Hosakote: ಪತ್ನಿ ಮೇಲೆ ಪತಿಗೆ ಅನುಮಾನ; ಮನನೊಂದು ಗೃಹಿಣಿ ಆತ್ಮಹತ್ಯೆಗೆ ಶರಣು
ಹೊಸಕೋಟೆ ತಾಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳದಿಂದ ದೀಪಾ(27) ಎಂಬ ಯುವತಿ ನೇಣಿಗೆ ಶರಣಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ಅರಸನಹಳ್ಳಿ ಗ್ರಾಮದ ದೀಪಾ(27) ಎಂಬ ಮಹಿಳೆಯ ಪತಿ ಮೋಹನ್ ಕುಮಾರ್ ಎಂಬಾತ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದು, ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಮೋಹನ್ ಕುಮಾರ್ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೀಪಾಳ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಈ ಕುರಿತು ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
7 ವರ್ಷಗಳ ಹಿಂದೆ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಮೋಹನ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದ ದೀಪಾ, 3ವರ್ಷ ಸುಖ ಸಂಸಾರ ಮಾಡಿದ್ದಾರೆ. ಮೂರು ವರ್ಷದ ನಂತರ ಮೋಹನ್ ವಿನಾಕಾರಣ ಪತ್ನಿ ಮೇಲೆ ಅನುಮಾನ ಪಡಲು ಶುರು ಮಾಡಿದ್ದಾನೆ. ಜೊತೆಗೆ ತವರು ಮನೆಯಿಂದ ಹಣ ತಂದುಕೊಂಡುವಂತೆ ಕಿರುಕುಳ ನೀಡಿದ್ದು, ದಂಪತಿ ನಡುವೆ ಗಲಾಟೆಯಾಗಿ ಹಲವು ಬಾರಿ ರಾಜಿ ಪಂಚಾಯಿತಿ ಕೂಡ ಆಗಿದೆ. ವಾರದ ಹಿಂದೆಯಷ್ಟೇ ರಾಜಿ ಪಂಚಾಯಿತಿಯಾಗಿ ದೀಪಾ ಪತಿಯ ಮನೆಗೆ ಬಂದಿದ್ದಳು, ಆದರೆ ಗಂಡನ ಮನೆಗೆ ಬಂದ ನಾಲ್ಕೆ ದಿನಕ್ಕೆ ದೀಪಾ ನೇಣಿಗೆ ಶರಣಾಗಿದ್ದಾಳೆ.
ಮುಳವಾಡ ಏತ ನೀರಾವರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು
ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಗ್ರಾಮದ ಬಳಿ ಕಾಲುಜಾರಿ ಕಾಲುವೆಗೆ ಬಿದ್ದು ಚಂದ್ರಶೇಖರ ಡೆಂಗಿ(55), ಅಶೋಕ ಅಂಗಡಗೇರಿ(45) ಎಂಬ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ತಮ್ಮ ಜಮೀನಿಗೆ ನೀರು ಹಾಯಿಸಲು ಪಂಪ್ಸೆಟ್ ಆನ್ ಮಾಡಲು ಹೋದಾಗ ಕಾಲು ಜಾರಿ ಕಾಲುವಿಗೆ ಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯರು ಸೇರಿ ಶವಗಳನ್ನು ಮೇಲೆತ್ತಿದ್ದಾರೆ.
ಇದನ್ನೂ ಓದಿ:Shocking News: ಹಿಂದಿ ಸೀರಿಯಲ್ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!
ಅಂಕೋಲಾ ತಾಲೂಕಿನ ಯಮುನಾ ವಿಘ್ನೇಶ್ವರ ಗೌಡ(30) ಎಂಬ ಮಹಿಳೆ ನೇಣಿಗೆ ಶರಣಾಗಿದ್ದಾಳೆ.
ಉತ್ತರ ಕನ್ನಡ: ಜಿಲ್ಲೆಯ ಅಂಕೋಲ ತಾಲೂಕಿನ ಬೆಳಸೆಯ ಹಂದಿಗದ್ದೆಯಲ್ಲಿ 30 ವರ್ಷದ ಯಮುನಾ ಗೌಡ ಎಂಬ ಮಹಿಳೆ ವಿನಾಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಆತ್ಮಹತ್ಯೆಗೆ ನಿಕರ ಕಾರಣ ತಿಳಿದು ಬಂದಿಲ್ಲ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ