AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಬದಲಾಯಿಸುವಾಗ ಪ್ಯಾಕಿಂಗ್ ಮಾಡುವುದು ಹೇಗೆ ಎಂಬ ಗೊಂದಲವಾಗುತ್ತಿದೆಯೇ?; ಸುಲಭದ ವಿಧಾನಗಳು ಇಲ್ಲಿವೆ

Packing Tips: ಮನೆಯನ್ನು ಶಿಫ್ಟ್ ಮಾಡಲು ಅಥವಾ ಬೇರೆಡೆಗೆ ತಾತ್ಕಾಲಿಕವಾಗಿ ವಾಸಿಸಲು ತೆರಳುವಾಗ ಸಾಮಾನ್ಯವಾಗಿ ಎದುರಾಗುವುದು ಪ್ಯಾಕಿಂಗ್ ಗೊಂದಲ. ಅದನ್ನು ನಿರ್ವಹಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ಮನೆ ಬದಲಾಯಿಸುವಾಗ ಪ್ಯಾಕಿಂಗ್ ಮಾಡುವುದು ಹೇಗೆ ಎಂಬ ಗೊಂದಲವಾಗುತ್ತಿದೆಯೇ?; ಸುಲಭದ ವಿಧಾನಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ (Credits: Istock)
TV9 Web
| Updated By: shivaprasad.hs|

Updated on: Oct 03, 2021 | 6:09 PM

Share

ಮನೆಯನ್ನು ಬದಲಾಯಿಸುವುದು ಅಥವಾ ಬೇರೆಡೆ ವಾಸ ಮಾಡಲು ಹೋಗುವುದು ಅಷ್ಟು ಸುಲಭದ ಮಾತಲ್ಲ. ಭಾವನಾತ್ಮಕವಾಗಿ ಇದು ಕಷ್ಟಕರವಾಗಿರುತ್ತದೆ ಎಂಬುದು ಒಂದು ಕಾರಣವಾದರೆ, ನಮಗೆ ಬೇಕಾದ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು ಪ್ರಯಾಸಕರ ಎಂಬುದು ಮತ್ತೊಂದು ಕಾರಣ. ಕೆಲವೊಮ್ಮೆ ಬೇಕಾದ ವಸ್ತುಗಳನ್ನು ಮರೆಯುತ್ತೇವೆ. ಅಥವಾ ತುರ್ತಾಗಿ ಪ್ಯಾಕಿಂಗ್ ಮಾಡಬೇಕಿದ್ದರೆ ಬಿಟ್ಟುಬಿಡುತ್ತೇವೆ. ಆದ್ದರಿಂದಲೇ ಇತ್ತೀಚೆಗೆ ನಗರಗಳಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಶಿಫ್ಟಿಂಗ್ ಮಾಡುವಾಗ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ವಸ್ತುಗಳನ್ನು ಸಾಗಿಸುವ ಸ್ಟಾರ್ಟಪ್​ಗಳೂ ಹುಟ್ಟಿಕೊಂಡಿವೆ. ಆದರೆ ಇವುಗಳ ಸಹಾಯವಿಲ್ಲದೇ, ನಾವು ಸುಲಭವಾಗಿ ಪ್ಯಾಕಿಂಗ್ ಮಾಡಬಹುದು. ಹೇಗೆ? ಇಲ್ಲಿದೆ ಮಾಹಿತಿ.

1. ಸಾಗಿಸಬೇಕಾದ ವಸ್ತುಗಳ ಪಟ್ಟಿಯನ್ನು ತಯಾರಿಸಿ: ಮೊದಲಿಗೆ, ಪ್ಯಾಕ್ ಮಾಡುವ ಮುನ್ನ ಇರುವ ಎಲ್ಲಾ ವಸ್ತುಗಳ ಪಟ್ಟಿಯನ್ನು ತಯಾರಿಸಿ. ಈ ಪಟ್ಟಿಯಲ್ಲಿ, ಯಾವ ವಸ್ತುಗಳನ್ನು ಮೊದಲು ಪ್ಯಾಕ್ ಮಾಡಬೇಕು ಮತ್ತು ನಂತರ ಯಾವುದನ್ನು ಪ್ಯಾಕ್ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಗುರುತು ಹಾಕಿಕೊಳ್ಳಿ. ಇದರಿಂದ ಗೊಂದಲ ಕಡಿಮೆಯಾಗುವುದಲ್ಲದೇ, ಯಾವ ವಸ್ತುಗಳೂ ಪ್ಯಾಕ್ ಮಾಡುವಾಗ ಕೈ ತಪ್ಪಿ ಹೋಗುವುದಿಲ್ಲ.

2. ಬ್ಯಾಗ್/ ಪೆಟ್ಟಿಗೆಯ ಮೇಲೆ ಹೆಸರು ಬರೆಯಿರಿ: ನಮ್ಮಲ್ಲಿ ಹೆಚ್ಚಿನವರು ಮನೆ ಸ್ಥಳಾಂತರಿಸುವಾಗ ಪ್ಯಾಕಿಂಗ್ ಸಮಯದಲ್ಲಿ ನಿರ್ಲಕ್ಷಿಸುವುದು ಪೆಟ್ಟಿಗೆಗೆ ಹೆಸರು ಬರೆಯುವುದನ್ನು. ಆದರೆ ಬ್ಯಾಗ್​ಗಳಿಗೆ, ಪೆಟ್ಟಿಗೆಗಳಿಗೆ ಹೆಸರು ಬರೆಯುವದರಿಂದ ಬಹಳಷ್ಟು ಉಪಯೋಗಗಳಿವೆ. ಪ್ಯಾಕಿಂಗ್ ಹಾಗೂ ಅನ್​ಪ್ಯಾಕಿಂಗ್ ಎರಡೂ ಸಮಯದಲ್ಲಿ ಇದು ಸಹಾಯ ಮಾಡುತ್ತದೆ. ಜೊತೆಗೆ ಇದನ್ನು ಗಮನಿಸಿಯೇ ಯಾವುದೇ ಪ್ರಯಾಸವಿಲ್ಲದೇ ಯಾವಾಗ ಬೇಕಾದರೂ ವಸ್ತುಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ ಲೇಬಲಿಂಗ್ ಮಾಡಲು ಮರೆಯದಿರಿ.

3. ಬಟ್ಟೆಗಳನ್ನು ಹೊಂದಿಸಿ ಬ್ಯಾಗ್​ನೊಳಗಿಡಿ: ಬಟ್ಟೆಗಳನ್ನು ಚೆನ್ನಾಗಿ ಹೊಂದಿಸಿ ಇಡುವುದರಿಂದ ಅನ್​ಬಾಕ್ಸಿಂಗ್ ಸಮಯದಲ್ಲಿ ಸಾಕಷ್ಟು ಸಹಾಯವಾಗುತ್ತದೆ. ಜೊತೆಗೆ ಇದು ಗೊಂದಲವನ್ನು ಕಡಿಮೆ ಮಾಡುತ್ತದೆ.

4. ದೊಡ್ಡ ವಸ್ತುಗಳನ್ನು ಮೊದಲು ಪ್ಯಾಕ್ ಮಾಡಿ: ಪ್ಯಾಕ್ ಮಾಡುವಾಗ ಯಾವಾಗಲೂ ದೊಡ್ಡದಾದ ವಸ್ತುಗಳನ್ನು ಮೊದಲು ಪ್ಯಾಕ್ ಮಾಡಿ. ನೀವು ಮೊದಲು ಸಣ್ಣ ವಸ್ತುಗಳನ್ನು ಪ್ಯಾಕ್ ಮಾಡಿದರೆ, ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಬೇಗನೆ ಸುಸ್ತಾಗಬಹುದು. ಆದ್ದರಿಂದ ಮೊದಲು ದೊಡ್ಡ ವಸ್ತುಗಳನ್ನು ಪ್ಯಾಕ್ ಮಾಡಿದರೆ, ಅರ್ಧ ಹೊರೆ ಕಡಿಮೆಯಾಗುತ್ತದೆ. ನಂತರ ಸಣ್ಣ ವಸ್ತುಗಳನ್ನು ನಿಧಾನವಾಗಿ ಪ್ಯಾಕ್ ಮಾಡಬಹುದು.

5. ಅನಗತ್ಯ ಎನಿಸಿದ್ದನ್ನು ಬಿಡುವ ನಿರ್ಧಾರ ಮಾಡಿ: ಬಹಳಷ್ಟು ಜನರಿಗೆ ಪ್ಯಾಕ್ ಮಾಡುವಾಗ ಕಾಡುವ ಸಾಮಾನ್ಯ ಸಮಸ್ಯೆಯೆಂದರೆ, ಕೆಲವು ವಸ್ತುಗಳು ಇಟ್ಟುಕೊಳ್ಳಬೇಕೋ, ಎಸೆಯಬೇಕೋ ತಿಳಿಯುವುದಿಲ್ಲ. ಆ ಗೊಂದಲದಲ್ಲಿ ಎಲ್ಲವನ್ನೂ ಇಟ್ಟುಕೊಂಡು, ಬಹಳಷ್ಟು ಅನಗತ್ಯ ವಸ್ತುಗಳನ್ನು ಸಾಗಣೆ ಮಾಡಬೇಕಾಗುತ್ತದೆ. ಇದು ಸಮಯ ತೆಗೆದುಕೊಳ್ಳುವುದೇ, ಜಾಗವನ್ನೂ ತಿನ್ನುತ್ತದೆ. ಆದ್ದರಿಂದ ಹೆಚ್ಚು ಬಳಸದ, ಅನಗತ್ಯ ವಸ್ತುಗಳನ್ನು ಗಟ್ಟಿ ನಿರ್ಧಾರ ಮಾಡಿ ದೂರವಿಡಿ. ಈ ವಿಧಾನಗಳನ್ನು ಅನುಸರಿಸುವುದರಿಂದ ಪ್ಯಾಕಿಂಗ್ ಸುಲಭವಾಗುತ್ತದೆ.

ಇದನ್ನೂ ಓದಿ:

ಅ.4 ರಂದು ರಾಷ್ಟ್ರೀಯ ಅಭ್ಯಾಸಾವಧಿ ಮೇಳ; 1 ಲಕ್ಷ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ತರಬೇತಿ ನೀಡುವ ಗುರಿ

ಪಾಕಿಸ್ತಾನದ ಗಡಿ ಸಮೀಪದ ಜಮ್ಮುವಿನ ಗ್ರಾಮದಲ್ಲಿ ಡ್ರೋನ್ ಬೀಳಿಸಿದ ಪೊಟ್ಟಣ ಪೊಲೀಸ್ ವಶಕ್ಕೆ

ದೃಷ್ಟಿಹೀನ ಶಿಕ್ಷಕ ಪಾಠ ಮಾಡುತ್ತಿದ್ದರೆ, ಅವರೆದುರು ನೃತ್ಯ ಮಾಡಿದ ವಿದ್ಯಾರ್ಥಿಗಳು; ಮೂವರಿಗೆ ಗೇಟ್​ಪಾಸ್​

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?