AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಚಾಣಕ್ಯರ ಈ ಮಾತುಗಳನ್ನು ತಪ್ಪದೇ ಪಾಲಿಸಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನಕ್ಕೆ ಬೇಕಾಗಿರುವಂತಹ ಹತ್ತು ಹಲವು ವಿಚಾರಧಾರೆಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ಸಲಹೆ, ತತ್ವಗಳನ್ನು ಪಾಲಿಸುವ ಮೂಲಕ ಒಬ್ಬ ವ್ಯಕ್ತಿ ಯಶಸ್ವಿ ಜೀವನವನ್ನು ನಡೆಸಬಹುದು. ಇದೇ ರೀತಿ ನಿಮಗೂ ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಜೀವನದಲ್ಲೂ ಪ್ರಗತಿಯನ್ನು ಸಾಧಿಸುವ ಹಂಬಲವಿದ್ದರೆ, ಆಚಾರ್ಯ ಚಾಣಕ್ಯರ ಈ ಕಿವಿಮಾತುಗಳನ್ನು ಚಾಚು ತಪ್ಪದೇ ಪಾಲಿಸಿ.

Chanakya Niti: ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಚಾಣಕ್ಯರ ಈ ಮಾತುಗಳನ್ನು ತಪ್ಪದೇ ಪಾಲಿಸಿ
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on: Nov 02, 2026 | 8:02 PM

Share

ಉತ್ತಮ ಉದ್ಯೋಗದ ಜೊತೆಗೆ ವೃತ್ತಿಜೀವನದಲ್ಲಿ  (career) ಧನಾತ್ಮಕ ರೀತಿಯಲ್ಲಿ ಮುನ್ನಡೆಯಬೇಕು, ಪ್ರಮೋಷನ್ಸ್‌, ಉತ್ತಮ ಸಂಬಳ ಪಡೆಯಬೇಕು, ಯಶಸ್ಸನ್ನು ಸಾಧಿಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮಾತ್ರ ಸಾಕಾಗುವುದಿಲ್ಲ. ಕೆಲವೊಂದು ಉತ್ತಮ ಅಭ್ಯಾಸಗಳನ್ನು ಸಹ ಬೆಳೆಸಿಕೊಳ್ಳಬೇಕು ಆಗ ಮಾತ್ರ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ. ಹಾಗಿದ್ರೆ ಮುಖ್ಯವಾಗಿ ಯಾವೆಲ್ಲಾ ತತ್ವಗಳನ್ನು ಪಾಲಿಸಿದರೆ ವೃತ್ತಿ ಜೀವನದಲ್ಲಿ ಸಕ್ಸಸ್‌ ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.

ಗುರಿಯನ್ನು ಹೊಂದಿಸಿ ಮತ್ತು ಮುಂದುವರಿಯಿರಿ:

ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಯೋಚಿಸದೆ ಕ್ರಮ ಕೈಗೊಳ್ಳುವ ಬದಲು, ಮೊದಲು ನಿಮ್ಮ ಗುರಿಯನ್ನು ಹೊಂದಿಸಿ ಎಂದಿದ್ದಾರೆ ಚಾಣಕ್ಯ. ಗುರಿ ಸರಿಯಾಗಿದ್ದರೆ ಫಲಿತಾಂಶ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನೀವು ಕೆಲಸದಲ್ಲಿ ಬಡ್ತಿಯನ್ನು ಬಯಸುತ್ತಿದ್ದರೆ, ಆ ಕೆಲಸಕ್ಕೆ ಬೇಕಾಗಿರುವ  ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಂಡು, ಚೆನ್ನಾಗಿ ಕೆಲಸ ಮಾಡಿ, ನೀವು ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದರೆ, ಸಿದ್ಧತೆಯು ಉತ್ತಮ ರೀತಿಯಲ್ಲಿರಲಿ ಎಂದಿದ್ದಾರೆ ಚಾಣಕ್ಯ.

ಉತ್ತಮ ನಡವಳಿಕೆ ನಿಮ್ಮದಾಗಿರಲಿ:

ಜೀವನದಲ್ಲಿ ಯಶಸ್ವಿಯಾಗಲು, ವ್ಯಕ್ತಿಯ ನಡವಳಿಕೆ ಉತ್ತಮವಾಗಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ತನ್ನ ಮಾತಿನಲ್ಲಿ ಉತ್ತಮವಾಗಿರುವ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.

ನಿಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿರಿ:

ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕರಾಗಿರಿ. ಯಾವುದೇ ಕೆಲಸವಾದರೂ ಅದನ್ನು ಸಂಪೂರ್ಣ ಸಮರ್ಪಣಾಭಾವದಿಂದ ಮಾಡಿ. ಹೀಗೆ ನೀವು ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ, ಜನರು ನಿಮ್ಮನ್ನು ಮೆಚ್ಚುತ್ತಾರೆ. ನಿಮ್ಮ ಕೆಲಸದ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪರಿಶ್ರಮವು ಫಲ ನೀಡುತ್ತದೆ.

ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳಬೇಡಿ:

ಚಾಣಕ್ಯ ನೀತಿ ಹೇಳುವಂತೆ ನಿಮ್ಮ ಮುಂದಿನ ನಡೆ ಅಥವಾ ಪ್ರಮುಖ ಯೋಜನೆಯ ಬಗ್ಗೆ ಕೆಲಸ ಪೂರ್ಣಗೊಳ್ಳುವವರೆಗೆ ಯಾರಿಗೂ ಹೇಳಬೇಡಿ. ನಿಮ್ಮ ರಹಸ್ಯಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಸಹೋದ್ಯೋಗಿಗಳು ಅಥವಾ ವಿರೋಧಿಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗದಂತೆ ತಡೆಯುತ್ತದೆ.

ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿ:

ಸಮಯ ಎನ್ನೋದು ಅಮೂಲ್ಯ ಸಂಪತ್ತು. ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ. ನೀವು ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಬಯಸಿದರೆ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ, ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಮತ್ತು ಹೊಸ ವಿಷಯಗಳನ್ನು ಕಲಿಯಲು ಸಮಯ ಮೀಸಲಿಡಿ.

ಇದನ್ನೂ ಓದಿ: ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಹಣದ ಸಮಸ್ಯೆಯೇ ಎದುರಾಗೋದಿಲ್ಲ

ಒಳ್ಳೆಯ ಜನರ ಸಹವಾಸದಲ್ಲಿರಿ:

ನಮ್ಮ ಸಹವಾಸ ಕೂಡ ವೃತ್ತಿ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಯಾವಾಗಲೂ ಒಳ್ಳೆಯ ಜನರ ಸಹವಾಸದಲ್ಲಿರಬೇಕು ಎಂದಿದ್ದಾರೆ ಚಾಣಕ್ಯ. ಹಾಗಾಗಿ ನೀವು ಯಾವಾಗಲೂ ಕಷ್ಟಪಟ್ಟು ದುಡಿಯುವ, ಹೊಸ ವಿಷಯಗಳನ್ನು ಕಲಿಯುವ ಮತ್ತು ತಮ್ಮ ಗುರಿಗಳ ಬಗ್ಗೆ ಗಂಭೀರವಾಗಿರುವ ಜನರೊಂದಿಗೆ ನೀವು ಸ್ನೇಹ ಬೆಳೆಸಿ, ಇವರ ಈ ಗುಣ ನಿಮಗೂ ಕೂಡ ಸ್ಫೂರ್ತಿ ನೀಡುತ್ತದೆ.

ವೈಫಲ್ಯಗಳಿಗೆ ಹೆದರಬೇಡಿ, ಅಪಾಯಗಳನ್ನು ತೆಗೆದುಕೊಳ್ಳಲು ಕಲಿಯಿರಿ:

ಕೆಲವೊಮ್ಮೆ, ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿ ಸಾಧಿಸಲು ನೀವು ಅಪಾಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಚಾಣಕ್ಯರ ಪ್ರಕಾರ, ವೈಫಲ್ಯದ ಭಯದಿಂದ ಕೆಲಸವನ್ನು ಮುಂದುವರೆಸದ ವ್ಯಕ್ತಿ ವೃತ್ತಿ ಜೀವನದಲ್ಲಿ ಎಂದಿಗೂ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ತಪ್ಪುಗಳಿಂದ ಕಲಿಯಿರಿ ಮತ್ತು ಧೈರ್ಯದಿಂದ ಮುಂದುವರಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಹೈದರಾಬಾದ್​ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಜೂಪಲ್ಲಿ ರಾಮೇಶ್ವರ ರಾವ್
ಹೈದರಾಬಾದ್​ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಜೂಪಲ್ಲಿ ರಾಮೇಶ್ವರ ರಾವ್
ಹಾಸನಾಂಬೆ ದರ್ಶನ 4ನೇ ದಿನ: ಭಕ್ತರ ದರ್ಶನ, ಆದಾಯದಲ್ಲೂ ದಾಖಲೆ!
ಹಾಸನಾಂಬೆ ದರ್ಶನ 4ನೇ ದಿನ: ಭಕ್ತರ ದರ್ಶನ, ಆದಾಯದಲ್ಲೂ ದಾಖಲೆ!
ಹಾಲು, ಮೊಸರು ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಹಾಲು, ಮೊಸರು ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!