ್ನೇನೂ ಬಯಸುತ್ತಿಲ್ಲ. ಅವನಿಗೆ ನಿಮ್ಮದೊಂದು ಆಟೋಗ್ರಾಫ್ ಬೇಕಾಗಿದೆ. ಅದನ್ನು ನೀವು ಈಡೇರಿಸುತ್ತೀರಿ ಎಂದು ನಂಬಿದ್ದೇನೆ. ಈ ಕ್ರಿಸ್ಮಸ್ಗೆ ಹುಡುಗನ ಪಾಲಿನ ಸಂತ ಕ್ಲಾಸ್ ನೀವಾಗಿ, ಜೀವನಪರ್ಯಂತ ಅದೊಂದು ಸುಂದರ ನೆನಪಾಗಿರುವಂತೆ ಮಾಡಿ’ ಎಂದು ಮನವಿ ಮಾಡಿದ್ದರು.
ಅದನ್ನೀಗ ಅಲ್ಲು ಅರ್ಜುನ್ ನೆರವೇರಿಸಿದ್ದಾರೆ. ಅನಾಥಾಶ್ರಮದ ಬಾಲ ಅಭಿಮಾನಿಗೆ ತನ್ನ ಸಂಬಂಧಿ ಅಯಾನ್ ಮೂಲಕ ಆಟೋಗ್ರಾಫ್ ಕಳಿಸಿಕೊಟ್ಟಿದ್ದಾರೆ. ಅಯಾನ್, ವಿತಿಕಾ ಇಂದು ಮಕ್ಕಳೊಂದಿಗೆ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಿದ್ದಾರೆ. ಆ ಪುಟ್ಟ ಹುಡುಗನಂತೂ ನೆಚ್ಚಿನ ನಟನ ಆಟೋಗ್ರಾಫ್ ಕೈಯಲ್ಲಿ ಹಿಡಿದು ಭಾವುಕನಾದ. ಕೆಂಪುಬಣ್ಣದ ಡ್ರೆಸ್ ತೊಟ್ಟಿದ್ದ ಚಿಣ್ಣರ ಮೊಗದಲ್ಲಿ ಫುಲ್ ಖುಷಿ ಮಿನುಗುತ್ತಿತ್ತು.
ಅನಾಥಾಶ್ರಮದಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮದ ವಿಡಿಯೋವನ್ನು ಶೇರ್ ಮಾಡಿಕೊಂಡ ವಿತಿಕಾ, ಅಲ್ಲು ಅರ್ಜುನ್ಗೆ ಧನ್ಯವಾದ ತಿಳಿಸಿದ್ದಾರೆ. ನೀವು ನಿಮ್ಮ ಅಭಿಮಾನಿಗಳ ಬಗ್ಗೆ ಹೊಂದಿರುವ ಪ್ರೀತಿ, ಕರುಣೆಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು ಎಂದು ಟ್ವೀಟ್ ಮಾಡಿದ್ದಾರೆ.
ಅನಾಥಾಶ್ರಮದಲ್ಲಿ ಇಂದಿನ ಸಂಭ್ರಮದ ವಿಡಿಯೋ
Thank you @alluarjun garu for making this little boys dream come true.you are a real santa & you always been an inspiration to all your fans.l,Can't thank you enough for this kindness & love you have towards your fans. https://t.co/jso2qotaVQ
— Vithika Sheru (@IamVithikaSheru) December 25, 2020
ಅಂದು ವಿತಿಕಾ ಮಾಡಿದ್ದ ಮನವಿಯ ವಿಡಿಯೋ
Hello @alluarjun garu, This a humble request from me & our team to make this little boy's dream come true. He is a huge fan of yours & he wants nothing but your autograph for this Christmas, can you please BE HIS SANTA for this Christmas ⭐ pic.twitter.com/P96hPxA55E
— Vithika Sheru (@IamVithikaSheru) December 17, 2020