AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯೊಳಗೆ ಈ ಪ್ರಾಣಿ ಪಕ್ಷಿಗಳು ಬರಬಾರದಂತೆ, ಯಾವುದು? ಯಾಕೆ ಗೊತ್ತಾ?

ಮನೆಯೊಳಗೆ ಕೆಲವು ಪ್ರಾಣಿಗಳು ಹಾಗೂ ಪಕ್ಷಿಗಳು ಬರುವುದು ಶುಭವಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಸೇರಿದಂತೆ ನಾನಾ ರೀತಿಯ ಸಂಕಷ್ಟಗಳು ಬರುತ್ತದೆ ಎನ್ನುವ ನಂಬಿಕೆಯಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪ್ರಾಣಿ ಪಕ್ಷಿಗಳು ಮನೆಯನ್ನು ಪ್ರವೇಶಿಸಬಾರದಂತೆ. ಹಾಗಾದ್ರೆ ಆ ಪ್ರಾಣಿ ಪಕ್ಷಿಗಳು ಯಾವುವು? ಯಾಕೆ? ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಮನೆಯೊಳಗೆ ಈ ಪ್ರಾಣಿ ಪಕ್ಷಿಗಳು ಬರಬಾರದಂತೆ, ಯಾವುದು? ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jun 28, 2024 | 5:25 PM

Share

ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎನ್ನುವ ಮಾತಿದೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕಷ್ಟ ಸುಖ ಎರಡನ್ನು ಸಮಭಾಗವಾಗಿ ಸ್ವೀಕರಿಸಬೇಕು. ಆದರೆ ಜ್ಯೋತಿಷ್ಯದ ಪ್ರಕಾರ ಈ ಪ್ರಾಣಿ ಪಕ್ಷಿಗಳು ಮನೆಯೊಳಗೆ ಬಂದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಕೆಲವು ಪ್ರಾಣಿ ಹಾಗೂ ಪಕ್ಷಿಗಳು ಮನೆಯನ್ನು ಪ್ರವೇಶಿಸಬಾರದು ಎಂದು ಹೇಳುತ್ತಾರೆ. ಆದರೆ ಇದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.

* ಏಡಿ : ಏಡಿಯು ಮನೆಯೊಳಗೆ ಪ್ರವೇಶಿಸಿದರೆ ಮನೆಗೆ ಮಾಟ ಮಾಡಿದ್ದಂತೆ ಎನ್ನಲಾಗುತ್ತದೆ. ಇದು ಪ್ರವೇಶಿಸಿದರೆ ಮನೆಯಲ್ಲಿ ಸಂಕಷ್ಟಗಳು ಎದುರಾಗಿ ಮನೆಯೇ ಸರ್ವನಾಶವಾಗುತ್ತದೆ ಎನ್ನಲಾಗುತ್ತದೆ.

* ಕಪ್ಪು ಬೆಕ್ಕು : ಕೆಲವೊಮ್ಮೆ ಬೇರೆಯವರ ಮನೆಯ ಬೆಕ್ಕು ಮನೆಗೆ ಬಂದು ಉಳಿಯುತ್ತವೆ. ಆದರೆ ಕಪ್ಪು ಬೆಕ್ಕು ಮನೆಯನ್ನು ಪ್ರವೇಶಿಸುವುದು ಒಳ್ಳೆಯದಲ್ಲ. ಈ ಬೆಕ್ಕು ಅಪಶಕುನವಂತೆ, ಮನೆಗೆ ಬಂದರೆ ಕೆಟ್ಟದಾಗುತ್ತದೆ ಎನ್ನಲಾಗುತ್ತದೆ.

* ಉಡ : ಅಪರೂಪವಾಗಿ ಕಾಣಸಿಗುವ ಉಡವನ್ನು ನೋಡುವುದೇ, ಅದರ ಬಗ್ಗೆ ಮಾತನಾದುವುದೇ ಕೆಟ್ಟದಂತೆ. ಈ ಪ್ರಾಣಿಯು ಅನಿಷ್ಟವಂತೆ, ಹೀಗಾಗಿ ಮನೆಗೆ ಬರುವುದು ಒಳ್ಳೆಯದಲ್ಲ. ಒಂದು ವೇಳೆ ಅಪ್ಪಿ ತಪ್ಪಿ ಮನೆಯನ್ನು ಪ್ರವೇಶಿಸಿದರೆ ಮನೆಗೆ ಮಾಟ ಮಾಡಿದ್ದಂತೆ. ಇದರಿಂದ ಮನೆಯೇ ನಾಶವಾಗುತ್ತದೆ ಎನ್ನಲಾಗುತ್ತದೆ.

* ಕಾಗೆ : ಕಾಗೆಯು ಮನೆಗೆ ಬಂದರೆ ಶನಿಯು ಮನೆಗೆ ಪ್ರವೇಶಿಸುತ್ತಿದ್ದಾನೆ ಎನ್ನುವುದರ ಸೂಚಕ. ಕಾಗೆಯೂ ಮನೆಯೊಳಗೆ ಬಂದರೆ ಸಂಕಷ್ಟಗಳು ಎದುರಾಗುತ್ತದೆ. ಆರ್ಥಿಕ ಧನನಷ್ಟ ಹಾಗೂ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.

* ಬಾವುಲಿ : ಬಾವಲಿಯು ಮನೆಗೆ ಪ್ರವೇಶಿಸುವುದರಿಂದ ಮನೆಯು ಹಾಳಾಗುತ್ತಿದೆ ಎಂದು ಸೂಚಿಸುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಉಳಿಯುತ್ತವೆ. ಅಷ್ಟೇ ಅಲ್ಲದೇ, ಮನೆಯಲ್ಲಿ ವಾಸಿಸುವ ಜನರ ಜೀವನದಲ್ಲಿ ಸಮಸ್ಯೆಗಳು ಆರಂಭವಾಗುತ್ತದೆಯಂತೆ.

* ಜೇನುಗೂಡು ಅಥವಾ ಜೇನುಹುಳ: ಮನೆಯೊಳಗೆ ಜೇನುಹುಳಗಳು ಒಂದೆರಡು ಬಂದರೆ ಪರವಾಗಿಲ್ಲ. ಆದರೆ ಜೇನುಹುಳಗಳು ಮನೆಯೊಳಗೆ ಗೂಡು ಕಟ್ಟುವುದು ಒಳ್ಳೆಯದಲ್ಲ. ಇದರಿಂದ ಆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಸಂಕಷ್ಟ ಎದುರಾಗುತ್ತದೆ.

ಇದನ್ನೂ ಓದಿ: ನಿಮ್ಮ ಮಗ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎಂದು ಪತ್ತೆ ಮಾಡುವುದು ಹೇಗೆ?

* ಗೂಬೆ : ಗೂಬೆಯು ಅನಿಷ್ಟ ವಾಗಿದ್ದು ಇದರ ಆಗಮನವು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಮನೆಗೆ ಗೂಬೆ ಬಂದರೆ ಮನೆಯ ಪ್ರಗತಿಯು ಕುಂಠಿತವಾಗುತ್ತದೆ. ಮನೆಯಲ್ಲಿ ವಾಸಿಸುವ ಸದಸ್ಯರ ನಡುವೆ ವೈಮನಸ್ಸು ಉಂಟಾಗಿ ಮನೆಯೇ ನಾಶವಾಗುವ ಸಾಧ್ಯತೆ ಇರುತ್ತದೆ.

* ರಣಹದ್ದುಗಳು : ರಣ ಹದ್ದುಗಳು ಮನೆಯೊಳಗೆ ಪ್ರವೇಶಿಸಿದರೆ ಯಜಮಾನನಿಗೆ ಸಮಸ್ಯೆಯಾಗುತ್ತದೆ. ಅದಲ್ಲದೇ, ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತದೆ ಎನ್ನಲಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ